Neenadhena: ಸಾಕ್ಷಿಯ ನಾಟಕಕ್ಕೆ ಶಾಪ ಹಾಕುತ್ತಿರುವ ವೇದಾ-ವಿಕ್ರಂ ಫ್ಯಾನ್ಸ್

By ಎಸ್ ಸುಮಂತ್

ಸ್ಟಾರ್ ಸುವರ್ಣದಲ್ಲಿ 'ನೀನಾದೆನಾ' ಧಾರಾವಾಹಿ ಈಗಂತೂ ಎಲ್ಲರಿಗೂ ಒಷ್ಟವಾಗುತ್ತಿದೆ. ವೇದಾ ಹಾಗೂ ವಿಕ್ರಂ ಒಂದಾಗಿರುವುದೇ ಇದಕ್ಕೆಲ್ಲಾ ಕಾರಣ. ಪ್ರಣಯ ಪಕ್ಷಿಗಳಂತೆ ಊರೂರು ಸುತ್ತುತ್ತಿದ್ದಾರೆ. ಆದರೆ ಈ ಓಡಾಟ, ಈ ಒಡನಾಟ ಎಲ್ಲವೂ ಮೊದಲೇ ಆಗಬೇಕಿತ್ತು. ಈಗ ಕಾಲ ಮಿಂಚಿದೆ, ವಿಕ್ರಂಗೆ ಮತ್ತೊಂದು ಮದುವೆ ಫಿಕ್ಸ್ ಆಗಿದೆ.

ಯಾವುದೋ ಕಾರಣಕ್ಕೆ ವೇದಾ ಹಾಗೂ ವಿಕ್ರಂ ದೂರವಾದ ಮೇಲೆ ಜಯ, ಸಾಕ್ಷಿ ಮನೆಗೆ ಹೋಗಿ, ಹೆಣ್ಣು ಕೇಳಿ ಬಂದಿದ್ದಾರೆ. ಮೊದಲೇ ವಿಕ್ರಂ ಎಂದರೆ ಪ್ರಾಣ ಬಿಡುತ್ತಿದ್ದ ಸಾಕ್ಷಿ,‌ಮದುವೆಯನ್ನು ಬೇಗ ಮಾಡಿಕೊಳ್ಳಲು ಪ್ಲ್ಯಾನ್ ಮಾಡಿದ್ದಾಳೆ. ಆದರೆ ಈಗ ವಿಕ್ರಂ ಮನಸ್ಸು ವೇದಾಳ ಕಡೆಗೆ ವಾಲಿದೆ. ಇದರಿಂದ ಸಾಕ್ಷಿ ನಾಟಕಗಳ ಸರಮಾಲೆಯನ್ನೇ ಶುರು ಮಾಡಿದ್ದಾಳೆ.

Neenadhena Kannada serial Written Update on February 21st episode

ಸಂತಸದಲ್ಲಿರುವ ವಿಕ್ರಂ-ವೇದಾ

ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವೇನು ಎಂಬಂತೆ ಆಗಿದೆ ವೇದಾ-ವಿಕ್ರಂ ಬದುಕು. ವೇದಾಳೆ ಎಲ್ಲದಕ್ಕೂ ಕಾಂಪ್ರಮೈಸ್ ಆಗಿದ್ದಾಗಲೂ ವಿಕ್ರಂ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಈಗ ವೇದಾಳಿಂದ ತಾನೂ ದೂರವಾಗಿ ಇನ್ನೊಬ್ಬಳನ್ನು ಮದುವೆಯಾಗುತ್ತಿದ್ದಂತೆ ಸಮಯದಲ್ಲಿ ವೇದಾಳ ಜೊತೆಗೆ ಪ್ರೀತಿಯಾಗಿದೆ, ಒಲವಾಗಿದೆ. ಊರೆಲ್ಲಾ ಸುತ್ತಾಡಿ, ದೇವಸ್ಥಾನಕ್ಕೆ ಓಡಾಡಿ, ಖುಷಿ ಖುಷಿಯಾಗಿದ್ದಾರೆ. ಇಬ್ಬರ ಲೋಕದಲ್ಲಿ ಇಬ್ಬರೇ ಸಂತಸವಾಗಿದ್ದಾರೆ.

