Neenadhena: ಪ್ರೀತಮ್-ಸಾಕ್ಷಿ ನಾಟಕದಿಂದ ವೇದಾ-ವಿಕ್ರಂ ದೂರವಾಗಿ ಬಿಡುತ್ತಾರಾ..?

By ಎಸ್ ಸುಮಂತ್

ಮದುವೆಯಾಗಿ ಬಂದ ಮೇಲೆ ವೇದಾ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದಳು. ಮನೆಯವರ ಮನಸ್ಸನ್ನು ಗೆದ್ದಿದ್ದಳು. ವಿಕ್ರಂ ರೌಡಿಗಳ ಜೊತೆಗೆ ಸೇರಿ, ಮೃಗದಂತೆ ಆಗಿದ್ದನು. ಆದರೆ ವೇದಾ ತನ್ನ ತಾಳ್ಮೆ, ಬುದ್ದಿವಂತಿಕೆಯಿಂದ ನಡೆದುಕೊಂಡು ವಿಕ್ರಂನನ್ನು ಬದಲಾಯಿಸಿದ್ದಾಳೆ. ನಾಯಕರೊಟ್ಟಿಗೆ ಇದ್ದರು ಕೂಡ ಸಾಫ್ಟ್ ಆಗಿದ್ದಾನೆ. ಮನೆಯವರ ಮನಸ್ಸನ್ನು ವಿಕ್ರಂ ಗೆದ್ದಿದ್ದಾನೆ.

ವೇದಾ ಹಾಗೂ ವಿಕ್ರಂ ನಡುವೆ ಸಾಕಷ್ಟು ಬಾರೀ ಜಗಳವಾಗಿದೆ. ಇರಿಸು-ಮುನಿಸು ಬಂದಿದೆ. ಆಗೆಲ್ಲಾ ವೇದಾ ತಾಳ್ಮೆ ತೆಗೆದುಕೊಂಡು ಸರಿ ಮಾಡಿಕೊಂಡಿದ್ದಾಳೆ. ಆದರೆ ಈಗ ಇಬ್ಬರ ಮನಸ್ಸಲ್ಲೂ ಪ್ರೀತಿ ಶುರುವಾಗಿದೆ. ಒಟ್ಟಿಗೆ ಬಾಳುವ ಯೋಗವಿಲ್ಲ. ಸಾಕ್ಷಿ ಮತ್ತು ಪ್ರೀತಮ್ ನಿಂದಾಗಿ ಇಬ್ಬರು ದೂರ ದೂರವಾಗುತ್ತಿದ್ದಾರೆ.

Neenadhena kannada serial Written Update on February 26th episode

ಸ್ಟೇಷನ್‌ನಿಂದ ವೇದಾ ರಿಲೀಸ್

ಸಾಕ್ಷಿಯ ನಾಟಕದಿಂದ ವೇದಾ ಸ್ಟೇಷನ್‌ಗೆ ಹೋಗಿದ್ದಳು. ವಿಕ್ರಂ ಸಾಕಷ್ಟು ಪ್ರಯತ್ನ ಪಟ್ಟರು ವೇದಾಳನ್ನು ಬಿಡಿಸುವುದಕ್ಕೆ ಆಗಲಿಲ್ಲ. ಕಡೆ ಗಳಿಗೆಯಲ್ಲಿ ವೇದಾಳ ತಂದೆ ಕಡೆಯಿಂದಾನೇ ಬೇಲ್ ಸಿಕ್ಕಿದೆ. ವೇದಾ ಸ್ಟೇಷನ್‌ನಿಂದ ಬಿಡುಗಡೆಯಾಗಿದ್ದಾಳೆ. ಆದ್ರೆ ಇದೊಂಥರ ಧರ್ಮ ಸಂಕಟವಾಗಿದೆ. ವೇದಾಗೆ ವಿಕ್ರಂ ಜೊತೆಗೆ ಮಾತನಾಡಬೇಕೆಂದರು ಆ ಕ್ಷಣದಲ್ಲಿ ಏನು ಮಾತನಾಡಬೇಕೆಂಬುದು ತೋಚದಂತೆ ಆಗಿದೆ. ಒಬ್ಬರಿಗೊಬ್ಬರು ಮನಸ್ಸಿನಲ್ಲೆ ಮಾತನಾಡಿಕೊಂಡು, ಕಣ್ಸನ್ನೆಯಲ್ಲೇ ದೂರವಾಗಿದ್ದಾರೆ. ದೂರ ದೂರ ಹೋಗುವಾಗ ಇಬ್ಬರ ಮನಸ್ಸು ಮತ್ತೆ ಒಂದಾಗುವ ಆಸೆ ವ್ಯಕ್ತಪಡಿಸುತ್ತಿದೆ.

