ಫ್ಯಾಮಿಲಿಗೆ ಹಾಯ್ ಹೇಳಿ, ಬಣ್ಣದ ಲೋಕಕ್ಕೆ ಗುಡ್ ಬೈ ಹೇಳಿದ ಕಿರುತೆರೆ ನಟಿಯರು
ಕಿರುತೆರೆಯಲ್ಲಿ ಧಾರಾವಾಹಿಗಳಿಗೇನು ಕಮ್ಮಿಯಿಲ್ಲ. ನಿತ್ಯ ಒಂದು ವಾಹಿನಿಯಲ್ಲಿ ಕಡಿಮೆ ಎಂದರೂ ಕೂಡ 10-15 ಧಾರಾವಾಹಿಗಳು ಪ್ರಸಾರವಾಗುತ್ತವೆ. ಒಂದೇ ಭಾಷೆಯಲ್ಲಿ ಮೂರಕ್ಕಿಂತಲೂ ಹೆಚ್ಚು ಕಿರುತೆರೆ ವಾಹಿನಿಗಳಿವೆ.
ದಿನಕ್ಕೆ 50ಕ್ಕೂ ಅಧಿಕ ಧಾರಾವಾಹಿಗಳು ಪ್ರಸಾರವಾಗುತ್ತವೆ. ಇನ್ನು ಬೇರೆ ಭಾಷೆಗಳನ್ನು ಸೇರಿಸಿಕೊಂಡರೆ ನೂರಾರು ಧಾರಾವಾಹಿಗಳು ಪ್ರತಿದಿನ ಪ್ರಸಾರ ಕಾಣುತ್ತವೆ. ಇನ್ನು ಒಂದು ಧಾರಾವಾಹಿಯಲ್ಲಿ ಹೆಚ್ಚು ಕಡಿಮೆ ಎಂದರೂ 25-30 ನಟ-ನಟಿಯರು ನಟಿಸುತ್ತಾರೆ. ಮಹಿಳಾ ಪಾತ್ರಗಳಿಗೆ ಇಲ್ಲಿ ಪ್ರಾಮುಖ್ಯತೆ ಇರುತ್ತದೆ. ಕಾರಣ ಧಾರಾವಾಹಿಗಳನ್ನು ಹೆಣ್ಣು ಮಕ್ಕಳು ವೀಕ್ಷಿಸುವುದು ಹೆಚ್ಚು.

ಸಾವಿರಾರು ಸಂಖ್ಯೆಯಲ್ಲಿ ಕಿರುತೆರೆ ಕಲಾವಿದರಿದ್ದಾರೆ. ನಮ್ಮ ಕನ್ನಡ ಕಿರುತೆರೆಯಲ್ಲಿ ಹೊಸ ಕಲಾವಿದರ ದಂಡೇ ಇದೆ. ಒಂದು ಧಾರಾವಾಹಿಯಲ್ಲಿ ನಟಿಸಿ, ಬಳಿಕ ಸಿನಿಮಾ ಇಲ್ಲವೇ ಪರಭಾಷೆಗಳಿಗೆ ಹಾರಿ ಬಿಡುತ್ತಾರೆ.
ಇನ್ನು ಕೆಲವರು ಮದುವೆಯಾದ ಬಳಿಕ ನಟನೆಯಿಂದ ದೂರೇ ಉಳಿದು ಬಿಡುತ್ತಾರೆ. ಸುಮಾರು ವರ್ಷಗಳ ಬಳಿಕ ಮತ್ತೆ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡುತ್ತಾರೆ. ಈಗ ಕನ್ನಡ ಕಿರುತೆರೆಯ ನಟಿಯರಲ್ಲಿ ಮದುವೆಯಾದ ಬಳಿಕ ನಟನೆಯನ್ನು ಬಿಟ್ಟವರು ಯಾರು ಎಂದು ನೋಡುವ ಸಮಯ.
ನಟನೆಗೆ ಗುಡ್‌ಬೈ
'ಪ್ರೀತಿ ಇಲ್ಲದ ಮೇಲೆ', 'ಗುಪ್ತಗಾಮಿನಿ', 'ಜೋಗುಳ' ಸೇರಿದಂತೆ ಕೆಲ ಧಾರಾವಾಹಿಗಳಲ್ಲಿ ನಟಿಸಿದ ಗ್ರೀಷ್ಮಾ ಅವರು ಸೃಜನ್ ಲೋಕೇಶ್ ಅವರನ್ನು ಮದುವೆಯಾದರು. ಮದುವೆಯಾದ ಬಳಿಕ ನಟನೆಯಿಂದ ದೂರವೇ ಉಳಿದಿದ್ದು, ಮನೆ, ಮಕ್ಕಳು ಎಂದು ಬ್ಯೂಸಿಯಾಗಿದ್ದಾರೆ. 'ಗಿಣಿರಾಮ' ಧಾರಾವಾಹಿ ಖ್ಯಾತಿಯ ನಟಿ ಕಾವೇರಿ ಬಾಗಲಕೋಟೆ ಅವರು ಕೂಡ ಕಳೆದ ವರ್ಷ ಫೆಬ್ರವರಿ 25 ರಂದು ಮದುವೆಯಾದರು. ಸೈನಿಕನ ಜೊತೆಗೆ ಸಪ್ತಪದಿ ತುಳಿದ ಕಾವೇರಿ ಸದ್ಯ ಮೇಕಪ್ ಆರ್ಟಿಸ್ಟ್ ಆಗಿದ್ದಾರೆ. ಮೇಕಪ್ ಆರ್ಟಿಸ್ಟ್ ಕೋರ್ಸ್‌ಗಳನ್ನು ಮಾಡುತ್ತಾ ಬ್ಯುಸಿಯಾಗಿದ್ದಾರೆ.

