Hamsa Narayan: ಬೆಣ್ಣೆ ಶಾಂತಮ್ಮ.. ಬೆಣ್ಣೆ ತರ ಕಾಣಿಸ್ತೀರ.. ಪುಟ್ಟಕ್ಕ ವೈರಿ ಕಂಡು ಫ್ಯಾನ್ಸ್ ಗಲಿಬಿಲಿ!

By ಎಸ್ ಸುಮಂತ್

ಸಿನಿಮಾದ ನಮ್ಮ ಸೀನಿಯರ್ ಖಳನಾಯಕರ ಬಗ್ಗೆ ನಮಗೆಲ್ಲಾ ಗೊತ್ತೆ ಇದೆ. ವಜ್ರಮುನಿ, ಸುಧೀರ್, ಸುಂದರ್ ಕೃಷ್ಣ ಅರಸ್, ಹೇಮಾ ಚೌದರಿ ಇವರೆಲ್ಲ ತೆರೆ ಮೇಲೆ ಅಬ್ಬರಿಸಿದಾಗ ಎಷ್ಟು ಕೆಟ್ಟವರಲ್ಲವಾ ಎಂಬ ನಿರ್ಧಾರಕ್ಕೆ ನೋಡುಗರು ಸೀಮಿತವಾಗಿತ್ತು. ಅವರ ರಿಯಲ್ ಕ್ಯಾರೆಕ್ಟರ್ ತಿಳಿಯುವ ಅವಕಾಶ ಇರಲಿಲ್ಲ. ಆದ್ರೆ ಈಗ ಆ ಥರ ಅಲ್ಲ. ಸೋಷಿಯಲ್ ಮೀಡಿಯಾ ಇರುವುದರಿಂದ ಕ್ಯಾಮರಾ ಹಿಂದೆ - ಮುಂದೆ ಹೇಗಿರ್ತಾರೆ ಅನ್ನೋದೆಲ್ಲ ಗೊತ್ತಾಗುತ್ತಿದೆ.

ಇಷ್ಟೆಲ್ಲಾ ಹೇಳುವುದಕ್ಕೆ ಕಾರಣ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ವಿಲನ್ ರಾಜೇಶ್ವರಿ. ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಸದಾ ಬ್ಯುಸಿ. ಹಂಸ ನಾರಾಯಣಸ್ವಾಮಿ ಅವರ ಫೋಟೋಗೆ ವಿಚಿತ್ರ ಕಮೆಂಟ್‌ಗಳು ಬಂದಿದೆ. ಆ ಡಿಟೈಲ್ ಸ್ಟೋರಿ ಇಲ್ಲಿದೆ.

Hamsa Narayan-Puttakanna Makkalu

ಕ್ಯಾಮರ ಮುಂದೆ ಹೇಗಿರ್ತಾರೆ..?

ಎಷ್ಟೋ ಸಲ ಕಲಾವಿದರಿಗೆ ತಮ್ಮ ವ್ಯಕ್ತಿತ್ವಕ್ಕಿಂತ ವಿರುದ್ಧವಾದ ಕ್ಯಾರೆಕ್ಟರ್‌ಗಳೇ ಸಿಗುತ್ತಾ ಹೋಗುತ್ತವೆ. ಅವರಿರುವ ರೀತಿಯೇ ಬೇರೆ, ಅವರ ಪಾತ್ರದ ರೀತಿಯೇ ಬೇರೆ. ತೆರೆ ಮೇಲೆ ಅವರು ಕೆಟ್ಟವರಾಗಿ ಕಂಡರೆ ನೋಡುಗರ ಮನಸ್ಸಲ್ಲೂ ಕೆಟ್ಟವರಾಗಿಯೇ ಉಳಿದು ಬಿಡುತ್ತಾರೆ. ಆಂಟಿಯ ರೀತಿ ಕಂಡರೆ ಆಂಟಿಯಾಗಿಯೇ ಉಳಿದು ಬಿಡುತ್ತಾರೆ. ಸದ್ಯದ ಪರಿಸ್ಥಿತಿಯಲ್ಲಿ ಸೋಷಿಯಲ್ ಮೀಡಿಯಾ ಇರುವುದಕ್ಕೆ ಬಚಾವ್ ಆದ್ವಿ.

ಹೊಸ ಫೋಟೋ ಹಂಚಿಕೊಂಡ ಹಂಸ

ಹಂಸ ನಾರಾಯಣಸ್ವಾಮಿ ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುತ್ತಾರೆ. ಅದರಲ್ಲೂ ಇನ್‌ಸ್ಟಾಗ್ರಾಂ ಫೋಟೋ ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಫಾಲೋವರ್ಸ್ ಕೂಡ ದಿನೇ ದಿನೇ ಹೆಚ್ಚಾಗುತ್ತಿದ್ದಾರೆ. ಇದು ಹಂಸ ಅವರೇನಾ ಎನ್ನುವಷ್ಟು ಗಮನ ಕೊಟ್ಟು ನೋಡಬೇಕು ಅಷ್ಟು ಚೆಂದವಾದ ಫೋಟೋಗಳನ್ನು ಹಂಸ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಈಗ ರೆಡ್ ಡ್ರೆಸ್‌ನಲ್ಲಿ ಕಂಗೊಳಿಸುತ್ತಿದ್ದಾರೆ. ರೆಡ್ ಬ್ಲೇಜರ್ ತೊಟ್ಟು, ಬ್ಲಾಕ್ ಕಲರ್ ಸೂಟ್ ಹಾಕಿ, ಸಖತ್ ಪೋಸ್ ಕೊಟ್ಟಿದ್ದಾರೆ.

