Actress Khushi Shivu: PUC ಓದುವಾಗಲೇ ಕಿರುತೆರೆಗೆ ಎಂಟ್ರಿ.. 'ನೀನಾದೆ ನಾ' ಎನ್ನುತ್ತಲೇ ಗೆದ್ದ 'ಖುಷಿ'

By ಅನಿತಾ ಬನಾರಿ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನೀನಾದೆ ನಾ' ಧಾರಾವಾಹಿಯು ವಿಭಿನ್ನ ಕಥಾ ಹಂದರದ ಜೊತೆಗೆ ಪಾತ್ರವರ್ಗದ ಮೂಲಕವೂ ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಕೌಟುಂಬಿಕ ಕಥಾಹಂದವನ್ನೊಳಗೊಂಡ 'ನೀನಾದೆ ನಾ' ಧಾರಾವಾಹಿಯಲ್ಲಿ ವೇದಾ ಕೃಷ್ಣಮೂರ್ತಿ ಆಗಿ ಅಭಿನಯಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಈ ಚೆಲುವೆಯ ಹೆಸರು ಖುಷಿ ಶಿವು.

neenandhe-naa-actress-kushi-shivu

ಪಿಯುಸಿ ವಿದ್ಯಾರ್ಥಿನಿಯಾಗಿದ್ದಾಗಲೇ ನಟನೆಗೆ ಎಂಟ್ರಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಪಾರು' ಧಾರಾವಾಹಿಯಲ್ಲಿ ಅರುಂಧತಿ ಮಗಳು, ಖಳನಾಯಕಿ ಅನುಷ್ಕಾ ತಂಗಿ ಅನನ್ಯಾ ಆಗಿ ಅಭಿನಯಿಸುವ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ್ದರು. ಆಗ ಖುಷಿ ಶಿವು ಪಿಯುಸಿ ವಿದ್ಯಾರ್ಥಿನಿ ಆಗಿದ್ದರು. ನೆಗೆಟಿವ್ ಹಾಗೂ ಪಾಸಿಟಿವ್ ಅಂಶಗಳನ್ನೊಳಗೊಂಡಿದ್ದ ಅನನ್ಯಾ ಪಾತ್ರದ ಮೂಲಕ ಆಕೆ ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.

ಗಂಗಾ ಆಗಿ ಕಿರುತೆರೆಯಲ್ಲಿ ಮೋಡಿ

'ಪಾರು' ಧಾರಾವಾಹಿಯ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ಗಂಗಾ ಆಗಿ ನಟಿಸುವ ಮೂಲಕ ಮೊದಲ ಬಾರಿಗೆ ಪೋಷಕ ಪಾತ್ರದಿಂದ ಪೂರ್ಣ ಪ್ರಮಾಣದ ನಟಿಯಾಗಿ ಬಡ್ತಿ ಪಡೆದಿದ್ದರು ಖುಷಿ ಶಿವು. ನಾಯಕ ಅನಿಕೇತ್ ರಾಜ್ ಗುರು ತಮ್ಮ ಪ್ರಣವ್ ನ ಹೆಂಡತಿ ಗಂಗಾ ಆಗಿ ನಟಿಸಿ ಸೈ ಎನಿಸಿಕೊಂಡಿದ್ದ ಖುಷಿ ಶಿವು ನಂತರ ಬದಲಾದುದು ವೇದಳಾಗಿ!

neenandhe-naa-actress-kushi-shivu

ಎಡವಟ್ ರಾಣಿ ಈ ಖುಷಿ ಶಿವು

ಸದ್ಯ 'ನೀನಾದೆ ನಾ' ಧಾರಾವಾಹಿಯ ವೇದಾ ಆಗಿ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ಖುಷಿ ಶಿವು ರೀಲ್ ಲೈಫ್ ಹೊರತಾಗಿ ರಿಯಲ್ ಲೈಫ್‌ನಲ್ಲಿ ಸಖತ್ ಎಡವಟ್ಟು ಮಾಡುತ್ತಾರೆಯಂತೆ. ಮನೆಯಾಗಿರಲೀ, ಸೀರಿಯಲ್ ಸೆಟ್ ಆಗಿರಲಿ ಯಾವುದಾದರೊಂದು ರೀತಿಯ ಎಡವಟ್ ಮಾಡಿಕೊಂಡಿರುತ್ತಾರಂತೆ ನಟಿ ಖುಷಿ ಶಿವು. ಅಂದ ಹಾಗೇ ಪಾಪ ಆ ಎಡವಟ್‌ಗಳನ್ನು ಅವರು ಬೇಕಂತಲೇ ಮಾಡಿರುವುದೇನಲ್ಲ, ಬದಲಿಗೆ ತಮ್ಮಷ್ಟಕ್ಕೇ ಆಗಿರುವಂತದು!

ಬಾಲ್ಯದಿಂದಲೂ ನಟಿಯಾಗುವ ಬಯಕೆ

ಸಣ್ಣ ವಯಸ್ಸಿನಿಂದಲೂ ಖುಷಿ ಶಿವುಗೆ ನಟನೆ ಒಲಿದಿತ್ತು ಎಂದರೆ ತಪ್ಪಾಗಲಾರದು. ಯುಕೆಜಿ ಓದುತ್ತಿರುವಾಗಲೇ ಮಂಡ್ಯ ರಮೇಶ್ 'ನಟನಾ'ಗೆ ವಿದ್ಯಾರ್ಥಿನಿಯಾಗಿ ಸೇರಿದ ಈಕೆ ಕಳೆದ ಹತ್ತು ವರ್ಷಗಳಿಂದ ಅಲ್ಲಿನ ವಿದ್ಯಾರ್ಥಿನಿಯಾಗಿ ಗುರುತಿಸಿಕೊಂಡಿದ್ದಾರೆ. ನಟನೆಯನ್ನು ಕೂಡಾ ಚೆನ್ನಾಗಿ ಕರಗತ ಮಾಡಿಕೊಂಡಿದ್ದಾರೆ. ಸದ್ಯ ನಟನೆಯ ಜೊತೆಗೆ ಓದನ್ನು ಸರಿದೂಗಿಸಿಕೊಂಡು ಸಾಗುತ್ತಿರುವ ಖುಷಿ ಕೊನೆಯ ವರ್ಷದ ಪದವಿ ವಿದ್ಯಾರ್ಥಿನಿ ಹೌದು.

More from Filmibeat

English summary
Khushi Shivu, who is lead role in Neenadhe Naa started her acting journey through a supporting role
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X