Neenadena: ಮನೆ ಬಿಟ್ಟು ಹೊರಡು ಅಂದ್ರೆ ವೇದಾ ಏನು ಮಾಡ್ತಾಳೆ ? ಇದು ರೀಲ್ ಅಲ್ಲ ಗುರು.. ರೀಲ್ಸ್..!
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸ ಹೊಸ ಧಾರಾವಾಹಿಗಳ ಆಗಮನವಾಗುತ್ತಿದೆ. ಅದರಲ್ಲಿ ಈಗ 'ನೀನಾದೆ ನಾ' ಧಾರಾವಾಹಿ ಹೊಸದಾಗಿ ಆರಂಭವಾಗಿದೆ. ಹೊಸದಾಗಿ ಆರಂಭವಾಗಿದ್ದರೂ ಸಹ ಸಾಕಷ್ಟು ಸದ್ದು ಮಾಡ್ತಾ ಇದೆ. ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದೆ. ಆ ಧಾರಾವಾಹಿಯೊಳಗಿನ ಪಾತ್ರವನ್ನು ನೋಡುವುದಕ್ಕೆ ಎಲ್ಲಾ ಖುಷಿ ಪಡುತ್ತಿದ್ದಾರೆ.
ವಿದೇಶದಲ್ಲಿ ಶಿಕ್ಷಣ ಮುಗಿಸಿ ಬಂದರೂ, ತಮ್ಮ ನೆಲದ ಸಂಪ್ರದಾಯವನ್ನು ಅನುಕರಣೆ ಮಾಡುವ ಹುಡುಗಿ, ಜೀವನ ಅಂದ್ರೆ ತಲೆ ಕೆಡಿಸಿಕೊಳ್ಳದೆ, ರೌಡಿಸಂ ಮಾಡಿಕೊಂಡು ಓಡಾಡುವ ಹುಡುಗ ಕಟ್ಟಿದ ತಾಳಿಯಿಂದ, ಎಲ್ಲದನ್ನು ಬಿಟ್ಟು ಹುಡುಗನ ಮನೆಗೆ ಬಂದು ಕೂತಿರುವ ಕಥೆ 'ನೀನಾದೆ ನಾ'.

2ನೇ ಸೊಸೆಯೇ ದುಷ್ಮನ್
ವಿಕ್ರಂ ಪಕ್ಕಾ ರೌಡಿಸಂ ಹುಡುಗ. ತಂದೆ ಏನೇ ಹೇಳಿದರೂ ತಲೆ ಕೆಡಿಸಿಕೊಂಡಿಲ್ಲ. ತನ್ನ ರೌಡಿ ಬಾಸ್ ಏನು ಹೇಳುತ್ತಾರೋ ಅದನ್ನ ಮಾಡಿಕೊಂಡು, ಊರವರ ದೃಷ್ಟಿಯಲ್ಲೆಲ್ಲಾ ಕೆಟ್ಟವನಾಗಿ ಬದುಕುತ್ತಿದ್ದಾನೆ. ಯಾವುದೋ ಕೋಪದಲ್ಲಿ ವೇದಾಗೆ ತಾಳಿ ಕಟ್ಟಿದ್ದಾನೆ. ಈಗ ಇವನೇ ನನ್ನ ಗಂಡ ಅಂತ ವೇದಾ ಕೂಡ ಮನೆಗೆ ಬಂದು ಕೂತಿದ್ದಾಳೆ. ವಿಕ್ರಂನ ಹೇಗೆ ಬೇಕಾದರೂ ಸಂಭಾಳಿಸುವ ವೇದಾಳಿಗೆ ಮನೆಯಲ್ಲಿ ದೊಡ್ಡ ದುಷ್ಮನ್ ಎಂದರೆ ಅದು ಎರಡನೇ ಸೊಸೆ ಶೈಲೂ. ವಿಕ್ರಂನನ್ನು ಕಂಡರೂ ಆಗಲ್ಲ, ಈಗ ವೇದಾಳನ್ನು ಕಂಡರೂ ಕಿಡಿಕಾರುತ್ತಲೇ ಇರುತ್ತಾಳೆ.
ವೇದಾ ಸಿಕ್ಕಾಪಟ್ಟೆ ಗಟ್ಟಿಗಿತ್ತಿ
ವೇದಾ ವಿದೇಶದಲ್ಲಿಯೇ ಶಿಕ್ಷಣ ಮುಗಿಸಿ ಬಂದರೂ, ಸಂಪ್ರದಾಯಕ್ಕೆ ಹೆಚ್ಚು ಮಹತ್ವ ನೀಡುವ ಹುಡುಗಿ. ಅದಕ್ಕೆ ಅವನು ಒರಟನಾದರೂ ಕಟ್ಟಿದ ತಾಳಿಗೆ ಬೆಲೆ ಕೊಟ್ಟು ಅವನ ಮನೆಗೆ ಬಂದು ಕೂತಿದ್ದಾಳೆ. ಆದ್ರೆ, ವಿಕ್ರಂ ಸಾಧ್ಯವಾದಷ್ಟು ವೇದಾಳನ್ನು ಮನೆಯಿಂದ ಹೊರಗೆ ಹಾಕುವುದಕ್ಕೆ ನೋಡುತ್ತಿದ್ದಾಳೆ. ಅದು ಸಾಧ್ಯವಾಗುತ್ತಿಲ್ಲ. ಯಾಕಂದ್ರೆ, ಆ ಮನೆಯಲ್ಲಿ ವಿಕ್ರಂ ಅಮ್ಮ ಮತ್ತು ದೊಡ್ಡ ಅತ್ತಿಗೆ ವೇದಾಗೇನೆ ಬೆಂಬಲವಾಗಿ ನಿಂತಿದ್ದಾರೆ. ವೇದಾ ಕೂಡ ಗಟ್ಟಿಗಿತ್ತಿಯೇ. ಅದನ್ನು ಆಗಾಗ ಪ್ರೂವ್ ಮಾಡ್ತಾ ಇರ್ತಾಳೆ.

