For Quick Alerts
  ALLOW NOTIFICATIONS  
  For Daily Alerts

  ರಾಖಿ ಸಾವಂತ್ ಪರ ನಿಂತ ಸಲ್ಮಾನ್ ಖಾನ್ ವಿರುದ್ಧ ಆಕ್ರೋಶ

  |

  ಬಿಗ್‌ಬಾಸ್‌ ಮೇಲೆ ಪಕ್ಷಪಾತದ ಆರೋಪ ಆಗಾಗ್ಗೆ ಬರುತ್ತಲೇ ಇರುತ್ತದೆ. ಕನ್ನಡದ ಬಿಗ್‌ಬಾಸ್ ಸಹ ಇದಕ್ಕೆ ಹೊರತಲ್ಲ. ಪ್ರತಿ ಬಿಗ್‌ಬಾಸ್ ಸೀಸನ್‌ ನಲ್ಲೂ ಈ ಆರೋಪ ಬರುತ್ತಲೇ ಇರುತ್ತದೆ, ಹಿಂದಿಯಲ್ಲಿಯಂತೂ ಪಕ್ಷಪಾತದ ಆರೋಪ ಹೆಚ್ಚು.

  ಸಲ್ಮಾನ್ ಖಾನ್ ಗೆ ಇದೆಲ್ಲಾ ಬೇಕಿತ್ತಾ..? | Bigg Boss 14 | Salman Khan

  ಹಿಂದಿ ಬಿಗ್‌ಬಾಸ್ ಸೀಸನ್ 14 ಪ್ರಸ್ತುತ ಪ್ರಸಾರವಾಗುತ್ತಿದ್ದು, ನಟ ಸಲ್ಮಾನ್ ಖಾನ್ ಬಿಗ್‌ಬಾಸ್ ಶೋ ನಿರೂಪಿಸುತ್ತಿದ್ದಾರೆ. ಖಡಕ್ ನಿರೂಪಕ ಎಂದು ಹೆಸರು ಪಡೆದಿರುವ ಸಲ್ಮಾನ್ ಖಾನ್ ಜೊತೆಗೆ ಪಕ್ಷಪಾತಿ ಎಂಬ ಆರೋಪಕ್ಕೂ ಪಾತ್ರರಾಗಿದ್ದಾರೆ.

  ''ದೊಡ್ಡ ಸೆಲೆಬ್ರಿಟಿ ಆಗ್ತೀನಿ, ಸಿನಿಮಾ ಆಫರ್ ಬರುತ್ತೆ ಅಂತ ಬಿಗ್‌ಬಾಸ್‌ಗೆ ಹೋಗಬೇಡಿ''''ದೊಡ್ಡ ಸೆಲೆಬ್ರಿಟಿ ಆಗ್ತೀನಿ, ಸಿನಿಮಾ ಆಫರ್ ಬರುತ್ತೆ ಅಂತ ಬಿಗ್‌ಬಾಸ್‌ಗೆ ಹೋಗಬೇಡಿ''

  ಬಿಗ್‌ಬಾಸ್ ನ ಈ ಬಾರಿಯ ವೀಕೆಂಡ್ ಎಪಿಸೋಡ್‌ನ ನಿರೂಪಣೆ ಮಾಡಿದ ಸಲ್ಮಾನ್ ಖಾನ್, ಬಿಗ್‌ಬಾಸ್ ಮನೆಯಲ್ಲಿರುವ ರಾಖಿ ಸಾವಂತ್‌ಗೆ ಬೆಂಬಲವಾಗಿ ಮಾತನಾಡಿ, ಅಭಿನವ್ ವಿರುದ್ಧ ವಾಗ್ದಾಳಿ ನಡೆಸಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

  ವಿಚಿತ್ರ ವರ್ತನೆ ಮುಂದುವರೆಸಿರುವ ರಾಖಿ

  ವಿಚಿತ್ರ ವರ್ತನೆ ಮುಂದುವರೆಸಿರುವ ರಾಖಿ

  ತಮ್ಮ ಚಿತ್ರ ವಿಚಿತ್ರ ವರ್ತನೆ, ವಿವಾದಗಳಿಂದ ಖ್ಯಾತವಾಗಿರುವ ರಾಖಿ ಸಾವಂತ್ ಬಿಗ್‌ಬಾಸ್ ಮನೆಯಲ್ಲಿಯೂ ಅದೇ ವರ್ತನೆ ಮುಂದುವರೆಸಿದ್ದು, ಇತ್ತೀಚೆಗೆ ಅಭಿನವ್‌ನ ಚಡ್ಡಿಯನ್ನು ಕತ್ತರಿಸಿದ್ದರು. ಅದಕ್ಕೂ ಮುನ್ನಾ ದೆವ್ವ ಬಂದವರಂತೆ ವರ್ತಿಸಿದ್ದರು. ಬಟ್ಟೆಯಲ್ಲಿಯೇ ಮೂತ್ರ ಸಹ ಮಾಡಿಕೊಂಡಿದ್ದರು. ಇದೆಲ್ಲವೂ ಪ್ರೇಕ್ಷಕರಿಗೆ ಅತಿರೇಕ ಎನಿಸಿತ್ತು.

