Neenadhena: ನಾಯಕರಿಂದ ವಿಕ್ರಂ ದೂರವಾಗ್ತಾನಾ? ಸಾಕ್ಷಿ ಜೊತೆ ಮದುವೆ ಮುರಿದು ಬೀಳುತ್ತಾ?

By ಎಸ್ ಸುಮಂತ್

ವಿಕ್ರಂ ಮತ್ತು ವೇದಾ ಇಬ್ಬರಲ್ಲೂ ಪ್ರೀತಿ ಶುರುವಾಗುತ್ತಿದೆ. ಹೆಂಡತಿಯನ್ನು ಬಿಟ್ಟು ಇರಲಾರದಷ್ಟು ಪ್ರೀತಿ ಮಾಡುತ್ತಿದ್ದಾನೆ. ಹೆಂಡತಿಗಾಗಿ ಸಮಯ ಕೊಡಲು ಶುರು ಮಾಡಿದ್ದಾನೆ. ಮಾತೆತ್ತಿದರೆ ಜೋರು ಮಾಡುತ್ತಿದ್ದ, ವಿಕ್ರಂ ಈಗ ವೇದಾ ಎಂದರೆ ಸಾಫ್ಟ್ ಆಗಿದ್ದಾನೆ. ಆದರೆ ಇದೇ ಸಂದರ್ಭದಲ್ಲಿ ವೇದಾ ಜೈಲಿಗೆ ಹೋಗಿ ಕುಳಿತಿದ್ದಾಳೆ.

ಸಾಕ್ಷಿಯ ಹುಚ್ಚಾಟ ಅತಿರೇಕಕ್ಕೆ ಏರಿದೆ. ವಿಕ್ರಂನನ್ನು ಮದುವೆಯಾಗಲೇಬೇಕೆಂಬ ಹಠ ಅವಳಲ್ಲಿ ಹುಟ್ಟಿದೆ. ವೇದಾಳನ್ನು ದೂರ ಮಾಡಲು ಯಾವ ದಾರಿ ಬೇಕಾದರೂ ಹಿಡಿಯುತ್ತಿದ್ದಾಳೆ. ಅದಕ್ಕೆ ಈಗ ಆತ್ಮಹತ್ಯೆಗೆ ಯತ್ನಿಸಿ, ಸಾಕ್ಷಿಯನ್ನು ಜೈಲಿಗೆ ಹಾಕಿಸಿದ್ದಾಳೆ.

 Neenadhena kannada serial Written Update on February 23rd episode

ತಮ್ಮ ಮದುವೆಗೊಂದು ಅರ್ಥ ಕೊಟ್ಟ ವೇದಾ..!

ಸಾಕ್ಷಿ ಮಾಡಿದ ಸುಳ್ಳು ಆರೋಪದಿಂದ ಈಗ ವೇದಾ ಸ್ಟೇಷನ್‌ನಲ್ಲಿದ್ದಾಳೆ. ಆದರೆ ಹೆಂಡತಿಯನ್ನು ಪೊಲೀಸ್ ಠಾಣೆಯಲ್ಲಿ ಬಿಡುವುದಕ್ಕೆ ವಿಕ್ರಂನಿಂದ ಸಾಧ್ಯವಾಗುತ್ತಿಲ್ಲ. ಹೇಗಾದರೂ ಮಾಡಿ, ಬಿಡಿಸಿಕೊಂಡು ಹೋಗಬೇಕು ಎಂದು ಪ್ರಯತ್ನ ಪಡುತ್ತಿದ್ದಾನೆ. ಸ್ಟೇಷನ್‌ನಲ್ಲಿ ವೇದಾ ಕುಳಿತು ಕಾಯುತ್ತಿದ್ದಾಳೆ. ಅಲ್ಲಿಯೇ ಸ್ಟೇಷನ್ ಒಳಗೆ ಇದ್ದ ಇಬ್ಬರು ಸಿಸ್ಟರ್ ನಿಮ್ಮದು ಲವ್ ಮ್ಯಾರೇಜ್ ಹ ಎಂದು ಕೇಳಿದಾಗ. ವೇದಾ ಮನಸ್ಸಾರೆ ಖುಷಿ ಪಟ್ಟು ಹೌದು ಎಂದಿದ್ದಾಳೆ. ಆದರೆ ವಿಕ್ರಂ-ವೇದಾ ಮದುವೆಯಾಗಿದ್ದೇ ವಿಚಿತ್ರವಾಗಿದ್ದರು, ಈಗ ಮನಸ್ಸಾರೆ ಮದುವೆ ಬಗ್ಗೆ ಹೆಮ್ಮೆ ಪಡುತ್ತಿದ್ದಾಳೆ.

