ನಿಜಜೀವನದಲ್ಲಿ ಒಂದಾಗ್ತಾರಾ ವಿಕ್ರಂ- ವೇದಾ? "ನೋಡೋಣ ಎಲ್ಲಾ ದೇವರಿಚ್ಛೆ" ಎಂದ ದಿಲೀಪ್

By ಫಿಲ್ಮಿಬೀಟ್ ಡೆಸ್ಕ್

ಯಾರಿಗೆ ಯಾವಾಗ ಹೇಗೆ ಲವ್ವಾಗುತ್ತದೆ? ಎಂದು ಹೇಳುವುದು ಕಷ್ಟ. ಬಣ್ಣದಲೋಕದಲ್ಲಿ ದಿಢೀರ್ ಲ್ ಆಗೋದು, ಮದುವೆ ಆಗೋದು ಎಲ್ಲಾ ಕಾಮನ್. ಸಿನಿಮಾಗಳಲ್ಲಿ, ಧಾರಾವಾಹಿಗಳಲ್ಲಿ ಒಟ್ಟೊಟ್ಟಿಗೆ ನಟಿಸಿದವರು ಸ್ನೇಹಿತರಾಗಿ ಬಳಿಕ ಆ ಸ್ನೇಹ ಪ್ರೀತಿಗೆ ತಿರುಗಿ ಮದುವೆವರೆಗೂ ಹೋಗಿರುವ ಸಾಕಷ್ಟು ಉದಾಹರಣೆಗಳು ಕಣ್ಣ ಮುಂದಿದೆ.

ಒಂದು ಸಿನಿಮಾ ಅಂದ್ರೆ ನಾಲ್ಕೈದು ತಿಂಗಳು ಧಾರಾವಾಹಿ ಅಂದ್ರೆ ವರ್ಷಗಳ ಕಾಲ ನಟ-ನಟಿಯರು ಒಟ್ಟೊಟ್ಟಿಗೆ ನಟಿಸಬೇಕಾಗುತ್ತದೆ. ಜೊತೆ ಜೊತೆಯಾಗಿ ಸಾಕಷ್ಟು ಕಾಲ ಕಳೆಯಬೇಕಾಗುತ್ತದೆ. ಹೀಗೆ ಒಟ್ಟಿಗೆ ಕಾಲ ಕಳೆದಷ್ಟು ಕೆಮೆಸ್ಟ್ರಿ ವರ್ಕ್‌ ಆಗುತ್ತದೆ ಎನ್ನುವ ಮಾತು ಇದೆ. ಕೆಲ ಸಿನಿಮಾ ನಟ, ನಟಿಯರ ಆನ್‌ಸ್ಕ್ರೀನ್‌, ಆಫ್ ಸ್ಕ್ರೀನ್ ಕೆಮೆಸ್ಟ್ರಿ ನೋಡಿದರೆ ಪದೇ ಪದೆ ನೋಡಬೇಕೆನಿಸುತ್ತದೆ.

Neenadhena serial actor Dileep Shetty Reacts To His Dating Rumours With co star Kushi shivu

ಹೀಗೆ ಒಟ್ಟಿಗೆ ನಟಿಸಿ ಪ್ರೇಕ್ಷಕರ ಮನಗೆದ್ದ ಜೋಡಿಗಳು ನಿಜಜೀವನದಲ್ಲಿ ಕೂಡ ಜೊತೆಯಾಗಲಿ ಎಂದು ಬಯಸುವ ಅಭಿಮಾನಿಗಳು ಇದ್ದಾರೆ. ಕೆಲವರ ನಟನೆ, ಒಡನಾಟ ನೋಡುತ್ತಿದ್ದರೆ ನಿಜವಾಗಿಯೂ ಇಬ್ಬರ ನಡುವೆ ಲವ್ವಾಗಿದೆ, ಮುಂದೆ ಇಬ್ಬರೂ ಒಟ್ಟಾಗಿ ಬಿಡುತ್ತಾರೆ ಎನ್ನುವ ಊಹಾಪೋಹ ಶುರುವಾಗುತ್ತದೆ. ಕನ್ನಡ ಕಿರುತೆರೆಯ 'ನೀನಾದೆನಾ' ಧಾರಾವಾಹಿ ಜೋಡಿ ವಿಕ್ರಂ-ವೇದಾ ನೋಡಿದಾಗಲೂ ಹೀಗೆ ಅನಿಸುತ್ತದೆ.

ವಿಕ್ರಂ-ವೇದಾ ಪಾತ್ರಗಳಲ್ಲಿ ದಿಲೀಪ್ ಹಾಗೂ ಖುಷಿ ಶಿವು ಜೋಡಿ ವೀಕ್ಷಕರಿಗೆ ಮೋಡಿ ಮಾಡಿದೆ. ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎನ್ನುವ ಗುಸುಗುಸು ಪದೇ ಪದೆ ಕೇಳಿಬರುತ್ತದೆ. ಒರಟ ಗಂಡನಾಗಿ ದಿಲೀಪ್ ಕ್ಯೂಟ್ ಕ್ಯೂಟ್ ಹುಡುಗಿಯಾಗಿ ಸೌಮ್ಯ ಪಾತ್ರದಲ್ಲಿ ಖುಷಿ ನಟಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ತೆಲುಗು ಕಾರ್ಯಕ್ರಮಕ್ಕೆ ದಿಲೀಪ್ ಅವರ ವಿಶೇಷ ಸ್ನೇಹಿತೆ ಎಂದು ಸಪ್ರೈಸ್‌ ಆಗಿ ಖುಷಿ ಅವರನ್ನು ಆಹ್ವಾನಿಸಲಾಗಿತ್ತು. ಇಬ್ಬರ ಪ್ರೀತಿ ಬಿದ್ದಿದ್ದಾರೆ ಎನ್ನುವ ಚರ್ಚೆಗೆ ಇದು ಮತ್ತಷ್ಟು ಇಂಬು ನೀಡಿದಂತಾಗಿತ್ತು.

