»   » ಬಿಗ್ ಬಾಸ್ ಮನೆಗೆ ನಟಿ ನಯನಕೃಷ್ಣ ಗೃಹಪ್ರವೇಶ

ಬಿಗ್ ಬಾಸ್ ಮನೆಗೆ ನಟಿ ನಯನಕೃಷ್ಣ ಗೃಹಪ್ರವೇಶ

Posted By:
Subscribe to Filmibeat Kannada

ಇನ್ನೊಂದು ಶುಕ್ರವಾರ ಬಂದೇ ಬಿಟ್ಟಿದೆ. ಈ ಬಾರಿ ಬಿಗ್ ಬಾಸ್ ಮನೆಯಿಂದ ಒಬ್ಬರಲ್ಲ ಇಬ್ಬರು ಹೊರಬೀಳುತ್ತಿದ್ದಾರೆ. ಈ ಸಲ ಎಲ್ಲರನ್ನೂ ನಾಮಿನೇಟ್ ಮಾಡಲಾಗಿದ್ದು ಇಬ್ಬರಿಗೆ ಗೇಟ್ ಪಾಸ್ ಗ್ಯಾರಂಟಿಯಾಗಿದೆ. ಹಾಗಿದ್ದಾರೆ ಮನೆಗೆ ಹೊಸ ಸದಸ್ಯರು ಬರಬೇಕಲ್ಲವೆ?

'ಕೊಟ್ಲಲ್ಲಪ್ಪೋ ಕೈ' ಚಿತ್ರದ ನಾಯಕಿ ನಯನಕೃಷ್ಣ ಅವರು ಬಿಗ್ ಬಾಸ್ ಮನೆಗೆ ಅಡಿಯಿಡುತ್ತಿದ್ದಾರೆ. ಭಾನುವಾರ (ಮೇ.5) ಅವರು ಬಿಗ್ ಬಾಸ್ ಮನೆಗೆ ಗೃಹಪ್ರವೇಶ ಮಾಡುತ್ತಿದ್ದಾರೆ. ಸಾಕಷ್ಟು ವಿವಾದಗಳಿಂದ ಹೆಸರುವಾಸಿಯಾಗಿರುವ ನಯನಕೃಷ್ಣ ಅವರು ಇಲ್ಲಿ ಇನ್ನೇನು ಮಾಡುತ್ತಾರೋ ಎಂಬ ಕುತೂಹಲ ಇದ್ದೇ ಇದೆ.

actress Nayana Krishna

ಕೊಟ್ಲಲ್ಲಪ್ಪೋ ಕೈ ಚಿತ್ರದ ವಿವಾದ ಸಂದರ್ಭದಲ್ಲಿ ಆ ಚಿತ್ರದ ನಿರ್ದೇಶಕ ಋಷಿ ಅವರಿಗೆ ನಯನಕೃಷ್ಣ ಅವರು ಚಪ್ಪಲಿಯಲ್ಲಿ ಹೊಡೆದಿದ್ದರು. ತುಂಬಿದ ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರಿಗೆ ಕಪಾಳಮೋಕ್ಷ ಕೂಡ ಮಾಡುವ ಮೂಲಕ ವಿವಾದಕ್ಕೆ ಕಾರಣವಾಗಿದ್ದರು.

ಈಗಾಗಲೆ ಹೊಸ ಬಿಗ್ ಬಾಸ್ ಮನೆಗೆ ಹೊಸ ಎಂಟ್ರಿ ಕೊಟ್ಟಿರುವ ರೋಹನ್ ಗೌಡ ಆಟ ನಡೆಯುತ್ತಿದೆ. ಈಗ ನಯನಕೃಷ್ಣ ಹೊಸ ಎಂಟ್ರಿ. ಸೋಮವಾರದಿಂದ (ಮೇ.6) ಅವರ ಆಟ ಪಾಠ ನೋಡಬಹುದು.

ಈಗಾಗಲೆ ಮನೆಯಲ್ಲಿ ರಾಜಕೀಯ ಬಿಸಿ ಏರಿದ್ದು, ಇಂಥಹ ಸಂದರ್ಭದಲ್ಲಿ ಹಾಟ್ ಬೆಡಗಿ ನಯನಕೃಷ್ಣ ಎಂಟ್ರಿ ಕೊಡುತ್ತಿರುವುದು ಇನ್ನಷ್ಟು ಕಾವೇರಲು ಕಾರಣವಾಗಿದೆ. ಚಂದ್ರಿಕಾ, ನಿಖಿತಾ, ಅನುಶ್ರೀ, ಜಯಲಕ್ಷ್ಮಿ ಜತೆ ನಯನಕೃಷ್ಣ ಹೇಗೆ ಹೊಂದಾಣಿಕೆಯಾಗುತ್ತಾರೋ ಏನೋ? (ಏಜೆನ್ಸೀಸ್)

English summary
'Kotlallappo Kai' fame Kannada actress Nayana Krishna all set to enter Etv Kannada's reality show Bigg Boss Kannada. She joins the reality show on 5th May.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada