Neenadhena: ಪೊಲೀಸ್ ಕಸ್ಟಡಿಯಲ್ಲಿ ವೇದಾ; ಬಿಡಿಸಲು ವಿಕ್ರಂ ಒದ್ದಾಟ

By Poorva

ವೇದಾಗೆ ವಿಕ್ರಂ ಎಂದರೆ ಜೀವ. ಅದೇ ರೀತಿ ವಿಕ್ರಂಗೂ ವೇದಾ ಅಂದರೆ ಪ್ರಾಣ. ಬೆಟ್ಟದಷ್ಟು ಪ್ರೀತಿ ಇದ್ದರೂ ಅದ್ಯಾವುದನ್ನೂ ತೋರಿಸಿಕೊಳ್ಳಲು ವಿಕ್ರಂಗೆ ಸಾಧ್ಯ ಆಗುತ್ತಿಲ್ಲ. ವಿಕ್ರಂಗೆ ವೇದಾ ಮೇಲೆ ಅಪಾರವಾದ ಗೌರವ..ಪ್ರೀತಿ . ವೇದಾ ಇಲ್ಲದೇ ಒಂದು ನಿಮಿಷ ಇರುವವನು ಅಲ್ಲ.

ತಾಯಿ ಮಾತಿಗೆ ಕಟ್ಟುಬಿದ್ದು ಆತ ವೇದಾನನ್ನು ಮನೆಯ ಒಳಗೆ ಕರೆದುಕೊಂಡು ಬರುವ ಹಾಗಿಲ್ಲ. ಆಕೆಗೆ ವೇದಾ ಈ ಮನೆಯ ಸೊಸೆ ಆಗಿ ಇರುವುದು ಇಷ್ಟವಿಲ್ಲ. ಮನದಲ್ಲಿ ವೇದಾ ಬಗ್ಗೆ ಅಪಾರವಾದ ಪ್ರೀತಿ ಜಾಗ ಇದ್ದರೂ ಅದನ್ನು ಹೇಳಿಕೊಳ್ಳುವ ಸ್ಥಿತಿಯಲ್ಲಿ ಇರುವುದು ಇಲ್ಲ.

Neenadhena kannada serial written update 25th February episode

ಯಾವುದೋ ಒತ್ತಡಕ್ಕೆ ಮಣಿದು ಆಕೆ ಇಂತಹ ನಿರ್ಧಾರ ತೆಗೆದುಕೊಂಡು ಇರುತ್ತಾಳೆ. ಸಾಕ್ಷಿ ಹಾಗೂ ವಿಕ್ರಂ ಮದುವೆ ಮಾಡುವುದಕ್ಕೆ ಇದೀಗ ಮಾತುಕತೆ ನಡೆಸುತ್ತಾ ಇದ್ದಾರೆ. ಸಾಕ್ಷಿಗೆ ವಿಕ್ರಂ ಎಂದರೆ ಪ್ರಾಣ. ಆದರೆ ವಿಕ್ರಂ, ವೇದಾ ಜೊತೆ ತಿರುಗಾಡುತ್ತಾ ಇರುವುದು ಕಂಡಾಗ ಆಕೆಗೆ ಸಿಟ್ಟು ಬರುತ್ತದೆ. ಇದನ್ನು ವಿಕ್ರಂ ಹಾಗೂ ವೇದಾ ಇಬ್ಬರ ಬಳಿಯೂ ತೋರಿಸಿಕೊಂಡು ಇರುವ ವೇಳೆ ವಿಕ್ರಂ ಕೊಂಚ ಜೋರಾಗಿ ಹೇಳಿ ಇರುತ್ತಾನೆ.

ನಿನಗಿಂತ ಮೊದಲು ವೇದಾ ನನ್ನ ಜೀವನಕ್ಕೆ ಬಂದಿದ್ದಾಳೆ. ಆದ ಕಾರಣ ನೀನು ಕೋಪ ಮಾಡಿಕೊಳ್ಳುತ್ತಿರುವುದು ಸರಿ ಅಲ್ಲ. ಎಂದು ಬುದ್ದಿ ಹೇಳಿದ್ದಕ್ಕೆ ಸಾಕ್ಷಿ ಕೊಂಚ ಕೋಪಗೊಂಡು ವೇದಾ ಎದುರು ಜೋರಾಗಿ ಮಾತನಾಡಿರುತ್ತಾಳೆ. ಇದನ್ನು ಕಂಡ ವೇದಾ, ಸಾಕ್ಷಿ ಕೆನ್ನೆಗೆ ಹೊಡೆಯುತ್ತಾಳೆ.

