Neenadhena: ವೇದಾ, ವಿಕ್ರಂ ಜೋಡಿ ದೂರ ಮಾಡುವ ಪಣ ತೊಟ್ಟ ಸಾಕ್ಷಿ ಮುಂದೇನು ಮಾಡುತ್ತಾಳೆ?
ವೇದಾ ಹಾಗೂ ವಿಕ್ರಮ್ ಪ್ರೀತಿ ಅಮೋಘವಾದುದು, ಆ ದೇವರೇ ಬೆಸೆದ ಬಂಧ ಎಂದು ಹೇಳಿದರೆ ತಪ್ಪಾಗದು. ಅಷ್ಟರ ಮಟ್ಟಿಗೆ ಇಬ್ಬರು ಇದೀಗ ಬಹಳ ಅನ್ಯೋನ್ಯತೆಯಿಂದ ಜೀವನ ನಡೆಸುತ್ತಿದ್ದಾರೆ. ಸಾಕ್ಷಿಗೆ ವಿಕ್ರಮ್ ತನ್ನವನು ಆಗಬೇಕು ಎನ್ನುವ ಹೆಬ್ಬಯಕೆ. ಆದರೆ ವಿಕ್ರಂನನ್ನು ಮದುವೆ ಆದ ವೇದಾಳನ್ನು ಕಂಡರೆ ಉರಿದು ಬೀಳುತ್ತಾಳೆ. ಏನೇ ಆದರೂ ವಿಕ್ರಂ ನನ್ನವನು ಆಗಬೇಕು ಎಂದು ಶತಾಯ ಗತಾಯ ಪ್ರಯತ್ನ ಪಡುತ್ತಿದ್ದಾಳೆ.
ಸಾಕ್ಷಿ ತಾನೇ ತಾಳಿ ಕಟ್ಟಿಕೊಂಡು ನಾನೇ ವಿಕ್ರಂ ಹೆಂಡತಿ ಎಂದು ಆತನ ಮನೆಗೆ ಬಂದು ಜಾಂಡ ಊರಿದ್ದಾಳೆ. ಇನ್ನೂ ವಿಕ್ರಂ ತನ್ನ ಮುದ್ದಿನ ಹೆಂಡತಿ ವೇದಾಗಾಗಿ ಮಲ್ಲಿಗೆ ಹೂವು ತಂದಿರುತ್ತಾನೆ. ವೇದಾಗೆ ಮಲ್ಲಿಗೆ ಹೂವು ಅಂದರೆ ಬಲು ಇಷ್ಟ, ಅದನ್ನು ತೆಗೆದುಕೊಂಡು ಬರುತ್ತಿದ್ದ ವಿಕ್ರಂನನ್ನು ತಡೆದ ಸಾಕ್ಷಿ, ಏನದು ಎಂದು ಕೇಳುತ್ತಾಳೆ. ಸಾಕ್ಷಿ ಬಳಿ ವಿಕ್ರಂಗೆ ಏನು ಹೇಳಬೇಕು ಎಂದು ತಿಳಿಯದೇ ಸುಳ್ಳು ಹೇಳಿ ತಪ್ಪಿಸಿಕೊಂಡು ಬಿಡುತ್ತಾನೆ. ಆದರೆ ಸಾಕ್ಷಿ ಮಾತ್ರ ಬಿಡುವ ಚಾನ್ಸೇ ಇಲ್ಲಲಿಲ್ಲ.

