Neha Gowda: ಸಿಹಿ ಸುದ್ದಿ ಕೊಟ್ಟ ನೇಹಾ ಗೌಡ: ಮನೆಗೆ ಹೊಸ ಅತಿಥಿಯ ನಿರೀಕ್ಷೆಯಲ್ಲಿ ಕ್ಯೂಟ್ ಜೋಡಿ

By ಎಸ್ ಸುಮಂತ್

'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಮೂಲಕ ಸಾಕಷ್ಟು ಖ್ಯಾತಿ ಪಡೆದಿದ್ದ ನೇಹಾ ಗೌಡ ಎಲ್ಲರ ಮನಸ್ಸಲ್ಲೂ ಗೊಂಬೆಯಾಗಿಯೇ ಸ್ಥಾನ ಪಡೆದರು. ಆ ಖ್ಯಾತಿಯ ನಡುವೆಯೇ 2018ರಲ್ಲಿ ಚಂದನ್ ಗೌಡ ಜೊತೆಗೆ ಮದುವೆಯಾದರು. ಸೀರಿಯಲ್ ಜೊತೆ ಜೊತೆಗೆ ವೈಯಕ್ತಿಕ ಬದುಕಿಗೂ ಹೆಚ್ಚು ಸಮಯ ಕೊಡುತ್ತಿದ್ದರು. ಕುಟುಂಬದವರ ಜೊತೆಗೂ ಎಂಜಾಯ್ ಮಾಡುತ್ತಿದ್ದರು. ಇದೀಗ ಆರು ವರ್ಷಗಳ ಬಳಿಕ ಸಿಹಿ ಸುದ್ದಿ ನೀಡಿದ್ದಾರೆ.

ನೇಹಾ ಗೌಡ ಅಮ್ಮ ಆಗ್ತಾ ಇದ್ದು ಚಂದನ್ ಗೌಡ ತಂದೆಯಾಗ್ತಿದ್ದಾರೆ. ಈ ಸುದ್ದಿ ಎರಡು ಕುಟುಂಬಕ್ಕೆ ಸಂತಸ ತಂದಿದೆ, ಸಂಭ್ರಮಿಸಿದ್ದಾರೆ. ನೇಹಾ ಹಾಗೂ ಚಂದನ್ ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ. ಇತ್ತಿಚೆಗೆ ಸಂಬಂಧಿಕರ ಮಗುವಿನ ಬರ್ತ್ ಡೇ ಆಚರಣೆ ಮಾಡಿ, ಆ ಫೋಟೋಗಳನ್ನು ಹಂಚಿಕೊಂಡಿದ್ದ ನೇಹಾ ಗೌಡಗೆ, ಇದು ನಿಮ್ಮದೇ ಮಗುನಾ ಎಂಬ ಕಮೆಂಟ್ ಗಳು ಸಹ ಬಂದಿದ್ದವು.

Neha gowda shared and Chandan Gowda announce pregnancy both shared pic of baby s ultrasound scan

ಅಪ್ಪ-ಅಮ್ಮ ಆಗುತ್ತಿರುವ ಬಗ್ಗೆ ಪೋಸ್ಟರ್

ನೇಹಾ ಗೌಡ ಈಗ ತಾಯಿಯಾಗುತ್ತಿರುವ ವಿಚಾರವನ್ನು ಸೋಷಿಯಲ್ ಮೀಡಿಯಾ ಮೂಲಕ ಹೇಳಿದ್ದಾರೆ. ಸ್ಕ್ಯಾನ್ ಮಾಡಿಸಿರುವ ಫೋಟೋ ಜೊತೆಗೆ ಗಂಡ-ಹೆಂಡತಿ ಫೋಟೋಶೂಟ್ ಮಾಡಿಸಿದ್ದಾರೆ. ಆ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ನಮ್ಮ ಕುಟುಂಬ ಹಿರಿದಾಗುತ್ತಿದೆ. ಈಗ ಇಬ್ಬರಲ್ಲ ಮೂವರು ಎಂದು ಕ್ಯಾಪ್ಶನ್ ಕೊಟ್ಟು ಫೋಟೋ ಹಾಕಿದ್ದಾರೆ.

