Neenadhe Naa: ವಿಕ್ರಂ ಜೈಲಿಗೆ ಹೋಗಿದ್ದಕ್ಕೆ ವೇದಾಳಿಗೆ ಶಿಕ್ಷೆ ಕೊಡ್ತಾರಾ ಮನೆಯವರು..?

By ಎಸ್ ಸುಮಂತ್

'ನೀನಾದೆ ನಾ' ಧಾರಾವಾಹಿಯಲ್ಲಿ ಈಗ ಎಲ್ಲರ ಅಚ್ಚುಮೆಚ್ಚಿನ ಜೋಡಿಯಾಗಿದೆ. ವಿಕ್ರಂ - ವೇದಾ ಜೋಡಿ. ವಿಕ್ರಂ ಪ್ರೀತಿ ಇರಲಿ ಕನಿಕರ ಹುಟ್ಟುವುದು ಕಷ್ಟ ಸಾಧ್ಯವಾಗಿದೆ. ತಾಳಿ ಕಟ್ಟಿದ್ದಾನೆ ಎಂಬ ಒಂದೇ ಒಂದು ಕಾರಣಕ್ಕೆ ವೇದಾ, ವಿಕ್ರಂ ಮನೆಯಲ್ಲಿ ಬಂದು ಕೂತಿದ್ದಾಳೆ. ದೊಡ್ಡ ಮನೆಯಲ್ಲಿ, ಚಂದವಾಗಿ ಬೆಳೆದಿರುವ ಹುಡುಗಿ ವೇದಾ. ಕಷ್ಟ ಗೊತ್ತಿಲ್ಲ, ಅಡುಗೆ ಮನೆಯ ಗಂಧ ಗಾಳಿಯೂ ತಿಳಿದಿಲ್ಲ. ಹೀಗಿರುವಾಗ ಸಂಪ್ರದಾಯಸ್ಥ ಮನೆ ವಿಕ್ರಂ ಅವರದ್ದು. ಹೇಗೆ ಬದುಕುತ್ತಾಳೆ ಎಂಬ ಪ್ರಶ್ನೆ ಇತ್ತು.

ವೇದಾ ಫಾರಿನ್‌ನಲ್ಲಿಯೇ ಓದಿದ್ದರು ಕೂಡ, ಭಾರತೀಯ ಸಂಸ್ಕೃತಿಗೆ ಹೆಚ್ಚಿನ ಬೆಲೆ ನೀಡುತ್ತಾಳೆ. ತಮ್ಮ‌ ನೆಲದ ಎಲ್ಲಾ ಸಂಪ್ರದಾಯವನ್ನು ಅನುಸರಿಸುವ ಹುಡುಗಿ. ಅದೇ ಕಾರಣಕ್ಕಾಗಿಯೇ ತಾಳಿ ಕಟ್ಟಿದ ಎಂಬ ಒಂದೇ‌ ಒಂದು ಕಾರಣಕ್ಕೆ ಈಗ ವಿಕ್ರಂ ಮನೆಯಲ್ಲಿ ಬಂದು ಕೂತಿದ್ದಾಳೆ. ಇನ್ನೇನು ಎಲ್ಲರೂ ಸ್ವೀಕರಿಸಬೇಕು ಎನ್ನುವಷ್ಟರಲ್ಲಿ ವಿಕ್ರಂ ಅರೆಸ್ಟ್ ಆಗಿದ್ದಾನೆ.

Neenadhe Naa serial Written Update on June 5th episode

ಉಪವಾಸವಿದ್ದರೂ ಗಟ್ಟಿಯಾಗಿದ್ದಾಳೆ ವೇದಾ

ವಿಕ್ರಂ ದೊಡ್ಡ ರೌಡಿ. ಆ ಕಡೆ ವಿಕ್ರಂ ತಂದೆ ಶಿಕ್ಷಣ ಕ್ಷೇತ್ರದಲ್ಲಿದ್ದಾರೆ. ಮಗನ ಅವತಾರದಿಂದಾಗಿ ತಂದೆಗೂ ಬೆಲೆ ಇಲ್ಲದಂತೆ ಆಗಿದೆ. ಊರಲ್ಲೆಲ್ಲಾ ರೌಡಿ ಎಂದೇ ಕುಖ್ಯಾತಿ ಪಡೆದಿದ್ದಾನೆ. ಹೀಗಾಗಿ ವೇದಾಳಿಗೆ ಮನೆಯಲ್ಲಿ ಅಷ್ಟಾಗಿ ಸಪೋರ್ಟ್ ಸಿಕ್ತಾ ಇಲ್ಲ. ವಿಕ್ರಂ ತಾಳಿ ಕಟ್ಟಿದ್ದಾನೆ ಎಂಬ ಕಾರಣಕ್ಕೆ ವೇದಾ ಮನೆಗೆ ಬಂದು ಕೂತಿದ್ದಾಳೆ. ಮನೆಯವರಲ್ಲಿ ವಿಕ್ರಂ ತಾಯಿ‌ ಹಾಗೂ ದೊಡ್ಡ ಸೊಸೆಯನ್ನು ಬಿಟ್ಟರೆ ಇನ್ನುಳಿದವರು ವೇದಾಳ ಸಹಾಯಕ್ಕೆ ಧಾವಿಸುತ್ತಿಲ್ಲ. ಆದರೆ ವೇದಾ ಮನೆಯವರ ಮನಸ್ಸು ಗೆಲ್ಲುವುದಕ್ಕೆ ಪ್ರಯತ್ನ ಪಡುತ್ತಲೇ ಇದ್ದಾಳೆ.

