»   » ಬಿಗ್ ಬಾಸ್ ಸೀಕ್ರೆಟ್ ರೂಂನಲ್ಲಿ ನೀತೂ ಏನ್ಮಾಡ್ತಿದ್ದಾರೆ?

ಬಿಗ್ ಬಾಸ್ ಸೀಕ್ರೆಟ್ ರೂಂನಲ್ಲಿ ನೀತೂ ಏನ್ಮಾಡ್ತಿದ್ದಾರೆ?

Posted By:
Subscribe to Filmibeat Kannada

ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಆರು ಮಂದಿ ನಾಮಿನೇಟ್ ಆಗಿದ್ದರು. ಮನೆಯಿಂದ ಯಾರು ಹೊರಬೀಳುತ್ತಾರೆ ಎಂದು ಎಲ್ಲರೂ ಕಾತುರದಿಂದ ವೀಕ್ಷಿಸುತ್ತಿದ್ದರೆ, 'ಬಿಗ್ ಬಾಸ್' ಈ ಬಾರಿ ವೀಕ್ಷಕರಿಗೆ ಹೊಸ ವರಸೆ ತೋರಿದ್ದಾರೆ. ನೀತೂ ಎಲಿಮಿನೇಟ್ ಆಗಿದ್ದರೂ ಮನೆಯಲ್ಲೇ ಉಳಿದಿದ್ದಾರೆ.

ಅಂದರೆ ಅವರಿಗೆ ಸೀಕ್ರೆಟ್ ರೂಂ ಕೊಡಲಾಗಿದೆ. ಅಲ್ಲಿ ಟಿವಿ ಇರುತ್ತದೆ. ಹಾಯಾಗಿ ಮಲಗಲು ಮಂಚ ಇದೆ. ಜೊತೆಗೆ ದೈನಂದಿನ ಕ್ರಿಯೆಗಳಿಗೆ ರೂಮುಗಳಿವೆ. ಮನೆಯ ಸದಸ್ಯರು ಏನೆಲ್ಲಾ ಮಾಡುತ್ತಿದ್ದಾರೆ ಎಂಬುದನ್ನು ಮೌನವಾಗಿ ನೋಡುವ ಹಿಂಸೆ ನೀತೂ ಅವರದು. [ಬಿಗ್ ಬಾಸ್ ಮನೆಯಿಂದ ನೀತೂ ಹೊರಕ್ಕೆ..ಆದರೆ]

Neethu in secret room

ಮನೆಯಲ್ಲಿ ಏನೆಲ್ಲಾ ನಡೆಯುತ್ತಿದೆ, ತನ್ನ ಬಗ್ಗೆ ಏನೆಲ್ಲಾ ಮಾತನಾಡುತ್ತಿದ್ದಾರೆ ಎಂದು ನೀತೂ ನೋಡಬಹುದು. ಆದರೆ ಮನೆಯ ಸದಸ್ಯರು ಮಾತ್ರ ನೀತೂ ಎಲಿಮಿನೇಟ್ ಆಗಿದ್ದಾರೆ ಎಂದೇ ಭಾವಿಸಿದ್ದಾರೆ. ಈಗ ಮನೆಯ ಸದಸ್ಯರ ಮುಖವಾಡ ತೆಗೆಯುವ ಸಮಯ ಬಂದಿದೆ.

ಇನ್ನು ನೀತೂ ಅವರು ಯಾರೊಂದಿಗೂ ಮಾತನಾಡುವಂತಿಲ್ಲ. ಎಲ್ಲವನ್ನೂ ಮೌನವಾಗಿ ನೋಡುತ್ತಾ, ಸಾಧ್ಯವಾದರೆ ನಗುತ್ತಾ, ದುಃಖವಾದರೆ ಒಂದೆರಡು ಹನಿ ಕಣ್ಣೀರು ಹರಿಸುತ್ತಾ ಎಲ್ಲವನ್ನೂ ಸಹಿಸಿಕೊಳ್ಳಬೇಕು. ವೀಕ್ಷಕರು ನೀತೂಗೆ ಇದ್ಯಾವ ಹಿಂಸೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

English summary
Bigg Boss Kannada 2 inmate Neethu held up in secret room. What she is doing there. Bigg Boss has given tv set and head phone to Neethu. What is happening in secret room?
Please Wait while comments are loading...