"ಮನಸ್ಸಿಗೆ ತುಂಬಾ ನೋವಾಗಿತ್ತು.. ಸಾಯಬೇಕೆಂದು ನಿರ್ಧರಿಸಿದ್ದೆ"; ರಿಯಾಲಿಟಿ ಶೋ ವೇದಿಕೆ ಮೇಲೆ ಕಣ್ಣೀರಿಟ್ಟ ನಯನಾ

By ಅನಿತಾ ಬನಾರಿ

'ಕಾಮಿಡಿ ಕಿಲಾಡಿಗಳು' ರಿಯಾಲಿಟಿ ಶೋ ಮೂಲಕ ಬಹಳಷ್ಟು ಖ್ಯಾತಿ ಪಡೆದ ನಟಿ ಹಾಗೂ ಕಾಮಿಡಿಯನ್ ನಯನಾ ಇದೀಗ ತಮ್ಮ ನೋವಿನ ಕಥೆಯನ್ನು ಬಿಚ್ಚಿಟ್ಟಿದ್ದಾರೆ. ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ 'ಸುವರ್ಣ ಸೂಪರ್ ಸ್ಟಾರ್' ಎಂಬ ರಿಯಾಲಿಟಿ ಶೋನಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದ ನಟಿ ಹಾಗೂ ಕಾಮಿಡಿಯನ್ ನಯನಾ ಒಂದೊಮ್ಮೆ ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ನಿರ್ಧಾರವನ್ನು ಮಾಡಿದ್ದಾರಂತೆ. ಈ ವಿಚಾರವನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ.

'ಕಾಮಿಡಿ ಕಿಲಾಡಿಗಳು' ಶೋವಿನ ನಂತರ ಹಲವಾರು ರಿಯಾಲಿಟಿ ಶೋ ಹಾಗೂ ಧಾರಾವಾಹಿಗಳ ಮೂಲಕ ಇದೀಗ ಬಹಳಷ್ಟು ಪಾಪ್ಯುಲಾರಿಟಿ ಪಡೆದಿರುವ ನಟಿ ನಯನಾ ಅವರು ಇತ್ತೀಚೆಗಷ್ಟೇ ಒಂದು ಹೆಣ್ಣು ಮಗುವಿನ ತಾಯಿಯಾಗಿದ್ದಾರೆ. 2018 ರಲ್ಲಿ ಶರತ್ ಎಂಬುವವರನ್ನು ಮದುವೆಯಾದ ಇವರು ಈಗ ಹೆಣ್ಣು ಮಗುವಿನ ತಾಯಿಯಾಗಿ ಸಂತೋಷದ ದಿನಗಳನ್ನು ನೋಡುತ್ತಿದ್ದಾರೆ.

Nayana of Comedy Kiladigalu actor

ಆದರೆ ಈ ಖುಷಿಯ ಹಿಂದಿನ ನೋವಿನ ಕ್ಷಣವನ್ನು ನೆನೆದ ಅವರು "ನನಗೆ ಜೀವನವೇ ಬೇಡ ಎನಿಸಿತ್ತು. ಚೆನ್ನಾಗಿ ದುಡಿತಿದ್ವಿ. ಓಡಾಡುವುದಕ್ಕೆ ಕಾರು ಬೈಕು ಇತ್ತು. ಆದರೆ ಇಷ್ಟೇನಾ ಅನ್ನಿಸಿಬಿಟ್ಟಿತ್ತು. ಈ ಮಗು ಹುಟ್ಟುವ ಮೊದಲು ನನಗೆ ಎರಡು ಬಾರಿ ಅಬಾರ್ಷನ್ ಆಗಿತ್ತು. ನಿನಗೆ ಏನ್ ಆಗ್ತಾ ಇದೆ ಅಂತ ಕೇಳುವವರು ಒಬ್ಬರು ನನಗೆ ಬೇಕಿತ್ತು" ಎಂದು ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.

