For Quick Alerts
  ALLOW NOTIFICATIONS  
  For Daily Alerts

  ನಟಿ ನವ್ಯಾ ಸ್ವಾಮಿ ಸಹ ನಟ ರವಿಕೃಷ್ಣಗೆ ಕೊರೊನಾ ಪಾಸಿಟಿವ್: ನಟ ಹೇಳಿದ್ದೇನು?

  By ಫಿಲ್ಮ್ ಡೆಸ್ಕ್
  |

  ಮೈಸೂರು ಮೂಲದ ತೆಲುಗಿನ ಖ್ಯಾತ ಕಿರುತೆರೆ ನಟಿ ನವ್ಯಾ ಸ್ವಾಮಿಗೆ ಕೊರೊನಾ ಪಾಸಿಟಿವ್ ಬಂದ ಬಳಿಕ ಕಿರುತೆರೆರಂಗ ಬೆಚ್ಚಿಬಿದ್ದಿದೆ. ತೆಲುಗಿನ ಅಮೆ ಕಥಾ ಧಾರಾವಾಹಿಯಲ್ಲಿ ನಟಿಸುತ್ತಿದ್ದ ನವ್ಯಾಗೆ ಪಾಸಿಟಿವ್ ಬಂದ ನಂತರ ಚಿತ್ರೀಕರಣ ಸ್ಥಗಿತ ಮಾಡಲಾಗಿದೆ. ಅಲ್ಲದೆ ನವ್ಯಾ ಸಂಪರ್ಕಕ್ಕೆ ಬಂದ ಕಲಾವಿದರು ಸ್ವಯಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.

  Dhruva Sarja admitted to Hospital?ಧ್ರುವ ಸರ್ಜಾ ಆಸ್ಪತ್ರೆಗೆ ದಾಖಲು? ಸುದ್ದಿ ನಿಜವೇ? | Filmibeat Kannada

  ಇದೀಗ ನವ್ಯಾ ಜೊತೆ ಕೆಲಸಮಾಡುತ್ತಿದ್ದ ಸಹ ಕಲಾವಿದ ರವಿಕೃಷ್ಣ ಅವರಿಗೂ ಕೊರೊನಾ ಪಾಸಿಟಿವ್ ಬಂದಿದೆ. ಈ ಬಗ್ಗೆ ಸ್ವತಹ ರವಿಕೃಷ್ಣ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ನಟಿ ನವ್ಯಾ ಮಾತನಾಡಿ ಯಾರು ಭಯಪಡಬೇಡಿ, ನಾನು ಆರಾಮಾಗಿ ಇದ್ದೀನಿ, ವದಂತಿಗಳನ್ನು ಹಬ್ಬಿಸಬೇಡಿ ಎಂದು ಹೇಳಿದ್ದರು. ಈಗ ರವಿಕೃಷ್ಣ ಸಹ ಅದೆ ಮಾತುಗಳನ್ನು ಹೇಳಿದ್ದಾರೆ. ಮುಂದೆ ಓದಿ..

  ಕೊರೊನಾ ಪಾಸಿಟಿವ್ ಬಂದ ಕನ್ನಡದ ನಟಿ ನವ್ಯಾ ಸ್ವಾಮಿ ಹೇಳುವುದೇನು? ಇಲ್ಲಿದೆ ನವ್ಯಾ ಮಾತುಕೊರೊನಾ ಪಾಸಿಟಿವ್ ಬಂದ ಕನ್ನಡದ ನಟಿ ನವ್ಯಾ ಸ್ವಾಮಿ ಹೇಳುವುದೇನು? ಇಲ್ಲಿದೆ ನವ್ಯಾ ಮಾತು

  ನಟ ರವಿಕೃಷ್ಣ ಮಾತು

  ನಟ ರವಿಕೃಷ್ಣ ಮಾತು

  "ನಿನ್ನ ರಾತ್ರಿ (ಜುಲೈ 3) ಕೊರೊನಾ ಪರೀಕ್ಷೆಯ ರಿಪೋರ್ಟ್ ಬಂತು. ನವ್ಯಾಗೆ ಕೊರೊನಾ ಪಾಸಿಟಿವ್ ಬಂದ ನಂತರ ನಾನು ಸ್ವಯಂ ಕ್ವಾರಂಟೈನ್ ಗೆ ಒಳಗಾಗಿದ್ದೆ. ಆದರೆ ನನಗೆ ಯಾವುದೆ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಲಕ್ಷಣಗಳು ಕಂಡುಬಂದರೆ ವಿಟಮಿನ್ ಸಿ, ಜಿಂಕ್ ಮತ್ತು ಮಲ್ಟಿವಿಟಮಿನ್ ಹಾಗೂ ಕೆಲವು ಔಷದಗಳನ್ನು ಶಿಫಾರಸ್ಸು ಮಾಡಿದ್ದಾರೆ" ಎಂದು ಹೇಳಿದ್ದಾರೆ.

