"ನೀನು ವರ್ಜಿ*?" ನೇರ ಪ್ರಶ್ನೆಗೆ ಸೋನು ಶ್ರೀನಿವಾಸ್ ಗೌಡ ಪ್ರತಿಕ್ರಿಯೆ

ರೀಲ್ಸ್ ರಾಣಿ ಸೋನು ಶ್ರೀನಿವಾಸ್ ಗೌಡ ಚಿತ್ರ ವಿಚಿತ್ರ ಕಾರಣಕ್ಕೆ ಸುದ್ದಿ ಆಗುತ್ತಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಬೆಡಗಿ ಆಗಾಗ್ಗೆ ರೀಲ್ಸ್, ವ್ಲಾಗ್ ವೀಡಿಯೋ ಮಾಡಿ ಪೋಸ್ಟ್ ಮಾಡುತ್ತಿದ್ದಾರೆ. ಆಕೆಯ ಬಗ್ಗೆ ನೆಗೆಟಿವ್ ಕಾಮೆಂಟ್ಸ್ ಜಾಸ್ತಿ ಬರುತ್ತದೆ. ಅದಕ್ಕೆಲ್ಲಾ ತಲೆಕಡೆಸಿಕೊಳ್ಳದೇ ತಾನಾಯ್ತು ತಮ್ಮ ಕೆಲಸ ಆಯ್ತು ಎಂದು ಇರುತ್ತಾರೆ.

ಬಿಗ್‌ಬಾಸ್ ಓಟಿಟಿ ಶೋಗಳು ಸೋನು ಹೋಗಿ ಬಂದಿದ್ದಾರೆ. ಇನ್ನು ಕೆಲ ದಿನಗಳ ಹಿಂದೆ ಬಾಲಕಿಯೊಬ್ಬಳನ್ನು ದತ್ತು ತೆಗೆದುಕೊಂಡ ವಿಚಾರಕ್ಕೆ ದೂರು ದಾಖಲಾಗಿತ್ತು. ಪ್ರಕರಣ ಸಂಬಂಧ ಬಂಧನವಾಗಿ ಸೆರೆವಾಸ ಸಹ ಅನುಭವಿಸುವಂತಾಯಿತು. ಕೊನೆಗೆ ಜಾಮೀನು ಪಡೆದು ಸೋನು ಹೊರ ಬಂದಿದ್ದರು.

Netizen ask a derogatory question to Sonu Srinivasa Gowda in YouTube live

ಸದ್ಯ ಯೂಟ್ಯೂಬ್‌ನಲ್ಲಿ ಲೈವ್ ಮಾಡಿ ಅಭಿಮಾನಿಗಳ ಪ್ರಶ್ನೆಗಳಿಗೆ ಸೋನು ಉತ್ತರಿಸಿದ್ದಾರೆ. ಆ ವೀಡಿಯೋವನ್ನು ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವೇಳೆ ಚಿತ್ರ ವಿಚಿತ್ರ ಪ್ರಶ್ನೆಗಳು ಎದುರಾಗಿದೆ. ಅದರಲ್ಲಿ ಕೆಲವನ್ನು ಓದಿ ಉತ್ತರ ಕೊಟ್ಟಿದ್ದಾರೆ. ಕೆಲವು ನೆಗೆಟಿವ್ ಪ್ರಶ್ನೆಗಳ ಬಗ್ಗೆ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.

ಅಭಿಮಾನಿಯೊಬ್ಬರು ನಿಮಗೆ ಯೂಟ್ಯೂಬ್‌ನಿಂದ ಎಷ್ಟು ಆದಾಯ ಬರುತ್ತದೆ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಸೋನು "ನಾನು ಸುಳ್ಳು ಹೇಳಲ್ಲ. ನಾನು ಮೊದಲು ಚಾನಲ್ ಓಪನ್ ಮಾಡಿದಾಗ ಮೊದಲ 2 ತಿಂಗಳಿಗೆ 70 ಸಾವಿರ ಬಂದಿತ್ತು. ಮಾಲ್ಡೀವ್ಸ್‌ಗೆ ಹೋದಾಗ ಜಾಸ್ತಿ ವೀಡಿಯೋ ಮಾಡಿದ್ದೆ. ಆಗ 2 ಲಕ್ಷ 80 ಸಾವಿರ ಆದಾಯ ಬಂದಿತ್ತು. ಅದೇ ಹೆಚ್ಚು. ಈಗ ನಿಯಮಿತವಾಗಿ ವೀಡಿಯೋ ಹಾಕಿದರೆ 1 ಲಕ್ಷ ರೂ.ವರೆಗೆ ಬರುತ್ತದೆ" ಎಂದಿದ್ದಾರೆ.