ಜಾಮೀನಿಗಾಗಿ ಕಾಯುತ್ತಿರುವ ವೇದಾ

ಸ್ಟೇಷನ್‌ನಲ್ಲಿ ಕೂತು ವೇದಾ ವಿಕ್ರಂ ಬರುವ ದಾರಿಯನ್ನೇ ಕಾಯುತ್ತಿದ್ದಾಳೆ. ಅದಕ್ಕೂ ಮುನ್ನ ಗಂಡ, ತನ್ನ ಪರವಾಗಿ ಮಾಡಿದ್ದನ್ನು ಎಲ್ಲವನ್ನು ನೆನೆಸಿಕೊಂಡು ನಗುತ್ತಾ ಕುಳಿತಿದ್ದಾಳೆ. ಆದರೆ ಇನ್ಸ್‌ಪೆಕ್ಟರ್ ಇನ್ನು ಎಷ್ಟೊತ್ತು ಆಗುತ್ತೆ ನಿಮ್ಮ ಗಂಡ ಬರುವುದಕ್ಕೆ ಎಷ್ಟು ಸಮಯ ಆಗುತ್ತೆ. ಬೇಗ ಬರದೇ ಇದ್ದಲ್ಲಿ ಎಫ್ಐಆರ್ ಹಾಕುತ್ತೀವಿ ಎಂದಿದ್ದಾರೆ. ಆಗಲೂ ಗಂಡನ ಬಗ್ಗೆ ವೇದಾ ಆತ್ಮವಿಶ್ವಾಸದಿಂದಾನೇ ಇದ್ದಾಳೆ. ವಿಕ್ರಂ ಬಂದೇ ಬರುತ್ತಾನೆ ಎಂದಿದ್ದಾಳೆ.

 Neenadhena kannada serial Written Update on February 23rd episode

ನಾಯಕರ ಬಳಿ ಸಹಾಯ ಬೇಡಿದ ವಿಕ್ರಂ

ವಿಕ್ರಂ ರೌಡಿಸಂಗೆ ಇಳಿದ ಮೇಲೆ ನಾಯಕರನ್ನು ಬಿಟ್ಟು ಎಲ್ಲಿಯೂ ಇರುತ್ತಿರಲಿಲ್ಲ. ನಾಯಕರಿಗಾಗಿ ತಮ್ಮ ಮನೆಯವರನ್ನು ಬಿಟ್ಟಿದ್ದ. ನಾಯಕರಿಂದಾನೇ ತನ್ನ ಜೀವನವನ್ನು ಹಾಳು ಮಾಡಿಕೊಂಡಿದ್ದ. ನಾಯಕರು ಎಂದರೆ ಪ್ರಾಣವನ್ನೇ ಬಿಡುತ್ತಿದ್ದ. ಆದರೆ ಈಗ ವೇದಾಳನ್ನು ಬಿಡಿಸುವುದಕ್ಕೆ ನಾಯಕರ ಬಳಿ ಸಹಾಯಕ್ಕೆ ಕೇಳುವುದಕ್ಕೆ ಹೋಗಿ, ನಿರಾಸೆ ಮಾಡಿಕೊಂಡು ಬಂದಿದ್ದಾನೆ. ಸಾಕ್ಷಿ ಮನೆಯವರಿಗೆ ಮಾತು ಕೊಟ್ಟು ಬಿಟ್ಟಿದ್ದೀನಿ. ಇಂಥ ಸಂದರ್ಭದಲ್ಲಿ ವೇದಾಳನ್ನು ಬಿಡಿಸುವುದಕ್ಕೆ ಸಾಧ್ಯವಿಲ್ಲ. ಇದೊಂದನ್ನು ಬಿಟ್ಟು ಬೇರೆ ಏನಾದರೂ ಸಹಾಯ ಕೇಳಿ ಎಂದಿದ್ದಾನೆ. ಆದರೆ ಇದು ನಿರಾಸೆಯಾಗಿದ್ದಕ್ಕೆ ವಿಕ್ರಂ ಬೇಸರ ಮಾಡಿಕೊಂಡು ಹೊರಟಿದ್ದಾನೆ.

ನಾಯಕರಿಂದ ದೂರಾಗ್ತಾನಾ ವಿಕ್ರಂ..?

ನಾಯಕರಿಂದಾನೇ ವಿಕ್ರಂ ಜೀವನ ಹಾಳು ಮಾಡಿಕೊಂಡಿದ್ದು. ವೇದಾ ಸಾಕಷ್ಟು ಸಲ ಪ್ರಯತ್ನ ಮಾಡಿದ್ದಾಳೆ. ನಾಯಕರ ಸಹವಾಸ ಬಿಡು ಅಂತ. ಆದರೆ ವಿಕ್ರಂ ಮನೆಯವರನ್ನು ಬೇಕಾದರೂ ಬಿಡುತ್ತೀನಿ ನಾಯಕರನ್ನು ಬಿಡಲ್ಲ ಅಂತಾನೆ ಹೇಳಿದ್ದ. ಈಗ ನಂಬಿಕೆಗೆ ತಕ್ಕ ಶಾಸ್ತಿ ಆದಂತೆ ಆಗಿದೆ. ಅದಕ್ಕೆ ವಿಕ್ರಂ ವೇದಾ ಅಭಿಮಾನಿಗಳೆಲ್ಲಾ ವಿಕ್ರಂಗೆ ಈಗ ಗೊತ್ತಾಗಿದೆ. ನಾಯಕರ ಬುದ್ದಿ ತಿಳಿದು, ಇನ್ನು ಮೇಲಾದರೂ ವಿಕ್ರಂ ಸರಿ ಹೋಗುತ್ತಾನಾ ಎಂಬುದನ್ನು ನೋಡಬೇಕಿದೆ. ಹಾವಿಗೆ ಹಾಲೆರೆದಂತೆ ಆಗಿದೆ ಎಂದೆಲ್ಲಾ ಕಮೆಂಟ್ ಹಾಕಿದ್ದಾರೆ. ಇನ್ನು ಮೇಲಾದರೂ ವಿಕ್ರಂ ಚೇಂಜ್ ಆಗುತ್ತಾನಾ ನೋಡಬೇಕು.

More from Filmibeat

English summary
Neenadhena kannada serial today episode. Here is the details about Will Vikram distance himself from the leader?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X