twitter
    For Quick Alerts
    ALLOW NOTIFICATIONS  
    For Daily Alerts

    ಲಿಟ್ಲ್ ಚಾಂಪಿಯನ್: ಸದ್ವಿನ್ ಗೆ ಸೋಲು, ತೇರಿಯಾಗೆ ಗೆಲುವು

    By ಜೇಮ್ಸ್ ಮಾರ್ಟಿನ್
    |

    ಜೀ ಟಿವಿಯ ಜನಪ್ರಿಯ ಡ್ಯಾನ್ಸ್ ರಿಯಾಲಿಟಿ ಶೋ 'ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಲಿಟ್ಲ್ ಮಾಸ್ಟರ್' ಮೂರನೇ ಸೀಸನ್ ನ ಅಂತಿಮ ಸುತ್ತಿನಲ್ಲಿ ತೀವ್ರ ಪೈಪೋಟಿ ನೀಡಿದರೂ ಮಂಗಳೂರು ಮೂಲದ ಸದ್ವಿನ್ ಶೆಟ್ಟಿ ಚಾಂಪಿಯನ್ ಆಗುವುದರಲ್ಲಿ ಸ್ವಲ್ಪದರಲ್ಲೇ ಮಿಸ್ ಮಾಡಿಕೊಂಡಿದ್ದಾರೆ. ನೇಪಾಳ ಮೂಲದ ತೇರಿಯಾ ಮಗರ್ ಎಂಬ ಬಾಲಕಿ ಕಪ್ ಎತ್ತಿ ಕುಣಿದಾಡಿದ್ದಾಳೆ.

    ಮುಂಬೈನ ಬಾಲೇವಾಡಿ ಕ್ರೀಡಾ ಸಮುಚ್ಚಯದಲ್ಲಿ ಶನಿವಾರ ತಡರಾತ್ರಿ ತನಕ ನಡೆದ ಅಂತಿಮ ಹಣಾಹಣಿಯಲ್ಲಿ ತೀರ್ಪುಗಾರರು ಹಾಗೂ ಪ್ರೇಕ್ಷಕರ ಒಲವು ಗಳಿಸಿದ 11 ವರ್ಷದ ನೇಪಾಳಿ ಹುಡುಗಿ ತೇರಿಯಾ ಮಗರ್ ಲಿಟಲ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಫೈನಲ್ ನಲ್ಲಿ ಬೆಂಗಳೂರು ನಿವಾಸಿ ಮಂಗಳೂರು ಮೂಲದ ಸದ್ವಿನ್ ಶೆಟ್ಟಿ ರನ್ನರ್ ಅಪ್ ಆಗಿದ್ದಾರೆ.

    ಕೊನೆ ಸುತ್ತಿನಲ್ಲಿ ಸದ್ವಿನ್ ಶೆಟ್ಟಿ ಅಲ್ಲದೆ ಹಾರ್ದಿಕ್ ರುಪಾರೆಲ್, ಅನುಷ್ಕಾ ಛೆಟ್ರಿ ಅವರನ್ನು ನೇಪಾಳದ ರುದ್ರಪುರದ ತೇರಿಯಾ ಸೋಲಿಸಿ 10 ಲಕ್ಷ ರು ಬಹುಮಾನ ಗೆದ್ದಿದ್ದಾರೆ. ತೇರಿಯಾ ಗೆಲುವಿನ ಸಂಭ್ರಮ, ಸದ್ವಿನ್ ಹಾಗೂ ತೇರಿಯಾ ಪ್ರತಿಭೆಯ ವಿಡಿಯೋ ಝಲಕ್ ಮುಂದಿದೆ ನೋಡಿ...

    ಸದ್ವಿನ್ ಗೆ ಸೋಲು, ನೇಪಾಳಿ ಚಾಂಪಿಯನ್

    ಸದ್ವಿನ್ ಗೆ ಸೋಲು, ನೇಪಾಳಿ ಚಾಂಪಿಯನ್

    11 ವರ್ಷ ವಯಸ್ಸಿನ ತೇರಿಯಾ ಫೌಜ ಮಗರ್ ನೇಪಾಳದ ರುಪಂದೇಹಿಯ ರುದ್ರಪುರದ ಸುಂಗಭಾಚೌಕ್ ನಿವಾಸಿ. ಅನಿತಾ ಮಗರ್ ಹಾಗೂ ವಿಜಯ್ ಫೌಜ ಮಗರ್ ದಂಪತಿಯ ಮಗಳು.

    ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಸೀಸನ್ 3 ಲಿಟ್ಲ್ ಚಾಂಪಿಯನ್ ಆಗಿದ್ದಾರೆ. 10 ಲಕ್ಷ ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ. ತಮ್ಮ ಗೆಲುವಿಗೆ ಗುಂಪಿನ ನಾಯಕ ಓಂಕಾರ್ ಶಿಂಧೆ, ಪೋಷಕರು ಹಾಗೂ ಅಪಾರ ಪ್ರೇಕ್ಷಕರ ಒಲುವು ಕಾರಣ ಎಂದು ತೇರಿಯಾ ಹೇಳಿದ್ದಾರೆ.
    ಕುಡ್ಲದ ಹುಡ್ಗ ಸದ್ವಿನ್ ಸಾಧನೆ

