ಬ್ಲಾಕ್ ಡ್ರೆಸ್‌ನಲ್ಲಿ ಮಿಂಚಿದ ಗೊಂಬೆ ದಂಪತಿ: ಹೇಗಿವೆ ಫೋಟೊಗಳು?
ನೇಹಾ ಗೌಡ ಎಲ್ಲರಿಗೂ ಗೊಂಬೆ ಎಂದೇ ಪರಿಚಯ. 'ಲಕ್ಷ್ಮಿ ಬಾರಮ್ಮ' ಧಾರವಾಹಿಯಲ್ಲಿ ಗೊಂಬೆ ಆಲಿಯಾಸ್ ಶೃತಿಯಾಗಿ ಅಭಿನಯಿಸುವ ಮೂಲಕ ಕಿರುತೆರೆ ಕ್ಷೇತ್ರಕ್ಕೆ ಕಾಲಿಟ್ಟರು ನಟಿ ನೇಹಾ ಗೌಡ. ಬರೋಬ್ಬರಿ ಆರು ಏಳು ವರ್ಷಗಳ ಕಾಲ ಶೃತಿಯ ಪಾತ್ರದ ಮೂಲಕ ಕಿರುತೆರೆ ವೀಕ್ಷಕರನ್ನು ಈಕೆ ರಂಜಿಸಿದ್ದರು. ತದ ನಂತರ ಒಂದೆರಡು ಧಾರಾವಾಹಿಗಳಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡ ಈಕೆ ರಿಯಾಲಿಟಿ ಶೋಗಳಲ್ಲಿಯೂ ಮೋಡಿ ಮಾಡಿದ್ದಾರೆ.
ಈಗ ಜಾಜಿಯಾಗಿ ಪ್ರೇಕ್ಷಕರನ್ನು ರಂಜಿಸುತ್ತಿರುವ ನೇಹಾ ಗೌಡ ನಟನೆಯ ಹೊರತಾಗಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಬಿಡುವು ಸಿಕ್ಕಾಗಲೆಲ್ಲಾ ಫೋಟೋಗಳನ್ನು, ವಿಡಿಯೋಗಳನ್ನು ಅಪ್ ಲೋಡ್ ಮಾಡುವ ಮೂಲಕ ತಮ್ಮ ಫಾಲೋವರ್ಸ್ ಅನ್ನು ನಟಿ ನೇಹಾ ಗೌಡ ರಂಜಿಸುತ್ತಿದ್ದಾರೆ. ಇನ್ನು ಇತ್ತೀಚೆಗಷ್ಟೇ ತಮ್ಮ ಪತಿ ಚಂದನ್ ಅವರೆೊಂದಿಗೆ ನಟಿ ನೇಹಾ ಗೌಡ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

ಹೌದು, ನೇಹಾ ಹಾಗೂ ಚಂದನ್ ಇಬ್ಬರೂ ಬ್ಲಾಕ್ ಡ್ರೆಸ್ ಧರಿಸಿರುವ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಪೋಸ್ಟ್‌ಗೆ 124 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಮಾತ್ರವಲ್ಲದೇ ಈ ಪೋಸ್ಟ್‌ಗೆ ಕಾಂಪ್ಲಿಮೆಂಟ್ಸ್ ಸುರಿಮಳೆ ಸುರಿದಿದ್ದು ಜನರು ಈ ಜೋಡಿಯನ್ನು "ಕ್ಯೂಟ್","ಮಸ್ತ್", "ಸೂಪರ್ ಜೋಡಿ" ಎಂದೆಲ್ಲ ಹಾಡಿ ಹೊಗಳಿದ್ದಾರೆ.
ಅಂದಹಾಗೆ, ನೇಹಾ ಗೌಡ ಅವರು ತಮ್ಮ ಬಾಲ್ಯದ ಗೆಳೆಯ ಚಂದನ್ ಅವರನ್ನು ವರಿಸಿದ್ದು, ಸುಖಿ ಸಂಸಾರ ಅವರದ್ದಾಗಿದೆ. ಚಂದನ್ ವಿದೇಶದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಗೆಳತಿ ನೇಹಾ ಗೌಡ ಅವರಿಗೋಸ್ಕರ ತಮ್ಮ ಕೆಲಸವನ್ನು ಬಿಟ್ಟು ಭಾರತದಲ್ಲಿ ನೆಲೆಸಿದ್ದಾರೆ. ಅಷ್ಟೇ ಅಲ್ಲದೆ ಈ ದಂಪತಿಗಳು 'ರಾಜಾರಾಣಿ' ಎಂಬ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಮೊದಲ ಬಾರಿಗೆ ಕಿರುತೆರೆಯಲ್ಲಿ ಭಾಗವಹಿಸಿದ್ದ ಈ ಜೋಡಿ ಚೆನ್ನಾಗಿ ಪರ್ಫಾರ್ಮ್ ಮಾಡಿ ರಾಜ ರಾಣಿ ರಿಯಾಲಿಟಿ ಶೋ ಗೆದ್ದರು.
ಚಂದನ್ ಗೌಡ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ಗಿಚ್ಚಿ ಗಿಲಿಗಿಲಿ' ಶೋನಲ್ಲಿ ಕಾಣಿಸಿಕೊಂಡರೆ, ನೇಹಾ ಗೌಡ ಅವರು ಬಿಗ್ ಬಾಸ್ ಸ್ಪರ್ಧಿಯಾಗಿ ಮೋಡಿ ಮಾಡಿದ್ದರು. ನಂತರ ನೇಹಾ 'ನಮ್ಮ ಲಚ್ಚಿ' ಧಾರಾವಾಹಿಯಲ್ಲಿ ಗಿರಿಜಾ ಆಲಿಯಾಸ್ ಜಾಜಿಯಾಗಿ ನಟಿಸುತ್ತಿದ್ದರೆ, ಅವರ ಪತಿ ನೇಹಾ ಗೌಡ ಅವರ ಪತಿ ಚಂದನ್ ಅವರು ಕಿರುತೆರೆಗೆ ಕಾಲಿಟ್ಟಿದ್ದಾರೆ.
ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅಂತರಪಟ' ಧಾರಾವಾಹಿಯಲ್ಲಿ ನಾಯಕ ನಟ ಸುಶಾಂತ್ ಪ್ರಧಾನ್ ಪಾತ್ರದಲ್ಲಿ ಚಂದನ್ ಗೌಡ ನಟಿಸುತ್ತಿದ್ದಾರೆ. ಮೊದಲ ಧಾರಾವಾಹಿಯಲ್ಲಿಯೇ ನಾಯಕನಾಗಿ ನಟಿಸುವ ಅವಕಾಶ ಪಡೆದುಕೊಂಡಿರುವ ಚಂದನ್ ಅವರ ನಟನೆಗೂ ಪ್ರೇಕ್ಷಕರು ಖುಷಿಯಾಗಿದ್ದಾರೆ.
ಅಷ್ಟೇ ಅಲ್ಲದೆ ಚಂದನ್ ಗೌಡ ಒಂದು ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಆ ಮೂಲಕ ತಾನು ಡ್ಯಾನ್ಸಿಗೂ ಸೈ ಎಂದು ಸಾಬೀತು ಮಾಡಿದ್ದಾರೆ. ಸದ್ಯ ಇವರ ಫೋಟೊಶೂಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.


Click it and Unblock the Notifications











