"ಅವ್ನು ನನ್ನ ಎದೆಗೆ ಜೋರಾಗಿ ಹೊಡ್ದ, ಅವ್ನಿಗೆ ಏನ್ ಮಜಾ ಸಿಕ್ತು"; ನಯನಾ ನಾಗರಾಜ್

ಮಹಿಳೆಯರು ಮನೆಯಲ್ಲಿ ಅಥವಾ ಮನೆ ಹೊರಗೆ ಸುರಕ್ಷಿತವಾಗಿಲ್ಲ. ಪ್ರತಿದಿನ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳೇ ಅದಕ್ಕೆ ಸಾಕ್ಷಿ. ದೈಹಿಕವಾಗಿ ಹಾಗೂ ಮಾನಸಿಕರವಾಗಿ ಮಹಿಳೆಯರು ನೋವು ಅನುಭವಿಸುತ್ತಲೇ ಇರುತ್ತಾರೆ. ಮಹಿಳೆಯರನ್ನು ಕಂಡರೆ ವಿಚಿತ್ರವಾಗಿ ಆಡುವ ಪುರುಷರು ಸಮಾಜದಲ್ಲಿದ್ದಾರೆ. ಕಿರುತೆರೆ ನಟಿ ನಯನಾ ನಾಗರಾಜ್ ತಮ್ಮ ಜೀವನದಲ್ಲಿ ಎದುರಾದ ಸಂಗತಿಗಳ ಬಗ್ಗೆ ಧೈರ್ಯವಾಗಿ ಮಾತನಾಡುತ್ತಾರೆ.

ಚಿಕ್ಕಂದಿನಲ್ಲೇ ತಮ್ಮ ಎದುರು ನಡೆದ ಘಟನೆಗಳಿಂದ ನಯನಾ ನಾಗರಾಜ್ ರೋಸಿ ಹೋಗಿದ್ದಾರೆ. ಇವತ್ತಿಗೂ ಆ ಕಹಿ ಅನುಭವವನ್ನು ಮರೆಯೋಕೆ ಸಾಧ್ಯವಾಗುತ್ತಿಲ್ಲ, ಟ್ರೋಮಾ ರೀತಿಯಲ್ಲಿ ಮನಸ್ಸಿನಲ್ಲಿ ಉಳಿದುಬಿಟ್ಟಿದೆ ಎಂದು ರಾಜೇಶ್ ಗೌಡ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ನಾನು ಚಿಕ್ಕವಳಿದ್ದಾಗ ನಮ್ಮ ಮನೆ ಬಳಿ ಒಬ್ಬ ಅಂಕಲ್ ಬಂದು ನನ್ನ ಎದುರು ಹಸ್ತ ಮೈಥುನ ಮಾಡಿಕೊಂಡಿದ್ದರು. ಕಾಲೇಜು ದಿನಗಳಲ್ಲಿ ಮತ್ತೊಬ್ಬ ವ್ಯಕ್ತಿ ರಸ್ತೆಯಲ್ಲಿ ಇದೇ ರೀತಿ ಮಾಡಿದಾಗ ಆತನಿಗೆ ಕಲ್ಲಿನಿಂದ ಹೊಡೆದಿದ್ದೆ ಎಂದಿದ್ದರು.

Nayana Nagaraj Opens Up About Childhood Trauma and Urges Society to Teach Self-Defense and Respect

ತಾವು 10ನೇ ತರಗತಿಯಲ್ಲಿದ್ದಾಗ ನಡುರಸ್ತೆಯಲ್ಲಿ ನಡೆದ ಘಟನೆಯೊಂದನ್ನು ನಯನಾ ನಾಗರಾಜ್ ಹಂಚಿಕೊಂಡಿದ್ದರು. "ಶಿವಾಜಿನಗರದಲ್ಲಿ ಒಂದು ಘಟನೆ ನಡೀತು. ಆಗ ನಾನು ಎಸ್‌ಎಸ್‌ಎಲ್‌ಸಿ ಓದುತ್ತಿದ್ದೆ. ನಮ್ಮ ಪೋಷಕರ ಜೊತೆ ಎಂಜಿ ರೋಡ್‌ಗೆ ಹೋಗಿದ್ದೆ. ಮರಳಿ ಮನೆಗೆ ಹೋಗಲು ಬಸ್‌ಗಾಗಿ ಕಾಯುತ್ತಿದ್ದೆವು. ನಾನು ಬಸ್ ಬಂತು ಎಂದು ಓಡಿ ಹೋಗುತ್ತಿದ್ದೆ. ಯಾರೋ ಇಬ್ಬರು ಹುಡುಗರು ಎದುರಿಗೆ ಬರುತ್ತಿದ್ದರು. ಅದರಲ್ಲಿ ಒಬ್ಬ ನನ್ನ ಎದೆಗೆ ಬಲವಾಗಿ ಹೊಡೆದಿದ್ದ" ಎಂದು ಆ ಘಟನೆ ನೆನಪಿಸಿಕೊಂಡಿದ್ದಾರೆ.