Hamsa Narayan-Puttakanna Makkalu

ಫೋಟೋಗೆ ಕಮೆಂಟ್‌ಗಳ ಸುರಿಮಳೆ

ಕಲಾವಿದರು ಒಂದೊಂದು ಧಾರಾವಾಹಿ ಅಥವಾ ಸಿನಿಮಾಗಳಲ್ಲಿ ಒಂದೊಂದು ಪಾತ್ರ ಮಾಡುತ್ತಾರೆ. ಒಂದೇ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದು ಅಪರೂಪ. ಹಂಸ ಅವರು ಸದ್ಯ ಪೊಲೀಸ್ ಪಾತ್ರ, ಪೋಷಕ ನಟಿ ಪಾತ್ರ, ಗ್ಲಾಮರ್ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಇದನ್ನೆಲ್ಲಾ ನೋಡಿರುವ ನೆಟ್ಟಿಗರು, ಹೊಸ ಫೋಟೋಗೆ ಡಿಫ್ರೆಂಟ್ ಡಿಫ್ರೆಂಟ್ ಕಮೆಂಟ್‌ಗಳನ್ನ ಹಾಕುತ್ತಿದ್ದಾರೆ. ಹುಡುಗಿ ಎನ್ನಲಾ.. ಆಂಟಿನೋ.. ಹುಡುಗಿನೋ ಗೊತ್ತಾಗ್ತಿಲ್ಲ ಅಂತ ಒಬ್ರು ಪ್ರಶ್ನೆ ಮಾಡಿಕೊಂಡ್ರೆ ಇನ್ನು ಒಬ್ರು ಬೆಣ್ಣೆ ಶಾಂತಮ್ಮ ಬೆಣ್ಣೆ ಥರ ಕಾಣಿಸ್ತೀರ ಅಂತ ವಿಭಿನ್ನ ವಿಭಿನ್ನವಾಗಿ ಕಮೆಂಟ್ ಹಾಕುತ್ತಿದ್ದಾರೆ.

ವಿಲನ್ ಆಗಿ ಅಬ್ಬರಿಸುತ್ತಿರುವ ಹಂಸ

ಸದ್ಯ ಹಂಸ ನಾರಾಯಣಸ್ವಾಮಿ ಅವರು ರಾಜೇಶ್ವರಿಯಾಗಿ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಕಾಣಿಸುತ್ತಿದ್ದಾರೆ. ಪುಟ್ಟಕ್ಕನನ್ನು ಹೇಗಾದರೂ ಮಾಡಿ ಕಷ್ಟಕ್ಕೆ ಸಿಕ್ಕಿ ಬೀಳಿಸುವ ಪಾತ್ರವದು. ಹೀಗಾಗಿ ರಾಜೇಶ್ವರಿ ಪಾತ್ರಧಾರಿ ಎಲ್ಲರಿಂದ ಒಂದಷ್ಟು ಬೈಗುಳವನ್ನು ತಿನ್ನುತ್ತಿರುತ್ತಾಳೆ. ರಾಜೇಶ್ವರಿಯಾಗಿ ಪಕ್ಕಾ ಹಳ್ಳಿ ಭಾಷೆಯಲ್ಲಿಯೇ ಮಾತನಾಡುತ್ತಾರೆ. ಇನ್ನು ಸದಾ ಸೀರೆಯನ್ನುಟ್ಟು ಹಳ್ಳಿಯಲ್ಲಿ ದೊಡ್ಮನೆಯವರು ಇರುವಂತೆ ಸದಾ ಒಡವೆ ತೊಟ್ಟು, ಗತ್ತಿನಿಂದ ಇರುತ್ತಾರೆ. ಯಾರಿಗೂ ಹೆದರದೆ ಜೋರು ಜೋರು ಮಾತಲ್ಲಿ ಎಲ್ಲರನ್ನೂ ತರಾಟೆಗೆ ತೆಗೆದುಕೊಂಡು, ಊರವರ ಬಳಿಯೂ ಶಾಪ ಹಾಕಿಸಿಕೊಳ್ಳುವಂತ ಕ್ಯಾರೆಕ್ಟರ್ ಅದಾಗಿದೆ.

More from Filmibeat

English summary
Netizens commenting Puttakkana Makkalu serial fame Hamsa Nayaran Photos in Social Media. Here is the details about Rajeshwari reels.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X