Neenadhe Naa: ವಿಕ್ರಂ ಹೆಂಡತಿ ವೇದಾ ಅನ್ನೋ ಗುಟ್ಟಾಗಿ ಉಳಿದಿಲ್ಲ.. ಇತ್ತ ಪ್ರೀತಿಸುತ್ತಿದ್ದ ಸಾಕ್ಷಿ‌ಯ ಮದುವೆ ತಡೆದಿದ್ದೇಕೆ?

By ಎಸ್ ಸುಮಂತ್

ವೇದಾ ಇತ್ತೀಚೆಗಂತೂ ತನ್ನ ಹಠ ಮುಂದುವರೆಸಿದ್ದಾಳೆ. ವಿಕ್ರಂನನ್ನು ಮೊದಲಿದ್ದ ಹಾಗೆ ಬದಲಾಯಿಸಲೇಬೇಕೆಂದು ಪಣ ತೊಟ್ಟಿದ್ದಾಳೆ. ಅದರಲ್ಲೂ ಮನೆಯವರು ಯಾರು ಎದುರು ಮಾತನಾಡಬಾರದು ಆ ಲೆವೆಲ್‌ಗೆ ವೇದಾ ಬುದ್ದಿವಂತಿಕೆಯ ಮಾತುಗಳನ್ನು ಆಡುತ್ತಿದ್ದಾಳೆ. ಅದರಲ್ಲೂ ಮನೆಯಲ್ಲಿ ದೊಡ್ಡವರು ಎನಿಸಿಕೊಂಡ ಮೇಷ್ಟ್ರು ವಿಚಾರವನ್ನೇ ತೆಗೆದು ತೆಗೆದು ವೇದಾ ಎಲ್ಲರ ಬಾಯಿ ಮುಚ್ಚಿಸಿದ್ದಾಳೆ.

ತಾನು ನಂಬಿರುವ ಸಂಸ್ಕೃತಿ, ಸಂಪ್ರದಾಯಕ್ಕೆ ಕಟ್ಟು ಬಿದ್ದು, ಸದ್ಯ ಗಂಡನ ಮನೆಗೆ ಬಂದಿರುವ ವೇದಾ, ಒರಟು ಹಾಗೂ ರೌಡಿಸಂನಿಂದ ಹೊರಗೆ ಬರುವಂತೆ ಕಾಣುತ್ತಿಲ್ಲ. ಆದರೆ, ವೇದಾ ಬದಲಾಯಿಸುವುದರ ಹಿಂದೆ ಸರಿಯುತ್ತಿಲ್ಲ. ಇದರ ನಡುವೆ ವಿಕ್ರಂ, ಸಾಕ್ಷಿಯ ಮದುವೆಯನ್ನೇ ನಿಲ್ಲಿಸಿದ್ದಾನೆ.

Neenadhe Naa serial Written Update on June 27th episode

ವಿಕ್ರಂನನ್ನು ಪ್ರೀತಿಸುತ್ತಿರುವ ಸಾಕ್ಷಿ

ಬಹಳಷ್ಟು ವರ್ಷಗಳಿಂದ ಸಾಕ್ಷಿಗೆ ವಿಕ್ರಂ ಎಂದರೆ ಪ್ರೀತಿ. ಆಟೋ ಡ್ರೈವರ್ ಆಗಿರುವ ಸಾಕ್ಷಿಗೆ, ವಿಕ್ರಂನ ಆ ಒರಟುತನವೂ ಖುಷಿ‌ ನೀಡುತ್ತದೆ. ಅಂದಿನಿಂದ ವಿಕ್ರಂನನ್ನೇ ‌ಮದುವೆಯಾಗಬೇಕೆಂದು ಕನಸು ಕಾಣುತ್ತಿದ್ದಾಳೆ. ಆದರೆ, ವೇದಾಳನ್ನು ಮದುವೆಯಾಗಿರುವುದು ನೋವಿಗೆ ಕಾರಣವಾಗಿದೆ. ಆದರೆ, ವಿಕ್ರಂ-ವೇದಾಳನ್ನು ಬಿಡುತ್ತಾನೆ. ನನ್ನನ್ನೇ ಮದುವೆಯಾಗುತ್ತಾನೆ ಎಂದು ಇನ್ನು ನಂಬಿಕೆಯಲ್ಲೇ ಕಾಲ ಕಳೆಯುತ್ತಿದ್ದಾಳೆ. ಆ ಕಾರಣದಿಂದಾನೇ ಇನ್ನು ಯಾರನ್ನು ಒಪ್ಪಿಕೊಳ್ಳುತ್ತಿಲ್ಲ. ಮನೆಯವರು ಸಾಯುವ ನಾಟಕವಾಡಿದರೂ ಸಾಕ್ಷಿ ಅದಕ್ಕೆ ಸೊಪ್ಪು ಹಾಕುತ್ತಿಲ್ಲ.