ಕಿರುತೆರೆ ಬಿಟ್ಟ ನಟಿಯರು
2021ರಲ್ಲಿ ನಟಿ ಕಾವ್ಯಾ ಗೌಡ ಅವರು ಸೋಮಶೇಖರ್ ಎಂಬುವರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯ ಬಳಿಕ ಕಾವ್ಯಾ ಅವರು ನಟನೆಯಿಂದ ದೂರ ಉಳಿದಿದ್ದಾರೆ. ಕಾವ್ಯಾ ಅವರಿಗೆ ಸಿಯಾ ಎಂಬ ಮುದ್ದು ಮಗಳಿದ್ದು, ಕಂಪ್ಲೀಟ್ ಆಗಿ ಫ್ಯಾಮಿಲಿಗೆ ಸಮಯ ಕೊಟ್ಟಿದ್ದಾರೆ.
ಬಣ್ಣದಿಂದ ದೂರಾದೂರ
'ಜೊತೆ ಜೊತೆಯಲಿ' ಧಾರಾವಾಹಿಯ ಮಾನ್ಸಿ ಪಾತ್ರದ ಮೂಲಕ ಫೇಮಸ್ ಆದ ನಟಿ ಶಿಲ್ಪಾ ಅಯ್ಯರ್ ಅವರು 2023ರಲ್ಲಿ ಸಚಿನ್ ವಿಶ್ವನಾಥ್ ಎಂಬುವರ ಜೊತೆ ದಾಂಪತ್ಯ ಜೀವನವನ್ನು ಪ್ರಾರಂಭಿಸಿದರು. ಮದುವೆಯಾದ ಬಳಿಕ ನಟಿ ಧಾರಾವಾಹಿಯಿಂದ ದೂರವೇ ಉಳಿದಿದ್ದಾರೆ. 'ಗಿಣಿರಾಮ' ಖ್ಯಾತಿಯ ನಟಿ ನಯನಾ ನಾಗರಾಜ್ ಕೂಡ 2024ರಲ್ಲಿ ಸಿಂಪಲ್ ಆಗಿ ಮದುವೆಯಾಗಿ ನಟನೆಯ ವೃತ್ತಿಯಿಂದ ದೂರ ಸರಿದಿದ್ದಾರೆ.
ಸಿರಿ, ಕೌಸ್ತುಭಾ ಮಣಿ
ನಟಿ ಸಿರಿ ರಾಜು ಅವರು ಎರಡು ದಶಕಗಳಿಂದ ಕನ್ನಡ ಕಿರುತೆರೆಯಲ್ಲಿ ಇದ್ದರು. ಬಿಗ್ ಬಾಸ್ ಸೀಸನ್ 10ರಲ್ಲಿ ಭಾಗವಹಿಸಿದ ಸಿರಿ ಅವರು 2024ರಲ್ಲಿ ಮದುವೆಯಾದರು. ಸದ್ಯ ಫ್ಯಾಮಿಲಿ ಜೊತೆಗೆ ಇದ್ದು, ನಟನೆಗೆ ಮರಳುವ ಬಗ್ಗೆ ಯಾವುದೇ ಅಪ್ ಡೇಟ್ಸ್ ನೀಡಿಲ್ಲ. ಇನ್ನು 'ನನ್ನರಸಿ ರಾಧೆ' ಖ್ಯಾತಿಯ ನಟಿ ಕೌಸ್ತುಭಾ ಮಣಿ ಅವರು 2024ರಲ್ಲಿ ಮದುವೆಯಾಗಿದ್ದು, ಫಾರಿನ್‌ನಲ್ಲಿ ಪತಿಯ ಜೊತೆಗೆ ಸೆಟಲ್ ಆಗಿದ್ದಾರೆ. ಕೌಸ್ತುಭಾ ಮಣಿ ಅವರು ನಟನೆಗೆ ಬರುವ ಯಾವುದೇ ಸೂಚನೆಗಳಿಲ್ಲ. ನಟಿ ಪ್ರಿಯಾಂಕ ಚಿಂಚೋಳಿ ಅವರು ಕೂಡ ಮದುವೆಯಾದ ಬಳಿಕ ನಟನೆಯಿಂದ ದೂರವೇ ಉಳಿದಿದ್ದಾರೆ. ಇತ್ತೀಚೆಗಷ್ಟೇ ಚೊಚ್ಚಲ ಮಗುವಿಗೆ ಜನ್ಮ ನೀಡಿದ್ದು, ಬಣ್ಣದ ಲೋಕದ ಪಯಣಕ್ಕೆ ಗುಡ್ ಬೈ ಹೇಳಿದ್ದಾರೆ.


Click it and Unblock the Notifications