ವಿಕ್ರಂ ಮನಸ್ಸಿನ ಪ್ರೀತಿ ಹೊರಕ್ಕೆ

ವೇದಾ ಹಾಗೂ ವಿಕ್ರಂ ಮಾತನಾಡುವಾಗ ಸಾಕ್ಷಿಯ ವಿಚಾರವೂ ಬಂದಿದೆ. ಸಾಕ್ಷಿ ಮಾತಿಗೆ ನೀನು ತಲೆಕೆಡಿಸಿಕೊಳ್ಳಬೇಡ ಬೇತಾಳ ಎಂದುದ್ದಾನೆ. ಆಗ ವೇದಾ, ಯಾರಿಗೆ ಆದರೂ ತಮ್ಮ ಹುಡುಗ ಇನ್ನೊಬ್ಬ ಹುಡುಗಿಯ ಜೊತೆಗೆ ಓಡಾಡುತ್ತಿದ್ದಾನೆ ಎಂದಾಗ ಕೋಪ ಬರುವುದು ಸಹಜ ಎಂದಿದ್ದಾಳೆ. ಆಗ ವಿಕ್ರಂ ಯಾರೋ ಹುಡುಗಿ ಅಲ್ಲ, ನೀನು ನನ್ನ ಹೆಂ.. ಅಂದಿದ್ದಾನೆ. ಹೆಂಡತಿ ಎಂದು ನಾಲಿಗೆಯ ತುದಿಗೆ ಬಂದ ಪದವನ್ನು ಹಾಗೇ ನುಂಗಿಕೊಂಡಿದ್ದಾನೆ.

Neenadhena Kannada serial Written Update on February 21st episode

ಆತ್ಮಹತ್ಯೆಯ ನಾಟಕವಾಡಿದ ಸಾಕ್ಷಿ

ಇನ್ನೇನು ವೇದಾ ಹೊರಡಬೇಕು ಎಂದು ಟಾಟಾ, ಬೈ ಬೈ ಹೇಳಿದ್ದಳು. ಆದರೆ ಮತ್ತೊಂದು ಟೀ ಕುಡಿಯುವ ಆಸೆಯಾಗಿದೆ ವಿಕ್ರಂಗೆ. ಒಂದು ಟೀ ಎಂದಾಗ ವೇದಾ ಕೂಡ ಸಂತಸದಿಂದ ಒಪ್ಪಿಕೊಂಡಿದ್ದಾಳೆ. ಅದೇ ಸಮಯಕ್ಕೆ ಅತ್ತಿಗೆಯ ಫೋನ್ ಬಂದಿದೆ. ರಿಸೀವ್ ಮಾಡಿ, ಲೌಡ್ ಸ್ಪೀಕರ್‌ನಲ್ಲಿ ಕೇಳಿದಾಗ, ಸಾಕ್ಷಿ ಆತ್ಮಹತ್ಯೆಗೆ ಪ್ರಯತ್ನ ಮಾಡಿರುವುದು ಗೊತ್ತಾಗಿದೆ. ತಕ್ಷಣ ಸಾಕ್ಷಿಯನ್ನು ನೋಡಲು ವೇದಾ ಕೂಡ ಹೋಗಿದ್ದಾಳೆ. ಬೇಡವೆಂದರೂ, ನನ್ನ ವಿಚಾರಕ್ಕೆ ಅವಳು ಆತ್ಮಹತ್ಯೆಗೆ ಪ್ರಯತ್ನಿಸಿರಬಹುದು. ನಾನು ಒಂದು ಕ್ಷಮೆ ಕೇಳಿದರೆ ಏನು ಆಗಲ್ಲ ಎಂದು ಹೊರಟಿದ್ದಾಳೆ.

ಸಾಕ್ಷಿ, ಪ್ರೀತಮ್ ಮೇಲೆ ಪ್ರೇಕ್ಷಕರ ಕೋಪ

ಈ ಸೀರಿಯಲ್ ನೋಡುಗರಿಗೆ ಮೊದಲು ಸಾಕ್ಷಿ ಹಾಗೂ ಪ್ರೀತಮ್‌ನನ್ನು ಸಾಯಿಸಿ ಬಿಡಬೇಕು ಎಂಬ ಆಕ್ರೋಶ ಹೆಚ್ಚಾಗಿದೆ. ವೇದಾಳಿಂದ ವಿಕ್ರಂನನ್ನು ದೂರ ಮಾಡಿ, ಮದುವೆಯಾಗಲು ಸಾಕ್ಷಿ ಹೊರಟಿದ್ದರೆ, ಆ ಕಡೆ ವೇದಾಳನ್ನು ಫ್ರೆಂಡ್‌ಶಿಪ್ ಹೆಸರಲ್ಲಿ ಮೋಸ ಮಾಡಲು ಪ್ರೀತಂ ಹೊರಟಿದ್ದಾನೆ. ಹೀಗಾಗಿ ಅವರಿಬ್ಬರು ಸತ್ತು ಹೋಗಲಿ ಎಂದೇ ಫ್ಯಾನ್ಸ್ ನಿರೀಕ್ಷೆಯಾಗಿದೆ. ಕಡೆಯ ತನಕ ವೇದಾ ಹಾಗೂ ವಿಕ್ರಂ ಹೀಗೆ ನಗು ನಗುತ್ತಾ ಖುಷಿಯಾವಿರಲಿ. ಪ್ರಣಯ ಪಕ್ಷಿಗಳ ರೀತಿ ಹಾರಾಡಲಿ ಎಂಬುದಾಗಿದೆ.

More from Filmibeat

English summary
Neenadhena Kannada serial today episode; Here is the details about sakshi tried to commit suicide;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X