ಸಹ ಕಲಾವಿದರ ಶುಭ ಹಾರೈಕೆ

ಈ ರೀತಿಯ ಪೋಸ್ಟ್‌ಗಳನ್ನು ಹಾಕಿದರೆ ಅಭಿಮಾನಿಗಳ ಸಾವಿರಾರು ಕಮೆಂಟ್ಸ್ ಬರುತ್ತವೆ. ಆದರೆ ನೇಹಾ ಪೋಸ್ಟ್‌ಗೆ ತುಂಬಿರುವುದೆಲ್ಲಾ ನಟ-ನಟಿಯರ ಕಮೆಂಟ್‌ಗಳೇ. ಈ ಕಮೆಂಟ್‌ಗಳು ನೇಹಾ ಹಾಗೂ ಸಹ ಕಲಾವಿದರ ಜೊತೆಗಿನ ಬಾಂಧವ್ಯವನ್ನು ತೋರುತ್ತದೆ. ನೇಹಾ ತಾಯಿಯಾಗುತ್ತಿರುವುದು ಅವರ ಸುತ್ತಲಿನ ಬಳಗಕ್ಕೂ ಸಿಕ್ಕಾಪಟ್ಟೆ ಖುಷಿಯಾಗಿರುವುದನ್ನು ತೋರಿಸುತ್ತಿದೆ.

ಎಲ್ಲರ ಜೊತೆಗೂ ಖುಷಿಯಾಗಿರುವ ನೇಹಾ

ನೇಹಾ ಗೌಡ ವಿಡಿಯೋಗಳನ್ನು ನೋಡಿದರೆ ಅವರ ವ್ಯಕ್ತಿತ್ವ ಬೇಗ ಗೊತ್ತಾಗುತ್ತದೆ. ಎಲ್ಲರ ಜೊತೆಗೂ ನಗು ನಗುತ್ತಾ ಇರುವ, ನಗಿಸುತ್ತಾ ಇರುವ ವ್ಯಕ್ತಿತ್ವ ಅವರದ್ದು. ಅವರ ಸ್ನೇಹಿತರು ಹಂಚಿಕೊಳ್ಳುವ ವಿಡಿಯೋದಲ್ಲೂ ಜಾಲಿಯಾಗಿರುವುದು ಗೊತ್ತಾಗಿ ಬಿಡುತ್ತದೆ. ಹೀಗಾಗಿ ಸ್ನೇಹಿತರ ಬಳಗ ಜಾಸ್ತಿ. ನೇಹಾ ಹಾರೈಕೆ ಮಾಡುವ ಜನರು ಜಾಸ್ತಿ. ನಟ-ನಟಿಯರ ಜೊತೆಗೆ ಅಭಿಮಾನಿಗಳು ಕೂಡ ವಿಶ್ ಮಾಡಿದ್ದಾರೆ. ಅದಿತಿ ಪ್ರಭುದೇವ ಕೂಡ ವಿಶ್ ಮಾಡಿದ್ದು, ಈ ದಿನಗಳನ್ನ ಎಂಜಾಯ್ ಮಾಡುವಂತೆ ಸೂಚಿಸಿದ್ದಾರೆ.

ನಟನೆಯಿಂದ ನೇಹಾ ವಿರಾಮ

ಇನ್ನು ನೇಹಾ ಗೌಡ ಇತ್ತೀಚೆಗೆ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. 'ನಮ್ಮ ಲಚ್ಚಿ' ಧಾರಾವಾಹಿಯಲ್ಲಿ ಗಿರಿಜಾ ಪಾತ್ರದ ಮೂಲಕ ಎಲ್ಲರ ಮನಸ್ಸಲ್ಲೂ ವಿಶೇಷ ಸ್ಥಾನವನ್ನು ಪಡೆದಿದ್ದರು. ಅದಾದ ಬಳಿಕ ಬ್ರೇಕ್ ತೆಗೆದುಕೊಂಡಿದ್ದರು. ನೇಹಾ ಪತಿ ಚಂದನ್ ಗೌಡ ಸದ್ಯ 'ಅಂತರಪಟ' ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದಾರೆ. ನೇಹಾ ಗೌಡ ತಾಯಿಯಾಗುತ್ತಿದ್ದು, ಈ ದಿನಗಳನ್ನು ಸಂಭ್ರಮಿಸಲು ರೆಡಿಯಾಗಿದ್ದಾರೆ. ನೇಹಾ ತಾಯಿಯಾಗುತ್ತಿರುವ ವಿಚಾರ, ಮನೆಗೊಂದು ಪುಟ್ಟ ಮಗು ಬರುತ್ತಿರುವ ನಿರೀಕ್ಷೆ ಎರಡು ಕುಟುಂಬದಲ್ಲೂ ಸಂಭ್ರಮವನ್ನು ಹೆಚ್ಚು ಮಾಡಿದೆ. ಬಾಲ್ಯದಿಂದಲೇ ನೇಹಾ- ಚಂದು ಪ್ರೀತಿಸಿ ಮದುವೆ ಆದವರು. ಉದ್ಯಮಿ ಆಗಿದ್ದ ಚಂದನ್ ನೇಹಾ ಕೈ ಹಿಡಿದ ಮೇಲೆ ಕಿರುತೆರೆ ಪ್ರವೇಶಿಸುವಂತಾಯಿತು.

More from Filmibeat

English summary
Neha shared and Chandan Gowda Kapoor Are Expecting Their First Child;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X