  ವೈರಸ್ ಬಂದವರನ್ನು ಕಳಂಕಿತರು ಎಂದು ಹೇಳಬೇಡಿ

  ವೈರಸ್ ಬಂದವರನ್ನು ಕಳಂಕಿತರು ಎಂದು ಹೇಳಬೇಡಿ

  "ನಿಮ್ಮೆಲ್ಲರ ಹಾರೈಕೆ ಮತ್ತು ದೇವರ ದಯೆ ನಾನು ಆರಾಮಾಗಿ ಇದ್ದೀನಿ. ನನ್ನ ಜೊತೆ ಸಂಪರ್ಕದಲ್ಲಿ ಇದ್ದವರು ದಯವಿಟ್ಟು ಕ್ವಾರಂಟೈನ್ ಆಗಿ. ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ. ವೈಸರ್ ಬಂದವರನ್ನು ಕಳಂಕಿತರು ಅಥವಾ ಅವರನ್ನು ತಾರತಮ್ಯ ಮಾಡಬೇಡಿ. ಮಾನಸಿಕ ಆರೋಗ್ಯ ಮುಖ್ಯ. ವೇಗವಾಗಿ ಗುಣಮುಖನಾಗುತ್ತೇನೆ. ನೆಗೆಟಿವಿಟಿಯಿಂದ ದೂರ ಇರಿ" ಎಂದು ಹೇಳಿದ್ದಾರೆ.

  ನವ್ಯಾ ನೋಡಿ ಸ್ಟ್ರಾಂಗ್ ಆದೆ

  ನವ್ಯಾ ನೋಡಿ ಸ್ಟ್ರಾಂಗ್ ಆದೆ

  "ಕೊರೊನಾ ಪಾಸಿಟಿವ್ ಬಂದಿದೆ ಎಂದು ಗೊತ್ತಾದಾಗ ನಾನು ಫುಲ್ ಬ್ಲಾಂಕ್ ಆದೆ. ಆದರೆ ನವ್ಯಾ ಅವರನ್ನು ನೋಡಿದ ನಂತರ ಸ್ಟ್ರಾಂಗ್ ಆಗಲು ನಿರ್ಧರಿಸಿದೆ. ನವ್ಯಾಗೆ ಪಾಸಿಟಿವ್ ಇದೆ ಎಂದು ಗೊತ್ತಾಗುತ್ತಿದ್ದಂತೆ ಸೆಟ್ ನಲ್ಲಿ ಕುಸಿದು ಹೋಗಿದ್ದರು. ಅವಳ ಸಂಪರ್ಕ ಮಾಡಿದವರು ಅಲ್ಲಿಂದ ದೂರ ಹೋಗಲು ಪ್ರಾರಂಭಿಸಿದರು. ಇದು ಸಾಕಷ್ಟು ಘಾಸಿಗೊಳಿಸಿತ್ತು. ಇದು ನವ್ಯಾಗೆ ತುಂಬಾ ನೋವು ತಂದಿತ್ತು. ಆ ಕ್ಷಣ ಅವಳೊಂದಿಗೆ ಇರಬೇಕೆಂದು ನಿರ್ಮಾಕರು ನಾನು ಇದ್ದೆ" ಎಂದು ಹೇಳಿದ್ದಾರೆ.

  ಕಿರುತೆರೆ ನಟಿ ನವ್ಯಾ ಸ್ವಾಮಿಗೆ ಕೊರೊನಾ ವೈರಸ್ ಪಾಸಿಟಿವ್ಕಿರುತೆರೆ ನಟಿ ನವ್ಯಾ ಸ್ವಾಮಿಗೆ ಕೊರೊನಾ ವೈರಸ್ ಪಾಸಿಟಿವ್

  ಆದಷ್ಟು ಬೇಗ ವಾಪಸ್ ಆಗುವುದಾಗಿ ಹೇಳಿದ ನವ್ಯಾ

  ಆದಷ್ಟು ಬೇಗ ವಾಪಸ್ ಆಗುವುದಾಗಿ ಹೇಳಿದ ನವ್ಯಾ

  "ದಯವಿಟ್ಟು ಗಾಳಿ ಸುದ್ದಿಗಳನ್ನು ನಂಬಬೇಡಿ. ನೆಗೆಟಿವಿಟಿಯಿಂದ ತುಂಬಾ ದೂರ ಇರಿ. ಕೊರೊನಾ ಪಾಸಿಟಿವ್ ಬಂದರೆ ಭಯ ಪಡಬೇಡಿ. ಸ್ಟ್ರಾಂಗ್ ಆಗಿರಿ. ಹೆಚ್ಚಾಗಿ ಕ್ವಾರಂಟೈನ್ ಆಗಿ. ವೈರಸ್ ಸಾಯುವವರೆಗೂ ಜನರಿಂದ ದೂರ ಇರಿ. ಅನೇಕರ ಜನ ನನ್ನ ಮೇಲೆ ಪ್ರೀತಿ ಮತ್ತು ಕಾಳಜಿ ತೋರಿದ್ದೀರಿ. ನಾನು ಆರಾಮಾಗಿ ಇದ್ದೀನಿ. ಆದಷ್ಟು ಬೇಗ ವಾಪಸ್ ಆಗುತ್ತೇನೆ" ಎಂದು ವಿಡಿಯೋ ಮೂಲಕ ಮಾತನಾಡಿ ಶೇರ್ ಮಾಡಿದ್ದಾರೆ.

  English summary
  Actress Navya Swamy co star Ravikrishna tests positive for Corona.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X