ತೆರೆಮೇಲೆ ವಿಲನ್ ವೇದಾ-ಶೈಲೂ
ಧಾರಾವಾಹಿಯಲ್ಲಿ ನಡೆಯುವ ಕಥೆಗೆ ತಕ್ಕಂತೆ ಅಲ್ಲಿನ ಪಾತ್ರಗಳು ನಮ್ಮ ಕಣ್ಣಿಗೆ ಕಾಣಿಸುತ್ತವೆ. ಆದರೆ ತೆರೆ ಹಿಂದೆ ಅವರು ಒಳ್ಳೆಯವರ ಕೆಟ್ಟವರಾ..? ಅವರಿಬ್ಬರ ನಡುವೆ ಎಂತ ಬಾಂಧವ್ಯವಿರಬಹುದು ಎಂಬುದನ್ನು ತಿಳಿಯಬೇಕು ಅಂದ್ರೆ ಅವರ ಸೋಶಿಯಲ್ ಮೀಡಿಯಾ ಫಾಲೋವರ್ಸ್ ಆಗಬೇಕಾಗುತ್ತದೆ. ಕ್ಯಾಮರಾ ಆನ್ ಇದ್ದಾಗ ವೇದಾ ಮತ್ತು ಶೈಲೂ ಮುಖಾಮುಖಿಯಾದಾಗ ಜ್ವಾಲಾಮುಖಿಯೇ ಎದ್ದೇಳುತ್ತೆ. ಆದರೆ, ಅದೇ ಕ್ಯಾಮರಾ ಆಫ್ ಆದಾಗ ರೀಲ್ಸ್ ಹಾವಳಿ ಆರಂಭವಾಗುತ್ತೆ.
ರೀಲ್ಸ್‌ನಲ್ಲಿ ಬ್ಯುಸಿ ಈ ಅಕ್ಕ-ತಂಗಿ
ಇತ್ತೀಚೆಗೆ ಈ ರೀಲ್ಸ್ ಟ್ರೆಂಡಿಂಗ್ ಆಗೋಗಿದೆ. ಮನಸ್ಸು ದಣಿದಾಗ, ವಿಶ್ರಾಂತಿ ಬೇಕು ಎನಿಸಿದಾಗ, ರೀಲ್ಸ್ ಮಾಡಿದರೆ ಒಂದಷ್ಟು ಹಗುರಾದ ಭಾವನೆ ಬರುವುದಂತೂ ಸುಳ್ಳಲ್ಲ. ಅದರಲ್ಲೂ ಧಾರಾವಾಹಿಗಳ ಸೆಟ್‌ನಲ್ಲಿ ಗ್ಯಾಪ್ ಸಿಕ್ಕ ಕೂಡಲೇ ರೀಲ್ಸ್ ಮಾಡುವುದು ಕಾಮನ್ ಆಗೋಗಿದೆ. ಅವರವರ ಫಾಲೋವರ್ಸ್‌ಗೂ ಸೀರಿಯಲ್ ಸೆಟ್‌ಗಳ ಪರಿಚಯವನ್ನು ಮಾಡಿಸುತ್ತಾ ಇರುತ್ತಾರೆ. ಸದ್ಯಕ್ಕೆ ವೇದಾ ಮತ್ತು ಶೈಲೂ ಮಾಡಿರುವ ರೀಲ್ಸ್ ಸಿಕ್ಕಾಪಟ್ಟೆ ವೈರಲ್ ಆಗ್ತಾ ಇದೆ. ಶೈಲೂ ಮನೆ ಬಿಟ್ಟು ನಡಿ ಎಂದಾಗ ವೇದಾಳ ರಿಯಾಕ್ಷನ್ ಹೇಗಿರುತ್ತೆ ಎಂಬ ರೀಲ್ಸ್ ಅದು.


Click it and Unblock the Notifications











