Neenadhena: ಅಮ್ಮನ ಮಾತು ಕೇಳಿ ದಂಗಾದ ವೇದಾ; ಜಯಾ ಮಾತಿಗೆ ಕಣ್ಣೀರಾದ ಸೊಸೆ
ವೇದಾ ಮನೆಗೆ ಆಕೆಯ ತಾಯಿ ಹಾಗೂ ಅಜ್ಜಿ ಭೇಟಿ ನೀಡಿದ್ದಾರೆ. ತವರು ಮನೆಯಲ್ಲಿ ಖುಷಿ ಖುಷಿಯಾಗಿ ಇದ್ದ ವೇದಾ ಗಂಡನ ಮನೆಯಲ್ಲಿ ಹೇಗಿದ್ದಾಳೆ ಏನೋ ಎನ್ನುವ ಸಣ್ಣ ಅಳುಕು ಅವರಿಗೆ. ಅದಕ್ಕಾಗಿ ವಿಕ್ರಂ ಮನೆಗೆ ಬರುತ್ತಾರೆ . ವೇದಾ ಕಷ್ಟಕ್ಕೆ ನಾನೇ ಕಾರಣ ಆಗಿಬಿಟ್ಟೆನಲ್ಲ ಎಂದು ಬಹಳ ಬೇಸರದಲ್ಲಿ ಇರುತ್ತಾಳೆ ವೇದಾ ತಾಯಿ.
ವೇದಾ ಬಳಿ ಎಲ್ಲಾ ವಿಚಾರವನ್ನು ಹೇಳಿಕೊಂಡಾಗ ವೇದಾಗೆ ಬಹಳ ಬೇಸರ ಆಗುತ್ತದೆ, ನನ್ನ ಜೊತೆ ಇದನ್ನು ಎಲ್ಲಾದರೂ ನೀವು ಹೇಳಿಕೊಂಡು ಇದ್ದರೆ ನಾನು ಯಾವತ್ತೂ ಇದಕ್ಕೆಲ್ಲ ಆಸ್ಪದ ಕೊಡುತ್ತಿರಲಿಲ್ಲ, ಅದು ಅಲ್ಲದೆ ನಾನು ಯಾವತ್ತೂ ವಿಕ್ರಂನನ್ನು ಬಿಟ್ಟು ಬೇರೆ ಹೋಗುತ್ತೇನೆ ಎನ್ನುವ ಮಾತೇ ಆಡಿಲ್ಲ, ನೀವೇ ನಿಮಗೆ ಏನು ಮನಸಿಗೆ ತೋಚುತ್ತದೋ ಆದನ್ನು ಮಾಡುತ್ತೀರಾ ಇದರಿಂದ ನನ್ನ ಮನಸ್ಸಿಗೆ ಬಹಳ ನೋವು ಆಗಿದೆ ಎಂದು ತನ್ನ ಮನಸ್ಸಿಗೆ ಆಗಿರುವ ನೋವನ್ನು ಹೇಳಿಕೊಳ್ಳುತ್ತಾಳೆ.

ಕೊನೆಗೆ ವೇದಾ ತಾಯಿ ಹಾಗೂ ಅಜ್ಜಿ ಮಗಳಿಗೆ ಸಾಂತ್ವನದ ಮಾತು ಹೇಳಿ ಅಲ್ಲಿಂದ ಹೋಗುತ್ತಾರೆ. ಅಜ್ಜಿ ಹಾಗೂ ತಾಯಿಯನ್ನು ಕಳುಹಿಸಿಕೊಟ್ಟ ಬಳಿಕ ಅಮ್ಮ ಹಾಗೂ ಅತ್ತೆ ಮಾಡಿಕೊಂಡಿರುವ ಒಪ್ಪಂದದಿಂದ ನಾನು ಎಷ್ಟು ಕಷ್ಟ ಬೀಳಬೇಕಾಯಿತು, ಆದರೆ ಇದರಿಂದ ಇದೀಗ ಇನ್ನಷ್ಟು ಕಷ್ಟ ಬೇರೆ ಎಂದು ಬಿಕ್ಕಿ ಬಿಕ್ಕಿ ಅಳುತ್ತಿರಬೇಕಾದರೆ ಮನೆಯಿಂದ ಹೊರಗೆ ಜಯಾ ಬರುತ್ತಾಳೆ.
ಅಳುತ್ತಿರುವ ವೇದಾಳನ್ನು ನೋಡಿ ಸಮಾಧಾನ ಮಾಡಬೇಕು ಎಂದು ಅನಿಸುತ್ತದೆ. ಆದರೆ ಯಾವುದೋ ಒಂದು ಕಾರಣದಿಂದ ವಾಪಸ್ ಮನೆ ಒಳಗೆ ಹೋಗುತ್ತಾಳೆ. ಆಗ ಅತ್ತೆಯನ್ನು ನೋಡಿದ ವೇದಾ ಅತ್ತೆ ಎಂದು ಜಯಾಳನ್ನು ತಬ್ಬಿಕೊಂಡು ಅಳುತ್ತಾಳೆ. ನೀವು ಮಾಡಿರುವ ಕೆಲಸದಿಂದ ನಾನು ಎಷ್ಟೆಲ್ಲ ನೋವು ಪಟ್ಟೆ, ನಾನು ಮೊದಲು ಮದುವೆ ಆಗಿ ಬಂದಾಗ ನನ್ನ ಈ ಮನೆಗೆ ಕರೆದುಕೊಂಡು ಬಂದಿದ್ದು ನೀವು ಎಂದು ಹೇಳುತ್ತಾಳೆ.

