ಜಾಹ್ನವಿ ಗಂಡ ಜಯಂತ್ ಕ್ರೂರಿ, ಸೈಕೋ ಎನ್ನುವವರು 'ಭೂಮಿಗೆ ಬಂದ ಭಗವಂತ'ನನ್ನು ಯಾಕೆ ನೋಡಲ್ಲ?

ಜೀ ಕನ್ನಡದಲ್ಲಿ ಬರುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಎರಡು ರೀತಿಯಾದ ಕೌಟುಂಬಿಕ ಕಥೆಯೊಂದುಗೆ ಬರುತ್ತಿದೆ. ಒಂದು ಲಕ್ಷ್ಮೀ-ಶ್ರೀನಿವಾಸನ ಕುಟುಂಬದ ಕಥೆ, ಈ ಕುಟುಂಬದಲ್ಲಿಯೇ ಭಾವನಾ-ಸಿದ್ದೇಗೌಡ್ರ ಲವ್ ಸ್ಟೋರಿಯೂ ಅಡಗಿದೆ. ಮಕ್ಕಳ ಸಂತಸಕ್ಕಾಗಿ ದುಡಿಯುವ ಅಪ್ಪ, ಅಮ್ಮ. ಅಲ್ಲೊಂದು ಸುಂದರವಾರ ಪ್ರೀತಿ, ಮಮತೆ ಕಾಣುತ್ತದೆ.

ಇದಕ್ಕೆ ತದ್ವಿರುದ್ಧವಾಗಿಯೇ ಇರುವ ಜೀವನ ಅಂದ್ರೆ ಜಾಹ್ನವಿ ಹಾಗೂ ಜಯಂತ್‌ರದ್ದು. ದೊಡ್ಡ ಶ್ರೀಮಂತ ಜಯಂತ್. ಮನೆ ಅರಮನೆಯಂತಿದೆ. ಆದರೆ ಆ ಅರಮನೆಯಲ್ಲಿ ಜಾಹ್ನವಿ ಪಂಜರದ ಗಿಳಿಯಾಗಿದ್ದಾಳೆ. ಮಾತನಾಡುವುದಕ್ಕೂ ಒಂದು ನರಪಿಳ್ಳೆ ಇಲ್ಲ. ಅಪ್ಪಿ ತಪ್ಪಿ ನಗುತ್ತಾ ನಗುತ್ತಾ ಸ್ನೇಹಿತರ ಜೊತೆಗೆ ಮಾತನಾಡಿದಳು ಅಂತಿಟ್ಟುಕೊಳ್ಳಿ ಮುಗೀತು ಅವರ ಕಥೆ. ಜಾಹ್ನವಿಯದ್ದಲ್ಲ ಮಾತಾಡಿದವರ ಜೀವವನ್ನೇ ತೆಗೆದುಬಿಡುತ್ತಾನೆ. ಅಂಥ ಸೈಕೋ. ಇದೇ ಕಾರಣಕ್ಕೇನೆ ಜಯಂತ್‌ನನ್ನು ನೋಡಿದರೆ ಹೆಣ್ಣು ಮಕ್ಕಳಿಗೆ ಭಯವಾಗುತ್ತಿರುವುದು.

Netizens Ask to viewers to watch Bhoomige Bandha Bhagavantha show intead of Lakshmi Nivasa

ಜಯಂತ್‌ ಕಂಡು ಹೆದರಿದ ಸ್ನೇಹಿತ

ಜಾಹ್ನವಿಯನ್ನು ಯಾರೂ ಕೂಡ ಅತಿಯಾದ ಸಲಿಗೆಯಿಂದ ಮಾತನಾಡಿಸಬಾರದು. ಆ ರೀತಿ ಮಾತನಾಡಿಸಿದ್ದು ಜಯಂತ್ ಕಣ್ಣಿಗೆ ಬಿದ್ದರೆ ಅವರ ಪ್ರಾಣ ಪಕ್ಷಿ ಅತಂತ್ರವಾಗಿ ಓಡಾಡುವಂತೆ ಮಾಡಿಬಿಡುತ್ತಾನೆ. ಈಗ ಜಾಹ್ನವಿಯ ಒಬ್ಬ ಸ್ನೇಹಿತನಿಗೆ ಜಯಂತ್ ಅದೇ ಗತಿ ತಂದಿಟ್ಟಿದ್ದಾನೆ. ಜಯಂತ್ ಹೊಡೆದಿರುವ ಏಟಿಗೆ ಅವನು ಎದ್ದೇಳಲು ಆಗುತ್ತಿಲ್ಲ. ಮಾತು ಆಡುತ್ತಿಲ್ಲ.

ಚಿಕಿತ್ಸೆ ನೆಪದಲ್ಲಿ ಕೊಂದೇ ಬಿಡುತ್ತಾನಾ?