    ಕುಡ್ಲದ ಹುಡ್ಗ ಸದ್ವಿನ್ ಸಾಧನೆ

    * ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಸ್ಪರ್ಧೆಯ ಅಂತಿಮ ಸುತ್ತಿಗೆ ದಕ್ಷಿಣ ಭಾರತದಿಂದ ಆಯ್ಕೆಯಾದ ಏಕೈಕ ಸ್ಪರ್ಧಿ.
    * ಮಂಗಳೂರು ಮೂಲದ ಸದ್ವಿನ್(10) ಬೆಂಗಳೂರಿನ ವಿಜಯನಗರದ ಆರ್ ಎನ್ ಎಸ್ ವಿದ್ಯಾಕೇತನದ ವಿದ್ಯಾರ್ಥಿ.
    * ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಯಾಗಿರುವ ಸದ್ವಿನ್ ಅವರ ನೃತ್ಯ ಪ್ರತಿಭೆ ಮೊದಲಿಗೆ ದೂರದರ್ಶನದಲ್ಲಿ ಅನಾವರಣಗೊಂಡಿತ್ತು.
    * ಈಗ ರಾಷ್ಟ್ರಮಟ್ಟದಲ್ಲಿ ಸದ್ವಿನ್ ಹೆಸರು ಮಾಡಿದ್ದಾರೆ.

    ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ವಿವರ

    ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ವಿವರ

    * 40 ಸಾವಿರ ಸ್ಪರ್ಧಿಗಳು ಆಡಿಷನ್ ಸುತ್ತಿನಲ್ಲಿದ್ದರು. ಅಂತಿಮವಾಗಿ ಒಟ್ಟು 17 ಸ್ಪರ್ಧಿಗಳು ಭಾಗವಹಿಸಿದ್ದರು. ಗ್ರ್ಯಾಂಡ್ ಫಿನಾಲೆಗೆ ನಾಲ್ವರು ಆಯ್ಕೆಯಾಗಿದ್ದರು.
    * ಗೀತಾ ಕಪೂರ್, ಅಹ್ಮದ್ ಖಾನ್ ತೀರ್ಪುಗಾರರಾಗಿದ್ದರೆ, ಮಿಥುನ್ ಚಕ್ರವರ್ತಿ ಗ್ರ್ಯಾಂಡ್ ಮಾಸ್ಟರ್ ಆಗಿ ಸ್ಪರ್ಧಿಗಳಿಗೆ ಮಾರ್ಕ್ಸ್ ನೀಡುತ್ತಿದ್ದರು.
    * ಇದಲ್ಲದೆ ಪ್ರೇಕ್ಷಕರ ಎಸ್ಸೆಂಎಸ್ ಮತಗಳಿಂದ ಅಂತಿಮ ವಿಜೇತರನ್ನು ಆಯ್ಕೆ ಮಾಡಲಾಗಿದೆ.

    ಡಿಐಡಿ ಅಂತಿಮ ಫಲಿತಾಂಶ ವಿವರ

    ಡಿಐಡಿ ಅಂತಿಮ ಫಲಿತಾಂಶ ವಿವರ

    ವಿನ್ನರ್ : ತೇರಿಯಾ ಮಗರ್, ನೇಪಾಳ
    ರನ್ನರ್ ಅಪ್ : ಅನುಷ್ಕಾ ಛೇಟ್ರಿ, ದಾರ್ಜಲಿಂಗ್, ಕೋಲ್ಕತ್ತಾ
    * ಸದ್ವಿನ್ ಶೆಟ್ಟಿ, ಬೆಂಗಳೂರು
    * ಹಾರ್ದಿಕ್ ರುಪಾರೆಲ್, ಮುಂಬೈ
    ಗ್ರ್ಯಾಂಡ್ ಫಿನಾಲೆ ವೀಕ್ಷಿಸಲು ಬಾಲಿವುಡ್ ನ ನಟ ವರುಣ್ ಧವನ್ ಕೂಡಾ ಆಗಮಿಸಿ, 'ಮೈ ತೇರಾ ಹೀರೊ', 'ಸಾಟರ್ಡೇ ಸಾಟರ್ಡೇ', 'ಡಿಸ್ಕೋ ದಿವಾನೆ' ಹಾಡುಗಳಿಗೆ ಡ್ಯಾನ್ಸ್ ಮಾಡಿ, ಪ್ರೇಕ್ಷಕರನ್ನು ರಂಜಿಸಿದರು.

    ತೇರಿಯಾ ಮಗರ್ ಡ್ಯಾನ್ಸ್ ಝಲಕ್

    ಲಿಟ್ಲ್ ಚಾಂಪಿಯನ್ ತೇರಿಯಾ ಮಗರ್ ಡ್ಯಾನ್ಸ್ ಝಲಕ್ ನೋಡಿ

    ಸದ್ವಿನ್ ಶೆಟ್ಟಿ ಡ್ಯಾನ್ಸ್ ನೋಡಿ

    ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಸ್ಪರ್ಧೆಯಲ್ಲಿ ಸದ್ವಿನ್ ಶೆಟ್ಟಿ ಡ್ಯಾನ್ಸ್ ನೋಡಿ..2 ಲಕ್ಷ ರು ಬಹುಮಾನ ಗಳಿಸಿದ್ದಾರೆ.

    English summary
    Nepal's Teriya Magar was announced the winner of Zee TV's "DID L'il Masters" Season 3 here Saturday. The 11-year-old from Rudrapur, Nepal, defeated Hardik Ruparel, Anushka Chetri and Sadhwin Shetty;
    Sunday, June 22, 2014, 13:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X