ವೇದಾ ಮುಂದಿನ ನಿರ್ಧಾರ ಎನು?
ಬಳಿಕ ತನ್ನನ್ನು ಸ್ವಂತ ಮಗಳ ಹಾಗೆ ನೋಡಿಕೊಂಡು ಇದ್ದೀರಿ, ನಾನು ನಿಮ್ಮನ್ನು ಬಹಳ ಹಚ್ಚಿಕೊಂಡು ಇದ್ದೆ. ಆದರೆ ನೀವು ಒಮ್ಮೆಲೆ ಬದಲಾಗಿ ಬಿಟ್ಟಿರಿ. ನನಗೆ ಇದನ್ನೆಲ್ಲ ಅರಗಿಸಿಕೊಳ್ಳಲು ಸಾಧ್ಯ ಆಗಿರಲಿಲ್ಲ, ನಾನು ಏನು ತಪ್ಪು ಮಾಡದೇ ನನ್ನ ಜೊತೆ ಮಾತು ಬಿಟ್ಟ ವೇಳೆ ನನಗೆ ಇನ್ನಷ್ಟು ದುಃಖ ಹೆಚ್ಚಾಗುತ್ತಾ ಹೋಗುತ್ತಿತ್ತು, ಅದೆಷ್ಟೋ ರಾತ್ರಿ ನಿದ್ದೆ ಇಲ್ಲದೆ ಕಾಲ ಕಳೆದಿದ್ದೇನೆ, ಕೊನೆಗೆ ನೀವು ಮನೆಯಿಂದ ಹೊರಗೆ ಹಾಕಿ ನನ್ನ ಅಮ್ಮನ ಆಸೆ ಈಡೇರಿಸಿದ್ದೀರಿ. ಆದರೆ ನನಗೆ ಎಷ್ಟು ನೋವಾಗಿತ್ತು ಎಂದರೆ ಅದ್ಯಾವುದನ್ನೂ ಹೇಳಿಕೊಳ್ಳುವ ಸ್ಥಿತಿಯಲ್ಲಿ ನಾನು ಇರಲಿಲ್ಲ ಎನ್ನುತ್ತಾಳೆ.
ಜಯಮ್ಮನ ಮಾತು ಕೇಳಿ ವೇದಾ ನಿರಾಳ
ನನ್ನ ಅತ್ತೆ ಯಾಕೆ ಹೀಗೆ ಆಡುತ್ತಿದ್ದಾರೆ ಎನ್ನುವ ಆತಂಕದಲ್ಲಿ ನಾನಿದ್ದೆ, ನನಗೆ ಬಹಳ ಭಯ ಆಗಿತ್ತು ಎಂದು ಹೇಳಿದಾಗ ಜಯ ಮಾತ್ರ ವೇದಾಳನ್ನು ಸಮಾಧಾನ ಮಾಡುತ್ತಾಳೆ. ಕೊನೆಗೆ ವೇದಾ ನನ್ನಿಂದಾಗಿ ಸಾಕ್ಷಿ ಜೀವನ ಹಾಳಾಯಿತು, ಆಕೆಯ ಜೀವನ ಸರಿ ಪಡಿಸುವವರೆಗೆ ನನಗೆ ನೆಮ್ಮದಿ ಇಲ್ಲ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಜಯಾಗೆ ಖುಷಿ ಆಗುತ್ತದೆ. ವೇದಾ ಹಾಗೂ ವಿಕ್ರಂ ಖುಷಿಯಾಗಿ ಜೀವನ ನಡೆಸಲಿ ಎನ್ನುವುದೇ ಜಯ ಆಸೆ.
ಸಾಕ್ಷಿಗೆ ಬೇರೆ ಮದುವೆ ಮಾಡುತ್ತಾಳಾ ವೇದಾ
ಸಾಕ್ಷಿಗೆ ಹೇಗಾದರೂ ಮಾಡಿ ಮದುವೆ ಮಾಡಬೇಕು, ಇಲ್ಲವಾದರೆ ತಮ್ಮ ಜೀವನಕ್ಕೆ ಆಕೆ ಅಡ್ಡಿ ಆಗುವ ಎಲ್ಲ ಚಾನ್ಸ್ ಇದೆ. ಇದಕ್ಕಾಗಿ ವಿಕ್ರಂ ಮೇಲಿರುವ ಪ್ರೀತಿಗೆ ಸಾಕ್ಷಿ ತಾನಾಗಿಯೇ ತಾಳಿ ಕಟ್ಟಿಕೊಂಡು ಮೇಷ್ಟ್ರ ಮನೆಯಲ್ಲಿ ಇದ್ದಾಳೆ. ಇನ್ನೂ ಮುಂದೆ ವೇದಾ ಇದೆಲ್ಲವನ್ನೂ ಹೇಗೆ ನಿಭಾಯಿಸುತ್ತಾಳೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











