Lakshminivasa: ಸಿದ್ದೇಗೌಡ್ರ ಅತ್ತಿಗೆ ಸಖತ್ ಗ್ಲಾಮರಸ್‌ ಆಗ್ಬಿಟ್ರು; ಕಾರಣ ಹೇಳುವವರು ಯಾರು?

By ಎಸ್ ಸುಮಂತ್

ಧಾರಾವಾಹಿಗಳಲ್ಲಿ ಪಾತ್ರ ಬದಲಾದಗಲೂ, ಪಾತ್ರದ ಲುಕ್ ಬದಲಾದಗಲೂ ಸೂಚನೆಯನ್ನು ನೀಡುತ್ತಾರೆ. ಆ ಪಾತ್ರ ಏನು ಕೇಳುತ್ತದೆ ಅದನ್ನೇ ಮಾಡುತ್ತಾರೆ. ಜೊತೆಗೆ ಬದಲಾವಣೆ ಆಗಿದ್ದು ಯಾಕೆ ಎಂಬುದನ್ನು ಹೇಳುತ್ತಾರೆ. ಆದರೆ 'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಎಷ್ಟೋ ಸಲ ಗೊತ್ತಾಗದ ರೀತಿ ಬದಲಾವಣೆ ಮಾಡಿ ಬಿಡುತ್ತಾರೆ. ಇಷ್ಟೆಲ್ಲಾ ಹೇಳುವುದಕ್ಕೆ ಕಾರಣ ಸಿದ್ದೇಗೌಡ್ರ ಅತ್ತಿಗೆ ನೀಲೂ ಲುಕ್ ಬದಲಾಗಿರುವುದು.

ಜವರೇಗೌಡನಿಗೆ ಇಬ್ಬರು ಗಂಡು ಮಕ್ಕಳು. ದೊಡ್ಡ ಮಗನಿಗೆ ಅಷ್ಟೊಂದು ಸಹಕಾರ ನೀಡುತ್ತಾ ಇರಲಿಲ್ಲ. ಮಗ ಪೆದ್ದನ ರೀತಿ ಆಡುತ್ತಿದ್ದ. ಜವರೇಗೌಡ ಹೆಚ್ಚು ಇಷ್ಟಪಡುತ್ತಾ ಇದ್ದದ್ದು ಸಿದ್ದೇಗೌಡ್ರನ್ನೇ. ದೊಡ್ಡ ಸೊಸೆ ನೀಲಾಳಿಗೂ ಅಷ್ಟೇನು ಪ್ರಾಮುಖ್ಯತೆ ನೀಡುತ್ತಿರಲಿಲ್ಲ. ಆದರೆ ಈಗ ಎಲ್ಲವೂ ಬದಲಾಗಿದೆ. ಬದಲಾಗಿದ್ದು ಹೇಗೆ ಅನ್ನೋದು ಮಾತ್ರ ಪ್ರಶ್ನೆಯಾಗಿಯೇ ಉಳಿದಿದೆ.

Neelu aka Manasa Manohar glamorous look Lakshmi nivasa serial goes viral

ಮಾನಸ ಮನೋಹರ್ ಪಾತ್ರವೇ ತದ್ವಿರುದ್ಧ

'ಜೊತೆ ಜೊತೆಯಲಿ' ಸೀರಿಯಲ್ ಪ್ರಿಯರಿಗೆ ಮೀರಾ ಚೆನ್ನಾಗಿಯೇ ನೆನಪಿರಬಹುದು. ಗ್ಲಾಮರ್ ಗೊಂಬೆಯಂತಿದ್ದರು. ಅವರ ಡ್ರೆಸ್ಸಿಂಗ್ ಸೆನ್ಸ್‌ಗೇನೆ ಎಷ್ಟೋ ಜನ ಕಳೆದೋಗಿದ್ದರು. ಅವರನ್ನೇ ಅನುಕರಣೆ ಮಾಡುತ್ತಿದ್ದರು. ಡ್ರೆಸ್ಸಿಂಗ್ ಮಾತ್ರವಲ್ಲ ಒಂದು ಸಂಸ್ಥೆಯನ್ನು ಹೇಗೆ ನೋಡಿಕೊಳ್ಳಬೇಕು, ಅಲ್ಲಿನ ಹೆಚ್.ಆರ್ ಹೇಗಿರಬಹುದು ಎಂಬುದನ್ನು ತೋರಿಸಿದ್ದರು. ಇಂಪ್ರೆಸ್ ಮಾಡಿದ್ದರು. ಅದೇ ಮೀರಾ 'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ತದ್ವಿರುದ್ಧವಾಗಿ ಕಾಣಿಸಿಕೊಂಡಿದ್ದರು.

ನೀಲೂ ಲುಕ್ ಚೇಂಜ್

ಆರಂಭದಲ್ಲಿ ನೀಲೂ ಪಾತ್ರ ಮಾಡಿದ್ದ ಮಾನಸ ಮನೋಹರ್ ಅವರನ್ನು ನೋಡಿದಾಗ, ಇದ್ಯಾರಪ್ಪ ಅಂತ ಜನ ಗೊಂದಲಕ್ಕೆ ಒಳಗಾಗಿದ್ದರು. ಅದರಲ್ಲಿ ಆಶ್ಚರ್ಯವೇನು ಇಲ್ಲ. ಯಾಕಂದ್ರೆ ಮಾನಸ ಆ ರಿತೀಯ ಲುಕ್‌ನಲ್ಲಿ ಎಲ್ಲರ ಮುಂದೆ ಬಂದಿದ್ದರು. ಎಣ್ಣೆ ಹಾಕಿ ಬಾಚಿದ ಹೇರ್ ಸ್ಟೈಲ್, ಉದ್ದನೆಯ ಜಡೆ, ತಲೆ ತುಂಬಾ ಹೂ, ಮೂಗಿಗೆ ರಿಂಗ್, ಅಪ್ಪಟ ಬಾರ್ಡರ್ ಸ್ಯಾರಿ.. ಪಕ್ಕಾ ಸಾಂಪ್ರಾದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದರು. ಈಗ ಎಲ್ಲವೂ ಉಲ್ಟಾ ಆಗಿದೆ.

