ಸುವರ್ಣ ಸೂಪರ್ ಸ್ಟಾರ್‌ನಲ್ಲಿ ನಯನಾಗೆ ಶ್ರೀಮಂತ ಶಾಸ್ತ್ರ: ಯಾವ ಮಗುವಿನ ಆಸೆಯಿದೆ ಗೊತ್ತಾ..!?
ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ಅವರು ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಅವರ ಅಭಿಮಾನಿಗಳಿಗೆ ಗುಡ್ ನ್ಯೂಸ್ ಅನ್ನು ಸಹ ಕೊಟ್ಟಿದ್ದಾರೆ. ಗಣೇಶ ಹಬ್ಬದಲ್ಲಿ ಗಣೇಶನನ್ನು ಹೊತ್ತುಕೊಂಡು ಫೋಟೋಶೂಟ್ ಅನ್ನು ಮಾಡಿಸಿಕೊಂಡು ಸಾಕಷ್ಟು ಖುಷಿಯಾಗಿದ್ದರು. ಈಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸುವರ್ಣ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಕಾಮಿಡಿ ಕಿಲಾಡಿಗಳಲ್ಲಿ ಎಲ್ಲರನ್ನೂ ನಕ್ಕು ನಗಿಸುವ ಮೂಲಕ ಎಲ್ಲರ ಮನೆಯಗಳಂತೆ ಇದ್ದ ನಯನಾ ಅವರಿಗೆ ಎಲ್ಲರೂ ಸಹ ಶುಭಾಶಯಗಳು ಮಳೆಯನ್ನೇ ಸುರಿಸಿದ್ದಾರೆ. ಸುಸೂತ್ರವಾಗಿ ಹೆರಿಗೆ ಆಗಲಿ ಎಂದು ಅವರ ಅಭಿಮಾನಿಗಳು ಹಾರೈಸಿದ್ದಾರೆ. ಅವರನ್ನು ನೋಡುವ ಅವರ ಅಭಿಮಾನಿಗಳು ಜೂನಿಯರ್ ಉಮಾಶ್ರೀ ಎಂದೇ ಅವರನ್ನು ಕರೆಯುತ್ತಾ ಇದ್ದರು. ಇನ್ನು ನಯನ ಅವರು ಸಾಕಷ್ಟು ಸಿನಿಮಾಗಳಲ್ಲೂ ಸಹ ಪೋಷಕ ಪಾತ್ರಗಳನ್ನ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಅವರು ಬಹಳಷ್ಟು ಸಂಭ್ರಮದಿಂದ ಇದ್ದಾರೆ. ತಮಗೆ ಹೆಣ್ಣು ಮಗು ಆಗಲಿ ಎಂಬ ಆಸೆಯನ್ನ ಹೊಂದಿದ್ದಾರೆ. ಈಗ ಎಂಟು ತಿಂಗಳು ತುಂಬಿದ್ದು ತುಂಬು ಗರ್ಭಿಣಿಯಾದ ನಯನ ಅವರಿಗೆ ಸುವರ್ಣ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ನಿರೂಪಕಿ ಶಾಲಿನಿ ಅವರು ಸೀಮಂತ ಶಾಸ್ತ್ರವನ್ನ ಮಾಡಿದ್ದಾರೆ. ಬೇರೆ ಬೇರೆ ಊರುಗಳಿಂದ ಬಂದಿದ್ದ ಮತ್ತಿಬ್ಬರಿಗೂ ಸಹ ಸೀಮಂತ ಶಾಸ್ತ್ರವನ್ನ ಮಾಡಲಾಗಿದೆ.
ಹೆಣ್ಣು ಮಗುವಾಗಲಿ ಎಂದ ನಯನಾ
ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುವ ಸುವರ್ಣ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಯನಾ ಅವರು ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ. ನನ್ನ ಗಂಡ ಶರತ್‌ಗೆ ಹೆಣ್ಣು ಮಗು ಅಂದರೆ ತುಂಬಾ ಇಷ್ಟ ನನಗೆ ಹೆಣ್ಣು ಮಗುವೇ ಆಗಲಿ ಎಂಬ ಮನದ ಬಯಕೆಯನ್ನ ಹೊರಹಾಕಿದ್ದಾರೆ. ಅವರು ನಮ್ಮ ಮನೆಗೆ ಪುಟ್ಟ ಸರಸ್ವತಿ ಅಥವಾ ಲಕ್ಷ್ಮಿ ಬರಲಿ ಎಂದು ಆಸೆ ಪಡುತ್ತಾ ಇದ್ದಾರೆ ನನಗೆ ಕಲಾ ಸರಸ್ವತಿಯೇ ಹುಟ್ಟಿ ಬರಲಿ ಎಂದು ಖುಷಿ ಖುಷಿಯಿಂದ ಹೇಳಿಕೊಂಡಿದ್ದಾರೆ.

