Neenadhe Na: ವಿಕ್ರಂ ವಿರುದ್ದ ಸಿಡಿದೆದ್ದ ಮನೆ ಮಂದಿ; ತಂದೆ ಮಾತಿಗೆ ಮನೆ ಬಿಟ್ಟು ಹೋಗುತ್ತಾನ?

By Poorva

ನೀನಾದೆ ನಾ ಧಾರವಾಹಿ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಧಾರಾವಾಹಿ ವೀಕ್ಷಕರ ಮೆಚ್ಚುಗೆಗೆ ಕಾರಣವಾಗಿದೆ. ಇದೀಗ ಮತ್ತೊಮ್ಮೆ ತಿರುವು ಪಡೆಯುವ ಮೂಲಕ ವೀಕ್ಷಕರ ಕುತೂಹಲ ಹೆಚ್ಚಿಸಿದೆ. ಧಾರಾವಾಹಿ ಬರಹಗಾರರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ವಿಕ್ರಂ ಎಂದಿಗೂ ತಾಯಿ ಪ್ರೀತಿಯನ್ನು ಮೀರುವುದು ಇಲ್ಲ. ಆತ ವೇದಾ ಮೇಲೆ ಇಟ್ಟಿರುವ ಪ್ರೀತಿ ಅಂಥದ್ದು ಆದರೆ ಇದೀಗ ತಾಯಿ ಜಯಮ್ಮನ ಮಾತನ್ನು ಮೀರಿ ವೇದಾಳನ್ನು ಮದುವೆ ಆಗಿದ್ದಾನೆ.

ಶಾಸ್ತ್ರೋಕ್ತವಾಗಿ ಮದುವೆ ನಡೆದಿದೆ. ಮನೆಗೆ ಕರೆದುಕೊಂಡು ಬಂದು ಮನೆಯವರ ಕೆಂಗಣ್ಣಿಗೆ ಸಿಲುಕಿದ್ದಾನೆ. ವೇದಾಳನ್ನು ಯಾವತ್ತೂ ಮಾತನಾಡಿಸಬಾರದು ಹಾಗೆಯೇ ಯಾವತ್ತೂ ಆಕೆಯನ್ನು ಕಣ್ಣೆತ್ತಿ ನೋಡಬಾರದು ಎಂದು ಹೇಳುತ್ತಿದ್ದಳು ಜಯಮ್ಮ. ಆದರೆ ವೇದಾಳನ್ನು ನೋಡದೆ ವಿಕ್ರಂಗೆ ಒಂದು ದಿನ ಇರಲು ಆಗುತ್ತಿರಲಿಲ್ಲ. ವೇದಾ ನೀನು ಇಲ್ಲದೇ ಈ ವಿಕ್ರಂ ಇಲ್ಲ ಎಂದು ಹೇಳುತ್ತಿದ್ದ.

Neenadhe Na kannada serial written update on 9th March

ಇದೀಗ ಸಾಕ್ಷಿಗೆ ತಾಳಿ ಕಟ್ಟುವುದನ್ನು ಬಿಟ್ಟು ವೇದಾ ಬಳಿಗೆ ಓಡೋಡಿ ಬಂದಿದ್ದಾನೆ ವಿಕ್ರಂ. ಹಸೆಮಣೆಯಲ್ಲಿ ವೇದಾ ಕುಳಿತುಕೊಂಡು ಇರುತ್ತಾಳೆ. ಆಕೆಯನ್ನು ಕರೆದ ಕೂಡಲೇ ವೇದಾಗೆ ಬಹಳ ಖುಷಿ ಆಗುತ್ತದೆ. ಹಾಗೆಯೇ ವಿಕ್ರಂಗೆ ವೇದಾಳನ್ನು ಕೊಟ್ಟು ಮದುವೆ ಮಾಡುತ್ತಾರೆ.

ವೇದಾ ಬಳಿ ಓಡಿ ಬಂದ ವಿಕ್ರಂ

ಇದರಿಂದ ವೇದಾಳನ್ನು ಮದುವೆ ಆಗಬೇಕಿದ್ದ ಹುಡುಗ ಮಾತ್ರ ಬಹಳ ನೊಂದುಕೊಂಡು ಇರುತ್ತಾನೆ. ಏನು ಮಾಡಬೇಕು ಎಂದು ತಿಳಿಯದೇ ಮಂಕಾಗಿ ಕುಳಿತುಕೊಂಡು ಇರುತ್ತಾನೆ. ಇನ್ನೂ ವೇದಾಳನ್ನು ವಿಕ್ರಂ ಎಲ್ಲರ ಒಪ್ಪಿಗೆಯ ಮೇರೆಗೆ ಮನೆಗೆ ಕರೆದುಕೊಂಡು ಬರುತ್ತಾನೆ. ವಿಕ್ರಂಗೆ ಆತನ ತಂದೆ ತರಾಟೆಗೆ ತೆಗೆದುಕೊಳ್ಳುತ್ತಾರೆ.

ಅಮ್ಮನ ಮಾತು ಮೀರಿದ ವಿಕ್ರಂ

ಅಮ್ಮ ಹೇಳಿದ ಮಾತನ್ನು ಯಾವತ್ತೂ ಮೀರುವುದು ಇಲ್ಲ. ಅಮ್ಮ ಹೇಳಿದ ಮಾತೇ ನನಗೆ ವೇದ ವಾಕ್ಯ. ಯಾವತ್ತೂ ನಾನು ಅಮ್ಮನ ಮಾತು ತಳ್ಳಿ ಹಾಕಲ್ಲ ಎಂದೆಲ್ಲ ದೊಡ್ಡ ಮಾತುಗಳನ್ನು ಆಡುತ್ತಾ ಇದ್ದೆಯಲ್ಲ. ಇದೆನಾ ಅಮ್ಮನಿಗೆ ಕೊಟ್ಟ ಮಾತನ್ನು ನಡೆಸಿಕೊಡುವ ರೀತಿ? ಎಂದೆಲ್ಲ ಕಟುಮಾತುಗಳಿಂದ ನಿಂದಿಸುತ್ತಾನೆ. ಆದರೂ ವಿಕ್ರಂ ಏನೇ ಹೇಳಿದರೂ ಜಯ ಮಾತ್ರ ಅಳುತ್ತಿರುತ್ತಾಳೆ.

Neenadhe Na kannada serial written update on 9th March

ಜಯಾ ಆಸೆಗೆ ತಣ್ಣೀರು ಎರಚಿದ ವಿಕ್ರಂ

ಆಕೆಗೆ ಸಾಕ್ಷಿ ಮನೆಯ ಸೊಸೆ ಆಗಬೇಕು ಎನ್ನುವ ಮಹದಾಸೆ ಇರುತ್ತದೆ. ಆದರೆ ಅದೆಲ್ಲವನ್ನೂ ಮನದಲ್ಲೇ ಮುಚ್ಚಿಟ್ಟು ದುಃಖದಲ್ಲಿ ಇರುತ್ತಾಳೆ. ಆದರೆ ಮನೆಯವರೆಲ್ಲ ವಿಕ್ರಂ ಹಾಗೂ ವೇದಾ ವಿರುದ್ದ ಸಿಡಿಡಿದೆದ್ದಿದ್ದಾರೆ.

More from Filmibeat

English summary
Neenadhe Na kannada serial today episode;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X