ನಿವೇದಿತಾ ಗೌಡ ವಿರುದ್ಧ ನೆಟ್ಟಿಗರು ಗರಂ: ಕಾಮಿಡಿ ಶೋಗೆ ಛೀಮಾರಿ
Recommended Video
ಬಿಗ್ ಬಾಸ್ ಶೋ ಮುಗಿಸಿ ಸ್ವಲ್ಪ ಸೈಲೆಂಟ್ ಆಗಿದ್ದ ನಿವೇದಿತಾ ಗೌಡ ಅಲ್ಲೊಂದು ಇಲ್ಲೊಂದು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚಿಗಷ್ಟೆ ಕನ್ನಡದ ಕೋಟ್ಯಧಿಪತಿಯಲ್ಲೂ ಭಾಗಿಯಾಗಿದ್ದ ನಿವೇದಿತಾ ಗೌಡ ಈಗ ಕಲರ್ಸ್ ಕನ್ನಡದ ಕಾರ್ಯಕ್ರಮವೊಂದರಲ್ಲಿ ಫುಲ್ ಟೈಂ ತೀರ್ಪುಗಾರ್ತಿಯಾಗಿದ್ದಾರೆ.
ನಿವೇದಿತಾ ಗೌಡ ಅವರು ತೀರ್ಪುಗಾರ್ತಿ ಆಗಿರುವುದಕ್ಕೆ ನೆಟ್ಟಿಗರು ಕೆಂಡಾಮಂಡಲರಾಗಿದ್ದಾರೆ. ಕಾಮಿಡಿ ಕಾರ್ಯಕ್ರಮಕ್ಕೆ ನಿವೇದಿತಾ ಅವರನ್ನ ಆಯ್ಕೆ ಮಾಡಿರುವುದಕ್ಕೆ ವಾಹಿನಿ ಮತ್ತು ಆ ಶೋ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಷ್ಟಕ್ಕೂ, ಆ ಕಾರ್ಯಕ್ರಮ ಯಾವುದು? ನಿವೇದಿತಾ ಬಿಟ್ಟರೇ ಬೇರೆ ಯಾರು ಆ ಶೋನಲ್ಲಿ ಇದ್ದಾರೆ? ನೆಟ್ಟಿಗರ ಅಭಿಪ್ರಾಯವೇನು? ಮುಂದೆ ಓದಿ....

ಕಾಮಿಡಿ ಕಂಪನಿಯಲ್ಲಿ ನಿವೇದಿತಾ ಜಡ್ಜ್
ಅಕುಲ್ ಬಾಲಾಜಿ ನಿರೂಪಣೆ ಮಾಡ್ತಿರುವ ಕಾಮಿಡಿ ಕಂಪನಿ ಎಂಬ ಹೊಸ ಕಾಮಿಡಿ ಕಾರ್ಯಕ್ರಮ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಪ್ರತಿ ಶನಿವಾರ ಮತ್ತು ಭಾನುವಾರ ಈ ಶೋ ಮೂಡಿಬರ್ತಿದ್ದು, ನಟ ಕಾರ್ತಿಕ್ ಜಯರಾಂ (ಜೆಕೆ) ಮತ್ತು ನಟಿ ಕೃಷಿ ತಾಪಂಡ ತೀರ್ಪುಗಾರರಾಗಿದ್ದಾರೆ. ಇವರಿಬ್ಬರಿಗಿಂತ ಮುಖ್ಯವಾಗಿ ನಿವೇದಿತಾ ಗೌಡ ಮುಖ್ಯ ತೀರ್ಪುಗಾರ್ತಿಯಾಗಿ ಕೂರಿಸಿದ್ದಾರೆ.

ನಿವೇದಿತಾ ಸಾಧನೆ ಏನು?
''ನಿವೇದಿತಾ ಗೌಡ ಏನ್ ಸಾಧನೆ ಮಾಡಿದ್ದಾಳೆ ಅಂತಾ ನೀವ್ ಪ್ರೋಗ್ರಾಮ್ ಅವ್ರು ಅವಳನ್ನ ಜಡ್ಜ್ ಮಾಡಿದ್ದೀರಾ ಬೇರೆ ಯಾರು ಕಣ್ಣಿಗೆ ಕಾಣಿಸ್ಲಿಲ್ವ ಅಥವಾ ಸಿಗ್ಲೇ ಇಲ್ವಾ'' ಎಂದು ನೆಟ್ಟಿಗರು ಕಿಡಿಕಾರುತ್ತಿದ್ದಾರೆ.

