twitter
    For Quick Alerts
    ALLOW NOTIFICATIONS  
    For Daily Alerts

    ನಮಗೇ ತಿಳಿಯದಂತೆ ಮನೆ-ಮನಸ್ಸುಗಳನ್ನು ಹಾಳು ಮಾಡುತ್ತಿವೆ ಧಾರಾವಾಹಿಗಳು!

    By ಸುಪ್ರೀತ್ ಕೆ ಎನ್
    |

    ಎಂಥ ತಲೆ ಹೋಗುವಂತಹ ಕೆಲಸವಿದ್ದರೂ, ಸರಿಯಾದ ಸಮಯಕ್ಕೆ ಟಿ.ವಿ ಮುಂದೆ ಕೂತು ಧಾರಾವಾಹಿ ನೋಡುವ ಒಂದು ದೊಡ್ಡ ವರ್ಗವೇ ಇದೆ. ಒಂದು ದಿನ ಧಾರಾವಾಹಿ ನೋಡದಿದ್ದರೆ ಏನೋ ಕಳೆದುಕೊಂಡಂತೆ ಆಡುವವರನ್ನು ನಾವು ನೋಡಿರುತ್ತೇವೆ. ಧಾರಾವಾಹಿಗಳು ಅಷ್ಟರ ಮಟ್ಟಿಗೆ ಅವರ ಬದುಕಿನ ಭಾಗವಾಗಿ ಬಿಟ್ಟಿರುತ್ತದೆ. ಆದರೆ ಧಾರಾವಾಹಿಗಳನ್ನು ವಿರೋಧಿಸುವವರ ಸಂಖ್ಯೆಯೂ ಕಮ್ಮಿ ಇಲ್ಲ. ಧಾರಾವಾಹಿಗಳ ಬಗ್ಗೆ ಅಭಿಮಾನ-ವಿರೋಧ ಏನೇ ಇದ್ದರೂ, ಸದ್ಯಕ್ಕೆ ಪ್ರಸಾರವಾಗುತ್ತಿರುವ ಕೆಲವು ಧಾರಾವಾಹಿಗಳು ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತಿರುವುದಂತೂ ಸುಳ್ಳಲ್ಲ.

    ನೀವು ಗಮನಿಸಿ, ಹತ್ತರಲ್ಲಿ ಎಂಟು ಧಾರಾವಾಹಿಗಳಲ್ಲಿರುವುದು ಒಂದೇ ಕತೆ. ಆ ಕತೆಯಲ್ಲಿ ಅತ್ತೆ-ಸೊಸೆ ಜಗಳ ಕಾಮನ್ ಫ್ಯಾಕ್ಟರ್. ವರ್ಷಾನುಗಟ್ಟಲೇ ಒಬ್ಬರ ಮೇಲೊಬ್ಬರು ಪಿತೂರಿ ಮಾಡುತ್ತಲೇ ಇರುತ್ತಾರೆ. ಇದು ನಿಧಾನವಾಗಿ ವೀಕ್ಷಕರ ಮನಸ್ಸನ್ನು ಆವರಿಸುತ್ತದೆ. ಗೃಹಿಣಿಯರೇ ಇವರ ಟಾರ್ಗೆಟ್. ಯಾವ ರೀತಿ ಕತೆ ಹೇಳಬೇಕು, ಪ್ರತಿ ದಿನ ಹೇಗೆ ರೋಚಕ ತಿರುವು ಕೊಡಬೇಕು, ಮರುದಿನದವರೆಗೂ ಹೇಗೆ ಅದೇ ಗುಂಗಿನಲ್ಲಿ ಇರುವಂತೆ ಮಾಡಬೇಕು; ಇವೆಲ್ಲಾ ಧಾರಾವಾಹಿ ನಿರ್ದೇಶಕ-ನಿರ್ಮಾಪಕರಿಗೆ ತಿಳಿದು ಹೋಗಿದೆ. ಆದರೆ ಈ ತಂತ್ರಗಳು ತಮ್ಮನ್ನು ಹಾಳು ಮಾಡುತ್ತಿದೆ ಎಂದು ಬಹುತೇಕ ನೋಡುಗರಿಗೆ ಗೊತ್ತೇ ಆಗಲ್ಲ.

    'ಅಗ್ನಿಸಾಕ್ಷಿ'ಯಿಂದ ಸಿದ್ಧಾರ್ಥ್ ಹೋದ ಬೆನ್ನಲ್ಲೆ ಸನ್ನಿಧಿ ಕೊಡ್ತಾರಾ ಶಾಕ್? 'ಅಗ್ನಿಸಾಕ್ಷಿ'ಯಿಂದ ಸಿದ್ಧಾರ್ಥ್ ಹೋದ ಬೆನ್ನಲ್ಲೆ ಸನ್ನಿಧಿ ಕೊಡ್ತಾರಾ ಶಾಕ್?