ಮತ್ತೆ ಕಾಡುತ್ತಿರುವ ವೇದಾ

ಈ ಕಡೆ ವೇದಾ ಮಾತ್ರ ವಿಕ್ರಂ ಹೇಳುವ ರೀತಿಯಲ್ಲಿಯೇ ಬೇತಾಳದಂತೆ ಕಾಡುತ್ತಾ ಇರುತ್ತಾಳೆ. ವಿಕ್ರಂ ರೂಮಿನಲ್ಲಿದ್ದರೆ ಸಾಕು ಬಂದು ಅವನನ್ನು ಕಾಡುತ್ತಾಳೆ. ಈಗ ಸಾಕ್ಷಿಯ ಕರೆ ಬಂದಾಗಲೂ, ಅವನ ಫೋನ್ ಅನ್ನೇ ಎತ್ತಿಕೊಳ್ಳುವುದಕ್ಕೆ ಟ್ರೈ ಮಾಡಿದ್ದಾಳೆ. ಆದರೆ, ವಿಕ್ರಂ ಬಿಡಲಿಲ್ಲ. ಆ ಫೋನ್ ಕಾಲ್ ಬಂದ ಮೇಲೆ ವಿಕ್ರಂ ಸಿಕ್ಕಾಪಟ್ಟೆ ಟೆನ್ಶನ್ ಆಗಿದ್ದ. ಮುಖದಲ್ಲಿ ಖುಷಿ ಇರಲಿಲ್ಲ, ಗಾಬರಿಯಾಗಿದ್ದ. ಅದರಲ್ಲೂ ವಿಕ್ರಂ ಹಿಂಗೆಲ್ಲಾ ಟೆನ್ಶನ್ ಮಾಡಿಕೊಳ್ಳುವವನೇ ಅಲ್ಲ. ಹಿಂಗ್ಯಾಕೆ ಟೆನ್ಶನ್ ಆದ ಅಂತ ವೇದಾ ಚಿಂತಿಸುವುದಕ್ಕೆ ಶುರು ಮಾಡಿದಳು.

ಸಾಕ್ಷಿ ನೋಡಲು ಬಂದ ಕಾಂಟ್ರಾಕ್ಟರ್ ಮುರುಳಿ

ವಿಕ್ರಂನನ್ನೇ ನಂಬಿಕೊಂಡು ಕೂತಿರುವ ಸಾಕ್ಷಿಗೆ ಈಗ ಅವರ ತಂದೆ ಹುಡುಗನನ್ನು ಹುಡುಕಿದ್ದಾರೆ. ಅದಕ್ಕೆ ಕಾರಣ ತಾನೂ ಲೈಫ್‌ನಲ್ಲಿ ಸೆಟಲ್ ಆಗಬಹುದು. ಒಳ್ಳೆ ಜೀವನ ಕಳೆಯಬಹುದು ಎಂಬ ಕಾರಣಕ್ಕೆ. ಅದಕ್ಕೆ ಮಗಳನ್ನು ಕಾಂಟ್ರಾಕ್ಟರ್‌ಗೆ ಕೊಡಲು ಮುಂದಾಗಿದ್ದಾನೆ. ಸಾಕ್ಷಿ, ವಿಕ್ರಂಗೆ ಕಾಲ್ ಮಾಡಿ ವಿಚಾರವನ್ನು ತಿಳಿಸಿದ್ದಾಳೆ. ಇವತ್ತು ನನ್ನ ನೋಡುವುದಕ್ಕೆ ಹುಡುಗ ಬಂದಿದ್ದಾನೆ. ಅವನು ಕಾಂಟ್ರಾಕ್ಟರ್ ಮುರುಳಿ. ನಾನು ಹೋಗ್ತಾ ಇದ್ದೀನಿ ಎಂದಿದ್ದಾಳೆ.

Neenadhe Naa serial Written Update on June 27th episode

ಸಾಕ್ಷಿ ಮದುವೆ ನಿಂತರೆ ಮುಂದೆ ಕಥೆ..?

ಸಾಕ್ಷಿ ಅಷ್ಟು ಹೇಳಿದ್ದೇ ತಡ ನಾನು ಬರ್ತಾ ಇದ್ದೀನಿ ಅಂತ ವಿಕ್ರಂ ತನ್ನ ಗಾಡಿ ಹತ್ತಿದ. ಅಲ್ಲಿಗೆ ವೇದಾ‌ ಕೂಡ ಬಂದಿದ್ದಾಳೆ. ತನ್ನ ಚಿನ್ನದ ಬಳೆ ನೀಡಿ, ತಗೋ ಸಹಾಯಕ್ಕೆ ಬೇಕಾಗುತ್ತದೆ ಎಂದಾಗ ವೇದಾಳನ್ನು ಪ್ಯೂರ್ ಗೋಲ್ಡ್ ಅಂತ ಹೊಗಳಿದ್ದಾನೆ. ವಿಕ್ರಂ ಮಾತಿಗೆ ವೇದಾ ನಾಚಿ ನೀರಾಗಿದ್ದಾಳೆ. ಅಲ್ಲಿಂದ ವಿಕ್ರಂ ಹೊರಟಿದ್ದಾನೆ. ಆ ಕಡೆ ಇನ್ನೇನು ತಾಂಬೂಲ ಬದಲಾಯಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಸಾಕ್ಷಿ ತಡೆದಿದ್ದಾಳೆ. ಮುಖ್ಯವಾದವರು ಬರಬೇಕಾಗಿದೆ ಎಂದು ತಡೆದಿದ್ದಾಳೆ. ಅವರ ಅಪ್ಪ ಕೂಡ ಯಾರದು ಮುಖ್ಯವಾದವರು ಎಂದು ಪ್ರಶ್ನಿಸಿದ್ದಾರೆ. ತಕ್ಷಣ ಮನೆಯ ಬಾಗಿಲ ಕಡೆ ನೋಡಿದಾಗ ವಿಕ್ರಂ ಬಂದಿರುವುದು ಕಂಡು ಬಂದಿದೆ. ಅದನ್ನು ಕಂಡು ಸಾಕ್ಷಿ ಖುಷಿಯಾದರೆ, ಮುರುಳಿ ಶಾಕ್ ಆಗಿ ನಿಂತಿದ್ದಾನೆ.

More from Filmibeat

English summary
Star Suvarna Neenadhe Naa serial Written Update on June 27th episode. Here is the details on Sakshi calling Vikram.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X