ಸಂತ್ರಸ್ತರ ಬದುಕು ಬದಲಾಯಿಸುತ್ತ 'ಮನರಂಜನೆ' ಆಟದಲ್ಲಿ ಗೆದ್ದ 12.5 ಲಕ್ಷ?

Recommended Video

12.50 ಲಕ್ಷ ಗೆದ್ದ ಸಂಸದರ ಪರಿಸ್ಥಿತಿ ಏನಾಗಿದೆ ಗೊತ್ತಾ..? | kannadada kotyadhipathi 4 | FILMIBEAT KANNADA

ಕನ್ನಡದ ಕೋಟ್ಯಧಿಪತಿ ಸೀಸನ್ 4 ಕನ್ನಡ ಕಿರುತೆರೆ ಪ್ರೇಕ್ಷಕರ ಅಚ್ಚುಮೆಚ್ಚಿನ ಕಾರ್ಯಕ್ರಮ. ಮನರಂಜನೆ ಜೊತೆಗೆ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಇರುವ ಏಕೈಕ ಕನ್ನಡದ ಕಾರ್ಯಕ್ರಮ. ಇತ್ತೀಚಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಂಸದರಾದ ಪ್ರತಾಪ್ ಸಿಂಹ ಮತ್ತು ತೇಜಸ್ವಿ ಸೂರ್ಯ ವಿರುದ್ಧ ಭಾರಿ ವಿರೋದ ವ್ಯಕ್ತವಾಗುತ್ತಿದೆ.

ಬೀಕರ ನೆರೆಯಿಂದ ಬದುಕು ಕಳೆದುಕೊಂಡು ಒಂದೊತ್ತಿನ ಊಟಕ್ಕು ಪರೆದಾಡುತ್ತಿರುವ ಸಂತ್ರಸ್ತರಿಗಾಗಿ ಆಟ ಆಡಲು ಇಬ್ಬರು ಹಾಟ್ ಸೀಟಿಗೆ ಬಂದಿದ್ದರು. ಆದ್ರೆ ಇವರಿಬ್ಬರು ಈ ಪರಿ ಬಿಲ್ಡಪ್ ಕೊಟ್ಟು, ಪ್ರಚಾರ ಗಿಟ್ಟಿಸಿಕೊಂಡು, ತಮ್ಮದೆ ಸರ್ಕಾರವನ್ನು ಹಾಡಿ ಹೊಗಳಿಕೊಳ್ಳುತ್ತ ಹಣ ಸಂಪಾದಿಸಬೇಕಿತ್ತಾ ಎನ್ನುವ ಆಕ್ರೋಶ ಕೇಳಿ ಬರುತ್ತಿದೆ. ಕೇಂದ್ರ ಸರ್ಕಾರದ ಮುಂದೆ ನಿಂತು ಹಣ ಕೇಳುವ ಬದಲು ಇಲ್ಲಿ ಕುಳಿತು ನಟಕೀಯ ಆಟವಾಡುತ್ತಿದ್ದಾರೆ. ಎಂದು ಜನ ಪ್ರಶ್ನಿಸುತ್ತಿದ್ದಾರೆ.

ಅಷ್ಟಕ್ಕು ಇಬ್ಬರು ಗೆದ್ದಿರುವ 12,50,000 ಹಣದಿಂದ ಏನು ಮಾಡಲು ಸಾಧ್ಯವಾಗುತ್ತೆ. ಈ ಹಣ ದಿಂದ ಎಷ್ಟು ಜನರ ಬದುಕು ರೂಪಿಸಲು ಸಾಧ್ಯವಾಗುತ್ತೆ. ಇಷ್ಟೆಲ್ಲ ಪ್ರಚಾರ ಗಿಟ್ಟಿಸಿಕೊಂಡು ಬಂದಿರುವ 12.5ಲಕ್ಷ ನೆರೆಪರಿಹಾರಕ್ಕೆ ಸಾಕಾಗುತ್ತಾ ಎನ್ನುವ ಪ್ರಶ್ನೆಗಳನ್ನು ಮಾಡುತ್ತಿದ್ದಾರೆ ವೀಕ್ಷಕರು.

12.5 ಲಕ್ಷದಿಂದ ಏನು ಮಾಡಲು ಸಾಧ್ಯ?

12.5 ಲಕ್ಷದಿಂದ ಏನು ಮಾಡಲು ಸಾಧ್ಯ?