    ದೈಹಿಕ ಆರೋಗ್ಯದಂತೆ ಮಾನಸಿಕ ಆರೋಗ್ಯವೂ ಮುಖ್ಯ. ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳಲು ನಾವು ಹೇಗೆ ಒಳ್ಳೆ ಆಹಾರವನ್ನು ಮಾತ್ರ ಸೇವಿಸಿ, ಕೆಟ್ಟದ್ದನ್ನು ತ್ಯಜಿಸತ್ತೀವೊ; ಅದೇ ರೀತಿ ಮನಸ್ಸು ಆರೋಗ್ಯವಾಗಿಡಲು, ನಾವು ಏನು ನೋಡುತ್ತೇವೆ, ಏನು ಓದಿತ್ತೀವಿ ಇವೆಲ್ಲ ಮುಖ್ಯವಾಗುತ್ತದೆ. ನಾವು ನೋಡಿದ್ದು-ಓದಿದ್ದನ್ನು ಜಾಗೃತ ಮನಸ್ಸು ಮರೆತು ಬಿಡಬಹುದು. ಆದರೆ ಸುಪ್ತ ಮನಸ್ಸು ಮರೆಯಲು ಸಾಧ್ಯವೇ ಇಲ್ಲ. ನೆನಪಿರಲಿ : ಜಾಗೃತ ಮನಸ್ಸಿಗಿಂತ ಸುಪ್ತ ಮನಸ್ಸು ಶಕ್ತಿಶಾಲಿ. ಅದಕ್ಕೆ ಒಳ್ಳೆದು ಕೆಟ್ಟದ್ದು ತಿಳಿಯಲ್ಲ. ಅದು ಏನನ್ನೂ ತರ್ಕ ಮಾಡಲ್ಲ. ಸುಮ್ಮನ್ನೆ ಒಪ್ಪಿಕೊಳ್ಳುತ್ತೆ.

    Negative impacts of tv serials

    ನಿಮಗೆ ಸುಪ್ತ ಮನಸ್ಸಿನ ಶಕ್ತಿಗೊತ್ತಾಗಬೇಕೆಂದರೆ ಒಂದು ಉದಾಹರಣೆ ಕೊಡಬೇಕು : ನೀವು ಆಫೀಸು ಮುಗಿಸಿಕೊಂಡು ಗಾಡಿಯಲ್ಲಿ ಮನೆಗೆ ಹೋಗುವಾಗ ಒಮ್ಮೊಮ್ಮೆ ಏನೋ ಯೋಚಿಸಿಕೊಂಡು ಗಾಡಿ ಓಡಿಸುವುದರ ಕಡೆ ನಿಮ್ಮ ಗಮನವೇ ಕೊಟ್ಟಿರಲ್ಲ. ಆದರೂ ಮನೆ ಸೇರಿರುತ್ತೀರಿ. ಅದೇ ಹೇಗೆ ಸಾಧ್ಯವೆಂದರೆ, ನಿಮ್ಮ ಸುಪ್ತ ಮನಸ್ಸಿಗೆ ನಿಮ್ಮ ಮನೆಯ ದಾರಿ ಗೊತ್ತಿದೆ. ನಿಮ್ಮ ಜಾಗೃತ ಮನಸ್ಸು ಏನೋ ಯೋಚಿಸುತ್ತಿದ್ದರೂ, ನಿಮ್ಮ ಸುಪ್ತ ಮನಸ್ಸು ನಿಮ್ಮನ್ನು ಮನೆ ತಲುಪಿಸಿರುತ್ತದೆ. ಇದು ಸುಪ್ತ ಮನಸ್ಸಿನ ಶಕ್ತಿ.

