"ಭೂಮಿ ದುಂಡಗಿದೆ.. ಮತ್ತೆ ಸಿಗೋಣ" ಎಂದು 'ನೀನಾದೆ ನಾ' ಧಾರಾವಾಹಿಯಿಂದ ಹೊರಬಂದ ಭವ್ಯಶ್ರೀ ಪೂಜಾರಿ

By ಅನಿತಾ ಬನಾರಿ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ನೀನಾದೆ ನಾ' ಕೂಡಾ ಒಂದು. 'ನೀನಾದೆ ನಾ' ಧಾರಾವಾಹಿಯಲ್ಲಿ ನಾಯಕ ವಿಕ್ರಮ್‌ನ ಅತ್ತಿಗೆ ಶೈಲೂ ಆಗಿ ನಟಿಸುತ್ತಿರುವ ಚೆಂದುಳ್ಳಿ ಚೆಲುವೆಯ ಹೆಸರು ಭವ್ಯಶ್ರೀ ಪೂಜಾರಿ. ಒಂದು ವರ್ಷಗಳ ಕಾಲ ಶೈಲೂ ಆಗಿ ಮೋಡಿ ಮಾಡಿರುವ ಭವ್ಯಶ್ರೀ ಪೂಜಾರಿ ಇದೀಗ ಆ ಪಾತ್ರದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದಾರೆ.

ಮನೆಯ ಎರಡನೇ ಸೊಸೆ ಶೈಲೂ ಆಗಿರುವ ಈಕೆ ಸದಾ ಕಾಲ ವೇದಾ ಮತ್ತು ವಿಕ್ರಂರನ್ನು ಕೀಳಾಗಿ ಕಾಣುತ್ತಿರುತ್ತಾಳೆ. ವಿಕ್ರಂನ ಹೆಂಡತಿ ವೇದಾಳಿಗೆ ಹಿಂಸೆ ಕೊಡುವ ಸಲುವಾಗಿ ಯಾವಾಗಲೂ ಕಿರುಕುಳ ನೀಡುವ ಶೈಲೂಗೆ ಯಾವಾಗಲೂ ತನ್ನ ಬಗ್ಗೆ ಮಾತ್ರ ಯೋಚನೆ. ಸದಾ ಕಾಲ ತನ್ನ ಬಗ್ಗೆ, ತನ್ನ ಗಂಡನ ಬಗ್ಗೆಯಷ್ಟೇ ಚಿಂತಿಸುವ ಸ್ವಾರ್ಥಿ ಶೈಲೂ ಪಾತ್ರದ ಮೂಲಕ ಕಿರುತೆರೆಯಲ್ಲಿ ಗಮನ ಸೆಳೆದಿದ್ದರು ಭವ್ಯಶ್ರೀ ಪೂಜಾರಿ.

Neenade Naa serial fame Bhavyashree Poojary came out of Shailoo s role

ರಮೇಶ್ ಅರವಿಂದ್ ನಿರ್ಮಾಣದ 'ನೀನಾದೆ ನಾ' ಧಾರಾವಾಹಿಯು ಇತ್ತೀಚೆಗಷ್ಟೇ 300 ಸಂಚಿಕೆ ಪೂರೈಸಿದೆ. ಈ ಸಂತಸದ ನಡುವೆ ಭವ್ಯಶ್ರೀ ಪೂಜಾರಿ ಅವರು ಬೇಸರದ ಸಂಗತಿಯನ್ನು ಹೊರಹಾಕಿದ್ದಾರೆ. ಹೌದು, ಇದ್ದಕ್ಕಿದ್ದಂತೆ ಭವ್ಯಶ್ರೀ ಪೂಜಾರಿ ತಮ್ಮ ಪಾತ್ರದಿಂದ ಹೊರಬಂದಿದ್ದಾರೆ. ಈ ವಿಚಾರವನ್ನು ಸ್ವತಃ ಭವ್ಯಶ್ರೀ ಅವರೇ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

"ನಮಸ್ಕಾರ. ಕಳೆದ ಒಂದು ವರ್ಷದಿಂದ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನೀನಾದೆ ನಾ' ಧಾರಾವಾಹಿಯಲ್ಲಿ ನನ್ನ 'ಶೈಲೂ' ಪಾತ್ರಕ್ಕೆ ಜೀವ ತುಂಬಿ, ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಇದೀಗ ನನ್ನ ವೈಯುಕ್ತಿಕ ಕಾರಣಗಳಿಂದ, ಆ ಪಾತ್ರದಿಂದ ಹೊರ ಬಂದಿದ್ದೇನೆ. ಈ ಸಂದರ್ಭದಲ್ಲಿ ಇಂತಹ ಅದ್ಭುತವಾದ ಅವಕಾಶವನ್ನು ನೀಡಿದ ರಮೇಶ್ ಅರವಿಂದ್ ಅವರಿಗೆ ಹಾಗೂ ಸ್ಟಾರ್ ಸುವರ್ಣ ವಾಹಿನಿಗೆ ನನ್ನ ಹೃದಯಂತರಾಳದ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ.

Neenade Naa serial fame Bhavyashree Poojary came out of Shailoo s role

ಇದರ ಜೊತೆಗೆ "ನನ್ನ ಈ ಪಯಣದಲ್ಲಿ ಜೊತೆಯಾದ ಧಾರಾವಾಹಿಯ ಎಲ್ಲಾ ತಾಂತ್ರಿಕ ಕುಟುಂಬಕ್ಕೆ ಹಾಗೂ ಕಲಾವಿದ ಸ್ನೇಹಿತರಿಗೆ ನನ್ನ ನಮನ. ಇಷ್ಟು ದಿನ ನೀವೆಲ್ಲರೂ ನನ್ನ 'ಶೈಲೂ' ಪಾತ್ರವನ್ನು ಮನಸಾರೆ ಮೆಚ್ಚಿ, ಹರಸಿದಿರಿ. ನಿಮ್ಮ ಪ್ರೀತಿಗೆ ನಾನು ಋಣಿ. ನಿಮಗೆಲ್ಲ ನನ್ನ ಕೋಟಿ ನಮನ. ಭೂಮಿ ದುಂಡಗಿದೆ. ಮತ್ತೊಂದು ಪಾತ್ರದೊಂದಿಗೆ, ಮತ್ತೆ ನಿಮ್ಮ ಮುಂದೆ ಬರುತ್ತೆನೆ. ಆಗ ಮತ್ತೆ ಭೇಟಿಯಾಗೋಣ. ಸದಾ ನಿಮ್ಮ ಆಶೀರ್ವಾದ, ಪ್ರೀತಿ ಇರಲಿ... ಧನ್ಯವಾದಗಳು" ಎಂದು ಭವ್ಯಶ್ರೀ ಪೂಜಾರಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

More from Filmibeat

English summary
Bhavyashree Poojary who left Neenade Naa serial due to personal reasons:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X