ಬಾತ್‌ರೂಮ್‌ನಲ್ಲಿ ರಹಸ್ಯ ಕ್ಯಾಮರಾ, ವಿಡಿಯೋ ಲೀಕ್ ; ರಿಯಾಲಿಟಿ ಶೋದ ಕರಾಳ ಮುಖ ಬಿಚ್ಚಿಟ್ಟ ಖ್ಯಾತ ನಟಿ

ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಮನರಂಜನೆಗೆ ಒಂದು ಗೆರೆ ಇರುತ್ತಿತ್ತು. ಇತಿ ಮಿತಿ ಇರುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಮನರಂಜನೆಯ ವ್ಯಾಖ್ಯಾನ ಬದಲಾಗಿದೆ. ಮೊದಲಾಗಿದ್ದರೆ ಖ್ಯಾತಿಯ ಶಿಖರಕ್ಕೇರಲು ಕೇವಲ ಪ್ರತಿಭೆ ಮಾತ್ರ ಮಾನದಂಡವಾಗಿತ್ತು.

ಆದರೆ ಇಂದು ಹಾಗಲ್ಲ. ಬೆಳ್ಳಿತೆರೆ .. ಕಿರುತೆರೆಯಲ್ಲಿ ಮಿಂಚಬೇಕೆಂದರೆ ಪ್ರತಿಭೆ ಇರಲಿ ಇಲ್ಲದಿರಲಿ ಗ್ಲ್ಯಾಮರ್ ಇರಬೇಕು ಎನ್ನುವ ಅಲಿಖಿತ ನಿಯಮ ಜಾರಿಯಲ್ಲಿದೆ. ಸೆರಗು ಜಾರಿಸೋದು.. ಮೈ ತಿಕ್ಕುವುದು.. ಮುಂತಾದ ಸವಕಲೆದ್ದ ಅಸಹ್ಯದ ಸರಕುಗಳನ್ನೇ ಇಂದು ಮನರಂಜನೆಯ ಹೆಸರಿನಲ್ಲಿ ಹಂಚಲಾಗುತ್ತಿದೆ.

Nehal Vadoliya Exposes Sickening Privacy Breach and Video Leak on House Arrest

ಕೆಲವೊಂದು ಸಾರಿ ಇಂತಹ ಅಸಭ್ಯ ಮತ್ತು ಅಶ್ಲೀಲ ಕಾರ್ಯಕ್ರಮ, ಸಿನಿಮಾ ಮತ್ತು ಧಾರಾವಾಹಿಗಳನ್ನು ವಿಧಿಯಿಲ್ಲದೆ ಮನೆ ಮಂದಿ ಜೊತೆ ಕುಳಿತು ನೋಡುವ ಸಂದರ್ಭ ಒದಗಿ ಬಿಡುತ್ತೆ. ಆಗ ಮನರಂಜನಾ ಕ್ಷೇತ್ರ ಸಮಾಜಕ್ಕೆ ಎಂತಹ ಮೆಸೇಜ್ ಕೊಡುತ್ತಿದೆ ಎಂಬ ಪ್ರಶ್ನೆ ಎದ್ದೇಳುತ್ತೆ. ಇದಕ್ಕೆ ಇನ್ನೊಂದು ಉದಾಹರಣೆ ಎಂಬಂತೆ ಇದ್ದ ಕಾರ್ಯಕ್ರಮ ''ಹೌಸ್ ಅರೆಸ್ಟ್''. ಕಳೆದ ವರ್ಷ ಉಲ್ಲು ಆಪ್‌ನಲ್ಲಿ ಪ್ರಸಾರವಾಗಿದ್ದ ಈ ಕಾರ್ಯಕ್ರಮ ಅಶ್ಲೀಲತೆಯ ಎಲ್ಲೆ ಮೀರಿತ್ತು.