ಸ್ನೇಹಿತನಿಗೆ ಇಂಥದ್ದೊಂದು ಪರಿಸ್ಥಿತಿ ಬಂದಿದೆ ಎಂದು ತಿಳಿದು ಜಾಹ್ನವಿ ಹಾಗೂ ಸ್ನೇಹಿತೆಯರು ಆತನನ್ನು ನೋಡಲು ಓಡೋಡಿ ಬಂದಿದ್ದಾರೆ. ಜಾಹ್ನವಿ ಜೊತೆಗೆ ಜಯಂತ್ ಕೂಡ ಬಂದಿದ್ದಾನೆ. ಎಲ್ಲರೂ ಮಾತನಾಡುವಾಗ ಸುಮ್ಮನೆ ಇದ್ದು, ಆಮೇಲೆ ಆತನ ಅಪ್ಪ ಅಮ್ಮನಿಗೆ ಸಮಾಧಾನ ಮಾಡಿದ್ದಾರೆ. ಪಾಪ ಯಾರು ಈ ರೀತಿ ಮಾಡಿಬಿಟ್ಟಿದ್ದಾರೆ. ನಿಮಗೆ ಏನಾದರೂ ತೊಂದರೆ ಇದ್ದರೆ ನನ್ನ ಬಳಿ ಸಹಾಯ ಕೇಳಬಹದು. ನಿಮ್ಮ ಮಗಲ ಚಿಕಿತ್ಸೆ ನಾನು ಕೊಡಿಸುತ್ತೇನೆ ಎಂದಿದ್ದಾನೆ. ಆದರೆ ಚಿಕಿತ್ಸೆ ನೆಪದಲ್ಲಿ ಕೊಲ್ಲುವುದಕ್ಕೂ ಹಿಂದೆ ಮುಂದೆ ನೋಡಲ್ಲ ಜಯಂತ್.

Netizens Ask to viewers to watch Bhoomige Bandha Bhagavantha show intead of Lakshmi Nivasa

ಜಯಂತ್ ಪಾತ್ರ ನಿಲ್ಲಿಸಿ ಎಂದ ವೀಕ್ಷಕರು

ಜಯಂತ್ ಈ ರೀತಿಯ ವರ್ತನೆ ನಿಜಕ್ಕೂ ಅದೆಷ್ಟೋ ಹೆಣ್ಣು‌ ಮಕ್ಕಳಿಗೆ ಆತಂಕ ಹುಟ್ಟಿಸಿದೆ. ಇಂಥ ಗಂಡಂದಿರು ಸಿಕ್ಕಿದರೆ ಹೆಣ್ಣು ಮಕ್ಕಳ ಸ್ಥಿತಿ ಏನಾಗಬೇಡ. ಮೊದಲು ಜಯಂತ್ ಪಾತ್ರ ಬದಲಾಯಿಸಿ. ನೋಡುವುದಕ್ಕೇನೆ ಭಯ ಆಗುತ್ತೆ ಎಂದು ಪ್ರತಿ ಪ್ರೋಮೋಗೂ ಕಮೆಂಟ್ ಹಾಕುತ್ತಾ ಇರುತ್ತಾರೆ. ಜಯಂತ್ ಕೆಲವೊಮ್ಮ ಅತಿರೇಕದ ಸೈಕೋ ವರ್ತನೆ ತೋರುತ್ತಾನೆ. ಇದರಿಂದ ಸಹಜವಾಗಿಯೇ ಹೆಣ್ಣು ಮಕ್ಕಳಿಗೆ ಭಯವಾಗುತ್ತದೆ.

'ಭಗವಂತ'ನನ್ನು ನೋಡಲು ಸಲಹೆ!

ಈ ರೀತಿ ಪ್ರತಿ ಸಲ ಕಮೆಂಟ್ ಬರುವುದನ್ನು ಒಬ್ಬರು ನೋಡಿದ್ದಾರೆ. ಲಕ್ಷ್ಮಿ ನಿವಾಸ ಧಾರಾವಾಹಿ ಬಗ್ಗೆ ಬೇಸರ ವ್ಯಕ್ತಪಡಿಸುವವರು 'ಭೂಮಿಗೆ ಬಂದ ಭಗವಂತ' ಧಾರಾವಾಹಿ ನೋಡಿ ಎನ್ನುವ ಚರ್ಚೆ ಶುರುವಾಗಿದೆ. 'ಜಯಂತ್‌ಗೆ ಇಷ್ಟೊಂದು ಬ್ಯಾಡ್ ಕಮೆಂಟ್ಸ್ ಹಾಕ್ತಾರೆ ಅಲ್ವಾ? ಮತ್ತೆ ಯಾಕೆ ಜನ ಭೂಮಿಗೆ ಬಂದ ಭಗವಂತ ಧಾರಾವಾಹಿ ನೋಡುವುದಿಲ್ಲ. ಅಲ್ಲಿ ಯಾಕೆ ಗುಡ್ ಕಮೆಂಟ್ಸ್ ಹಾಕಲ್ಲ. ಒಳ್ಳೆ ಕ್ಯಾರೆಕ್ಟರ್ ಬೇಕು ಅಂತಾರೆ. ಮತ್ತೆ 'ಭೂಮಿಗೆ ಬಂದ ಭಗವಂತ' ಧಾರಾವಾಹಿ ನೋಡಲು ಮೀನಾಮೇಷ ಎಣಿಸುತ್ತಾರೆ ಎನ್ನುವ ಕಾಮೆಂಟ್ಸ್ ಬರ್ತಿದೆ.

More from Filmibeat

English summary
zee kannada serial Lakshmi nivasa Written Update on May 13th episode. Here is the details about If Jayant becomes bad then watch Bhagwant Bhagwant serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X