Neelu aka Manasa Manohar glamorous look Lakshmi nivasa serial goes viral

ಗ್ಲಾಮರ್ ಲುಕ್ ಯಾಕೆ..?

ಸೀರೆಯನ್ನು ಈಗಿನ ಟ್ರೆಂಡ್ ರೀತಿಯಂತೆ ಹಾಕುತ್ತಿರಲಿಲ್ಲ. ಭಯ ಭಕ್ತಿಯಿಂದ ಇರುವ ಸೊಸೆಯ ರೀತಿಯೇ ಕಾಣಿಸುತ್ತಿದ್ದರು. ಆದರೆ ಈಗ ಆ ರೀತಿ ಕಾಣಿಸುತ್ತಿಲ್ಲ. ಸ್ಲೀವ್ ಲೆಸ್ ಬ್ಲೌಸ್ ಹಾಕ್ತಾರೆ, ಫ್ರೀ ಹೇರ್ ಬಿಡ್ತಾರೆ, ಈಗ ಕೊಂಚ ಗ್ಲಾಮರಸ್ ಆಗಿ ಕಾಣಿಸುತ್ತಿದ್ದಾರೆ. ಸೌಪರ್ಣಿಕಾ ಪರಿಚಯವಾದ ಮೇಲೆ ಈ ಲುಕ್ ಬದಲಾಯಿತಾ..? ಸೌಪರ್ಣಿಕಾ ಸಹವಾಸ ಮಾಡಿ ತಾನೂ ಬದಲಾದರಾ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.

ಉತ್ತರ ಸಿಗದ ಹಲವು ಪ್ರಶ್ನೆಗಳು..?

'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಸಾಕಷ್ಟು ಪಾತ್ರಗಳು ಇವೆ. ದಿಢೀರ್ ದಿಢೀರನೇ ಬದಲಾಗುತ್ತದೆ. ಇದು ಹೇಗೆ ಎಂಬುದೇ ಉತ್ತರ ಸಿಗದಂತ ಪ್ರಶ್ನೆಯಾಗಿ ಉಳಿದಿದೆ. ಜಯಂತ್ ಮನೆ ಲಕ್ಷ್ಮೀ-ಶ್ರೀನಿವಾಸ್‌ಗೆ ಹೇಗೆ ಗೊತ್ತಾಯ್ತು ಎಂಬುದು ಇಲ್ಲಿವರೆಗೂ ಅರ್ಥವಾಗಿಲ್ಲ. ಜಾಹ್ನವಿ ಮಧ್ಯಾಹ್ನದ ಸಮಯ ಹಾಲ್‌ನಲ್ಲೇ ಯಾಕೆ ಬಂದು ಕೂರ್ತಾರೆ. ಯಾರೂ ಇಲ್ಲ ಎಂದಾಗ ಬೆಡ್ ರೂಮಿಗೆ ಹೋಗಬಹುದು, ರೆಸ್ಟ್ ಮಾಡಬಹುದು, ಸಿಸಿಟಿವಿ ಇರುವ ಬಳಿ ಬಿಟ್ಟರೆ ಬೇರೆಲ್ಲೂ ಹೋಗಲ್ಲ. ಈಗ ನೀಲೂ ವಿಚಾರದಲ್ಲೂ ಹಲವು ಪ್ರಶ್ನೆಗಳು ಕಾಡುತ್ತಿವೆ.

ಧಾರಾವಾಹಿಯಲ್ಲಿ ಭಾರೀ ಗೊಂದಲ

ಸೊಸೆ ಎಂದರೆ ಅಷ್ಟೊಂದು ಪ್ರಾಮುಖ್ಯತೆ ಕೊಡದೇ ಇದ್ದಾಗ ನೀಲೂ ಸೈಲೆಂಟ್ ಆಗಿದ್ದರು. ಅದ್ಯಾವಾಗ ಇಷ್ಟೊಂದು ಆಕ್ಟೀವ್ ಆದ್ರೂ..? ದೊಡ್ಡ ಮಗ ಕೂಡ ಆಕ್ಟೀವ್ ಆಗಿದ್ದಾನೆ..? ಜವರೇಗೌಡನ ಸೊಸೆ ಮೊದಲ್ಯಾಕೆ ಅಷ್ಟೊಂದು ಸಾಂಪ್ರದಾಯಿಕವಾಗಿ ಇದ್ದದ್ದು..? ಬದಲಾಗಿದ್ದಕ್ಕೆ ಜವರೇಗೌಡನಾಗಲಿ, ಅಜ್ಜಿಯಾಗಲೀ, ಅತ್ತೆಯಾಗಲೀ ನೋ ಒಪಿನಿಯನ್. ಹೀಗೆ ಹಲವು ಪ್ರಶ್ನೆಗಳನ್ನೇ ತಲೆಯಲ್ಲಿ ಉಳಿಸುತ್ತಾ ಕಥೆ ಸಾಗಿಸುತ್ತಿದ್ದಾರೆ.

More from Filmibeat

English summary
zee kannada serial Lakshmi nivasa Written Update on June 6th episode. Here is the details about neelu look change;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X