ರಾಖಿ ಸಾವಂತ್ ಪರ ನಿಂತ ಸಲ್ಮಾನ್ ಖಾನ್ ವಿರುದ್ಧ ಆಕ್ರೋಶ
ಬಿಗ್‌ಬಾಸ್ ಮೇಲೆ ಪಕ್ಷಪಾತದ ಆರೋಪ ಆಗಾಗ್ಗೆ ಬರುತ್ತಲೇ ಇರುತ್ತದೆ. ಕನ್ನಡದ ಬಿಗ್‌ಬಾಸ್ ಸಹ ಇದಕ್ಕೆ ಹೊರತಲ್ಲ. ಪ್ರತಿ ಬಿಗ್‌ಬಾಸ್ ಸೀಸನ್ ನಲ್ಲೂ ಈ ಆರೋಪ ಬರುತ್ತಲೇ ಇರುತ್ತದೆ, ಹಿಂದಿಯಲ್ಲಿಯಂತೂ ಪಕ್ಷಪಾತದ ಆರೋಪ ಹೆಚ್ಚು.
Recommended Video
ಹಿಂದಿ ಬಿಗ್‌ಬಾಸ್ ಸೀಸನ್ 14 ಪ್ರಸ್ತುತ ಪ್ರಸಾರವಾಗುತ್ತಿದ್ದು, ನಟ ಸಲ್ಮಾನ್ ಖಾನ್ ಬಿಗ್‌ಬಾಸ್ ಶೋ ನಿರೂಪಿಸುತ್ತಿದ್ದಾರೆ. ಖಡಕ್ ನಿರೂಪಕ ಎಂದು ಹೆಸರು ಪಡೆದಿರುವ ಸಲ್ಮಾನ್ ಖಾನ್ ಜೊತೆಗೆ ಪಕ್ಷಪಾತಿ ಎಂಬ ಆರೋಪಕ್ಕೂ ಪಾತ್ರರಾಗಿದ್ದಾರೆ.
ಬಿಗ್‌ಬಾಸ್ ನ ಈ ಬಾರಿಯ ವೀಕೆಂಡ್ ಎಪಿಸೋಡ್‌ನ ನಿರೂಪಣೆ ಮಾಡಿದ ಸಲ್ಮಾನ್ ಖಾನ್, ಬಿಗ್‌ಬಾಸ್ ಮನೆಯಲ್ಲಿರುವ ರಾಖಿ ಸಾವಂತ್‌ಗೆ ಬೆಂಬಲವಾಗಿ ಮಾತನಾಡಿ, ಅಭಿನವ್ ವಿರುದ್ಧ ವಾಗ್ದಾಳಿ ನಡೆಸಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

ವಿಚಿತ್ರ ವರ್ತನೆ ಮುಂದುವರೆಸಿರುವ ರಾಖಿ
ತಮ್ಮ ಚಿತ್ರ ವಿಚಿತ್ರ ವರ್ತನೆ, ವಿವಾದಗಳಿಂದ ಖ್ಯಾತವಾಗಿರುವ ರಾಖಿ ಸಾವಂತ್ ಬಿಗ್‌ಬಾಸ್ ಮನೆಯಲ್ಲಿಯೂ ಅದೇ ವರ್ತನೆ ಮುಂದುವರೆಸಿದ್ದು, ಇತ್ತೀಚೆಗೆ ಅಭಿನವ್‌ನ ಚಡ್ಡಿಯನ್ನು ಕತ್ತರಿಸಿದ್ದರು. ಅದಕ್ಕೂ ಮುನ್ನಾ ದೆವ್ವ ಬಂದವರಂತೆ ವರ್ತಿಸಿದ್ದರು. ಬಟ್ಟೆಯಲ್ಲಿಯೇ ಮೂತ್ರ ಸಹ ಮಾಡಿಕೊಂಡಿದ್ದರು. ಇದೆಲ್ಲವೂ ಪ್ರೇಕ್ಷಕರಿಗೆ ಅತಿರೇಕ ಎನಿಸಿತ್ತು.

ರಾಖಿ ಸಾವಂತ್ ಪರವಾಗಿ ಸಲ್ಮಾನ್ ಖಾನ್ ಮಾತು
ಆದರೆ ಈ ಬಾರಿ ವೀಕೆಂಡ್ ಎಪಿಸೋಡ್‌ನಲ್ಲಿ ರಾಖಿ ಸಾವಂತ್ ಪರವಾಗಿ ಮಾತನಾಡಿದ ಸಲ್ಮಾನ್ ಖಾನ್, ರಾಖಿ ಜೊತೆ ವಾಗ್ವಾದ ನಡೆಸಿದ್ದ ಕಾರಣಕ್ಕೆ ಅಭಿನವ್ ವಿರುದ್ಧ ಹರಿಹಾಯ್ದರು. ಸಲ್ಮಾನ್ ಖಾನ್ ರ ಈ ವರ್ತನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಅಭಿನವ್ ಒಬ್ಬ ಜಂಟಲ್‌ಮನ್ ಎಂದ ಗೌತಮ್ ಹೆಗಡೆ
ಕೆಲವು ಮಾಜಿ ಬಿಗ್‌ಬಾಸ್ ಸ್ಪರ್ಧಿಗಳು, ಟಿವಿ ನಟರು ಸಹ ಅಭಿನವ್ ಅನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ಚಿತ್ರಕತೆ ಬರಹಗಾರ ಗೌತಮ್ ಹೆಗಡೆ ಅಂತೂ ಸಲ್ಮಾನ್ ಖಾನ್ ವರ್ತನೆ ವಿರುದ್ಧ ಇನ್‌ಸ್ಟಾಗ್ರಾಂ ನಲ್ಲಿ ಉದ್ದನೆಯ ಪೋಸ್ಟ್ ಒಂದನ್ನು ಬರೆದು, 'ಅಭಿನವ್ ನಿಜಕ್ಕೂ ಒಬ್ಬ ಜಂಟಲ್‌ಮನ್, ಈ ಬಾರಿಯ ವೀಕೆಂಡ್ ಎಪಿಸೋಡ್, ಬಿಗ್‌ಬಾಸ್ ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ಎಪಿಸೋಡ್' ಎಂದಿದ್ದಾರೆ.

ಪ್ರಾರಂಭವಾಗಲಿದೆ ಕನ್ನಡ ಬಿಗ್‌ಬಾಸ್
ಹಿಂದಿ ಬಿಗ್‌ಬಾಸ್ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದ್ದು, ಕನ್ನಡ ಬಿಗ್‌ಬಾಸ್ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಈಗಾಗಲೇ ಕನ್ನಡ ಬಿಗ್‌ಬಾಸ್ ನ ಪ್ರೋಮೊ ಬಿಡುಗಡೆ ಆಗಿದೆ. ಮಲಯಾಳಂ ಬಿಗ್‌ಬಾಸ್ ಸಹ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ.


Click it and Unblock the Notifications











