'ಸ್ಟಾರ್ ಸುವರ್ಣ' ವಾಹಿನಿಯಲ್ಲಿ ಹೊಸ ಧಾರಾವಾಹಿ 'ನೀಲಿ'

By Harshitha

ಹೊಸತನ ಹಾಗೂ ವಿಭಿನ್ನ ಕಾರ್ಯಕ್ರಮಗಳ ಮೂಲಕ ಕರ್ನಾಟಕದ ಮನೆ ಮಾತಾಗಿರುವ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಅಮ್ಮ-ಮಗಳ ಅಪೂರ್ವ ಬಾಂಧವ್ಯದ ಕಥಾಹಂದರ ಹೊಂದಿರುವ 'ನೀಲಿ' ಎಂಬ ಹೊಸ ಧಾರಾವಾಹಿ ಆರಂಭವಾಗಲಿದೆ.

ಕಿರುತೆರೆ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ತ್ರೀಡಿ ತಂತ್ರಜ್ಞಾನದ ಮೂಲಕ ಗೊಂಬೆಯನ್ನೇ ಮೂಲ ಪಾತ್ರಧಾರಿಯನ್ನಾಗಿಟ್ಟುಕೊಂಡು ಬಿತ್ತರವಾಗಲಿರುವ ಧಾರಾವಾಹಿ 'ನೀಲಿ'.

ವಿನೂತನ ರೀತಿಯ ಗ್ರಾಫಿಕ್ಸ್ ಡಿಸೈನ್

ವಿನೂತನ ರೀತಿಯ ಗ್ರಾಫಿಕ್ಸ್ ಡಿಸೈನ್

ಈಗಾಗಲೇ 'ಸ್ಟಾರ್ ಸುವರ್ಣ' ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗ್ರಾಫಿಕ್ ಬಳಕೆಯ 'ಹರ ಹರ ಮಹಾದೇವ'..ಕರ್ನಾಟಕದ ವೀಕ್ಷಕರ ಪ್ರೀತಿಗೆ ಪಾತ್ರವಾಗಿದೆ. ಅದರ ಹಿನ್ನಲೆಯಲ್ಲಿಯೇ 'ನೀಲಿ' ಧಾರಾವಾಹಿಯಲ್ಲಿಯೂ ವಿನೂತನ ರೀತಿಯ ಗ್ರಾಫಿಕ್ ಡಿಸೈನ್ ಬಳಸಲಾಗಿದೆ. [ಪಾರ್ವತಿ ಅವತಾರದ ಕಥೆ ಕಣ್ತುಂಬಿಕೊಳ್ಳಿ, ಪುಣ್ಯ ಕಟ್ಟಿಕೊಳ್ಳಿ.!]

40 ತಂತ್ರಜ್ಞರ ಶ್ರಮ

40 ತಂತ್ರಜ್ಞರ ಶ್ರಮ

'ನೀಲಿ' ಧಾರಾವಾಹಿಯ ಅದ್ಧೂರಿ ಗ್ರಾಫಿಕ್ಸ್ ತಂತ್ರಜ್ಞಾನದ ಜವಾಬ್ದಾರಿಯನ್ನು ಬೆಂಗಳೂರಿನ ಯುನಿಫೈ ಮೀಡಿಯಾ ಗ್ರಾಫಿಕ್ಸ್ ವಹಿಸಿಕೊಂಡಿದೆ. 40 ನುರಿತ ತಂತ್ರಜ್ಞರು 'ನೀಲಿ'ಗೆ ಗ್ರಾಫಿಕ್ಸ್ ಮೆರಗನ್ನು ನೀಡಿದ್ದಾರೆ. ['ಸ್ಟಾರ್ ಸುವರ್ಣ' ಪ್ರೀಮಿಯರ್ : ಭಾನುವಾರ ಸಂಜೆ 6ಕ್ಕೆ 'ಲಾಸ್ಟ್ ಬಸ್']