ವಿವಾದ ಭುಗಿಲೆದ್ದ ಹಿನ್ನೆಲೆ ಈ ಅಸಹ್ಯವಾದ ಕಾರ್ಯಕ್ರಮವನ್ನು ಬ್ಯಾನ್ ಮಾಡಲಾಗಿತ್ತು. ಸದ್ಯ ಈ ಕಾರ್ಯಕ್ರಮದ ಕುರಿತು ಇನ್ನೊಂದು ಆಘಾತಕಾರಿ ವಿಚಾರವನ್ನು ನೇಹಲ್ ವಡೋಲಿಯಾ ಹಂಚಿಕೊಂಡಿದ್ದು ಬಾತ್‌ರೂಮ್‌ನಲ್ಲಿ ಕೂಡ ಕಾರ್ಯಕ್ರಮದ ಆಯೋಜಕರು ಕ್ಯಾಮರಾ ಇರಿಸಿದ್ದರು ಎಂದಿದ್ದಾರೆ.

ಹೌದು, ನೇಹಲ್ ವಡೋಲಿಯಾ.. ''ತಾರಕ್ ಮೆಹ್ತಾ ಕಾ ಊಲ್ತಾ ಚಷ್ಮಾ'' ಧಾರಾವಾಹಿಯ ಮೂಲಕ ಮನೆ ಮಾತಾದ ಚೆಲುವೆ. ಅಭಿನಯಕ್ಕಿಂತ ತಮ್ಮ ದೇಹಸಿರಿಯನ್ನೇ ಬೆಳೆಯಲು ಬಂಡವಾಳವನ್ನಾಗಿಸಿಕೊಂಡ ಚೆಲುವೆ ಇವರು. ಇದಕ್ಕೆ ''ಗಂದಿ ಬಾತ್ 3''.. ''ಮಸ್ತ್‌ರಾಮ್''.. ''ಜೂಲಿ''.. ''ವುಡ್‌ಪೆಕ್ಕರ್'' ಮತ್ತು ''ರಸೀಲೇ ಪಡೋಸನ್'' ನಂತಹ ಬೋಲ್ಡ್ & ಹಾಟ್ ವೆಬ್ ಸೀರೀಸ್‌ ಉದಾಹರಣೆ.

ಇಂಥಾ ನೇಹಲ್ ವಡೋಲಿಯಾ ''ಹೌಸ್ ಅರೆಸ್ಟ್'' ರಿಯಾಲಿಟಿ ಶೋನಲ್ಲಿ ಕೂಡ ಕಾಣಿಸಿಕೊಂಡಿದ್ದರು. ಇದೀಗ ತಮ್ಮ ಆ ಅನುಭವವನ್ನು ಇವರು ಹಂಚಿಕೊಂಡಿದ್ಧಾರೆ. ಕೆಲ ಸ್ಪೋಟಕ ಸಂಗತಿ ಬಹಿರಂಗಪಡಿಸಿದ್ಧಾರೆ. ಈ ಕುರಿತು ''ಸುನೋ ಇಂಡಿಯಾ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ನೇಹಲ್,ನಾನು ಶೋನಲ್ಲಿ ಕೇವಲ ಐದು ದಿನ ಮಾತ್ರ ಭಾಗವಹಿಸಿದ್ದೆ ಎಂದು ಹೇಳಿದ್ದಾರೆ.

nehal-vadoliya-exposes-sickening-privacy-breach-and-video-leak-on-house-arrest

''ಹೌಸ್ ಅರೆಸ್ಟ್'' ಕಾರ್ಯಕ್ರಮದಲ್ಲಿ ಚಿತ್ರ ವಿಚಿತ್ರ ಟಾಸ್ಕ್‌ಗಳಿದ್ದವು ಎಂದು ಹೇಳಿರುವ ನೇಹಲ್, ಈ ಶೋನಲ್ಲಿ ಸ್ಪರ್ಧಿಗಳಿಗೆ ಬಲವಂತವಾಗಿ ಅತ್ಯಂತ ಅಶ್ಲೀಲ ಮತ್ತು ಲೈಂಗಿಕ ಪ್ರಚೋದಕ ಟಾಸ್ಕ್‌ಗಳನ್ನು ನೀಡಲಾಗುತ್ತಿತ್ತು ಎಂದು ಹೇಳಿದ್ದಾರೆ.