ವಿಕ್ರಂ ಏನು ಮಾತನಾಡದೇ ಇರುವುದನ್ನು ಕಂಡು ಸಾಕ್ಷಿ ಆತನ ಮೇಲೆ ಕೂಡ ಆಕ್ರೋಶ ವ್ಯಕ್ತಪಡಿಸಿರುತ್ತಾಳೆ. ಆತ್ಮಹತ್ಯೆ ಮಾಡಿಕೊಳ್ಳುವಂತೆ ನಾಟಕ ಮಾಡಿ ಆಸ್ಪತ್ರೆಗೆ ದಾಖಲಾಗಿರುತ್ತಾಳೆ. ಇನ್ನೂ ವೇದಾ ಮೇಲೆ ಸಾಕ್ಷಿ ಕಂಪ್ಲೇಂಟ್ ಅನ್ನು ಕೊಡುತ್ತಾಳೆ.

ಶಾಲ್‌ನಲ್ಲಿ ಇರುವ ವೇದಾ

ಸಾಕ್ಷಿ ನಡೆ ನೋಡಿದ ವೇದಾ ಗೆ ಶಾಕ್ ಆಗುತ್ತದೆ. ಪೊಲೀಸರು ಬಂದು ವೇದಾಳನ್ನು ಜೈಲಿಗೆ ಕರೆದುಕೊಂಡು ಹೋಗುತ್ತಾರೆ. ಇದರಿಂದ ಇನ್ನೂ ಎಲ್ಲರಿಗೂ ಸ್ಪಷ್ಟವಾಗಿ ತಿಳಿಯುತ್ತದೆ. ವೇದಾ ಮೇಲೆ ವಿಕ್ರಂಗೆ ಅದೆಷ್ಟು ಪ್ರೀತಿ ಇದೆ ಎಂದು. ಎಲ್ಲರ ಬಳಿ ಸಾರಿ ಸಾರಿ ವೇದಾ ನನ್ನ ಹೆಂಡತಿ ಎಂದು ಮನದಲ್ಲಿ ಇರುವ ನಿಜ ವಿಚಾರವನ್ನು ಹೇಳುತ್ತಾನೆ. ಆದರೆ ಇದೆಲ್ಲವನ್ನೂ ವೇದಾ ಗಮನಿಸುತ್ತಲೇ ಇರುತ್ತಾಳೆ..

Neenadhena kannada serial written update 25th February episode

ವಿಕ್ರಂ ಜೊತೆ ಸತ್ಯಮೂರ್ತಿ ಮಾತು

ವಿಕ್ರಂ ತಂದೆಯ ಬಳಿ ಸತ್ಯಮೂರ್ತಿ ಬಂದು ಮಾತನಾಡುತ್ತಾನೆ. ವೇದಾ ನಮ್ಮ ಮನೆಗೆ ಬಂದ ದಿನದಿಂದ ಬಹಳ ಬೇಸರದಲ್ಲಿ ಇದ್ದಾಳೆ. ಆಕೆಯನ್ನು ದಯವಿಟ್ಟು ನಿಮ್ಮ ಮನೆಗೆ ಕರೆದುಕೊಂಡು ಹೋಗಿ ಎಂದು ಕೇಳಿಕೊಂಡಾಗ ವಿಕ್ರಂ ತಂದೆಗೆ ಏನು ಹೇಳಬೇಕು ಎಂದು ತಿಳಿಯದಂತಾಗುತ್ತದೆ. ಕೊನೆಗೆ ವಿಕ್ರಂ ಜೊತೆ ವೇದಾ ತಂದೆ ಮಾತನಾಡಿದ ವಿಚಾರ ಹೇಳಿದಾಗ ವಿಕ್ರಂಗೆ ಸಂತೋಷ ಆಗುತ್ತದೆ. ಆದರೆ ವಿಕ್ರಂಗೆ ತಾಯಿಯ ಮಾತು ನೆನಪಾಗುತ್ತದೆ.

ವಿಕ್ರಂಗೆ ನೆನಪಾಗಿದೆ ತಾಯಿಯ ಮಾತು

ಜೈಲಿನಿಂದ ಜಾಮೀನು ಮಂಜೂರಾಗಿ ವೇದಾ ರಿಲೀಸ್ ಆಗಿ ಮನೆಗೆ ಹೋಗುವ ವೇಳೆ ವಿಕ್ರಂ ಕಣ್ಣೀರಾಗುತ್ತಾನೆ. ವೇದಾ ವಿದೇಶಕ್ಕೆ ಹೋಗುವ ಎಲ್ಲಾ ಲಕ್ಷಣ ಕಾಣುತ್ತಿದೆ. ತಾಯಿಗೆ ಕೊಟ್ಟ ಮಾತಿಗಾಗಿ ವೇದಾಳನ್ನೇ ದೂರ ಮಾಡ್ಕೊಳ್ಳುತ್ತಾನಾ ವಿಕ್ರಂ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Neenadhena kannada serial latest episode update
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X