3 ವರ್ಷಗಳ ಕಾಲ ಮುರಳಿ ಪಾತ್ರದಲ್ಲಿ ಮಿಂಚಿದ ಪವನ್; ಎತ್ತ ಸಾಗುತ್ತಿದೆ 'ಪುಟ್ಟಕ್ಕನ ಮಕ್ಕಳು' ಸೀರಿಯಲ್?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಜನಮನ್ನಣೆ ಗಳಿಸಿದೆ. ಹಿರಿಯ ಕಲಾವಿದೆ ಉಮಾಶ್ರೀ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಧಾರಾವಾಹಿಯಲ್ಲಿ ಇತ್ತೀಚೆಗೆ ಮುರಳಿ ಪಾತ್ರದ ಬಗ್ಗೆ ಬಹಳಷ್ಟು ಚರ್ಚೆಗಳಾಗಿವೆ.
ಹೌದು, ಧಾರಾವಾಹಿಯಲ್ಲಿ ಪುಟ್ಟಕ್ಕನ ಅಳಿಯ ಮುರಳಿ ಪಾತ್ರ ಇತ್ತೀಚೆಗೆ ಬಹಳಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಕಾರಣ ಪುಟ್ಟಕ್ಕನ ಮಗಳು ಸಹನಾ ಹಾಗೂ ಅಳಿಯ ಮುರಳಿ ನಡುವಿನ ವೈಯಕ್ತಿಕ ಹಾಗೂ ವೈವಾಹಿಕ ಜಗಳಗಳು.

ತನ್ನ ಆತ್ಮ ಗೌರವಕ್ಕೆ ಧಕ್ಕೆ ಬರುವಂತಹ ಜಾಗದಲ್ಲಿ ಇರಲು ಒಪ್ಪದ ಸಹನಾ ತನ್ನ ಗಂಡ ಮುರಳಿಯನ್ನು ತೊರೆದು ತವರು ಮನೆಗೆ ಬಂದಿದ್ದಾಳೆ. ಸದಾ ತಾಯಿಯ ಮಾತು ಕೇಳುವ ಮುರಳಿ, ಸಹನಾಗೆ ತಲೆಕೆಟ್ಟಿದೆ ಎಂದು ನಂಬಿದ್ದಾನೆ. ಆದರೆ, ಈಗ ಹೆಂಡತಿ ಮನೆ ಬಿಟ್ಟು ಬಂದಿರುವುದು ಅವನಿಗೆ ಬಹಳ ದೊಡ್ಡ ಆಘಾತವಾಗಿದೆ.
ಅದರ ಜೊತೆಗೆ ಸಹನಾ ತನ್ನ ಅತ್ತೆಯನ್ನೇ ಜೈಲಿಗೆ ಹಾಕಿಸಿದ್ದಾಳೆ. ಈ ಎಲ್ಲಾ ಕಾರಣಗಳಿಂದ ಮುರಳಿ ಬೇಸರಗೊಂಡು ಪ್ರತಿದಿನ ಸಹನಾ ಹಾಗೂ ಅವಳ ಮನೆಯವರೊಂದಿಗೆ ಜಗಳ ಕಾಯುವ ಸ್ಥಿತಿ ಬಂದಿದೆ.
ಸದ್ಯಕ್ಕೆ ಮುರಳಿ ಎಂಬ ಪಾತ್ರ ಈ ರೀತಿಯ ಭಾವನಾತ್ಮಕ ಸುಳಿಯಲ್ಲಿ ಸಿಕ್ಕಿಕೊಂಡಿದ್ದು, ಈ ಪತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿರುವ ನಟ ಪವನ್ ಕುಮಾರ್. ಮುರಳಿ ಪಾತ್ರದಲ್ಲಿ ಪವನ್ ಕುಮಾರ್ ನಟಿಸುತ್ತಿದ್ದು ಜನ ಮೆಚ್ಚಿಕೊಂಡಿದ್ದಾರೆ. ನಟ ಪವನ್ ಕುಮಾರ್ ಈ ರೀತಿಯ ಪಾತ್ರವನ್ನು ತಮ್ಮ ಅಭಿನಯದ ಮೂಲಕ ಬಹಳ ಹೊರ ತರುತ್ತಿದ್ದಾರೆ.

ಈ ಬಗ್ಗೆ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಅವರೇ ಮಾತನಾಡಿದ್ದಾರೆ. "ಸತತ ಮೂರು ವರ್ಷಗಳ ಕಾಲ ಮುರಳಿ ಎಂಬ ಪಾತ್ರವನ್ನು ನಾನು ಮಾಡಿಕೊಂಡು ಬಂದಿದ್ದೇನೆ. ಇದೀಗ ಜನರು ಈ ಪಾತ್ರವನ್ನು ಸರಿಯಾಗಿ ಗುರುತಿಸಿ ಮೆಚ್ಚುತ್ತಿದ್ದಾರೆ. ಈ ಬಗ್ಗೆ ನನಗೆ ಬಹಳ ಸಂತೋಷವಿದೆ. ಕಥೆಯಲಾಗುತ್ತಿರುವ ಬದಲಾವಣೆಗಳ ಬಗ್ಗೆ ನನಗಂತೂ ಸಮಾಧಾನವಿದೆ"ಎಂದು ಹೇಳಿಕೊಂಡಿದ್ದಾರೆ.
ಇದರ ಜೊತೆಗೆ "ಇದೇ ರೀತಿ ಧಾರಾವಾಹಿಯ ಕಥೆ ಜನರನ್ನು ಮನರಂಜಿಸಲಿದೆ. ಬಹಳ ಪ್ರೀತಿ ಅಭಿಮಾನ ಬಿಟ್ಟು ನೋಡುತ್ತಿರುವ ಪ್ರೇಕ್ಷಕರಿಗೆ ನಾನು ಋಣಿ. ಈ ಭಾರವಾಗಿ ಕಥೆ ಹಾಗೂ ನನ್ನ ಪಾತ್ರದ ವೈಶಿಷ್ಟ್ಯವೆಲ್ಲವೂ ನಮ್ಮ ನಿರ್ದೇಶಕರಾದ ಆರೂರು ಜಗದೀಶ್ ಅವರಿಗೆ ಸಲ್ಲುತ್ತದೆ. ಕಥೆಯಲ್ಲಿ ಇನ್ನೂ ಬಹಳಷ್ಟು ಟ್ವಿಸ್ಟ್‌ಗಳಿದ್ದು, ಒಂದಷ್ಟು ಪ್ರೀತಿ ಪೂರ್ವಕ ಭಾವನಾತ್ಮಕ ಘಟನೆಗಳು ನಡೆಯಲಿವೆ " ಎಂದು ವಾಹಿನಿಯ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ನಟ ಪವನ್ ಕುಮಾರ್.
ಕಳೆದ ಮೂರು ನಾಲ್ಕು ವರ್ಷಗಳಿಂದ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಜೀ ಕನ್ನಡದ ಟಾಪ್ 5 ಸ್ಥಾನದೊಳಗೆ ನಿಲ್ಲುತ್ತಿದೆ. ಹಳ್ಳಿಯ ಸೊಗಡಿರುವ ಈ ಧಾರಾವಾಹಿ ಜನರನ್ನು ರಂಜಿಸುತ್ತಿರುವುದು ಮಾತ್ರವಲ್ಲದೇ ನಮ್ಮ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಕೊಡುವ ದಾರಿಯಲ್ಲಿದೆ.


Click it and Unblock the Notifications