ಅಪಾಯದಿಂದ ದೂರವಾದ ಸಾಕ್ಷಿ

ಸ್ಟೇಷನ್‌ನಿಂದ ವೇದಾಳನ್ನು ಬಿಡಿಸಿದ ನೆಮ್ಮದಿ ಒಂದು ಕಡೆ, ಇತ್ತ ಸಾಕ್ಷಿಯೂ ಎಚ್ಚರ ಆಗಿದ್ದಾಳೆ. ನೇರವಾಗಿ ಆಸ್ಪತ್ರೆಗೆ ಬಂದ ವಿಕ್ರಂ ಹಾಗೂ ಅವರ ತಂದೆಗೆ ಸಾಕ್ಷಿ ಹುಷಾರಾಗಿದ್ದು ತಿಳಿದಿದೆ. ಸಾಕ್ಷಿ ಹುಷಾರಾಗಿದ್ದನ್ನು ವೈದ್ಯರು ತಿಳಿಸಿದ್ದಾರೆ. ಇದನ್ನು ಕೇಳಿದ ಮನೆಯವರು ಸಮಾಧಾನಗೊಂಡಿದ್ದಾರೆ. ಜನರಲ್ ವಾರ್ಡ್ ಗೆ ಶಿಫ್ಟ್ ಮಾಡುತ್ತೇವೆ. ಇನ್ನೆರಡು ಗಂಟೆಯಲ್ಲಿ ಡಿಸ್ಚಾರ್ಜ್ ಮಾಡಲಾಗುತ್ತೆ ಎಂದಾಗ, ಮನೆಯವರೆಲ್ಲ ಮದುವೆ ಬಗ್ಗೆಯೇ ಯೋಚನೆ ಮಾಡಿದ್ದಾರೆ.

Neenadhena kannada serial Written Update on February 26th episode

ಬಲವಂತಕ್ಕೆ ಮಾತನಾಡುತ್ತಿರುವ ವಿಕ್ರಂ

ಸಾಕ್ಷಿ ಹುಷಾದ್ದಾಳೆ ಎಂದು ಗೊತ್ತಾದ ಕೂಡಲೇ ಮನೆಯವರೆಲ್ಲಾ ಅವಳನ್ನು ನೋಡಲು ಹೋಗಿದ್ದಾರೆ. ವಿಕ್ರಂ ಕೂಡ ಅವರ ಹಿಂದೆಯೇ ಹೋಗಿದ್ದಾನೆ. ಮನೆಯವರೆಲ್ಲರೂ ಮಾತನಾಡುವಾಗ ವಿಕ್ರಂಗೆ ಮಾತನಾಡಿಸುವಂತೆ ಹೇಳಿದ್ದಾರೆ. ಮನಸ್ಸಿಲ್ಲದೆ ಹೋದರೂ ಬಾಯಿ ಮಾತಿಗೆ ಹೇಗಿದ್ದೀಯಾ ಎಂದು ವಿಕ್ರಂ ಕೇಳಿ ಸುಮ್ಮನೆ ಆದರೆ, ಅತ್ತ ವಿಕ್ರಂ ತಂದೆ ಜಗನ್ನಾಥ್ ಸಾಕ್ಷಿಗೆ ಪ್ರಮಾಣ ಮಾಡಿದ್ದಾರೆ. ಇನ್ಯಾವತ್ತು ವಿಕ್ರಂ - ವೇದಾಳ ಹಿಂದೆ ಹೋಗದಂತೆ ನಾನು ನೋಡಿಕೊಳ್ಳುತ್ತೇನೆ. ಅವನಿಗೆ ಎಲ್ಲವೂ ನೀನೇ ಆಗಿರ್ತೀಯ ಎಂದು ಮಾತು ಕೊಟ್ಟಿದ್ದಾರೆ.

ಪ್ರೀತಂ ಮಾಡಿದ ಪ್ಲ್ಯಾನ್ ವರ್ಕೌಟ್

ವೇದಾ-ವಿಕ್ರಂ ಜೀವನ ಹಾಳಾಗುತ್ತಿರುವುದು ಪ್ರೀತಮ್ ಹಾಗೂ ಸಾಕ್ಷಿಯ ನಾಟಕದಿಂದ. ಈಗ ಸಾಕ್ಷಿ ಹುಷರಾಗಿದ್ದಾಳೆ. ಮನೆಯವರೆಲ್ಲಾ ಪ್ರಾಮಿಸ್ ಕೂಡ ಮಾಡಿದ್ದಾರೆ. ಸಾಕ್ಷಿಯ ಈ ನಾಟಕದ ಸೂತ್ರಧಾರ ಪ್ರೀತಮ್ ಆಗಿದ್ದಾನೆ. ಈಗ ಸಾಕ್ಷಿ ಮನಸ್ಸಲ್ಲೇ ಸಿಕ್ಕಾಪಟ್ಟೆ ಖುಷಿ ಪಡುತ್ತಿದ್ದಾಳೆ. ಪ್ರೀತಮ್ ಗೆ ಥ್ಯಾಂಕ್ಸ್ ಹೇಳುತ್ತಿದ್ದಾಳೆ. ಪ್ರೀತಮ್ ಕೂಡ ನಾಟಕವಾಡಿ, ವೇದಾಳನ್ನು ಪಡೆಯುವ ದಾರಿ ಹುಡುಕುತ್ತಿದ್ದಾನೆ. ವೇದಾ ಹಾಗೂ ವಿಕ್ರಂ ಈಗಷ್ಟೇ ಪ್ರೀತಿಯಲ್ಲಿ ಬೀಳುತ್ತಿದ್ದಾರೆ. ಇದರ ನಡುವೆ ಇವರೆಲ್ಲರ ನಾಟಕ ಅವರ ಪ್ರೀತಿಗೆ ಮುಳ್ಳಾಗದಿರಲಿ ಎಂದೇ ನೋಡುಗರು ಹಾರೈಸುತ್ತಿದ್ದಾರೆ.

More from Filmibeat

English summary
Neenadhena kannada serial toaday episode update. Here is the details about Vedha release.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X