Neenadhena serial actor Dileep Shetty Reacts To His Dating Rumours With co star Kushi shivu

ಅಭಿಮಾನಿಗಳು ಕೂಡ ಇಬ್ಬರ ಹೆಸರಿನಲ್ಲಿ ಸೋಶಿಯಲ್ ಮೀಡಿಯಾ ಪೇಜ್‌ಗಳನ್ನು ಕ್ರಿಯೇಟ್ ಮಾಡಿದ್ದಾರೆ. ಇಬ್ಬರ ತುಂಟಾಟ ಫೋಟೊ, ವೀಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತದೆ. ಇಬ್ಬರ ಹೆಸರು ಸೇರಿಸಿ ದಿಲ್‌ಖುಷ್ ಎಂದು ಪ್ರೀತಿಯಿಂದ ಕರೆಯುತ್ತಾರೆ. ಇದೇ ಹ್ಯಾಷ್‌ಟ್ಯಾಗ್‌ನಲ್ಲಿ ಇಬ್ಬರು ವೀಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ನೀವಿಬ್ಬರು ನಿಜಜೀವನದಲ್ಲಿ ಒಂದಾದರೆ ಚೆನ್ನಾಗಿರುತ್ತದೆ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ. ಇದೀಗ ಸ್ವತಃ ದಿಲೀಪ್ ಶೆಟ್ಟಿ ಈ ಚರ್ಚೆ ಬಗ್ಗ ಮಾತನಾಡಿದ್ದಾರೆ. ನ್ಯಾಷನಲ್‌ ಟಿವಿ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದಾರೆ.

"ರಿಯಲ್‌ ಲೈಫ್‌ ಅಲ್ಲಿ ನಾವಿಬ್ಬರು ನಾರ್ಮಲ್‌ ಆಗಿದ್ದೇವೆ. ತೆಲುಗು ಶೋಗೆ ಹೋಗಿ ಕನ್ನಡಕ್ಕೆ ಬಂದ ಮೇಲೆ ಕ್ಲೋಸ್‌ ಫ್ರೆಂಡ್‌ಯಿಂದ ಸ್ಪೆಷಲ್‌ ಫ್ರೆಂಡ್‌ ಅಂತ ಮಾಡಿದ್ದರು. ಸ್ಪೆಷಲ್‌ ಫ್ರೆಂಡ್‌ ಅಂತಾ ನಾನು ಹೇಳೇ ಇಲ್ಲ. ನಮ್ಮ ಮಧ್ಯ ಒಳ್ಳೆ ಹೊಂದಾಣಿಕೆ ಇದೆ. ಇನ್ನು ನಾವಿಬ್ಬರು ಒಂದೇ ಧಾರಾವಾಹಿಯಲ್ಲಿ ಕೆಲಸ ಮಾಡ್ತಿದ್ದೀವಿ. ನಮ್ಮ ಪೇರ್ ಜನರಿಗೆ ಇಷ್ಟವಾಗಿದೆ. ಜನರಿಂದ ತುಂಬಾ ಪ್ರೀತಿ ಸಿಗುತ್ತಿದೆ" ಎಂದು ದಿಲೀಪ್ ಹೇಳಿದ್ದಾರೆ.

"ನೀನಾದೆನಾ ಧಾರಾವಾಹಿಯೂ ಚೆನ್ನಾಗಿ ಹೋಗುತ್ತಿದೆ. ಅವರು ನನಗೆ ಒಳ್ಳೆ ಫ್ರೆಂಡ್‌. ಹೀಗಿರುವಾಗ ಏನೇ ಗಾಸಿಪ್‌ ಬಂದರೂ ತೊಂದರೆ ಇಲ್ಲ " ಎಂದಿದ್ದಾರೆ. ಯಾಕೆ ರಿಯಲ್‌ ಲೈಫ್‌ನಲ್ಲೂ ಜೋಡಿ ಆಗಬಾರದು? ಎನ್ನುವ ಪ್ರಶ್ನೆಗೆ "ಅದೆಲ್ಲಾ ವಿಧಿ. ಡೆಸ್ಟಿನಿಯಲ್ಲಿ ಏನು ಬರೆದಿರುತ್ತಾರೆ? ಅದೇ ಆಗುವುದು. ನಾವು ಅದಕ್ಕೆ ಉತ್ತರಿಸಲು ಆಗುವುದಿಲ್ಲ. ನೋಡೋಣ, ಡೆಸ್ಟಿನಿ ಏನು ಹೇಳುತ್ತದೆ" ಎಂದು ದಿಲೀಪ್ ನಕ್ಕಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

More from Filmibeat

English summary
Dileep Shetty opens up about dating rumours with Kushi shivu;
Read more about: tv serial sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X