ನಿಮ್ಮ ಮದುವೆ ಯಾವಾಗ ಎನ್ನುವ ಪ್ರಶ್ನೆಗೆ "ಸಾಕಷ್ಟು ಜನ ಇದ ಪ್ರಶ್ನೆ ಕೇಳುತ್ತಿದ್ದಾರೆ. ಖಂಡಿತ ಆದಷ್ಟು ಬೇಗ ನಾನು ಮದುವೆ ಆಗುತ್ತೇನೆ. ಹುಡುಗ ಯಾರು ಎನ್ನುವ ಬಗ್ಗೆಯೂ ವೀಡಿಯೋ ಮಾಡಿ ಹೇಳುತ್ತೇನೆ. ಹುಡುಗನ ಫೋಟೊ ಕೂಡ ರಿವೀಲ್ ಮಾಡ್ತೀನಿ" ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ಸೋನು ಶ್ರೀನಿವಾಸ್ ಗೌಡ ದಪ್ಪ ಆಗಿದ್ದಾರೆ. ಅದಕ್ಕೆ ಕಾರಣ ಏನು ಎಂದು ಅಭಿಮಾನಿಯೊಬ್ಬರು ಕೇಳಿದ್ದಾರೆ. "ಕೆಲ ದಿನಗಳಿಂದ ಡಯೆಟ್ ಬಿಟ್ಟಿದ್ದೀನಿ. ಅಷ್ಟಾಗಿ ವರ್ಕ್‌ಔಟ್ ಸಹ ಮಾಡುತ್ತಿಲ್ಲ. ಅದಕ್ಕೆ ದಪ್ಪ ಆಗಿದ್ದೀನಿ. ಮತ್ತೆ ಡಯಟ್ ಶುರು ಮಾಡಬೇಕು. ನನ್ನ Lower body ದಪ್ಪ ಮಾಡ್ಕೊಳಿ ಎಂದು ಕೆಲವರು ಹೇಳುತ್ತಾರೆ. ನಾನು ವರ್ಕೌಟ್ ಮಾಡಿ ಪ್ರಯತ್ನಿಸಿದೆ. ಸಾಧ್ಯವಾಗಲಿಲ್ಲ, ಕಾರಣ ಅದು heredity ಪ್ರಾಬ್ಲಂ ಅಂತ ಗೊತ್ತಾಯ್ತು" ಎಂದು ತಿಳಿಸಿದ್ದಾರೆ.

ನೆಗೆಟಿವ್ ಕಾಮೆಂಟ್ಸ್‌ನ ಯಾವ ರೀತಿ ಸ್ವೀಕರಿಸುತ್ತೀರಾ? ಎನ್ನುವ ಪ್ರಶ್ನೆಗೆ ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳಲ್ಲ. ನಾವು ಯಾರಿಗೂ ಪಾಸಿಟಿವ್ ಮಾತಾಡಿ ಎನ್ನುವುದಕ್ಕೆ ಸಾಧ್ಯವಿಲ್ಲ. ಜೀವನದಲ್ಲಿ ಸಿಹಿ ಕಹಿ ಎರಡೂ ಇರಬೇಕು. ತುಂಬಾ ಕೆಟ್ಟ ಕಾಮೆಂಟ್ ಎನಿಸಿದಾಗ ಪಿನ್ ಮಾಡ್ತೀನಿ ಅಥವಾ ಡಿಲೀಟ್ ಮಾಡ್ತೀನಿ ಎಂದು ಉತ್ತರಿಸಿದ್ದಾರೆ.

ಕೊನೆಗೆ ನೆಟ್ಟಿಗರೊಬ್ಬರು ನೀನು ವರ್ಜಿ*? ಎಂದು ಕೆಟ್ಟ ಪ್ರಶ್ನೆ ಕೇಳಿದ್ದಾರೆ. ಅದನ್ನು ಕೂಡ ಸೋನು ಓದಿ ತಿಳಿಸಿದ್ದಾರೆ. "ಇವರಿಗೆಲ್ಲಾ ಮಾನ ಮರ್ಯಾದೆ ಇಲ್ವಾ? ನಿಮಗೆ ದೊಡ್ಡ ನಮಸ್ಕಾರ. ನೀವು ಹೇಗೆ ಅಂದುಕೊಂಡರೆ ಹಾಗೆ? ತಲೆ ಕೆಡಿಸಿಕೊಳ್ಳಲ್ಲ. ಇಂತಹ ಪ್ರಶ್ನೆಗಳನ್ನು ಓದುವಂತಿಲ್ಲ. ಆದರೂ ನೀವು ಕೇಳಿದ್ದೀರಲ್ಲಾ ಎಂದು ಹೇಳ್ದೆ ಅಷ್ಟೆ" ಎಂದು ಸೋನು ಹೇಳಿಕೊಂಡಿದ್ದಾರೆ. ಸದ್ಯ ಸೋನು ವೀಡಿಯೋ ಸಖತ್ ವೈರಲ್ ಆಗುತ್ತಿದೆ. ಅಭಿಮಾನಿಗಳು ಇದಕ್ಕೂ ತಹಹೇವಾರಿ ಕಾಮೆಂಟ್ಸ್ ಮಾಡುತ್ತಿದ್ದಾರೆ.

More from Filmibeat

English summary
Bigg Boss Fame Sonu Srinivasa Gowda faced an impolite question from a netizen during her YouTube live;
Read more about: tv sandalwood kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X