ತಮ್ಮ ಈ ಮಾತುಗಳಿಗೆ ಟಾಸ್ಕ್‌ವೊಂದನ್ನು ಉದಾಹರಣೆಯನ್ನಾಗಿ ಕೂಡ ನೀಡಿರುವ ನೇಹಲ್, ಕಣ್ಣಿಗೆ ಬಟ್ಟೆ ಕಟ್ಟಿ, ಕೈಗೆ ಬೇಡಿ ಹಾಕಲಾಗಿದ್ದ ಪುರುಷ ಸ್ಪರ್ಧಿಯ ಮುಂದೆ ಮಹಿಳಾ ಸ್ಪರ್ಧಿಗಳು ಸರದಿಯ ಪ್ರಕಾರ ಬಂದು ಕಿಸ್ ಮಾಡಬೇಕಿತ್ತು, ಆ ನಂತರ ಯಾರು ಚುಂಬಿಸಿದರು ಎಂಬುದನ್ನು ಆತ ಗುರುತಿಸಬೇಕಿತ್ತು ಎಂದು ಹೇಳಿದ್ದಾರೆ.

ನೀವು ನಿಮ್ಮ ಅಂಗೈನಲ್ಲಿ ನೋಡಿದ್ದು ಕೇವಲ ಶೇ. 10 ರಷ್ಟು ಮಾತ್ರ, ಆದರೆ ತೆರೆಮರೆಯಲ್ಲಿ ಹೊದಿಕೆಯೊಳಗೆ ಯಾರು ಯಾರನ್ನು ಬೇಕಾದರೂ ಚುಂಬಿಸುವಂತಹ ಅತಿರೇಕದ ಟಾಸ್ಕ್‌ಗಳು ಆ ಕಾರ್ಯಕ್ರಮದಲ್ಲಿದ್ದವು ಎಂದು ಹೇಳಿರುವ ನೇಹಲ್, ಟಾಸ್ಕ್‌ವೊಂದರಲ್ಲಿ ನಾನು ಗೆದ್ದ ನಂತರವೂ ಆ ಕಾರ್ಯಕ್ರಮದ ನಿರ್ಮಾಪಕರು ನನ್ನ ಬದಲು ಬೇರೊಬ್ಬಳನ್ನು ವಿಜೇತೆ ಎಂದು ಘೋಷಿಸಿದ್ದರು, ಇದರಿಂದ ನನಗೆ ತೀವೃ ಆಘಾತವಾಗಿತ್ತು ಎಂದಿದ್ದಾರೆ.

ತಮಗಾದ ಈ ಅನ್ಯಾಯದ ಕುರಿತು ಪ್ರಶ್ನೆ ಮಾಡಿದಾಗ ನನ್ನ ವಿರುದ್ಧವೇ ಕೂಗಾಡಿದರು ಎಂದು ನೆನಪು ಮಾಡಿಕೊಂಡಿರುವ ನೇಹಲ್, ನಿಮಗಾಗಿ ಇಡೀ ರಾತ್ರಿ ಶೂಟಿಂಗ್ ಮಾಡಬೇಕೇ? ಎಂದು ಕೀಳಾಗಿ ಮಾತನಾಡಿದರು ಎಂದು ಹೇಳಿದ್ಧಾರೆ. ಹೀಗಾಗಿಯೇ ನಾನು ಕಾರ್ಯಕ್ರಮವನ್ನು ಮಧ್ಯದಲ್ಲೇ ಬಿಟ್ಟು ಹೊರನಡೆದೆ, ಆ ನಂತರ ಪೊಲೀಸ್‌ರಿಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದೆ ಎಂದು ಹೇಳಿರುವ ನೇಹಲ್, ಪೊಲೀಸ್ ದೂರಿನ ವಿಷಯ ತಿಳಿದ ನಿರ್ಮಾಪಕರು, ಮಾತುಕತೆ ನಡೆಸಿ ವಿವಾದಕ್ಕೆ ಫುಲ್ ಸ್ಟಾಪ್ ಹಾಕಿದರು ಎಂದು ಹೇಳಿದ್ಧಾರೆ.

