Neenadhe Naa: ಮಗಳ ಮಾತಿಗೆ ಕರಗಿ ವಿಕ್ರಂನನ್ನು ಹೊರ ತರುತ್ತಾರಾ ವೇದಾ ತಂದೆ ?
ವೇದಾಳ ಅಪ್ಪ ಮತ್ತು ಅಣ್ಣನದ್ದು ಬೇರೆಯದೇ ನಿಲುವು. ಮನೆಯವರೆಲ್ಲಾ ಸುಖವಾಗಿರಬೇಕು ಎಂಬುದು. ಆದರೆ ವೇದಾಳಿಗೆ ಅದಲ್ಲ. ಕಷ್ಟವಾಗಲೀ, ಸುಖವಾಗಲೀ ತಾನೂ ನಂಬಿರುವ ಆದರ್ಶವನ್ನು ಎಂದಿಗೂ ಬಿಟ್ಟು ಕೊಡುವುದಿಲ್ಲ. ಅದರಂತೆಯೇ ಬದುಕುತ್ತಿದ್ದಾಳೆ ಕೂಡ. ಈಗ ಒಂದೊಂದೆ ಕಷ್ಟಗಳು ಅದರಿಂದಾಗಿಯೇ ಶುರುವಾಗಿದೆ.
ವೇದಾಳ ಪರಿಸ್ಥಿತಿ ಬೇರೆ ರೀತಿಯಲ್ಲಿಯೇ ಇದೆ. ವಿಕ್ರಂ ಮತ್ತು ತವರು ಮನೆ ಬಿಸಿ ತುಪ್ಪವಾಗಿದೆ. ನುಂಗುವುದಕ್ಕೂ ಆಗುತ್ತಿಲ್ಲ, ಉಗುಳುವುದಕ್ಕೂ ಆಗುತ್ತಿಲ್ಲ. ಯಾಕಂದ್ರೆ, ಇಬ್ಬರು ಬಹಳ ಮುಖ್ಯವಾಗಿದ್ದಾರೆ. ಅದಕ್ಕೆ ವೇದಾ ಈಗ ಅಪ್ಪನ ಬಳಿಯೇ ಸಹಾಯಕ್ಕೆ ನಿಂತಿದ್ದಾಳೆ. ಮಗಳ ಮಾತಿಗೆ ತಂದೆಯ ಮನಸ್ಸು ಕರಗುತ್ತಾ ಎಂಬುದೇ ಎಲ್ಲರ ಪ್ರಶ್ನೆ.

ತಂದೆ ಮಾಡಿದ್ದು ಸರಿನಾ..?
ವೇದಾಳನ್ನು ತವರು ಮನೆಯಲ್ಲಿ ತೀರಾ ಮುದ್ದಾಗಿ ಸಾಕಿದ್ದಾರೆ. ಫಾರಿನ್‌ನಲ್ಲಿಯೇ ಓದಿಸಿದ್ದಾರೆ. ಮಗಳಿಗೆ ತಕ್ಕನಾದ ವರನನ್ನು ತಂದು ಮದುವೆ ಮಾಡಬೇಕು ಎಂಬುದೇ ಮನೆಯವರ ಆಸೆಯಾಗಿತ್ತು. ಆದರೆ, ಅಚಾನಕ್ಕಾಗಿ ವೇದಾ ಬಾಳಲ್ಲಿ ಬೇರೆಯದ್ದೇ ನಡೆದು ಬಿಟ್ಟಿದೆ. ವಿಕ್ರಂ ಕೋಪಕ್ಕೆ ತಾಳಿ ಕಟ್ಟಿ ಬಿಟ್ಟಿದ್ದಾನೆ. ಆ ತಾಳಿಯನ್ನು ಕಿತ್ತಿ ಬಿಸಾಡಿ ಮನೆಗೆ ಬಾ ಅಂದ್ರೆ, ವೇದಾಳಿಂದ ಅದು ಅಸಾಧ್ಯವಾದ ಮಾತಾಗಿತ್ತು. ಹೀಗಾಗಿ ವೇದಾಳ ತಂದೆ, ವಿಕ್ರಂನನ್ನು ಜೈಲಿಗೆ ಕಳುಹಿಸಿದ್ದಾರೆ.
ತಂದೆಯ ಕಾರನ್ನು ಅಡ್ಡಗಟ್ಟಿ ನಿಂತ ವೇದಾ
ವಿಕ್ರಂ ರೌಡಿಯೇ ಆಗಿರಬಹುದು. ಆದರೆ ಮಗನೆಂಬ ಪ್ರೀತಿ ಮನೆಯಲ್ಲಿ ಎಲ್ಲರಿಗೂ ಇದೆ. ಹೀಗಾಗಿ ಅವನನ್ನು ಪೊಲೀಸರು ಅರೆಸ್ಟ್ ಮಾಡಿದ್ದನ್ನು ಮನೆಯಲ್ಲಿ ಯಾರೂ ಸಹಿಸಲಿಲ್ಲ. ವೇದಾಳ ಮೇಲೆ ಮುನಿಸನ್ನೇ ತೋರಿದರು. ಇದು ಯಾರು ಮಾಡಿದ್ದಾರೆಂದು ತಿಳಿದುಕೊಳ್ಳುವುದಕ್ಕೆ ವೇದಾಳಿಗೆ ಬಹಳ ಸಮಯವೇನು ಬೇಕಾಗಲಿಲ್ಲ. ತಂದೆಯಿಂದಾನೇ ಇಂಥದ್ದೊಂದು ಸನ್ನಿವೇಶ ನಿರ್ಮಾಣವಾಗಿದೆ ಎಂದು ವೇದಾಳಿಗೆ ಬಹಳ ಬೇಗನೇ ಅರ್ಥವಾಗಿತ್ತು. ಹೀಗಾಗಿಯೇ ನೇರವಾಗಿ ತಂದೆ ಬರುತ್ತಿದ್ದ ಕಾರಿಗೆ ಅಡ್ಡಲಾಗಿ ನಿಂತಳು. ಅಣ್ಣ ಕೂಡ ತಂಗಿಗೆ ವಿರುದ್ಧವಾಗಿಯೇ ಮಾತನಾಡಿದ್ದಾನೆ. ಮೊದಲು ಮನೆಗೆ ಬಾ ಆ ತಾಳಿ ಕಿತ್ತು ಬಿಸಾಕು ಎಂದಿದ್ದಾನೆ.

