Neenadhe Naa: ವಿಕ್ರ -ವೇದಾ ತೆರೆ ಮೇಲೆ ಮಾತ್ರ ಅಲ್ಲ, ತೆರೆ ಹಿಂದೆಯೂ ಸಿಕ್ಕಾಪಟ್ಟೆ ಫನ್ನಿ..!

By ಎಸ್ ಸುಮಂತ್

ಸ್ಟಾರ್ ಸುವರ್ಣದಲ್ಲಿ 'ನೀನಾದೆ ನಾ' ಧಾರಾವಾಹಿ ಎಲ್ಲರ ಗಮನ ಸೆಳೆಯುವುದಲ್ಲದೆ, ಎಲ್ಲರಿಗೂ ಸಿಕ್ಕಾಪಟ್ಟೆ ಇಷ್ಟವಾಗುತ್ತಿದೆ. ಯಾಕಂದ್ರೆ, ಕಥೆಯಲ್ಲಿ ಅಷ್ಟೊಂದು ಜೀವಾಳವಿದೆ. ತಂದೆಯ ಪ್ರೀತಿಗಾಗಿ ಕನವರಿಸುವ ಮಗನ ಹಂಬಲವಿದೆ. ಹೆಚ್ಚು ಪ್ರೀತಿ ತೋರಿಸಲಾಗದೆ ಸಂಕಟ ಪಡುತ್ತಿರುವ ತಾಯಿಯ ನೋವಿದೆ. ಅಷ್ಟೇ ಯಾಕೆ ಶ್ರೀಮಂತಿಕೆಯಲ್ಲಿ ಬೆಳೆದ ಹುಡುಗಿ ಕಷ್ಟ ಪಡುತ್ತಿರುವ ದೃಶ್ಯವಿದೆ.

ಹೀಗಾಗಿಯೇ 'ನೀನಾದೆ ನಾ' ಧಾರಾವಾಹಿ ಎಲ್ಲರನ್ನು ಸೆಳೆಯುತ್ತಿದೆ. ಜೊತೆಗೆ ವಿಕ್ರಂ-ವೇದಾಳ ಜೋಡಿಯ‌ನ್ನು ನೋಡುವುದಕ್ಕೆ ಖುಷಿಯಾಗಬೇಕು. ಅಷ್ಟು ಬ್ಯೂಟಿಫುಲ್ ಜೋಡಿ, ಹೇಳಿ ಮಾಡಿಸಿದಂತೆ ಇದೆ ಎಂಬ ಪದಕ್ಕೆ ತಕ್ಕಂತೆ ಇದ್ದಾರೆ. ತೆರೆ ಮೇಲೆ ಹೇಗಿರ್ತಾರೋ ತೆರೆ ಹಿಂದೆಯೂ ಹಾಗೆಯೇ ಇರ್ತಾರೆ. ಅದರ ಸಣ್ಣ ಝಲಕ್ ಇಲ್ಲಿದೆ.

Neenadhe Naa serial

ಕೋಳಿ ಜಗಳವಾಡುವ ಜೋಡಿ

ವಿಕ್ರಂ - ವೇದಾಳನ್ನು ಕರೆಯುವುದೇ ಬೇತಾಳ ಅಂತ. ಯಾಕಂದ್ರೆ, ಬೇಡ ಬೇಡ ಅಂದ್ರು ಯಾವಾಗ್ಲೂ ಹಿಂದೆ ಹಿಂದೆಯೇ ಬರುತ್ತಾಳೆ. ಹೀಗಾಗಿಯೇ ವಿಕ್ರಂ ಆ ರೀತಿ ಕರೆಯುತ್ತಾನೆ. ಹಾಗಂತ ವೇದಾ ಬೇಸರ ಏನು ಮಾಡಿಕೊಳ್ಳಲ್ಲ. ಅದರ ಜೊತೆಗೆ ವಿಕ್ರಂಗೂ ಗುಂಡ ಗುಂಡ ಅಂತ ರೇಗಿಸುತ್ತಾ ಇರುತ್ತಾಳೆ. ಇಬ್ಬರೂ ಒಂದು ಕಡೆ ಸುಮ್ಮನೆ ಕೂರುವುದೇ ಇಲ್ಲ. ಸಿಕ್ಕ ಸಣ್ಣಪುಟ್ಟ ಕಾರಣಕ್ಕೂ ಜಗಳ ಶುರು ಮಾಡಿಕೊಂಡು ಬಿಡುತ್ತಾರೆ. ಅದು ಊಟಕ್ಕಾದರೂ ಸರಿ, ನೀರಿಗಾದರೂ ಸರಿ. ಮನೆಯಲ್ಲಿ ಬೇರೆಯವರು ಇದ್ದರು ಸರಿ, ಇಲ್ಲದೆ ಇದ್ದರು ಸರಿ.