ವಿಕ್ರಂನನ್ನು ಅರೆಸ್ಟ್ ಮಾಡಿದ ಪೊಲೀಸರು

ಮನೆಯವರನ್ನು ಮೆಚ್ಚಿಸಲು ವೇದಾ ಪ್ರಯತ್ನ ಮಾಡ್ತಾ ಇದ್ರೆ, ಆ ಕಡೆ ವಿಕ್ರಂ ಅರೆಸ್ಟ್ ಆಗಿದ್ದಾನೆ. ಮನೆಯವರಿಗಾಗಿ ವೇದಾ ಅಡುಗೆ ಮಾಡಿದ್ದಳು. ಆ ಮನೆಯ ಸೊಸೆ ಹೇಗಿರಬೇಕು ಎಂಬ ರೀತಿಯನ್ನು ಅರಿತು ಎಲ್ಲರ ಮನಸ್ಸನ್ನು ಗೆಲ್ಲುವುದಕ್ಕೆ ಯತ್ನಿಸಿದ್ದಳು. ಇನ್ನೇನು ಒಂದಷ್ಟು‌ ಮನಸ್ಸುಗಳು ಬದಲಾಗಬೇಕು ಎನ್ನುವಷ್ಟರಲ್ಲಿ ವಿಕ್ರಂ ಅರೆಸ್ಟ್ ಆಗಿದ್ದಾನೆ. ಪೊಲೀಸರನ್ನು ವೇದಾ ತಡೆಯಲು ಯತ್ನಿಸಿದರು ಅದು ಸಾಧ್ಯವಾಗಿಲ್ಲ.

ವೇದಾಳ ಅಪ್ಪನಿಂದಾನೇ ದೂರು

ವೇದಾಳ ಅಪ್ಪ ಮೊದಲಿನಿಂದಾನೂ ವೇದಾಗೆ ಬುದ್ದಿ ಹೇಳಿಕೊಂಡು ಬಂದಿದ್ದಾರೆ. ಆ ತಾಳಿ ಅಚಾನಕ್ಕಾಗಿ ಕೊರಳಿಗೆ ಬಿದ್ದಿದೆ. ಅದನ್ನು ಕಿತ್ತು ಬಿಸಾಡು. ಈ ಮೊದಲೇ ನಿಶ್ಚಯವಾಗಿರುವ ಹುಡುಗನ ಜೊತೆಗೆ ಮದುವೆಯಾಗು ಅಂತಿದ್ದಾರೆ. ಆದರೆ ತಾಳಿಗೆ ಹೆಚ್ಚು ಮಹತ್ವ ನೀಡುವಂತೆ ವೇದಾ ಅದಕ್ಕೆ ಒಪ್ಪಿಗೆ ಸೂಚಿಸುತ್ತಿಲ್ಲ. ವಿಕ್ರಂ ಏನೇ ಆದರೂ ನನ್ನ ಗಂಡನೇ ಅಂತಿದ್ದಾಳೆ. ಈಗ ಗೂಂಡಾಗಿರಿ ಕಾಯ್ದೆಯಡಿ ವೇದಾಳ ಅಪ್ಪನೇ ವಿಕ್ರಂನನ್ನು ಅರೆಸ್ಟ್ ಮಾಡಿಸಿದ್ದಾರೆ.

Neenadhe Naa serial Written Update on June 5th episode

ವಿಕ್ರಂ ಮನೆಯಿಂದ ತಿರಸ್ಕಾರ

ಈ ಕಡೆ ವಿಕ್ರಂ ಮನೆಯಲ್ಲಿ ವೇದಾಳನ್ನು ಸೊಸೆಯೆಂದು ಒಪ್ಪಿಕೊಳ್ಳುತ್ತಿಲ್ಲ. ಮಾವನಿಗೆ ಇಷ್ಟ ಇಲ್ಲ ಎನ್ನುವುದಕ್ಕಿಂತ ಮಗನ ಬಂಡವಾಳ ತಿಳಿದಿದೆ. ವೇದಾ ಇಲ್ಲಿರುವುದು ಸೇಫ್ ಅಲ್ಲ ಎಂಬುದೇ ಅವರ ಅಭಿಪ್ರಾಯವೂ ಆಗಿದೆ. ಹೀಗಾಗಿ ವೇದಾಳನ್ನು ಯಾರಾದರೂ ಆತಿಥ್ಯ ಮಾಡುವುದಕ್ಕೂ, ಪ್ರೀತಿ ತೋರಿಸುವುದಕ್ಕೂ ಯೋಚನೆ ಮಾಡಿದಂತೆ ಆಗುತ್ತಿದೆ. ಈಗ ವಿಕ್ರಂ ಅಮ್ಮ, ನೇರಾ ವೇದಾಳ ಕಾಲಿಗೆ ಬಿದ್ದಿದ್ದಾರೆ. ದಯವಿಟ್ಟು ಮನೆ ಬಿಟ್ಟು ಹೊರಟು ಹೋಗು, ನನ್ನ ಮಗನ ಭವಿಷ್ಯವನ್ನು ಹಾಳು ಮಾಡಬೇಡ ಎಂದಿದ್ದಾಳೆ. ಈಗ ವೇದಾಳ ಮನಸ್ಸು ಯಾವ ರೀತಿ ರಿಯಾಕ್ಟ್ ಮಾಡುತ್ತೆ ಎಂಬುದನ್ನು ನೋಡಬೇಕಿದೆ.

More from Filmibeat

English summary
Neenadhe Naa serial Written Update on June 5th episode. Here is the details on Vikram Arrest
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X