Neenadhe Naa: ಬುದ್ದಿ ಕಲಿಸಲು ಹೋಗಿ ವಿಕ್ರಂ ಪ್ರೀತೀಲಿ ಬಿದ್ದ.. ರೊಮ್ಯಾಂಟಿಕ್ ಸೀನ್ ನೋಡಿ ಶೈಲೂ ಶಾಕ್!
ಸ್ಟಾರ್ ಸುವರ್ಣದಲ್ಲಿ 'ನೀನಾದೆ ನಾ' ಧಾರಾವಾಹಿ ಹೊಸದಾಗಿ ಶುರುವಾಗಿದೆ. ಹಿಂದೆಂದೂ ಈ ರೀತಿಯ ಕಥೆಯನ್ನು ಯಾರು ಮಾಡಿರಲಿಲ್ಲ. ಆ ರೀತಿಯ ಹೊಸದೊಂದು ಕಥೆಯಾಗಿದೆ 'ನೀನಾದೆ ನಾ' ಧಾರಾವಾಹಿ. ವೇದಾ ತಾನೂ ನಂಬಿರುವ ಸಿದ್ಧಾಂತಗಳಿಗಾಗಿ ಗಂಡ ರೌಡಿಯಾದರೂ ಅವನ ಮನೆಗೆ ಬಂದು ಕೂತಿದ್ದಾಳೆ.
ವಿಕ್ರಂ ಮನಸ್ಸಲ್ಲೂ ಒಳ್ಳೆತನವಿದೆ. ಯಾಕಂದ್ರೆ ಮೇಲ್ನೋಟಕ್ಕೆ ಅವನು ಎಷ್ಟೇ ದೊಡ್ಡ ರೌಡಿಯಾದರೂ ಮನಸ್ಸು ಮಾತ್ರ ಮಗುವಿನಂತದ್ದು. ಅದನ್ನು ಆಗಾಗ ಪ್ರೂವ್ ಮಾಡಿದ್ದಾನೆ. ಮಗುವೊಂದರ ವಿದ್ಯಾಭ್ಯಾಸಕ್ಕಾಗಿ ವಿಕ್ರಂ ಮಾಡಿದ ಸಹಾಯವನ್ನು ಕಣ್ಣಾರೆ ಕಂಡ ವೇದಾ, ಫಿದಾ ಆಗಿದ್ದಾಳೆ. ಈಗ ವಿಕ್ರಂ ಫಿದಾ ಆಗುತ್ತಿದ್ದಾನೆ.

ವಿಕ್ರಂ ರೂಮ್‌ಗೆ ವೇದಾ ಶಿಫ್ಟ್
ವೇದಾ ಗಂಡನ ಮನೆಗೆ ಬಂದಾಗಿನಿಂದ ಯಾರೂ ಅವಳಿಗೆ ಬೆಂಬಲ ನೀಡದಂತೆ ಮಾವ ತಾಕೀತು ಮಾಡಿದ್ದರು. ಹೀಗಾಗಿಯೇ ಅತ್ತೆಗೆ ಏನೂ ಮಾಡುವುದಕ್ಕೆ ಆಗದಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿಯೇ ಬಂದಾಗಿನಿಂದ ಮನೆಯ ಒಳಗಿನ ಹಾಲ್‌ನಲ್ಲಿಯೇ ಕುಳಿತಿದ್ದಳು. ಆದ್ರೆ ಇವತ್ತು ಇದ್ದಕ್ಕಿದ್ದ ಹಾಗೇ ಈಗ ಆ ಜಾಗವನ್ನು ಖಾಲಿ ಮಾಡಿದ್ದಾಳೆ. ಸೀದಾ ವಿಕ್ರಂ ರೂಮಿಗೆ ಹೋಗಿ ಕೂತಿದ್ದಾಳೆ. ವಿಕ್ರಂ ರೂಮು ಅಂತ, ವಿಕ್ರಂ ರಫ್ ಅಂತ ಗೊತ್ತಿದ್ದರೂ ಈ ರಿಸ್ಕ್ ತೆಗೆದುಕೊಂಡಿದ್ದಾಳೆ.
ವಿಕ್ರಂ ಬಳಿ ಪಿನ್ ಇಟ್ಟ ಶೈಲೂ
ವಿಕ್ರಂ ಮನೆಗೆ ಬಂದಾಕ್ಷಣಾ, ವೇದಾ ಕಣ್ಣ ಮುಂದೆಯೇ ಕಾಣುತ್ತಿದ್ದಳು. ಆದರೆ ಇವತ್ತು ಮನೆಯ ಒಳಗೆ ಎಲ್ಲೂ ಕಾಣಿಸುತ್ತಿಲ್ಲ. ಪೀಡೆ ತೊಲಗಿದೆ ಎಂದೇ ಭಾವಿಸಿದ್ದ. ತನ್ನ ಕಿತಾಪತಿ ಅತ್ತಿಗೆಯನ್ನು ಕೇಳಿದ್ದ ಹೋದ್ಲಾ ಅಂತ. ಅದಕ್ಕೆ ಶೈಲೂ ಇನ್ನು ಮುಂದೆ ಅವಳು ಇಲ್ಲಿ ಕಾಣಿಸಲ್ಲ. ನಿನ್ನ ರೂಮಿಗೆ ಶಿಫ್ಟ್ ಆಗಿದ್ದಾಳೆ ಎಂದು ಹೇಳಿದ್ದಾಳೆ. ಅದರಲ್ಲೂ ವಿಕ್ರಂಗೆ ಕೋಪ ಬರುವ ರೀತಿಯೇ ಹೇಳಿದ್ದಾಳೆ.