ಹಿರಿಯರು ಕಾಣಿಸಿಲ್ವಾ?
''ಕನ್ನಡದಲ್ಲಿ ಹಾಸ್ಯ ಕಲಾವಿದರು ಏನು ಕಮ್ಮಿ ಇಲ್ಲ. ಟೆನ್ನಿಸ್ ಕೃಷ್ಣ, ಜನಾರ್ಧನ್, ಬುಲೆಟ್ ಪ್ರಕಾಶ್, ಉಮೇಶ್, ಬಿರಾದರ್, ರಂಗಾಯಣ ರಘು, ಚಿಕ್ಕಣ್ಣ, ಇನ್ನು ಬಹಳಷ್ಟು ಜನ ಇದ್ದಾರೆ ಅವರಿಗೆ ತಗೋರಿ. ಇಲ್ಲಾಂದ್ರೆ ಜನರು ಛಿ ಮರಿ ಹಾಕ್ತಾರೆ'' ಎಂದು ಜನ ಟೀಕಿಸುತ್ತಿದ್ದಾರೆ.

ನಿಜವಾದ ಕಲಾವಿದರಿಗೆ ಪ್ರೋತ್ಸಾಹಿಸಿ
''ರಂಗಭೂಮಿಯಲ್ಲಿ ಹಲವಾರು ವರ್ಷಗಳ ಅನುಭವ ಹೊಂದಿರುವ ಅನೇಕ ಹಿರಿಯ ರಂಗಭೂಮಿ ಕನ್ನಡ ಕಲಾವಿದರಿದ್ದಾರೆ. ದಯವಿಟ್ಟು ಅಂಥವರನ್ನು ಆಯ್ಕೆ ಮಾಡಿ ಆ ಸೀಟಲ್ಲಿ ಕೂರಸಿ. ಅವರಿಂದ ಅಲ್ಲಿನ ಕಂಟೆಂಸ್ಟೆಂಟ್ ಗಳು ಕಲಿಯಲು ಒಳ್ಳೆಯ ಅವಕಾಶ ಸಿಗುತ್ತೆ ಹಾಗೂ ನಿಮ್ ಚಾನೆಲಗೂ ಒಂದೊಳ್ಳೆ ಹೆಸರು ಬರುತ್ತೆ ....'' ಎಂದು ಸಂದೇಶ ರವಾನಿಸಿದ್ದಾರೆ.

ಕನ್ನಡದ ಮಾನ ಉಳಿಸಿ
''ಥೂ ನಿಮ್ ಜನ್ಮಕ್ಕೆ ಜಡ್ಜ ಮಾಡೋಕೆ ಒಂದು ಮಾನದಂಡ ಬ್ಯಾಡವಾ ಆ ವಮ್ಮಂಗೆ ಸರಿಯಾಗಿ ಕನ್ನಡನೇ ಮಾತಾಡಕ್ಕಾಗಲ್ಲ ......ಚಿತ್ರರಂಗದಲ್ಲಿ ಎಷ್ಟೋ ಜನ ಹಿರಿಯ ನಟರಿದ್ದು ಅವ್ರನ್ನ ಕರೆದು ಸ್ಥಾನಕೋಡಿ ಅದೇಲ್ಲ ಬಿಟ್ಟು ಟಿಆರ್ಪಿಗಾಗಿ ಡಬ್ಬ ಪ್ರೋಗ್ರಾಮ ಮಾಡೋದ್ ನಿಲ್ಲಿಸಿ ಕನ್ನಡದ ಮಾನ ಉಳಿಸಿ'' ಎಂದು ಛೀಮಾರಿ ಹಾಕುತ್ತಿದ್ದಾರೆ.

ಡ್ಯಾನ್ಸ್ ಶೋನಲ್ಲಿ ವಿನೋದ್ ರಾಜ್ ಇಲ್ಲ
ಕಾಮಿಡಿ ಶೋಗಳ ಕಥೆ ಇದಾದರೇ, ಮತ್ತೊಂದೆಡೆ ಡ್ಯಾನ್ಸ್ ಶೋಗಳ ಕಥೆಯೂ ಅದೇ ಆಗಿದೆ. ಡ್ಯಾನ್ಸ್ ಬಗ್ಗೆ ಏನೂ ಗೊತ್ತಿಲ್ಲದವರನ್ನ ಕರೆದುಕೊಂಡು ಜಡ್ಜ್ ಮಾಡಿರ್ತಾರೆ. ಹಾಗ್ನೋಡಿದ್ರೆ, ಡ್ಯಾನ್ಸ್ ಶೋಗಳಿಗೆ ವಿನೋದ್ ರಾಜ್ ಅವರನ್ನ ಪರಿಗಣಿಸಬೇಕು. ಆದರೆ, ಯಾರೊಬ್ಬರು ವಿನೋದ್ ರಾಜ್ ಅವರನ್ನ ಕರೆಸುವ ಆಸಕ್ತಿ ತೋರಿಸಿಲ್ಲ. ಇದು ಕೂಡ ಟಿವಿ ಪ್ರೇಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ.


Click it and Unblock the Notifications