ತೆರೆ ಹಿಂದೆಯೂ ಸಿಕ್ಕಾಪಟ್ಟೆ ಕ್ವಾಟ್ಲೆ

ಇದು ತೆರೆಯ ಮೇಲಿನ ಕಥೆ. ಹಾಗಂತ ವಿಕ್ರಂ - ವೇದಾ ತೆರೆ ಹಿಂದೆ ಸೈಲೆಂಟ್ ಅಂತ ಅಂದುಕೊಳ್ಳುವ ಹಾಗೆ ಇಲ್ಲ. ಇಬ್ಬರದ್ದು‌ಒಂದೇ ಕ್ಯಾರೆಕ್ಟರ್. ವೇದಾ ಅಂತು ಸಿಕ್ಕಾಪಟ್ಟೆ ಕಾಟ ಕೊಡುವ ಕ್ಯಾರೆಕ್ಟರ್ ಹುಡುಗಿ. ವಿಕ್ರಂ ಮತ್ತು ವೇದಾ ಸೋಷಿಯಲ್ ಮೀಡಿಯಾ ನೋಡಿದರೇನೆ ಇದೆಲ್ಲ ತಿಳಿಯುತ್ತದೆ. ಈಗ ಅಂತಹದ್ದೇ ವಿಡಿಯೋವೊಂದು ವೈರಲ್ ಆಗಿದೆ. ವಿಕ್ರಂ ಸೈಕಲ್ ಗ್ಯಾಪ್‌ನಲ್ಲಿ ಕ್ಯಾರಾವನ್‌ನಲ್ಲಿ ಮಲಗಿದ್ರೆ ವೇದಾ‌ ಅಲ್ಲಿಯೂ ಕಾಟ ಕೊಟ್ಟಿದ್ದಾಳೆ. ನಿದ್ದೆಯಲ್ಲಿದ್ದವನನ್ನು ಎಬ್ಬಿಸಿದ್ದಾಳೆ.

Neenadhe Naa serial

ವೇದಾಳಿಂದ ಆರೈಕೆ

ರೌಡಿಯಾಗಿಯೇ, ಒರಟು ಒರಟಾಗಿದ್ದ ವಿಕ್ರಂನನ್ನು ವೇದಾ ಬದಲಾಯಿಸಿದ್ದಾಳೆ. ಬದಲಾವಣೆಯ ಮಾರ್ಗದಲ್ಲಿ ಮೊದಲ ಹೆಜ್ಜೆ ಇಟ್ಟಿದ್ದಾಳೆ. ವಿಕ್ರಂ ತನ್ನ ಸ್ವಂತ ದುಡಿಮೆಯಲ್ಲಿ ಅಪ್ಪ - ಅಮ್ಮನಿಗೆ ಬಟ್ಟೆ ಕೊಡಿಸಿದ್ದಾನೆ. ಇದು ಒಂದು ಕಡೆ ಖುಷಿ. ಮತ್ತೊಂದು ಕಡೆ ನೋವು ಕೊಟ್ಟಿದೆ. ವೇದಾಳಿಗೆ ವಿಕ್ರಂ ನೋವು ಕಂಡು ದುಃಖವಾಗಿದೆ. ಅವನ ಆರೈಕೆಯಲ್ಲಿ ತೊಡಗಿದ್ದಾಳೆ. ವಿಕ್ರಂ ಬದಲಾಗುತ್ತಿದ್ದಾನೆ ಎಂಬ ಖುಷಿ ಅವಳಲ್ಲಿಯೂ ಕಾಣುತ್ತಿದೆ.

ವೇದಾಳಿಗೆ ಹತ್ತಿರವಾಗುತ್ತಿರುವ ವಿಕ್ರಂ

ವಿಕ್ರಂ ಬೇಡವೆಂದರೂ ಗಾಯಗೊಂಡಿದ್ದ ಕೈಗೆ ಔಷಧ ಹಚ್ಚುತ್ತಿದ್ದಾಳೆ. ವೇದಾ ಎಷ್ಟೇ ಕಂಟ್ರೋಲ್ ಮಾಡಿಕೊಂಡರು ಕಣ್ಣೀರು ತಾನಾಗಿಯೇ ಬರುತ್ತಿದೆ. ಅದು ವಿಕ್ರಂ ಮೇಲಿನ ಪ್ರೀತಿಯೇ ಹೌದು. ವಿಕ್ರಂ ಆ ಕಣ್ಣೀರು ನೋಡಿದರೂ ಸುಮ್ಮನೆ ಆಗಿದ್ದಾನೆ. ದುಡಿಮೆಯ ಅನುಭವ ಕೇಳಿದ ವೇದಾಳಿಗೆ ಖುಷಿಯಿಂದ ಹೇಳಿಕೊಂಡಿದ್ದಾನೆ. ಯಾರು ಕೂಡ ಇಲ್ಲಿಯ ತನಕ ದುಡಿಮೆಯ ಅನುಭವ ಕೇಳಿದ್ದೆ ಇಲ್ಲ. ಈಗ ಬೆಳಗ್ಗೆಯಿಂದ ಆದ ಅನುಭವ, ದುಡಿದ ಕಷ್ಟ, ಹಣದ ಮಹತ್ವ, ಅಪ್ಪ ಅಮ್ಮನಿಗೆ ಅದರಲ್ಲಿ ತಂದುಕೊಟ್ಟ ಗಿಫ್ಟ್, ಅಮ್ಮ ಗಿಫ್ಟ್ ತೆಗೆದುಕೊಳ್ಳುವುದಕ್ಕೆ ಅಪ್ಪ ಒಪ್ಪಿಗೆ ಕೊಟ್ಟಿದ್ದು ಈ ಎಲ್ಲಾ ಖುಷಿಯ ನಡುವೆ ಅಪ್ಪ ಉಡುಗೊರೆ ತೆಗೆದುಕೊಳ್ಳದೆ ಹೋದದ್ದು ಬೇಸರ ತಂದಿದೆ. ಆದರೆ ಮುಂದೊಂದು ದಿನ ಅದು ನಿಜವಾಗುತ್ತದೆ.

More from Filmibeat

English summary
Neenadhe Naa serial Written Update on July 21th episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X