ವೇದಾಳ ಪ್ರೀತಿಯಲ್ಲಿ ಬೀಳ್ತಾನಾ..?
ಅತ್ತಿಗೆ ಬೀಸಿದ ಬಲೆಗೆ ಬಿದ್ದ ವಿಕ್ರಂ ಕೋಪದಲ್ಲಿಯೇ ಮಹಡಿ ಮೇಲೆ ಹೋದ. ಮೊದಲೇ ವೇದಾಳನ್ನು ಕಂಡರೆ ಆಗುವುದಿಲ್ಲ. ಅಂತದ್ರಲ್ಲಿ ನನ್ನ ರೂಮಿಗೆ ಬಂದಿದ್ದಾಳೆ ಎಂದು ತಿಳಿದು ಗದರಲು ಹೋದ. ವೇದಾ ಆರಾಮಾಗಿ ಪೇಪರ್ ಓದುತ್ತಾ ನಿಂತಿದ್ದಳು. ವಿಕ್ರಂಗೆ ಮತ್ತಷ್ಟು ಕೋಪ ಬಂದಿತ್ತು. ಹಿಂದೆ ಮುಂದೆ ನೋಡದೆ ಜೋರಾಗಿಯೇ ಗದರಿದ್ದ. ವೇದಾ ಓದುವುದರಲ್ಲಿ ಮುಳುಗಿದ್ದ ಕಾರಣಕ್ಕೆ ಆ ಸದ್ದಿಗೆ ಗಾಬರಿಯಾದಳು. ಕೆಳಗೆ ಬಿದ್ದೆ ಬಿಡುತ್ತಿದ್ದಳು. ಅಷ್ಟರಲ್ಲಿ ವಿಕ್ರಂ ಅವಳನ್ನು ಹಿಡಿದುಕೊಂಡು ಕಾಪಾಡಿದ. ಕಣ್ಣು ಕಣ್ಣು ಬೆರೆತಿತ್ತು.
ಶೈಲೂ ಹೊಟ್ಟೆಯಲ್ಲಿ ಕೆಂಡ ಸುರಿದಂತ ಸೀನ್
ವಿಕ್ರಂ ಕೂಡ ಪದವೀಧರ. ಆದರೆ, ಯಾವುದೋ ಒಂದು ಬಲವಾದ ಕಾರಣದಿಂದ ಈ ರೀತಿ ರೌಡಿಯಾಗಿದ್ದಾನೆ. ಅವನಲ್ಲೂ ಒಳ್ಳೆಯ ಮನಸ್ಸು, ಭಾವನೆಗಳು ಇವೆ. ಆದರೆ, ಆ ಒರಟುತನ ಅದನ್ನು ಹೊರಗೆ ಬರುವುದಕ್ಕೆ ಬಿಡುತ್ತಿಲ್ಲ. ಇದೀಗ ವೇದಾ ಅವನನ್ನು ಬದಲಾಯಿಸುವುದಕ್ಕೆ ಬಂದಿದ್ದಾಳೆ. ವೇದಾಳ ಕಣ್ಣು ನೋಡುತ್ತಾ ಕಳೆದೋದಾ ವಿಕ್ರಂನನ್ನು ನೋಡಿ ಶೈಲೂಗೆ ಹೊಟ್ಟೆ ಉರಿಯುತ್ತಿದೆ. ವೇದಾಳನ್ನು ಬೈಸಲು ಹೋಗಿ ಅವಳೇ ಪ್ರೀತಿಯಲ್ಲಿ ಬೀಳುವುದಕ್ಕೆ ದಾರಿ ಮಾಡಿಕೊಡುತ್ತಿದ್ದಾಳೆ. ಒಂದಲ್ಲ ಒಂದು ದಿನ ವೇದಾಳ ತಾಳ್ಮೆ ವಿಕ್ರಂನನ್ನು ಪ್ರೀತಿಯಲ್ಲಿ ಬೀಳುವಂತೆ ಮಾಡುತ್ತದೆ.


Click it and Unblock the Notifications











