Vaishnavi Gowda: ಪ್ರೇಕ್ಷಕರ ಒತ್ತಾಯದ ಮೇರೆಗೆ ರಜನಿಯ ಕಾವಾಲಾ ಹಾಡಿಗೆ ಹೆಜ್ಜೆ ಹಾಕಿದ ವೈಷ್ಣವಿ ಗೌಡ!
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸೀತಾ ರಾಮ' ಧಾರಾವಾಹಿಯು ತುಂಬಾ ಸೊಗಸಾಗಿ ಮೂಡಿ ಬರುತ್ತಿದ್ದು ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸೀತಾಳಾಗಿ ವೈಷ್ಣವಿ ಗೌಡ, ರಾಮನಾಗಿ ಗಗನ್ ಚಿನ್ನಪ್ಪ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದು ಈ ಮುದ್ದಾದ ಜೋಡಿಯನ್ನು ನೋಡಿದ ಮೊದಲ ದಿನವೇ ಪ್ರೇಕ್ಷಕ ಪ್ರಭು ಫಿದಾ ಆಗಿದ್ದಾಗಿದೆ. ಧಾರಾವಾಹಿಯಲ್ಲಿ ಸಿಹಿ ಎಂಬ ಪುಟ್ಟ ಮಗುವಿನ ತಾಯಿಯಾಗಿರುವ ಸೀತಾ ಆಕೆಯ ಸಂಪೂರ್ಣ ಜವಾಬ್ದಾರಿ ಹೊತ್ತಿರುತ್ತಾಳೆ.
'ಅಗ್ನಿಸಾಕ್ಷಿ' ಧಾರಾವಾಹಿಯ ನಂತರ ಕಿರುತೆರೆಯಿಂದ ಬಹುದೊಡ್ಡ ಬ್ರೇಕ್ ತೆಗೆದುಕೊಂಡಿರುವ ವೈಷ್ಣವಿ ಗೌಡ ಸೀತಾಳಾಗಿ ಕಿರುತೆರೆಗೆ ಮರಳಿದ್ದು ವೀಕ್ಷಕರಿಗೆ ಖುಷಿ ತಂದಿದೆ. ಇನ್ನು ನಟನೆಯ ಹೊರತಾಗಿ ಸೋಶಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್ ಆಗಿರುವ ವೈಷ್ಣವಿ ಬಿಡುವು ಸಿಕ್ಕಾಗಲೆಲ್ಲಾ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಕಾವಾಲಾ ಹಾಡಿಗೆ ಹೆಜ್ಜೆ ಹಾಕಿದ ವೈಷ್ಣವಿ ಗೌಡ
ಈ ಹಿಂದೆ ವೈಷ್ಣವಿ ಗೌಡ ವಿಡಿಯೋ ಒಂದನ್ನು ಮಾಡಿ ಪೋಸ್ಟ್ ಮಾಡಿದ್ದರು. ಆಗ ನೆಟ್ಟಿಗರು ಕಾವಾಲಾ ಹಾಡಿಗೆ ಹೆಜ್ಜೆ ಹಾಕುವಂತೆ ಒತ್ತಡ ಹಾಕಿದ್ದರು. ಈಗ ಅಭಿಮಾನಿಗಳ ಒತ್ತಡದ ಮೇರೆಗೆ ವೈಷ್ಣವಿ ಇದೀಗ ರಜನಿಕಾಂತ್ 'ಜೈಲರ್' ಸಿನಿಮಾದ ಕಾವಾಲಾ ಹಾಡಿಗೆ ಹೆಜ್ಜೆ ಹಾಕಿದ್ದು ಈಗಾಗಲೇ ತೊಂಭತ್ತು ಸಾವಿರಕ್ಕೂ ಅಧಿಕ ಜನ ಲೈಕ್ ಕೊಟ್ಟಿದ್ದಾರೆ. ಮಾತ್ರವಲ್ಲ ಬರೋಬ್ಬರಿ ಏಳು ಸಾವಿರ ಜನ ಆ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಅಂದ ಹಾಗೇ ಈ ಮೊದಲು ನೆಟ್ಟಿಗರು ವೈಷ್ಣವಿ ಅವರ ಬಳಿ ಕಾವಾಲಾ ಹಾಡಿಗೆ ಹೆಜ್ಜೆ ಹಾಕುವಂತೆ ಮನವಿಯನ್ನು ಕೂಡಾ ಮಾಡಿದ್ದರು.
'ಅಗ್ನಿಸಾಕ್ಷಿ' ಸನ್ನಿಧಿಯಾಗಿ ಮೋಡಿ
'ದೇವಿ' ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ವೈಷ್ಣವಿ ಗೌಡರನ್ನು ಜನ ಗುರುತಿಸಿದ್ದು 'ಅಗ್ನಿಸಾಕ್ಷಿ' ಧಾರಾವಾಹಿಯ ಸನ್ನಿಧಿ ಆಗಿ. ಸನ್ನಿಧಿಯಾಗಿ ಬರೋಬ್ಬರಿ ಆರು ವರ್ಷಗಳ ಕಾಲ ಕಿರುತೆರೆ ವೀಕ್ಷಕರನ್ನು ರಂಜಿಸಿದ್ದ ವೈಷ್ಣವಿ ಗೌಡ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಶೋ 'ಭರ್ಜರಿ ಕಾಮಿಡಿ'ಯ ನಿರೂಪಕಿಯಾಗಿಯೂ ಮೋಡಿ ಮಾಡಿದ್ದರು.
ಬಿಗ್ ಬಾಸ್‌ನಲ್ಲಿ ಮೋಡಿ
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಸೀಸನ್ 8' ರ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ವೈಷ್ಣವಿ ಗೌಡ ಟಾಪ್ 4ನೇ ಸ್ಥಾನ ಪಡೆದುಕೊಂಡಿದ್ದರು. ಬೆಳ್ಳಿತೆರೆಯಲ್ಲಿಯೂ ನಟನಾ ಛಾಪನ್ನು ಪಸರಿಸಿ ಸೈ ಎನಿಸಿಕೊಂಡಿರುವ ವೈಷ್ಣವಿ ಗೌಡ ಸದ್ಯ ಸೀತಾಳಾಗಿ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ.


Click it and Unblock the Notifications