ಇದೇ ಸಮಯದಲ್ಲಿ ಬಾತ್ ರೂಮ್ ರಹಸ್ಯವನ್ನು ಕೂಡ ಹಂಚಿಕೊಂಡಿರುವ ನೇಹಲ್, ಆ ಕಾರ್ಯಕ್ರಮದ ಆಯೋಜಕರಿಗೆ ನೈತಿಕತೆ ಎನ್ನುವುದೇ ಇರಲಿಲ್ಲ ಎಂದು ಹೇಳಿದ್ಧಾರೆ. ಬಾತ್‌ರೂಮ್‌ನಲ್ಲಿ ಕಮೋಡ್‌ನಲ್ಲಿ ರಹಸ್ಯ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು ಎಂದು ಹೇಳಿರುವ ನೇಹಲ್, ಸ್ಫರ್ಧಿಗಳ ದೇಹವನ್ನು ಈ ಕ್ಯಾಮರಾ ಮೂಲಕ ಕದ್ದು ನೋಡಲಾಗುತ್ತಿತ್ತು ಎಂದು ಹೇಳಿದ್ಧಾರೆ.

ಪುರುಷ ಸ್ಫರ್ಧಿಯೊಬ್ಬರು ಸ್ನಾನ ಮಾಡುತ್ತಿದ್ದ ವಿಡಿಯೋ ಕೂಡ ಲೀಕ್ ಆಗಿತ್ತು ಎಂದು ಹೇಳಿರುವ ನೇಹಲ್ ಆ ಕಾರ್ಯಕ್ರಮದ ನಿರ್ಮಾಪಕರಿಗೆ ಕಮೋಡ್‌ನಲ್ಲಿ ಹಿಡನ್ ಕ್ಯಾಮರಾ ಇಡುವ ಅವಶ್ಯಕತೆಯಾದರೂ ಏನಿತ್ತು ಎನ್ನುವುದು ನನಗೆ ಈಗಲೂ ಅರ್ಥವಾಗಿಲ್ಲ, ಈ ಕಾರ್ಯಕ್ರಮದ ಮೂಲಕ ನಾನು ನೀವು ನಿಖರವಾಗಿ ಏನನ್ನ ನೋಡಲು ಬಯಸಿದ್ದೀರಿ ಎಂದು ಕೇಳಲು ಬಯಸುತ್ತೇನೆ ಎಂದಿದ್ದಾರೆ. ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.

ಸದ್ಯ ನೇಹಲ್ ಆಡಿದ ಈ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ. ಮನರಂಜನಾ ಜಗತ್ತಿನಲ್ಲಿ ನಟಿಯರಿಗೆ, ವಿಶೇಷವಾಗಿ ಮಹಿಳೆಯರಿಗೆ ಇರುವ ಸುರಕ್ಷತೆಯ ಪ್ರಶ್ನೆಗಳು ಮತ್ತೊಮ್ಮೆ ಎದ್ದಿವೆ. ಜನರನ್ನು ಸೆಳೆಯಲು ಇಷ್ಟೊಂದು ಕೀಳು ಮಟ್ಟಕ್ಕೆ ರಿಯಾಲಿಟಿ ಶೋ ಆಯೋಜಕರು ಇಳಿಯುತ್ತಾರಾ ಎನ್ನುವ ಪ್ರಶ್ನೆ ಕೂಡ ಸದ್ಯ ಎದ್ದಿದೆ.

English summary
Actress Nehal Vadoliya exposes a terrifying privacy breach on House Arrest, alleging hidden cameras near toilets and addressing a leaked video scandal.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X