ಇಬ್ಬರು ಸಂಸದರು ಮನರಂಜನೆ ಕಾರ್ಯಕ್ರಮದಲ್ಲಿ ಕುಳಿತು ಗೆದ್ದಿರುವ 12,50,000 ಹಣದಿಂದ ಏನು ಮಾಡಲು ಸಾಧ್ಯವಾಗುತ್ತೆ. ಇದರಿಂದ ಎಷ್ಟು ಜನರಿಗೆ ಮನೆ ಕಟ್ಟಿಸಿ ಕೊಡಲು ಸಾಧ್ಯ, ಹೆಚ್ಚು ಅಂದರೆ ಎರಡು ಮನೆಗಳನ್ನು ಕಟ್ಟಿಸಬಹುದು. ಈ ಹಣದಿಂದ ಕುಡಿಯುವ ನೀರನ್ನೂ ಪೂರೈಸಲು ಸಾಧ್ಯವಾಗುವುದಿಲ್ಲ. ಸಂತ್ರಸ್ತರಿಗೆ ಬೇಕಾದ ಮೂಲಭೂತ ಅವಶ್ಯಕವಸ್ತುಗಳು ಸಹ ಈ ಹಣದಿಂದ ಸಿಗುವುದಿಲ್ಲ. ಅಂತಹದ್ರಲ್ಲಿ ಈ 12.5ಲಕ್ಷಕ್ಕಾಗಿ ಸಂತ್ರಸ್ತರ ಸಂಕಷ್ಟವನ್ನು ಮುಂದಿಟ್ಟುಕೊಂಡು ನಾಟಕೀಯ ಆಟಗಳನ್ನು ಆಡುತ್ತಿರುವುದು ಜನರ ಕೋಪಕ್ಕೆ ಕಾರಣವಾಗಿದೆ. ಕರ್ತವ್ಯ ಮರೆತು ಎಂಟರ್ ಟೇನ್ ಮಾಡುವುದು ಜನಪ್ರತಿನಿಧಿಗಳ ಸ್ಥಾನದಲ್ಲಿರುವವರಿಗೆ ಶೋಭೆ ತರುವುದಿಲ್ಲ.

ಕೇಂದ್ರದ ಸರ್ಕಾರದ ಬಳಿ ಹಣ ಕೇಳುವ ತಾಕತ್ತಿಲ್ಲ

ಕೇಂದ್ರದ ಸರ್ಕಾರದ ಬಳಿ ಹಣ ಕೇಳುವ ತಾಕತ್ತಿಲ್ಲ

ರಾಜ್ಯದ ನೆರೆ ಸಂತ್ರಸ್ತರಿಗೆ ನಿರೀಕ್ಷೆಯ ಪರಿಹಾರ ಕೇಂದ್ರದಿಂದ ಸಿಕ್ಕಿಲ್ಲ. ಕೇಂದ್ರದಲ್ಲಿರುವುದು ಬಿಜೆಪಿ ಸರ್ಕಾರ. ರಾಜ್ಯದ 25 ಬಿಜೆಪಿ ಸಂಸದರು ಕೇಂದ್ರದ ಮೇಲೆ ಒತ್ತಡ ಹೇರಿದ್ದರೆ ಅನುದಾನ ಹೆಚ್ಚಾಗಿಯಾದರು ಬರುತ್ತಿತ್ತು. ಆದ್ರೆ ಮೋದಿ ಮುಂದೆ ನಿಂತು ಪರಿಹಾರ ಕೇಳುವ ತಾಕತ್ತು ಇವರಿಗಿಲ್ಲ. ಇಲ್ಲಿ ಬಂದು ಯಾರದ್ದೊ ಟಿ ಆರ್ ಪಿ ಹೆಚ್ಚಿಸಿ, ಅವರು ಪ್ರಚಾರ ಗಿಟ್ಟಿಸಿಕೊಂಡು ಹಣ ಗಳಿಸಬೇಕಾ ಎಂದು ಜನ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಮತ್ತೆ ಪ್ರವಾಹದ ಭೀತಿ ಕಾಡುತ್ತಿದೆ

