ಬಿಗ್‌ ಬಾಸ್‌ ಸೈಡ್ ಎಫೆಕ್ಟ್: 'ಕಲರ್ಸ್ ಟಿವಿ' ಬ್ಯಾನ್ ಮಾಡಿ ಎಂದು ರೊಚ್ಚಿಗೆದ್ದ ನೆಟ್ಟಿಗರು

'ಕಲರ್ಸ್ ಟಿವಿ' ಹಿಂದಿ ವಾಹಿನಿ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಲರ್ಸ್ ಟಿವಿಯನ್ನು ಬ್ಯಾನ್ ಮಾಡಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ. #boycottcolorstv ಎಂದು ಹ್ಯಾಶ್ ಟ್ಯಾಗ್ ಹಾಕಿ ನೆಟ್ಟಿಗರು ಟ್ರೆಂಡ್ ಮಾಡುತ್ತಿದ್ದಾರೆ. ಕಲರ್ಸ್ ಟಿವಿಯನ್ನು ಅನ್ ಫಾಲೋ ಮಾಡಲಾಗುತ್ತಿದೆ. ಅಂದ್ಹಾಗೆ ನೆಟ್ಟಿಗರು ದಿಢೀರನೆ ರೊಚ್ಚಿಗೇಳಲು ಕಾರಣ ಬಿಗ್ ಬಾಸ್ ರಿಯಾಲಿಟಿ ಶೋ.

ಹೌದು, ಹಿಂದಿ ಕಿರುತೆರೆ ಲೋಕದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್. ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್ ಶೋ ಈಗಾಗಲೆ 13 ಆವೃತ್ತಿಯನ್ನು ಯಶಸ್ವಿಯಾಗಿ ಮುಗಿಸಿದೆ. ಮೊನ್ನೆ ಮೊನ್ನೆಯೆಷ್ಟೆ 13ನೇ ಆವೃತ್ತಿಯ ಫೈನಲ್ ಅದ್ದೂರಿಯಾಗಿ ನಡೆಸುವ ಮೂಲಕ ಬಿಗ್ ಬಾಸ್ ಗೆ ತೆರೆ ಬಿದ್ದಿದೆ. ಬಿಗ್ ಬಾಸ್ ಫೈನಲ್ ಆಗುತ್ತಿದ್ದಂತೆ ನೆಟ್ಟಿಗರು ಕಾರ್ಯಕ್ರಮದ ವಿರುದ್ಧ ಮತ್ತು ವಾಹಿನಿ ವಿರುದ್ಧ ಸಿಡಿದೆದ್ದಿದ್ದಾರೆ. ಮುಂದೆ ಓದಿ...

 boycottcolorstv ಟ್ರೆಂಡಿಂಗ್

boycottcolorstv ಟ್ರೆಂಡಿಂಗ್

'ಬಿಗ್ ಬಾಸ್ 13ನೇ' ಆವೃತ್ತಿಯ ವಿನ್ನರ್ ಆಗಿ ಸಿದ್ದಾರ್ಥ್ ಶುಕ್ಲಾ ಹೊರಹೊಮ್ಮಿದ್ದಾರೆ. ಸಿದ್ದಾರ್ಥ್ ವಿನ್ನರ್ ಅಂತ ಅನೌನ್ಸ್ ಮಾಡುತ್ತಿದ್ದಂತೆ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಬಿಗ್ ಬಾಸ್ ಒಂದು ಪಕ್ಷಪಾತದ ಶೋ ಆಗಿದೆ. ಕಲರ್ಸ್ ಟಿವಿ ಚಂದಾದಾರರಾಗಿರುವವರು ಈಗಲೆ ಕ್ಯಾನ್ಸಲ್ ಮಾಡಿ, ಕಲರ್ಸ್ ಟಿವಿಯನ್ನು ಅನ್ ಫಾಲೋ ಮಾಡಿ, boycottcolorstv ಎಂದು ಟ್ರೆಂಡ್ ಮಾಡುತ್ತಿದ್ದಾರೆ.

