Neenadhe Naa: ವೇದಾಳ ಮನಸ್ಸಲ್ಲಿ ಪ್ರೀತಿ ಹುಟ್ಟಿಸ್ತಾ ಇದ್ದಾನೆ ವಿಕ್ರಂ.. ಮುಂದೇನಾಗುತ್ತೋ..?
ವೇದಾಳಿಗೆ ವಿಕ್ರಂ ಇಟ್ಟಿರುವ ಹೆಸರು ಬೇತಾಳ. ಹೆಸರಿಗೆ ತಕ್ಕನಾಗಿ ಬೇತಾಳದಂತೆ ಕಾಡುತ್ತಲೇ ಇರುತ್ತಾಳೆ. ವೇದ ಮತ್ತು ವಿಕ್ರಂ ಬಾಳಲಿ ನಡೆಯಬಾರದು ನಡೆದುಹೋಯಿತು. ಬೇಡದೆ ಇರುವ ಮದುವೆ ಇಬ್ಬರ ಬಾಳಲಿ ನಡೆಯಿತು. ವೇದ ಸಂಪ್ರದಾಯಕ್ಕೆ ಬೆಲೆ ಕೊಡುವ ಹುಡುಗಿ, ಆದ್ದರಿಂದ ಗಂಡನ ಮನೆಗೆ ಬಂದು ವಾಸ ಮಾಡ್ತಾ ಇದ್ದಾಳೆ. ಆದರೆ, ವೇದಾಳನ್ನು ವಿಕ್ರಂ ಮನೆಯಲ್ಲಿ ಯಾರು ಕೂಡ ಒಪ್ಪುವುದಕ್ಕೆ ಸಿದ್ದವಿಲ್ಲ.
ಅತ್ತೆ ಮತ್ತೆ ಅಕ್ಕ ಒಂದು ಸ್ವಲ್ಪ ಸಪೋರ್ಟ್ ಮಾಡ್ತಾರೆ. ತಾನು ತಾಳಿ ಕಟ್ಟಿದೀನಿ ಅಂತ ಗೊತ್ತಿದ್ರೂ ಕೂಡ ವಿಕ್ರಂ ವೇದಾಳನ್ನು ಒಪ್ಪಿಕೊಳ್ಳುವುದಕ್ಕೆ ಸಿದ್ಧವಿಲ್ಲ. ಆದ್ರೆ ವೇದ ಸುಮ್ಮನೆ ಬಿಡುತ್ತಾಳ. ವಿಕ್ರಂ ನನ್ನ ಬದಲಾಯಿಸ್ತೀನಿ ಅಂತ ಹೊರಟಿದ್ದಾಳೆ. ವಿಕ್ರಂ ಕೂಡ ದಿನೇ ದಿನೇ ಸ್ವಲ್ಪಮಟ್ಟಿಗೆ ಬದಲಾಗ್ತಾ ಇದ್ದಾನೆ.