'ನೀಲಿ' ಕಥಾಹಂದರ

'ನೀಲಿ' ಕಥಾಹಂದರ

ಹುಟ್ಟುವಾಗಲೇ ತಾಯಿಯನ್ನು ಕಳೆದುಕೊಳ್ಳುವ ಮುದ್ದು ಮಗುವೊಂದು, ತನ್ನ ಅಚ್ಚುಮೆಚ್ಚಿನ ಗೊಂಬೆ 'ನೀಲಿ' ಬಳಿ ತನ್ನ ನೋವು, ನಲಿವುಗಳನ್ನು ಹಂಚಿಕೊಳ್ಳುತ್ತದೆ. ತನ್ನ ಪ್ರೀತಿಯ ಮಗುವಿನ ಜೀವಕ್ಕೆ ಅಪಾಯ ಇರುವುದನ್ನು ಅರಿತ ತಾಯಿಯ ಆತ್ಮ 'ನೀಲಿ' ಗೊಂಬೆಯಲ್ಲಿ ಸೇರಿಕೊಂಡು ಮಗುವನ್ನು ರಕ್ಷಿಸುವ ಸಾಹಸಕ್ಕೆ ಕೈ ಹಾಕುವ ಕಥಾಹಂದರ 'ನೀಲಿ' ಧಾರಾವಾಹಿಯಲ್ಲಿದೆ.

'ನೀಲಿ' ಪಾತ್ರಧಾರಿಗಳು

'ನೀಲಿ' ಪಾತ್ರಧಾರಿಗಳು

'ನೀಲಿ' ಧಾರಾವಾಹಿಯಲ್ಲಿ ವಿಷ್ಣು ಪಾತ್ರಧಾರಿಯಾಗಿ ಶ್ರೀ ಮಹಾದೇವ್, ರೇಖಾ ಪಾತ್ರಧಾರಿಯಾಗಿ ಆಶಿತಾ ಚಂದ್ರಪ್ಪ ಮತ್ತು ಸಾನ್ವಿಯಾಗಿ ಬೇಬಿ ಕೀರ್ತನಾ ನಟಿಸುತ್ತಿದ್ದಾರೆ. ಇವರೊಂದಿಗೆ ಪವಿತ್ರಾ ಜಯರಾಂ, ಮರೀನಾ ತಾರಾ, ದೀಪಿಕಾ ಶರಣ್, ರವಿಕುಮಾರ್ ಮತ್ತು ಪ್ರವೀಣ್ ರಬಕವಿ ನಟಿಸುತ್ತಿದ್ದಾರೆ.

'ನೀಲಿ' ನಿರ್ದೇಶಕ ಯಾರು.?

'ನೀಲಿ' ನಿರ್ದೇಶಕ ಯಾರು.?

ಕಿರುತೆರೆಯಲ್ಲಿ ಹಲವಾರು ಯಶಸ್ವಿ ಧಾರಾವಾಹಿಗಳನ್ನು ನಿರ್ದೇಶಿಸಿರುವ ಹಾಗೂ ಪ್ರಸ್ತುತ 'ಸ್ಟಾರ್ ಸುವರ್ಣ' ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ದುರ್ಗಾ' ಧಾರಾವಾಹಿಯ ನಿರ್ದೇಶಕರಾಗಿದ್ದ ಜಿ.ಕೆ.ಸತೀಶ್ ಕೃಷ್ಣ 'ನೀಲಿ' ಧಾರಾವಾಹಿಯ ನಿರ್ದೇಶನದ ಸಾರಥ್ಯ ವಹಿಸಿಕೊಂಡಿದ್ದಾರೆ.

ಪ್ರಸಾರ ಯಾವಾಗ.?

ಪ್ರಸಾರ ಯಾವಾಗ.?

ವಿಶೇಷವಾದ ಕಥಾಹಂದರ ಹೊಂದಿರುವ 'ನೀಲಿ' ಧಾರಾವಾಹಿ ನವೆಂಬರ್ 14 ರಿಂದ ರಾತ್ರಿ 8.30ಕ್ಕೆ ಸೋಮವಾರದಿಂದ ಶನಿವಾರದವರೆಗೆ 'ಸ್ಟಾರ್ ಸುವರ್ಣ' ವಾಹಿನಿಯಲ್ಲಿ ಪ್ರಸಾರವಾಗಲಿದೆ.

More from Filmibeat

English summary
Kannada Entertainment Channel Star Suvarna has come up with a new serial called 'Neeli' which will go on air from November 14th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X