 ಬೇಸರ ತರಿಸಿದ ಸಿದ್ಧಾರ್ಥ್ ಗೆಲುವು

ಬೇಸರ ತರಿಸಿದ ಸಿದ್ಧಾರ್ಥ್ ಗೆಲುವು

ಈ ಬಾರಿಯ ಬಿಗ್ ಬಾಸ್ ವಿನ್ನರ್ ಆಸಿಮ್ ರಿಯಾಜ್ ಆಗುತ್ತಾರೆ ಎಂದು ಎಲ್ಲರು ಅಂದುಕೊಂಡಿದ್ದರು. ಬಿಗ್ ಮನೆಯಲ್ಲಿದ್ದ ಆಸಿಮ್ ಎಲ್ಲರ ಮನಗೆದ್ದಿದ್ದರು. ಬಹುತೇಕರು ಆಸಿಮ್ ಅವರೆ ವಿನ್ ಆಗುತ್ತಾರೆ ಎಂದು ಅಂದುಕೊಂಡಿದ್ದರು. ಆದರೆ ಕೊನೆಕ್ಷಣದಲ್ಲಿ ಸಿದ್ದಾರ್ಥ್ ಶುಕ್ಲಾ ವಿನ್ ಆಗಿ ಟ್ರೋಫಿ ಗೆದ್ದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಅಭಿಮಾನಿಗಳು ರಾತ್ರೋರಾತ್ರಿ, ಬಿಗ್ ಬಾಸ್ ವಿರುದ್ಧ, ಸಲ್ಮಾನ್ ಖಾನ್ ವಿರುದ್ದ ಮತ್ತು ಕಲರ್ಸ್ ಟಿವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಟ್ರೆಂಡ್ ಮಾಡಲಾಗುತ್ತಿದೆ.

 ಕಾಶ್ಮೀರಿ ಮಾಡೆಲ್ ಆಸಿಮ್

ಕಾಶ್ಮೀರಿ ಮಾಡೆಲ್ ಆಸಿಮ್

ಆಸಿಮ್ ರಿಯಾಜ್ ಕಾಶ್ಮೀರ ಮೂಲದ ಸ್ಪರ್ಧಿ. ಮಾಡಲಿಂಗ್ ನಲ್ಲಿ ಖ್ಯಾತಿಗಳಿದ್ದ ಆಸಿಮ್ ಈ ಬಾರಿಯ ಬಿಗ್ ಬಾಸ್ ಪ್ರಿಯರ ನೆಚ್ಚಿನ ಸ್ಪರ್ಧಿಯಾಗಿದ್ದರು. "ಬಿಗ್ ಬಾಸ್ ಗೆಲ್ಲುವ ಎಲ್ಲಾ ಅರ್ಹತೆ ಕಾಶ್ಮೀರಿ ಮಾಡೆಲ್ ಗೆ ಇತ್ತು. ಆದರೆ ಕಲರ್ಸ್ ಟಿವಿ ಮೋಸ ಮಾಡಿದೆ. ಪಕ್ಷಪಾತ ಮಾಡಿ ಸಿದ್ಧಾರ್ಥ್ ಅನ್ನು ವಿನ್ ಮಾಡಲಾಗಿದೆ, ನಿಜವಾದ ವಿನ್ನರ್ ಆಸಿಮ್" ಎನ್ನುವ ಕಮೆಂಟ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

 ಆಸಿಮ್ ಮೇಲೆ ಸಿದ್ಧಾರ್ಥ್ ಹಲ್ಲೆ ಮಾಡಿದ್ದರು

ಆಸಿಮ್ ಮೇಲೆ ಸಿದ್ಧಾರ್ಥ್ ಹಲ್ಲೆ ಮಾಡಿದ್ದರು

ಸಿದ್ಧಾರ್ಥ್ ಬಿಗ್ ಮನೆಯಲ್ಲಿ ಆಸಿಮ್ ರಿಯಾಜ್ ಅವರನ್ನು ನಿಂದಿಸಿದ್ದರು, ದೈಹಿಕವಾಗಿ ಹಲ್ಲೆ ಮಾಡಿದ್ದರು ಅಲ್ಲದೆ ಹೆತ್ತವನ್ನು ನಿಂದಿಸಿದ್ದರು. ಆದರೆ ಬಿಗ್ ಬಾಸ್ ಆಯೋಜಕರು ಯಾವುದೆ ಕ್ರಮ ಕೈಗೊಂಡಿಲ್ಲ. ಆಗಲು ಆಯೋಜಕರು ನಡೆದುಕೊಂಡ ರೀತಿ ಸರಿ ಇರಲಿಲ್ಲ. ಮತ್ತೊಬ್ಬರ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯನ್ನು ಗೆಲ್ಲಿಸಲಾಗಿದೆ. ಮೊದಲು ಸಲ್ಮಾನ್ ಖಾನ್ ಅವರನ್ನು ಶೋಯಿಂದ ತೆಗೆದು ಹಾಕಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ಮುಂದೆ ಬಿಗ್ ಬಾಸ್ ಶೋ ನೋಡುವುದಿಲ್ಲ ಎಂದು ನೆಟ್ಟಿಗರು ಸಿಡಿದೆದ್ದಿದ್ದಾರೆ. ಎಷ್ಟೆ ವಿರೋದ ವ್ಯಕ್ತವಾದರು ಬಿಗ್ ಬಾಸ್ ಖ್ಯಾತಿ ಮಾತ್ರ ಇದುವರೆಗೂ ಕಮ್ಮಿ ಆಗಿಲ್ಲ.

More from Filmibeat

English summary
Netizens Outrage against colors TV for biased Bigg Boss Show. Netizens trend on social media for boycott colors tv.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X