    ಹೊಸ ಧಾರಾವಾಹಿಯೊಂದಿಗೆ ಮತ್ತೆ ಬರ್ತಿದ್ದಾರೆ 'ಅಗ್ನಿಸಾಕ್ಷಿ' ಖ್ಯಾತಿಯ ವಿಜಯ್ ಸೂರ್ಯಹೊಸ ಧಾರಾವಾಹಿಯೊಂದಿಗೆ ಮತ್ತೆ ಬರ್ತಿದ್ದಾರೆ 'ಅಗ್ನಿಸಾಕ್ಷಿ' ಖ್ಯಾತಿಯ ವಿಜಯ್ ಸೂರ್ಯ

    Negative impacts of tv serials

    ಸಂಜೆ ಆರು ಗಂಟೆಯಿಂದ ಒಂದೇ ಸಮ ಧಾರಾವಾಹಿಗಳನ್ನು ನೋಡುವಾಗ, ಅವೆಲ್ಲ ನಮ್ಮ ಸುಪ್ತ ಮನಸ್ಸಿನಲ್ಲಿ 'ಸ್ಟೋರ್' ಆಗುತ್ತಿರುತ್ತದೆ. ಇದು ಒಂದೆರಡು ದಿನದಲ್ಲಿ ಮುಗಿಯುವುದಲ್ಲ. ವರ್ಷಾನೂ ಗಟ್ಟಲೇ ಅದೇ ಮುಂದುವರೆಯುತ್ತದೆ. ಕ್ರಮೇಣ ನಮಗೆ ತಿಳಿಯದಂತೆ ನಮ್ಮ ಮನಸ್ಸು ದುರ್ಬಲವಾಗುತ್ತ ಹೋಗುತ್ತದೆ. ಯಾವುದರಲ್ಲೂ ಆಸಕ್ತಿ ಇರುವುದಿಲ್ಲ. ಕ್ರಿಯಾಶೀಲತೆಗೆ ಏಟು ಬೀಳುತ್ತದೆ. ನಮ್ಮ ಬದುಕಿನ ತುಂಬ ಧಾರಾವಾಹಿಯ ಪಾತ್ರಗಳೇ ಆವರಿಸಿದಾಗ, ನಮ್ಮ ಮನೆ-ಮನೆಯಲ್ಲಿರುವ ಜನ ದೈಹಿಕವಾಗಿ ಹತ್ತಿರವಿದ್ದರೂ, ಮಾನಸ್ಸು ಅವರಿಗೆ ಹತ್ತಿರವಾಗಲ್ಲ.

    ಆಸ್ಟ್ರೇಲಿಯಾಗೆ ಹೋದ ಸಿದ್ದಾರ್ಥ್ : ಪತಿ ಇಲ್ಲದೆ ಒಂಟಿಯಾದ ಸನ್ನಿಧಿಆಸ್ಟ್ರೇಲಿಯಾಗೆ ಹೋದ ಸಿದ್ದಾರ್ಥ್ : ಪತಿ ಇಲ್ಲದೆ ಒಂಟಿಯಾದ ಸನ್ನಿಧಿ

    Negative impacts of tv serials

    'ಹಾಗಾದರೆ ಸಿನಿಮಾ ನಮ್ಮ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರೋಲ್ವಾ?' ಎಂದು ಕೆಲವರು ಪ್ರಶ್ನಿಸಬಹುದು. ಖಂಡಿತಾ ದುಷ್ಪರಿಣಾಮ ಬೀರುತ್ತೆ. ಆದರೆ ಅದರ ಪ್ರಭಾವ ಕಡಿಮೆ. ಸಿನಿಮಾ ಎರಡು ಗಂಟೆಗಳೊಳಗೆ ಮುಗಿದು ಹೋಗುತ್ತೆ. ಆದರೆ ಧಾರಾವಾಹಿ ಹಾಗಲ್ಲ. ಸುಮಾರು ವರ್ಷ ನಡೆಯುತ್ತೆ. ಪ್ರತಿ ದಿನವೂ ನೋಡುಗನಿಗೆ ನಾಳೆ ಏನುತ್ತೆ? ಎಂಬ ಕುತೂಹಲ ಇರುವಂತೆ ಮಾಡುತ್ತೆ. ಆದ್ದರಿಂದ ಸಿನಿಮಾಗಿಂತ ಧಾರಾವಾಹಿ ಮನಸ್ಸಿನ ಮೇಲೆ ಹೆಚ್ಚು ದುಷ್ಪರಿಣಾಮ ಬೀರುತ್ತೆ.

    ಹಾಗಂತ ಧಾರಾವಾಹಿಗಳನ್ನು ನೋಡೋದೆ ತಪ್ಪು ಎಂದು ಹೇಳುವುದು ಸರಿಯಲ್ಲ. ದೇಹಕ್ಕೆ ಒಳ್ಳೆ ಆಹಾರ ಸೇವಿಸುವಂತೆ, ಮನಸ್ಸನ್ನು ಖುಷಿಯಾಗಿಡುವಂತಹ ಒಳ್ಳೆ ಧಾರಾವಾಹಿಗಳನ್ನು ನೋಡಬೇಕು.

    English summary
    Here is an article on how serials impacts negatively on human mind.
    Wednesday, June 19, 2019, 17:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X