ವೇದಾ ಹೇಳಿದ ಕಾಲೇಜು ಕಥೆಗೆ ತಂದೆ ಸೈಲೆಂಟ್
ವೇದಾ ಕಾರಿಗೆ ಎದುರಾಗಿ ನಿಂತಿದ್ದನ್ನು ಕಂಡು ಕೆಳಗೆ ಇಳಿದ ಅಣ್ಣ - ಅಪ್ಪ ಬೈದಿದ್ದಾರೆ. ಬಳಿಕ ವೇದಾ ಮಾತನಾಡಲು ಶುರು ಮಾಡಿದ್ದಾಳೆ, "ನನಗೆ ಗೊತ್ತು ಅಪ್ಪ. ನೀವೇ ಈ ರೀತಿಯೆಲ್ಲಾ ಮಾಡಿಸಿದ್ದೀರಾ. ನಿಮಗೆ ಇಷ್ಟವಿಲ್ಲದೆ ಇರಬಹುದು. ಆದರೆ ನನ್ನದು ಅಂತ ಒಂದು ಸಿದ್ಧಾಂತವಿದೆ. ಆ ಸಿದ್ಧಾಂತದಲ್ಲಿ ಬದುಕುವುದಕ್ಕೆ ಬಿಡಿ. ಕಾಲೇಜಲ್ಲಿ ಅಪ್ಪ ಎಂದರೆ ಏನು ಎಂಬ ಟಾಸ್ಕ್ ಒಂದನ್ನು ಇಟ್ಟಿದ್ದರು. ಆಗ ಎಲ್ಲರೂ ಅವರ ಅಪ್ಪನ ಬಗ್ಗೆ ಒಂದೊಂದು ರೀತಿಯ ವ್ಯಾಖ್ಯಾನ ಮಾಡಿದರು. ಆದರೆ ನನಗೆ ಮಾತೇ ಬರಲಿಲ್ಲ. ಹೇಳಲೇಬೇಕು ಎಂದಾಗ ನಮ್ಮ ಅಪ್ಪ ಪರ್ಫೆಕ್ಟ್ ಎಂದಿದ್ದೆ. ನೀವೂ ಎತ್ತರದಲ್ಲಿದ್ದೀರಿ ಅಲ್ಲಿಯೇ ಇರಿ" ಎಂದು ವೇದಾ ಭಾವನಾತ್ಮಕವಾಗಿ ಮಾತನಾಡಿದ್ದಾಳೆ.
ವಿಕ್ರಂ ಮನೆಯವರು ಬದಲಾಗ್ತಾರಾ..?
ವೇದಾಳ ಮಾತು ಕೇಳುತ್ತಿದ್ದಂತೆ ತಂದೆ ಮಂಕಾಗಿ ನಿಂತಿದ್ದರು. ಮಗಳ ಭಾವನೆ ಅವರಿಗೆ ಅರ್ಥವಾದಂತೆ ಕಂಡಿದೆ. ವಿಕ್ರಂನನ್ನು ಜೈಲಿಗೆ ಕಳುಹಿಸಲು ಹೊರಟವರೇ ಬಿಡಿಸುವುದಕ್ಕೆ ವೇದಾಳ ಮಾತೇ ಸಾಕು. ವೇದಾ, ಬಿಸಿಲಾಗಲಿ, ಮಳೆಯಾಗಲಿ ಗಂಡನ ಮನೆಯಲ್ಲಿಯೇ ಇರುತ್ತಾಳೆ. ಈಗಲೂ ಮನೆಯವರೆಲ್ಲಾ ಒಪ್ಪುವಂತೆ ನಡೆದುಕೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಮನೆಯವರ ಮನ ಗೆದ್ದ ಮೇಲೆ ಗಂಡನ ಮನ ಬಾಕಿ ಇರುತ್ತೆ.


Click it and Unblock the Notifications











