ಕನ್ನಡದ ಕಿರುತೆರೆ ಶಾರೂಖ್ ಖಾನ್ ಇವರೇ ನೋಡಿ; ಅಭಿಮಾನಿಗಳಿಂದ ಸಿಕ್ತು ಹೊಸ ಬಿರುದು

ಇತ್ತಿಚಿನ ದಿನಗಳಲ್ಲಿ ಸಿನಿಮಾಗಿಂತ ಸೀರಿಯಲ್ ಹೀರೋಗಳಿಗೇನೆ ಹೆಚ್ಚು ಫ್ಯಾನ್ ಫಾಲೋವರ್ಸ್ ಕ್ರಿಯೇಟ್ ಆಗುತ್ತಿದ್ದಾರೆ. ಧಾರಾವಾಹಿ ನೋಡುಗರ ಸಂಖ್ಯೆಯೂ ಹೆಚ್ಚಾಗಿದೆ. ಅದರಲ್ಲೂ ಇತ್ತಿಚಿನ ಧಾರಾವಾಹಿಗಳು ಬಹಳ ಅದ್ದೂರಿಯಾಗಿ ಮೂಡಿ ಬರುತ್ತಿವೆ. ಅದರಲ್ಲೂ ಜೀ ಕನ್ನಡದ ಗಟ್ಟಿಮೇಳ ಧಾರಾವಾಹಿಗೆ ಇರುವ ಫ್ಯಾನ್ ಫಾಲೋವರ್ಸ್ ಅಷ್ಟಿಷ್ಟಲ್ಲ.

ಧಾರಾವಾಹಿ ಶುರುವಾದಾಗಿನಿಂದ ಅಮೂಲ್ಯ ಹಾಗೂ ವೇದಾಂತ್ ಗೆ ಅಭಿಮಾನಿ ಬಳಗ ಜಾಸ್ತಿಯಾಗಿದೆ. ಧಾರಾವಾಹಿ ಕೂಡ ವಯಸ್ಸಿನ ಅಂತರವಿಲ್ಲದಂತೆ ಎಲ್ಲರಿಗೂ ಇಷ್ಟವಾದ ಧಾರಾವಾಹಿಯಾಗಿದೆ. ಹೀಗಾಗಿ ಆಗಾಗ ಟಿ ಆರ್ ಪಿಯಲ್ಲಿ ನಂಬರ್ ಒನ್ ಸ್ಥಾನಕ್ಕೆ ಏರುತ್ತಲೇ ಇರುತ್ತದೆ. ಆದರೆ ಈಗ ಹೇಳುವುದಕ್ಕೆ ಹೊರಟ ವಿಚಾರ ವೇದಾಂತ್ ಅಲಿಯಾಸ್ ರಕ್ಷ್ ಬಗ್ಗೆ.

ಮೊದಲೇ ವೀಕೆಂಡ್. ಸೀರಿಯಲ್, ಶೂಟಿಂಗ್ ಅಂತ ಸಿಕ್ಕಾಪಟ್ಟೆ ಬ್ಯುಸಿ ಇರುವ ವೇದಾಂತ್, ಈ ವೀಕೆಂಡ್ ಬೇರೆ ರೀತಿಯಲ್ಲಿಯೇ ಮಜಾ ಮಾಡಿದ್ಅರೆ. ಬೀಚ್ ಇರುವ ಕಡೆ ಹೋಗಿ, ಚೆನ್ನಾಗಿ ಸುತ್ತಾಡಿದ್ದಾರೆ. ಸದ್ಯಕ್ಕೆ ಒಂದೇ ಒಂದು ವಿಡಿಯೋ ಮಾತ್ರ ಮಾಡಿ ಹಾಕಿದ್ದಾರೆ. ಅದು ಫುಲ್ ಫಾರ್ಮಲ್ ಲುಕ್ ನಲ್ಲಿಯೇ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಇದು ಫ್ಯಾಮಿಲಿಯ ಜೊತೆಗಿನ ಟ್ರಿಪ್ ಅಥವಾ ಸೀರಿಯಲ್ ಶೂಟಿಂಗ್ ಜೊತೆಗೆ ಹೋದಂತ ಟ್ರಿಪ್ ಹ ಗೊತ್ತಾಗುತ್ತಿಲ್ಲ. ಆದ್ರೆ ವೇದಾಂತ್ ಹಾಕಿರುವ ರೀಲ್ಸ್ ಗಂತು ಮಂದಿ ಫಿದಾ‌ ಆಗಿದ್ದಾರೆ.