"ನಾನು ಜೋರಾಗಿ ಓಡುತ್ತಿದ್ದೆ. ಅದೇ ಸಮಯದಲ್ಲಿ ಅವ್ನು ಜೋರಾಗಿ ಹೊಡೆದ. ಆ ಬಲವಾದ ಏಟಿನಿಂದ ನಾನು ಕೆಳೆ ಬಿದ್ದೆ. ಉಸಿರಾಡಲು ಸಾಧ್ಯವಾಗದೇ ಏದುಸಿರು ಬಿಡುತ್ತಿದ್ದೆ. ನಮ್ಮ ಅಪ್ಪ ಕೂಡಲೇ ಅವನಿಗೆ ಬೈದರು. ಅವ್ನು ಓಡಿ ಹೋದ. ಎಷ್ಟು ಜೋರಾಗಿ ಓಡಿದ ಅಂದ್ರೆ ಸುತ್ತಾಮುತ್ತಾ ಇದ್ದ ಯಾರೊಬ್ಬರು ಅವನನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಜೊತೆಗಿದ್ದ ಮತ್ತೊಬ್ಬ ನನಗೇನು ಗೊತ್ತಿಲ್ಲ, ನಾನೇನು ಮಾಡಿಲ್ಲ ಎಂದು ನಿಂತುಬಿಟ್ಟ. ಅವ್ನು ನನಗೆ ಆ ರೀತಿ ಹೊಡೆದಿದ್ದಕ್ಕೆ ಏನು ಮಜಾ ಸಿಕ್ತು" ಎಂದು ನಯನಾ ಬೇಸರ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಹೆಣ್ಣು ಮಕ್ಕಳ ಜೊತೆ ಹೀಗೆ ನಡೆದುಕೊಳ್ಳುವ ಪುರುಷರು ಇದ್ಧಾರೆ. ಕೆಟ್ಟದಾಗಿ ನೋಡುವುದು, ಕೆಟ್ಟದಾಗಿ ಮುಟ್ಟುವುದು ಮಾಡುತ್ತಾರೆ. ಬರೀ ಮಹಿಳೆಯರಿಗೆ ಮಾತ್ರವಲ್ಲ, ಹುಡುಗರಿಗೂ ಇಂತಹ ಕಹಿ ಘಟನೆಗಳು ಎದುರಾಗುತ್ತದೆ. ಕೆಲವೊಮ್ಮೆ ಬಸ್‌ಗಳಲ್ಲಿ ಇರುವ ಕಂಡೆಕ್ಟರ್ ಕೂಡ ಹೀಗೆ ತಪ್ಪಾಗಿ ನಡೆದುಕೊಳ್ಳುತ್ತಾರಂತೆ. ನನ್ನ ಹುಡುಗ ಸ್ನೇಹಿತರು ಈ ಬಗ್ಗೆ ಹೇಳಿಕೊಂಡಿದ್ದಾರೆ" ಎಂದು ನಯನಾ ನಾಗರಾಜ್ ವಿವರಿಸಿದ್ದಾರೆ.

ಮುಂಬೈ ಹೈಕೋರ್ಟ್ ಒಂದು ಆದೇಶ ನೀಡಿದೆ. ಅದನ್ನು ನಾನು ಓದಿದ್ದೀನಿ. "ಅಪ್ರಾಪ್ತ ಸ್ತನಗಳನ್ನು ಹಿಸುಕುವುದು ತಪ್ಪಲ್ಲ, ಅದನ್ನು ರೇ* ಎನ್ನಲು ಸಾಧ್ಯವಿಲ್ಲ ಅಂತ". ಹೀಗಂದೆ ಏನಂತ ಅರ್ಥ. ಇದನ್ನು ನೋಡಿ ರಸ್ತೆಗಳಲ್ಲಿ ಹೋಗುವ ಅಪ್ರಾಪ್ತ ಹೆಣ್ಣುಮಕ್ಕಳನ್ನು ಏನು ಬೇಕಾದರೂ ಮಾಡಬಹುದು ಎಂದು ಪುರುಷರು ಅಂದುಕೊಳ್ತಾರೆ. ಇಂತಹ ಆದೇಶಗಳನ್ನು ಹೊರಡಿಸುವುದರಿಂದ ಸಮಾಜಕ್ಕೆ ಯಾವ ಸಂದೇಶ ಕೊಡುತ್ತಿದ್ದೀರಾ? ಎಂದು ನಯನಾ ನಾಗರಾಜ್ ಪ್ರಶ್ನಿಸಿದ್ದಾರೆ.

ಹೆಣ್ಣುಮಕ್ಕಳಿಗೆ ಸೆಲ್ಫ್ ಡಿಫೆನ್ಸ್ ಹೇಳಿಕೊಡಬೇಕು, ಏನಾದರೂ ಸಮಸ್ಯೆ ಎದುರಾದರೆ ಯಾರೋ ಬಂದು ಕಾಪಾಡುತ್ತಾರೆ ಎಂದು ಕಾಯುತ್ತಾ ಕೂರಲು ಸಾಧ್ಯವಿಲ್ಲ. ಗುಡ್ ಟಚ್ ಬ್ಯಾಡ್ ಟಚ್ ಎಲ್ಲದರ ಬಗ್ಗೆಯೂ ಮಕ್ಕಳಿಗೆ ಹೇಳಿಕೊಡಬೇಕು. ಸ್ಕ್ರೀನ್ ಟೈಮ್ ಹೆಚ್ಚಾಗಿರುವುದರಿಂದ ಮಕ್ಕಳು ಫೋನ್‌ನಲ್ಲಿ ಬೇಡವಾಗಿರುವುದನ್ನೆಲ್ಲಾ ನೋಡುತ್ತಾರೆ. ಹಾಗಾಗಿ ಮಕ್ಕಳು ಕೂಡ ಕೆಟ್ಟದಾಗಿ ವರ್ತಿಸುವ ಸಾಧ್ಯತೆಯಿದೆ. ಅವರಿಗೆ ತಿಳಿ ಹೇಳಬೇಕು ಎಂದು ನಯನಾ ನಾಗರಾಜ್ ಮನವಿ ಮಾಡಿದ್ದಾರೆ.

More from Filmibeat

English summary
Television actress Nayana Nagaraj shares painful experiences of abuse from childhood and calls for urgent awareness about women's safety;
Read more about: actress serials
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X