For Quick Alerts
  ALLOW NOTIFICATIONS  
  For Daily Alerts

  ಅಶ್ಲೀಲತೆಯೇ ಮನರಂಜನೆ ಅಲ್ಲ: 'ಬಿಗ್ ಬಾಸ್' ಬಹಿಷ್ಕಾರಕ್ಕೆ ನೆಟ್ಟಿಗರ ಒತ್ತಾಯ

  |

  ಕಿರುತೆರೆ ಲೋಕದ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್ ಕೂಡ ಒಂದು. ಹಿಂದಿ ಸೇರಿದಂತೆ ಸಾಕಷ್ಟು ಭಾಷೆಯಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಪ್ರಸಾರವಾಗುತ್ತಿದೆ. ಈಗಾಗಲೇ ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ ಬಿಗ್ ಬಾಸ್ ಪ್ರಾರಂಭವಾಗಿದೆ. ಈ ಶೋ ಎಷ್ಟು ಜನಪ್ರಿಯತೆ ಪಡೆದುಕೊಂಡಿದೆಯೋ ಅಷ್ಟೆ ಅಪಖ್ಯಾತಿಯನ್ನು ಹೊಂದಿದೆ. ಬಿಗ್ ಬಾಸ್ ವಿರುದ್ಧ ಜನರು ಯಾವಾಗಲು ಆಕ್ರೋಶ ವ್ಯಕ್ತಪಡಿಸುತ್ತಲೆ ಇರುತ್ತಾರೆ.

  ಸದ್ಯ ಹಿಂದಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್14 ವಿರುದ್ಧ ನೆಟ್ಟಿಗರು ಪುಲ್ ಗರಂ ಆಗಿದ್ದಾರೆ. ಅಕ್ಟೋಬರ್ 3ರಿಂದ ಹಿಂದಿ ಬಿಗ್ ಬಾಸ್ ಪ್ರಾರಂಭವಾಗಿದೆ. ಈ ಬಾರಿ ಬಿಗ್ ಬಾಸ್ ಗೆ ಕಳೆದ ಬಾರಿ ವಿನ್ನರ್ ಆಗಿದ್ದ ಸಿದ್ಧಾರ್ಥ್ ಶುಕ್ಲ ಎಂಟ್ರಿ ಕೊಟ್ಟಿದ್ದಾರೆ. ಸಿದ್ಧಾರ್ಥ್ ಶುಕ್ಲನನ್ನು ಈ ಬಾರಿಯ ಮಹಿಳಾ ಸ್ಪರ್ಧಿಗಳು ಇಂಪ್ರೆಸ್ ಮಾಡಬೇಕು ಎಂದು ಬಿಗ್ ಬಾಸ್ ಟಾಸ್ಕ್ ನೀಡಿತ್ತು.

  ತೆಲುಗು ಬಿಗ್‌ಬಾಸ್ ಆಯೋಜಕರ ಮೇಲೆ ಮತ್ತೊಂದು ಗಂಭೀರ ಆರೋಪ

  ಈ ಟಾಸ್ಕ್ ನಲ್ಲಿ ಮಹಿಳಾ ಸ್ಪರ್ಧಿಗಳು ನಡೆದುಕೊಂಡ ರೀತಿ ನಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಅತಿಯಾದ ರೋಮ್ಯಾನ್ಸ್ ವಿರುದ್ಧ ಪ್ರೇಕ್ಷಕರು ರೊಚ್ಚಿಗೆದ್ದಿದ್ದಾರೆ. ಈ ಕಾರ್ಯಕ್ರಮವನ್ನು ಮಕ್ಕಳು ಸೇರಿದಂತೆ ಎಲ್ಲ ವರ್ಗದ ಪ್ರೇಕ್ಷಕರು ನೋಡುತ್ತಾರೆ. ಇಂಥ ಶೋನಲ್ಲಿ ಅಶ್ಲೀಲವಾದಂತಹ ಟಾಸ್ಕ್ ಗಳನ್ನು ನೀಡಿರುವುದು ಸರಿಯಲ್ಲ. ಈ ಕಾರ್ಯಕ್ರಮವನ್ನು ಬಹಿಷ್ಕಾರಿಸಬೇಕು ಎಂದು ಸಾಮಾಜಿಕ ಜಾಲತಾಣದ ಮೂಲಕ ಆಕ್ರೋಶ ಹೊರಹಾಕುತ್ತಿದ್ದಾರೆ.

  ಕುಟುಂಬದ ಜೊತೆ ಕುಳಿತು ಈ ಶೋ ನೋಡಲು ಸಾಧ್ಯವಿಲ್ಲ, ಇನ್ಮುಂದೆ ಈ ಶೋ ನೋಡಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ. 'ಅಶ್ಲೀಲತೆ ಮನರಂಜನೆ ಅಲ್ಲ' ಎಂದು ಹೇಳಿ #boycottBB14 ಎಂದು ಟ್ವಿಟ್ಟರ್ ನಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ. ಕಳೆದ ಬಾರಿಯೂ ಬಿಗ್ ಬಾಸ್ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿ ಬಹಿಷ್ಕಾರಿಸುವಂತೆ ಒತ್ತಾಯ ಮಾಡಿದ್ದರು. ಆದರೆ ಯಶಸ್ವಿಯಾಗಿ ಶೋ ಮುಗಿಸಿದ್ದರು. ಈ ಬಾರಿಯೂ ವಿರೋಧ ವ್ಯಕ್ತವಾಗುತ್ತಿರುವುದರಿಂದ ಇನ್ಮುಂದೆಯಾದರೂ ಇಂಥ ಟಾಸ್ಕ್ ಗಳಿಗೆ ಬ್ರೇಕ್ ಹಾಕುತ್ತಾರಾ ಎಂದು ಕಾದು ನೋಡಬೇಕು.

  English summary
  Netizens outrage against Hindi bigg boss 14. boycottBB14 trending on twitter after watching Seductiveness romance in bigg boss.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X