ಜೊತೆಗೆ "ಮನಸ್ಸಿಗೆ ತುಂಬಾ ನೋವಾಗಿ ಮಾತ್ರೆಗಳನ್ನು ನುಂಗಿಬಿಟ್ಟಿದ್ದೆ. ಹೆಣವು ಯಾರಿಗೂ ಸಿಗದಂತೆ ಸಾಯಬೇಕೆಂದು ನಿರ್ಧರಿಸಿದ್ದೆ. ಆದರೆ ದೇವರು ದೊಡ್ಡವನು ನನ್ನ ಮಗಳಿಗೆ ಏನು ಆಗಲಿಲ್ಲ. ಎರಡು ದಿನದ ನಂತರ ನಾನು ಮತ್ತೆ ಗರ್ಭಿಣಿ ಎಂದು ಗೊತ್ತಾಯ್ತು. ಈ ಮಗುವಿಗಾದರೂ ನಾನು ಬದುಕಬೇಕೆಂದು ನಿರ್ಧರಿಸಿದೆ" ಎಂದು ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ಹೇಳುತ್ತಾ ಕಣ್ಣೀರು ಹಾಕಿದ್ದರು ನಟಿ ನಯನಾ.

Nayana of Comedy Kiladigalu actor

ಈ ಸಮಯದಲ್ಲಿ 'ಸೂಪರ್ ಸ್ಟಾರ್' ರಿಯಾಲಿಟಿ ಶೋ ನಿರೂಪಕಿ ಶಾಲಿನಿಯವರು ತಮ್ಮ ಜೀವನದ ಬಗ್ಗೆಯೂ ಕೆಲ ಘಟನೆಗಳನ್ನು ಹಂಚಿಕೊಂಡು ನಟಿ ನಯನಾ ಅವರನ್ನು ಸಮಾಧಾನ ಪಡಿಸಿದರು.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಭಕ್ತಿಪ್ರಧಾನ ಧಾರಾವಾಹಿ " ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ" ಧಾರಾವಾಹಿಯಲ್ಲಿ ಯಲ್ಲಮ್ಮನ ಅಮ್ಮನಾಗಿ ನಟಿಸಿದ್ದರು ನಟಿ ನಯನಾ. ಆ ಧಾರಾವಾಹಿಯಲ್ಲಿ ನಟಿಸುತ್ತಿರುವಾಗಲೇ ನಟಿ ನಯನಾ ಅವರು ಗರ್ಭಿಣಿಯಾದ ವಿಚಾರ ತಿಳಿದುಬಂದಿತು. ಮುಂದೆ ಧಾರಾವಾಹಿಯಿಂದ ಹೊರಬರುವ ನಿರ್ಧಾರ ಮಾಡಿದರು. ಆ ಸಮಯದಲ್ಲಿ ಧಾರಾವಾಹಿ ತಂಡದವರು ವಿಭಿನ್ನ ರೀತಿಯಲ್ಲಿ ಆಕೆಯ ಪಾತ್ರವನ್ನು ಮುಗಿಸಿದ್ದು ಸೀರಿಯಲ್ ಪ್ರಿಯರಿಗೂ ಖುಷಿ ತಂದಿತ್ತು.

ಹೌದು, ಧಾರಾವಾಹಿಯಲ್ಲಿ ಯಲ್ಲಮ್ಮನ ತಾಯಿ ಅನಾರೋಗ್ಯದಿಂದ ಸಾವನ್ನಪ್ಪುವಂತೆ ತೋರಿಸಿ ನಯನಾ ಪಾತ್ರವನ್ನು ಮುಕ್ತಾಯಗೊಳಿಸಿದ್ದರು. ಇದೀಗ ಮಗಳ ಲಾಲನೆ - ಪಾಲನೆಯಲ್ಲಿ ಬ್ಯುಸಿಯಾಗಿರುವ ನಯನಾ ಮಗಳ ಫೋಟೋವನ್ನಾಗಲಿ, ಹೆಸರನ್ನಾಗಲಿ ಎಲ್ಲಿಯೂ ಕೂಡಾ ರಿವೀಲ್ ಮಾಡಲಿಲ್ಲ. ಸದ್ಯ ನಟನೆಯಿಂದಲೂ ಬ್ರೇಕ್ ಪಡೆದಿರುವ ಈಕೆ ಮತ್ತೆ ಯಾವಾಗ ನಟನೆಗೆ ಮರಳುತ್ತಾರೆ ಎಂದು ಕಾದುನೋಡಬೇಕಾಗಿದೆ.

More from Filmibeat

English summary
Nayana of Comedy Kiladigalu fame said that once she had decided to die
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X