ಹಿಂದಿ ಹಾಡಿಗೆ ವೇದಾಂತ್ ಅಲಿಯಾಸ್ ರಕ್ಷ್ ಒಂದಷ್ಟು ಪೋಸ್ ನೀಡಿದ್ದಾರೆ. ಬೀಚ್ ಹತ್ರ, ಬಂಡೆ ಹತ್ರ, ತೀರದ ಬಳಿ. ರಾಯಲ್ ಲುಕ್ಕಿಗೆ ರಕ್ಷ್ ನ‌ ಫ್ಯಾನ್ಸ್ ತಾ ಮುಂದು ನಾ ಮುಂದು ಅಂತ ಸ್ಪರ್ಧೆಗೆ ಬಿದ್ದವರಂತೆ ಕಮೆಂಟ್ ಹಾಕುತ್ತಾ ಇದ್ದಾರೆ. ಅದರಲ್ಲೂ ಶಾರೂಖ್ ಖಾನ್ ಕಂಡಂತೆ ಕಾಣ್ತಾ ಇದ್ದೀರಾ ಅಂತ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಅದರ ಜೊತೆಗೆ ಮಾಮೂಲಿಯಂತೆ ಬಾಸ್ ಬಾಸ್ ಎಂಬ ಕಮೆಂಟ್ ಗಳನ್ನು ಹಾಕಿದ್ದಾರೆ.

ವೇದಾಂತ್ ಅಲಿಯಾಸ್ ರಕ್ಷ್ ಗೆ ಫ್ರಾನ್ಸ್ ಏನು ಕಡಿಮೆ ಇಲ್ಲ. ಈಗಂತೂ ದಿನೇ‌ದಿನೇ ಹೆಚ್ಚಾಗುತ್ತಲೇ ಇದ್ದಾರೆ. ಸದ್ಯಕ್ಕೆ 287 ಸಾವಿರ ಫಾಲೋವರ್ಸ್ ಅವರನ್ನ Instagram ನಲ್ಲಿ ಫಾಲೋ ಮಾಡ್ತಾ ಇದ್ದಾರೆ. ಹಾಕುವ ಒಂದೊಂದು ವಿಡಿಯೋಗೂ ವೀವ್ಸ್ ಕೂಡ ಹೆಚ್ಚಾಗಿನೇ ಬರುತ್ತೆ. ಅಷ್ಟೇ ಅಲ್ಲ ಈಗ ಹಿಂದಿ ಹಾಡಿಗೆ ರೀಲ್ಸ್ ಮಾಡಿರುವ ವೇದಾಂತ್ ಗೆ ನೋಡುಗರು ಸ್ಪೆಷಲ್ ಡಿಮ್ಯಾಂಡ್ ಕೂಡ ಇಟ್ಟಿದ್ದಾರೆ. ಅಮೂಲ್ಯ ಜೊತೆಗೂ ಒಂದು ರೀಲ್ಸ್ ಮಾಡಿ ಹಾಕಿ ಅಂತಿದ್ದಾರೆ.

rakksh new video

ವೇದಾಂತ್ ಇಷ್ಟು ದಿನ ದೊಡ್ಡ ಬ್ಯುಸಿನೆಸ್ ಮ್ಯಾನ್ ಆಗಿ, ಬಜಾರಿಯ ಗಂಡನಾಗಿ, ಮನೆಯ ಯಜಮಾನನಾಗಿ‌ ಕಾಣಿಸಿಕೊಂಡಿದ್ದರು. ಆದ್ರೆ ಈಗ ವರ್ಷನ್ ಕಂಪ್ಲೀಟ್ ಚೇಂಜ್ ಆಗಿದೆ. ಮಾಸ್ ಲುಕ್ ನಲ್ಲಿ ಎಂಟ್ರಿ ಕೊಟ್ಟಿದ್ದು, ತಮ್ಮನ ಸಾವಿಗೆ ನ್ಯಾಯ ಕೊಡಿಸಲು ಹೋರಾಟ ನಡೆಸುತ್ತಿದ್ದಾನೆ. ಮನೆಯ ಶತ್ರುಗಳನ್ನು ಹೊಡೆದುರುಳಿಸಲು ಪಣ ತೊಟ್ಟಿದ್ದಾನೆ. ಸದ್ಯ ಮಾಸ್ ಲುಕ್ ನಲ್ಲಿರುವ ವೇದಾಂತ್ ಕಂಡರೆ ಎಲ್ಲರಿಗೂ ಇಷ್ಟವಾಗುತ್ತಿದೆ. ಇದೇ ಲುಕ್ ಗೆ ಬಹುಪರಾಕ್ ಹಾಕುತ್ತಿದ್ದಾರೆ.

More from Filmibeat

English summary
Netizens compared Gattimela serial Vedanth to Shah Rukh Khan after seeing his latest reel
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X