ವೇದಾ ಬಳಿ ವಿಕ್ರಂ ಓಡೋಡಿ ಬರುತ್ತಾನೆ. ಸಾಕ್ಷಿಗೆ ಹಾಗೂ ಮನೆಯವರಿಗೆ ಮಹಡಿ ಹತ್ತಿ ಎಲ್ಲಿ ಹೋಗಬಾರದು , ಯಾರು ವೇದಾ ಹಾಗೂ ವಿಕ್ರಂ ಮನೆಗೆ ಹೋಗುವ ಹಾಗೆಯೇ ಇಲ್ಲ ಎಂದು ಕಂಡೀಷನ್ ಹಾಕುತ್ತಾರೆ. ಆದ ಕಾರಣ ಸಾಕ್ಷಿ ಮೆಟ್ಟಿಲ ಬಳಿಯೇ ನಿಂತು ಎಲ್ಲವನ್ನೂ ಆಲಿಸುತ್ತಾ ಇರುತ್ತಾಳೆ. ವಿಕ್ರಂ ತಂದೆಯ ಕಂಡೀಷನ್ ಬಹಳ ಖಡಕ್ ಆಗಿಯೇ ಇರುತ್ತದೆ. ಆದಕಾರಣ ಜಯ ಕೂಡ ವಿಕ್ರಂ, ವೇದಾ ಇರುವ ಮಹಡಿಯತ್ತಾ ಹೋಗುವುದಿಲ್ಲ
ವಿಕ್ರಂ ಮೇಲೆ ಸಾಕ್ಷಿಗೆ ಹೆಚ್ಚಿದ ಪ್ರೀತಿ
ಸಾಕ್ಷಿಗೆ ವಿಕ್ರಮ್ ಮೇಲೆ ಬಹಳ ಮೋಹ. ಆಕೆಗೆ ವಿಕ್ರಂನನ್ನು ಹೇಗಾದರೂ ಮಾಡಿ ಪಡೆದೇ ತೀರಬೇಕು ಎನ್ನುವ ಬಯಕೆ. ಆದರೆ ಇದಕ್ಕೆ ವಿಕ್ರಂ ಮಾತ್ರ ಒಪ್ಪುವುದಿಲ್.ಲ ಆತನಿಗೆ ವೇದಾ ಅಂದರೆ ಪ್ರಾಣ. ಆಕೆಯ ಜೊತೆ ಬಾಳುವುದೊಂದೇ ಗುರಿ. ಇತ್ತ ತನ್ನ ಮನೆಗೆ ಬಂದ ವಿಕ್ರಂ, ವೇದಾ ಜೊತೆ ಬಹಳ ಪ್ರೀತಿಯಿಂದ ಮಾತನಾಡುತ್ತಾ ಇರುತ್ತಾನೆ .
ವೇದಳನ್ನು ಹೋಗಳುತ್ತಿರುವ ವಿಕ್ರಂ
ವೇದಾ ನೀನೆಷ್ಟು ಸರಳವಾಗಿ ಇರುತ್ತೀಯಾ. ನಿನ್ನ ಈ ಸರಳತೆಗೆ ನಾನು ಮೆಚ್ಚಿದ್ದು, ಸಿಂಪಲ್ ಮೇಕಪ್‌ನಲ್ಲಿ ಅದ್ಭುತವಾಗಿ ಕಾಣಿಸುತ್ತಿದ್ದಿಯಾ ಎಂದೆಲ್ಲ ಹೇಳಿದಾಗ ವೇದಾಗೆ ಏನು ಮಾಡಬೇಕು ಎಂದು ತಿಳಿಯದೇ ಬಹಳ ಖುಷಿ ಪಡುತ್ತಾಳೆ. ಇತ್ತ ಸಾಕ್ಷಿ ಮಾತ್ರ ಬಹಳ ಸಂಕಟ ಅನುಭವಿಸುತ್ತಿದ್ದಾಳೆ. ವೇದಾ ಹಾಗೂ ವಿಕ್ರಂನನ್ನು ದೂರ ಮಾಡಲೇಬೇಕು ಇಲ್ಲವಾದರೆ ಒಂದಲ್ಲ ಒಂದು ದಿನ ನಮಗೆ ಉಳಿಗಾಲ ಇರುವುದಿಲ್ಲ ಎಂದುಕೊಳ್ಳುತ್ತಾಳೆ.

ಸಾಕ್ಷಿ ಹೊಸ ಆಲೋಚನೆ
ವಿಕ್ರಂ ಜೊತೆ ಜೀವನ ಮಾಡುವ ಅದೃಷ್ಟ ಕೂಡ ಇರುವುದಿಲ್ಲ ಎಂದು ಮನದಲ್ಲಿ ಅಂದುಕೊಂಡು ಇರುತ್ತಾಳೆ ಸಾಕ್ಷಿ. ಜಯಗೆ ಮಾತ್ರ ತನ್ನ ಮಗ ಸೊಸೆ ಒಂದಾಗಿ ಬಿಟ್ಟರಲ್ವ ಎನ್ನುವ ಸಮಾಧಾನ. ಆದರೆ ಸಾಕ್ಷಿ ಮಾಡುತ್ತಿರುವ ರಂಪಾಟ ನೋಡಿ ಜಯಾಗೆ ಆತಂಕ ಇನ್ನಷ್ಟು ಹೆಚ್ಚುತ್ತದೆ.


Click it and Unblock the Notifications