ಹೆಣ್ಣು ಮಗುವಾದೆ ಕಲಾ ಸರಸ್ವತಿ ಮನೆಗೆ ಬಂದಂತೆ ಆಗುತ್ತದೆ. ಗಂಡು ಮಗುವಾದರೆ ದೇಶಕ್ಕೆ ಒಬ್ಬ ಸೈನಿಕ ಸಿಕ್ಕಂತೆ ಆಗುತ್ತದೆ ಎಂದು ನಯನ ಅವರು ತಿಳಿಸಿದ್ದಾರೆ. ತಮ್ಮ ಮಗನನ್ನ ಸೈನಿಕ ಮಾಡುತ್ತೇನೆ ಎಂಬ ಮಾತನ್ನು ಸಹ ವೇದಿಕೆಯ ಮೇಲೆ ಅವರು ಹೇಳಿದ್ದಾರೆ. ಇನ್ನು ಮಗುವಿಗೆ ಕೃಷ್ಣನ ಹಾಡನ್ನ ಲಾಲಿ ಆಗಿ ಆಡಿ ಮಲಗಿಸುತ್ತೇನೆ ಎಂದು ಖುಷಿ ಖುಷಿಯಾಗಿ ಹೇಳಿದ್ದಾರೆ. ನಮ್ಮ ಮನೆಯಲ್ಲಿ ಎಲ್ಲರೂ ಸಹ ಪುಟ್ಟ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ ಎಂದು ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ತಿಳಿಸಿದ್ದಾರೆ.
ವೇದಿಕೆಯ ಮೇಲೆ ನಡೆಯಿತು ಸೀಮಂತ ಶಾಸ್ತ್ರ
ಸುವರ್ಣ ಸೂಪರ್ ಸ್ಟಾರ್ ಶಾಲಿನಿ ಅವರು ನಯನಾಗೆ ವೇದಿಕೆಯ ಮೇಲೆ ಸೀಮಂತ ಶಾಸ್ತ್ರವನ್ನ ಮಾಡಿದ್ದಾರೆ. ನಯನ ಅವರಿಗೆ ಬಳೆಯನ್ನ ತೊಡಿಸಿ, ಅರಿಶಿನ, ಕುಂಕುಮವನ್ನು ಹಚ್ಚಿ. ಮುಡಿಗೆ ಹೂವನ್ನ ಮುಡಿಸಿ, ಸೀರೆ ಹಾಗೂ ಫಲ ತಾಂಬೂಲವನ್ನ ಕೊಟ್ಟು ಸುಸೂತ್ರವಾಗಿ ಹೆರಿಗೆ ಆಗಲಿ ಎಂದು ಶುಭ ಹಾರೈಸಿದ್ದಾರೆ. ನಯನ ಅವರ ಜೊತೆಗೆ ಬಂದಿದ್ದ ಮತ್ತಿಬ್ಬರು ಗರ್ಭಿಣಿಯರಿಗೂ ಸಹ ಸೀಮಂತ ಶಾಸ್ತ್ರವನ್ನ ವೇದಿಕೆಯ ಮೇಲೆ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಮಕ್ಕಳು ಅತ್ತರೆ ನೀವೆಲ್ಲ ಏನು ಮಾಡುತ್ತೀರಾ ಎಂದು ಗೊಂಬೆಯನ್ನ ಕೊಟ್ಟು ಸಮಾಧಾನ ಮಾಡಲು ಹೇಳಿದ್ದಾರೆ.
ಇನ್ನು ನಯನಾ ಅವರು ಶಾಲಿನಿಗೆ ಹೆರಿಗೆಯಾದ ನಂತರ ಬಾಣಂತಿಯವರ ಊಟೋಪಚಾರ ಯಾವ ರೀತಿ ಇರುತ್ತದೆ ಎಂಬ ಬಗ್ಗೆ ಪ್ರಶ್ನೆಯನ್ನು ಕೇಳಿದ್ದಾರೆ. ನಯನಾ ಅವರು ಸೀಮಂತ ಶಾಸ್ತ್ರ ಮಾಡಿಸಿಕೊಳ್ಳುವ ಸಮಯದಲ್ಲಿ ಸ್ವಲ್ಪ ಭಾವುಕರಾದಂತೆ ಕಂಡು ಬಂದಿದೆ. ಇದಕ್ಕಾಗಿ ಅವರ ಅಭಿಮಾನಿಗಳು ನಯನಾ ಯಾಕೋ ತುಂಬಾ ಮಂಕಾಗಿ ಇದ್ದಾರೆ, ಬೇಸರದಲ್ಲಿ ಇದ್ದಾರೆ ಎಂದು ತಾವು ಸಹ ಬೇಸರವನ್ನು ಹೊರಗೆ ಹಾಕಿದ್ದಾರೆ. ತಾವು ಗರ್ಭಿಣಿಯಾದರು ಸಹ ನಯನಾ ಅವರು ಸೀರಿಯಲ್ ನಲ್ಲಿ ನಟನೆ ಮಾಡುವುದನ್ನಂತೂ ಬಿಟ್ಟಿಲ್ಲ.


Click it and Unblock the Notifications