ಸಾಕ್ಷಿ ಮದುವೆ ನಿಲ್ಲಿಸಿದ ವಿಕ್ರಂ
ಸಾಕ್ಷಿ ಮತ್ತೆ ವಿಕ್ರಂ ಬಾಲ್ಯದ ಗೆಳತಿ. ಸಾಕ್ಷಿಯನ್ನು ನೋಡೋದಕ್ಕೆ ರೌಡಿಶೀಟರ್ ಮುರುಳಿ ಮನೆಗೆ ಬಂದಿದ್ದ. ಸಾಕ್ಷಿ ಈ ವಿಚಾರವನ್ನು ವಿಕ್ರಂಗೆ ಹೇಳಿದಾಗ, ನೇರವಾಗಿ ವಿಕ್ರಂ, ಸಾಕ್ಷಿ ಮನೆಗೆ ಬರ್ತಾನೆ. ರೌಡಿಶೀಟರ್ ಮುರಳಿ, ವಿಕ್ರಮ್‌ನನ್ನು ಕಂಡು ಭಯಗೊಂಡು ಅಲ್ಲಿಂದ ಓಡಿ ಹೋಗ್ತಾನೆ. ಕಡೆಗೂ ಸಾಕ್ಷಿ ಮದುವೆ ನಿಲ್ಲುತ್ತೆ. ಸಾಕ್ಷಿ ಇನ್ನಷ್ಟು ಖುಷಿಯಾಗ್ತಾಳೆ. ವಿಕ್ರಂ ಮೇಲೆ ಮತ್ತಷ್ಟು ಪ್ರೀತಿ ಬೆಳೆಸಿಕೊಳ್ತಾಳೆ. ವಿಕ್ರಂ ಇನ್ನೂ ಕೂಡ ನನ್ನ ಪ್ರೀತಿ ಮಾಡ್ತಾ ಇದ್ದಾನೆ ಅಂತ ನಂಬುತ್ತಾಳೆ.
ವಿಕ್ರಂ ನಡೆಗೆ ವೇದಾ ಟೆನ್ಶನ್
ವೇದಾ ಈಗಾಗಲೇ ಸಾಕಷ್ಟು ಬಾರಿ ಸಾಕ್ಷಿಗೆ ತಿರುಗೇಟು ನೀಡಿದ್ದಾಳೆ. ವಿಕ್ರಂ ಯಾವತ್ತಿದ್ರೂ ನನ್ನ ಗಂಡ, ಈಗಾಗಲೇ ಮದುವೆ ಆಗಿದೆ ಅಂತ ಹೇಳಿ ವಾಪಸ್ ಕಳಿಸಿದ್ದಾಳೆ. ಆದರೆ, ಈಗ ಸಾಕ್ಷಿ ಕರೆದ್ಲು ಅಂತ ವಿಕ್ರಂ ಓಡಿ ಹೋಗಿದ್ದನ್ನು ನೋಡಿ ವೇದಾಳಿಗೆ ಮನಸಲ್ಲಿ ಎಲ್ಲೋ ಒಂದು ಕಡೆ ಭಯ ಹುಟ್ಟಿದೆ. ವಿಕ್ರಂ, ಬರೋದನ್ನೇ ಕಾಯ್ತಾ ಕೂತ್ಕೊಂಡು ಪ್ರಶ್ನೆ ಮಾಡಿದ್ದಾಳೆ.
ಸಾಕ್ಷಿ ಮೇಲೆ ಯಾವುದೇ ಭಾವನೆ ಇಲ್ಲ ಎಂದ ವಿಕ್ರಂ
ವಿಕ್ರಂ ರೂಮಿಗೆ ನಿಧಾನವಾಗಿ ಹೋದ ವೇದಾ, ಕಾಫಿಯನ್ನು ಕೊಟ್ಟಿದ್ದಾಳೆ. ಹಾಗೆ ಸಣ್ಣ ಪುಟ್ಟ ಜಗಳ ಆಡಿದ್ದಾರೆ. ವೇದಾ -ವಿಕ್ರಂ ಸೇರಿದ್ರೆ ಅಲ್ಲೊಂದು ಕೋಳಿ ಜಗಳ ಆಗೋದು ಸಾಮಾನ್ಯ. ಸಾಕ್ಷಿ ವಿಚಾರಕ್ಕೂ ಕೋಳಿ ಜಗಳ ಆಡಿದ್ದಾರೆ. ಬಳಿಕ ಸಮಾಧಾನವಾಗಿ ಸಾಕ್ಷಿ ವಿಚಾರವನ್ನು ವೇದಾ ತೆಗೆದಿದ್ದಾಳೆ. ನಂದು ನಿಂದು ಮದುವೆ ಏನೋ ಬೇರೆ ರೀತಿ ಆಗೋಯ್ತು. ಆದರೆ, ಸಾಕ್ಷಿ ನಿನ್ನ ತುಂಬಾ ಪ್ರೀತಿ ಮಾಡ್ತಾ ಇದ್ದಾಳೆ. ಅವಳ ಮದುವೆ ಯಾಕೆ ನಿಲ್ಲಿಸಿದ್ದು ಎಂದು ಕೇಳಿದ್ದಾಳೆ. ಆಗ ವಿಕ್ರಂ, ಸಾಕ್ಷಿ ನನ್ನ ಬಾಲ್ಯದ ಗೆಳತಿ. ಆದರೆ, ಆ ಥರದ ಭಾವನೆ ಇಲ್ಲ. ಅವನೊಬ್ಬ ರೌಡಿಶೀಟರ್. ಅದಕ್ಕೆ ನಿಲ್ಲಿಸಿದೆ ಎಂದಿದ್ದಾನೆ.

ವೇದಾಗೂ ಪ್ರೀತಿಯಾಗ್ತಾ ಇದೆ
ವಿಕ್ರಂ ಮಾತು ಕೇಳಿ ಖುಷಿಯಾದ ವೇದಾ, ಹಾಗಾದ್ರೆ, ಒಳ್ಳೆ ಹುಡುಗ ಬಂದ್ರೆ ಸಾಕ್ಷಿಗೆ ಮದುವೆ ಮಾಡಿಸುತ್ತೀಯಾ ಎಂದಿದ್ದಾಳೆ. ಅದಕ್ಕೆ ವಿಕ್ರಂ ವಿಕ್ರಂ ಖಂಡಿತ ಮಾಡಿಸ್ತೀನಿ. ಒಳ್ಳೆಯ ಮನೆ ಸೇರ್ತಾಳೆ ಅಂತ ಅಂದ್ರೆ ನಾನೇ ಮುಂದೆ ನಿಂತು ಮದುವೆ ಮಾಡಿಸ್ತೀನಿ ಅಂತ ಹೇಳಿದ್ದಾನೆ. ಈ ಮಾತು ವೇದಾಳಿಗೆ ಖುಷಿಕೊಟ್ಟಿದೆ. ಈಗೀಗ ಪ್ರೀತಿ ಆಗ್ತಿರೋ ವೇದಾಗೆ ವಿಕ್ರಂನಿಂದ ಸಾಕ್ಷಿ ದೂರ ಮಾಡೋದಕ್ಕೆ ಒಳ್ಳೆ ಸಂಬಂಧವನ್ನೇ ಹುಡುಕುತ್ತಾಳೆ ಎನಿಸುತ್ತದೆ.


Click it and Unblock the Notifications











