Puttakkana Makkalu: ಪುಟ್ಟಕ್ಕನ ಮಕ್ಕಳ ಧಾರಾವಾಹಿಯ ಕಂಠಿಯನ್ನು ಜೂನಿಯರ್ ರಾಕಿಂಗ್ ಸ್ಟಾರ್ ಅಂತಿರೋದ್ಯಾಕೆ ನೆಟ್ಟಿಗರು?

By ಎಸ್ ಸುಮಂತ್

'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಕಂಠಿಯನ್ನು ಕಂಡರೆ ಮಹಿಳಾ ಮಣಿಗಳಿಗೆ ಸಿಕ್ಕಾಪಟ್ಟೆ ಲವ್ವು. ಧಾರಾವಾಹಿ ಶುರುವಾದಾಗಿನಿಂದ ಕಂಠಿಗೆ ಅಭಿಮಾನಿಗಳು ಹಾಗೇ ಹುಟ್ಟಿಕೊಂಡಿದ್ದಾರೆ. ಇತ್ತೀಚೆಗಂತೂ ಧಾರಾವಾಹಿಯಲ್ಲಿ ಕಂಠಿ ಮತ್ತು ಸ್ನೇಹಾಳ ಲವ್ ಸ್ಟೋರಿ ನೋಡೋದಕ್ಕೇನೆ ಖುಷಿ ಅನ್ನಿಸ್ತಾ ಇತ್ತು. ಇಬ್ಬರು ಪ್ರೇಮಿಗಳಾಗಿ ಓಡಾಡುತ್ತಿದ್ದರೆ ಆ ವಿಡಿಯೋಗಳನ್ನು ಕಟ್ ಮಾಡಿ, ರೋಮ್ಯಾಂಟಿಕ್ ಸಾಂಗ್ ಹಾಕಿ ಸೋಷಿಯಲ್ ಮೀಡಿಯಾದಲ್ಲಿ ಹಾಕ್ತಾ ಇದ್ರು.

ಸದ್ಯ ಕಂಠಿ ಬಂಗಾರಮ್ಮನ ಮಗ ಅನ್ನೋದು ಸ್ನೇಹಾಳಿಗೆ ಗೊತ್ತಾಗಿದೆ. ಮೊದಲಿದ್ದ ಪ್ರೀತಿ ನೇರವಾಗಿ ತೋರಿಸದೆ, ಮನಸ್ಸಲ್ಲಿಯೇ ಅದುಮಿಟ್ಟುಕೊಂಡು ಈಗ ದ್ವೇಷ ಕಾರುತ್ತಿದ್ದಾಳೆ. ಶಾಂತವಾಗಿದ್ದ ಸ್ನೇಹಾ ಈಗಂತು ಚಂಡಿಯಾಗಿದ್ದಾಳೆ. ಸ್ನೇಹಾ ಜೈಲಿಗೆ ಹಾಕಿಸಿದ್ದಾಗ ಕಂಠಿ ಏನೆಲ್ಲಾ ಮಾಡಿದ್ದಾನೆ ಗೊತ್ತಾ..?

Puttakkana Makkalu, Zee Kannada Serial, Yash

ಕಂಠಿಯನ್ನು ಜೈಲಿಗೆ ಹಾಕಿಸಿದ ಸ್ನೇಹಾ

ಸ್ನೇಹಾ ಮತ್ತು ಕಂಠಿ ಸಿಕ್ಕಾಪಟ್ಟೆ ಲವ್ ಮಾಡ್ತಾ ಇದ್ರು. ಕಂಠಿ ತಾನೂ ಬಂಗಾರಮ್ಮನ ಮಗ ಎಂದು ಹೇಳಿಕೊಳ್ಳದೆ, ಶ್ರೀಯಾಗಿ ಸ್ನೇಹಾಳ ಜೊತೆಗೆ ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದ. ಮನೆಯ ಮಗನಾಗಿದ್ದ. ಶ್ರೀನೇ ಕಂಠಿ ಎಂದು ಗೊತ್ತಿಲ್ಲದೆ ಸ್ನೇಹಾ ದೊಡ್ಡಮಟ್ಟದ ಕನಸನ್ನು ಕಟ್ಟಿಕೊಂಡಿದ್ದಳು. ಮದುವೆಯಾಗಬೇಕೆಂದು ಕೊಂಡಾಗಲೇ ಪುಟ್ಡಕ್ಕ ಮಾತು ತೆಗೆದುಕೊಂಡಿದ್ದಳು. ಹೀಗಾಗಿ ಸ್ನೇಹಾ, ಕಂಠಿಯಿಂದ ದೂರವಾಗಿದ್ದಳು. ಆದರೆ, ಕಂಠಿ ಬಲವಂತವಾಗಿ ಮದುವೆಯಾದ. ಆತನೇ ಬಂಗಾರಮ್ಮನ ಮಗ ಎಂದು ಗೊತ್ತಾದ ಮೇಲೆ, ಜೈಲಿಗೆ ಹಾಕಿಸಿದ್ದಾಳೆ. ಇದು ಬಂಗಾರಮ್ಮನ ಕೋಪಕ್ಕೆ ಕಾರಣವಾಗಿದೆ.