ಮತ್ತೆ ಪ್ರವಾಹದ ಭೀತಿ ಕಾಡುತ್ತಿದೆ

ಇಬ್ಬರ ಮೇಲೆ ಈಗ ದೊಡ್ಡ ಜವಾಬ್ದಾರಿ ಇದೆ. ಅದರಲ್ಲೂ ರಾಜ್ಯ ಸಂಕಷ್ಟದಲ್ಲಿದ್ದಾಗ, ನೆರೆ ಹಾವಳಿಯಿಂದ ಜನರು ಮನೆ-ಮಠ ಕಳೆದುಕೊಂಡು ಊಟಕ್ಕು ಪರದಾಡುತ್ತಿದ್ದಾರೆ. ಇಂತ ಸ್ಥಿತಿಯಲ್ಲಿ ಜನಪ್ರತಿನಿಧಿಗಳಾದವರು ಸಾಮಾನ್ಯ ಜನರ ಕಷ್ಟಕ್ಕೆ ಜೊತೆಯಾಗಬೇಕು. ಮತ್ತೆ ಉತ್ತರ ಕರ್ನಾಟಕ ಮುಳುಗುವ ಭೀತಿ ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ ಏನು ಮಾಡಬೇಕು? ಹೆಚ್ಚಿನ ಪರಿಹಾರಕ್ಕಾಗಿ ಕೇಂದ್ರದ ಮೇಲೆ ಹೇಗೆ ಒತ್ತಡ ಹೇರಬೇಕು ಎನ್ನುವುದನ್ನು ಬಿಟ್ಟು ಈ ರೀತಿ ಶೋ ಕೊಟ್ಟು, ಆಟವಾಡುತ್ತ ಕುಳಿತುಕೊಳ್ಳುವುದು ಎಷ್ಟು ಸರಿ ಎನ್ನುವುದು ಸಾಮಾನ್ಯ ಜನರ ಪ್ರಶ್ನೆ.

ಜನಪ್ರತಿನಿಧಿಗಳು ಮಾಡುವ ಕೆಲಸನ ಇದು?

ಜನಪ್ರತಿನಿಧಿಗಳು ಮಾಡುವ ಕೆಲಸನ ಇದು?

ಜನಪ್ರತಿನಿಧಿಗಳ ಕೆಲಸವೇನು, ಆದ್ರೆ ಇವರಿಬ್ಬರು ತಮ್ಮ ಕೆಲಸ ಮಾಡುವುದನ್ನು ಬಿಟ್ಟು ಮನರಂಜನೆಯ ಕಾರ್ಯಕ್ರಮದಲ್ಲಿ ಬಂದು ಕುಳಿತು ಆಟವಾಡುತ್ತ ಶೋ ಕೊಡುತ್ತಿದ್ದಾರೆ. ಇಲ್ಲಿ ಕುಳಿತು ಮಾತನಾಡುವ ಬದಲು ಕೇಂದ್ರದ ಮುಂದೆ ನಿಂತು ಮಾತನಾಡಿದ್ದರೆ ಇವರು ನಿಜಕ್ಕು ಜನಪ್ರತಿನಿಧಿಗಳು, ಜನರ ಕಷ್ಟಕ್ಕೆ ಸ್ಫಂದಿಸುತ್ತಾರೆ ಅಂತ ಒಪ್ಪಿಕೊಳ್ಳಬಹುದು. ಆದ್ರೆ ಇಬ್ಬರೀಗ ಮಾಡುತ್ತಿರುವುದೇನು ಎಂದು ಜನ ಆಕ್ರೋಶ ಹೊರಹಾಕುತ್ತಿದ್ದಾರೆ.

ಕನ್ನಡದ ಕೋಟ್ಯಧಿಪತಿಯ ಉದ್ದೇಶವೇನು?

ಕನ್ನಡದ ಕೋಟ್ಯಧಿಪತಿಯ ಉದ್ದೇಶವೇನು?

ಮನರಂಜನೆಯ ವಾಹಿನಿಯಲ್ಲಿ ಮನರಂಜನೆ ಬಿಟ್ಟು ಏನನ್ನು ನಿರೀಕ್ಷೆ ಮಾಡಲು ಸಾಧ್ಯ. ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮ ಮನರಂಜನೆಯ ಜೊತೆಗೆ ಜ್ಞಾನವನ್ನು ಹೆಚ್ಚಿಸುತ್ತಿದೆ. ಇದು ಸಾಮಾನ್ಯ ಜನರ ಆಟ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡೆಸಿಕೊಡುತ್ತಾರೆ. ಆದ್ರೆ ಇಂತವರನ್ನು ಕರೆಸಿದ್ರೆ ಕಾರ್ಯಕ್ರಮ ನೋಡುವಿದನ್ನೆ ಬಿಡಬೇಕಾಗುತ್ತೆ ಎಂದು ವೀಕ್ಷಕರು ಅಸಮಾಧಾನ ಹೋರಹಾಕುತ್ತಿದ್ದಾರೆ.

More from Filmibeat

English summary
Netizens outrage against Pratap Simha and Tejasvi Surya for participate in Kannadada Kotyadhipati.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X