  ರಾಖಿ ಸಾವಂತ್ ಪರವಾಗಿ ಸಲ್ಮಾನ್ ಖಾನ್ ಮಾತು

  ರಾಖಿ ಸಾವಂತ್ ಪರವಾಗಿ ಸಲ್ಮಾನ್ ಖಾನ್ ಮಾತು

  ಆದರೆ ಈ ಬಾರಿ ವೀಕೆಂಡ್ ಎಪಿಸೋಡ್‌ನಲ್ಲಿ ರಾಖಿ ಸಾವಂತ್ ಪರವಾಗಿ ಮಾತನಾಡಿದ ಸಲ್ಮಾನ್ ಖಾನ್, ರಾಖಿ ಜೊತೆ ವಾಗ್ವಾದ ನಡೆಸಿದ್ದ ಕಾರಣಕ್ಕೆ ಅಭಿನವ್ ವಿರುದ್ಧ ಹರಿಹಾಯ್ದರು. ಸಲ್ಮಾನ್ ಖಾನ್ ರ ಈ ವರ್ತನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

  'ಬಿಗ್ ಬಾಸ್' ಕನ್ನಡ ರನ್ನರ್ ಅಪ್ ಗಳು ನೆನಪಿದ್ದಾರಾ? ಈಗೇನು ಮಾಡ್ತಿದ್ದಾರೆ? ಇಲ್ಲಿದೆ ಮಾಹಿತಿ'ಬಿಗ್ ಬಾಸ್' ಕನ್ನಡ ರನ್ನರ್ ಅಪ್ ಗಳು ನೆನಪಿದ್ದಾರಾ? ಈಗೇನು ಮಾಡ್ತಿದ್ದಾರೆ? ಇಲ್ಲಿದೆ ಮಾಹಿತಿ

  ಅಭಿನವ್ ಒಬ್ಬ ಜಂಟಲ್‌ಮನ್ ಎಂದ ಗೌತಮ್ ಹೆಗಡೆ

  ಅಭಿನವ್ ಒಬ್ಬ ಜಂಟಲ್‌ಮನ್ ಎಂದ ಗೌತಮ್ ಹೆಗಡೆ

  ಕೆಲವು ಮಾಜಿ ಬಿಗ್‌ಬಾಸ್ ಸ್ಪರ್ಧಿಗಳು, ಟಿವಿ ನಟರು ಸಹ ಅಭಿನವ್‌ ಅನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ಚಿತ್ರಕತೆ ಬರಹಗಾರ ಗೌತಮ್ ಹೆಗಡೆ ಅಂತೂ ಸಲ್ಮಾನ್ ಖಾನ್ ವರ್ತನೆ ವಿರುದ್ಧ ಇನ್‌ಸ್ಟಾಗ್ರಾಂ ನಲ್ಲಿ ಉದ್ದನೆಯ ಪೋಸ್ಟ್ ಒಂದನ್ನು ಬರೆದು, 'ಅಭಿನವ್ ನಿಜಕ್ಕೂ ಒಬ್ಬ ಜಂಟಲ್‌ಮನ್, ಈ ಬಾರಿಯ ವೀಕೆಂಡ್ ಎಪಿಸೋಡ್, ಬಿಗ್‌ಬಾಸ್ ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ಎಪಿಸೋಡ್' ಎಂದಿದ್ದಾರೆ.

  ಪ್ರಾರಂಭವಾಗಲಿದೆ ಕನ್ನಡ ಬಿಗ್‌ಬಾಸ್

  ಪ್ರಾರಂಭವಾಗಲಿದೆ ಕನ್ನಡ ಬಿಗ್‌ಬಾಸ್

  ಹಿಂದಿ ಬಿಗ್‌ಬಾಸ್ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದ್ದು, ಕನ್ನಡ ಬಿಗ್‌ಬಾಸ್ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಈಗಾಗಲೇ ಕನ್ನಡ ಬಿಗ್‌ಬಾಸ್ ನ ಪ್ರೋಮೊ ಬಿಡುಗಡೆ ಆಗಿದೆ. ಮಲಯಾಳಂ ಬಿಗ್‌ಬಾಸ್ ಸಹ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ.

  ಅವಕಾಶ ಸಿಕ್ಕಿಲ್ಲ, ಅದೃಷ್ಟನೂ ಇಲ್ಲ: 'ಕಾಮನ್‌ಮ್ಯಾನ್‌'ಗೆ ಬಿಗ್‌ಬಾಸ್‌ನಿಂದ ಸಿಕ್ಕಿದ್ದೇನು?ಅವಕಾಶ ಸಿಕ್ಕಿಲ್ಲ, ಅದೃಷ್ಟನೂ ಇಲ್ಲ: 'ಕಾಮನ್‌ಮ್ಯಾನ್‌'ಗೆ ಬಿಗ್‌ಬಾಸ್‌ನಿಂದ ಸಿಕ್ಕಿದ್ದೇನು?

  English summary
  Nitizen slams Salman Khan for supporting Rakhi Sawant in Bigg Boss 14 instead of Abhinav.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X