ಕಂಠಿಯಿಂದ ಹೊಸ ವಿಡಿಯೋ

ಸ್ಟೇಷನ್ ನಲ್ಲಿ ಇದ್ದರು ಕಂಠಿ ತಲೆ ಕೆಡಿಸಿಕೊಳ್ಳುತ್ತಿಲ್ಲ. ಪೊಲೀಸರು ಸಿಕ್ಕಾಪಟ್ಟೆ ಹೊಡೆಯುತ್ತಿದ್ದರು, ಸ್ನೇಹಾಳನ್ನೆ ನೆನಪಿಸಿಕೊಂಡು ಒದೆ ತಿನ್ನುತ್ತಿದ್ದಾನೆ. ಆದರೆ ಜೈಲಿನಲ್ಲಿ ಇದ್ದಾಗಲೂ ವಿಡಿಯೋ ಮಾಡಿಕೊಂಡು ಎಂಜಾಯ್ ಮಾಡುತ್ತಿದ್ದಾನೆ. ಕಂಠಿ ಅಲಿಯಾಸ್ ಧನುಶ್ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಪೊಲೀಸರು ಹೊಡೆದಿರುವ ಹೊಡೆತ ಹಂಗೆ ಇದೆ. ಮುಖದ ಮೇಲೆ ಆ ರಕ್ತದ ಕಲೆ ಹಾಗೇ ಕಾಣುತ್ತಿದೆ. ಅದರಲ್ಲಿ ಮಾಸ್ ಹೀರೋ ಲುಕ್‌ನಲ್ಲಿ ವಿಡಿಯೋ ಮಾಡಿದ್ದಾರೆ.

Puttakkana Makkalu, Zee Kannada Serial, Yash

ಕಂಠಿಯನ್ನು ಹಾಡಿ ಹೊಗಳುತ್ತಿರುವ ಪ್ಯಾನ್ಸ್

ಈ ವಿಡಿಯೋ ನೋಡಿದ ಕಂಠಿ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ. ಕಂಠಿ ಅಲಿಯಾಸ್ ಧನುಶ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್. ಸುಮಾರು 96 ಸಾವಿರ ಜನ ಫಾಲೋವರ್ಸ್ ಹೊಂದಿದ್ದಾರೆ. 'ಪುಟ್ಡಕ್ಕನ ಮಕ್ಕಳು' ಧಾರಾವಾಹಿಯಲ್ಲಿ ರಫ್ ಅಂಡ್ ಟಫ್ ಆಗಿ ಕಾಣಿಸಿಕೊಂಡಿದ್ದಾರೆ. 'ಪುಟ್ಟಕ್ಕನ ಮಕ್ಕಳು' ಸೆಟ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಮಾಸ್ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಸಿಕ್ಕಾಪಟ್ಟೆ ಅಭಿಮಾನಿಗಳನ್ನು ಗಳಿಸಿದ್ದಾರೆ.

ಜೂನಿಯರ್ ರಾಕಿಂಗ್ ಸ್ಟಾರ್ ಅಂತಿದ್ದಾರೆ ಫ್ಯಾನ್ಸ್

ಕಂಠಿ ಅಲಿಯಾಸ್ ಧನುಶ್ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಶುರುವಾದಾಗಿನಿಂದ ಧನುಶ್‌ಗೆ ಅಭಿಮಾನಿಗಳು ಹೆಚ್ಚಾಗಿದ್ದಾರೆ. ಫ್ಯಾನ್ ಪೇಜ್‌ಗಳು ಜಾಸ್ತಿಯಾಗಿದೆ. ಧನುಶ್‌ನ ಫೋಟೋ, ವಿಡಿಯೋಗಳನ್ನು ಮಾಸ್ ಆಗಿ ಕ್ರಿಯೇಟ್ ಮಾಡಿ ಹಾಕುತ್ತಾ ಇರುತ್ತಾರೆ. ಈಗ ಜೈಲಲ್ಲಿರುವ ಕಂಠಿ ಹೊಸ ವಿಡಿಯೋವನ್ನು ಹಂಚಿಕೊಂಡಿರುವುದಕ್ಕೆ ಎಲ್ಲರೂ ಮುಗಿ ಬಿದ್ದು ಕಮೆಂಟ್ ಹಾಕುತ್ತಿದ್ದಾರೆ. 'ನಿಮ್ಮ ವರ್ತನೆಯನ್ನು ಎಂದಿಗೂ ಬಿಡಬೇಡಿ' ಎಂದು ಕ್ಯಾಪ್ಶನ್ ಹಾಕಿಕೊಂಡಿದ್ದಾರೆ. ಇದಕ್ಕೆ ಕಮೆಂಟ್‌ಗಳು ಬರುತ್ತಿವೆ. ಜೂನಿಯರ್ ರಾಕಿಂಗ್ ಸ್ಟಾರ್ ಯಶ್, ರಾಮಾಚಾರಿ ಎಂದೆಲ್ಲಾ ಕಮೆಂಟ್‌ಗಳು ಬರುತ್ತಿವೆ.

More from Filmibeat

English summary
Nitizen says Puttakkana Makkalu serial Kanti fame Dhanush is like Yash. Here is the details about Kanti video went viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X