'ನಿನಗಾಗಿ' ಧಾರಾವಾಹಿಯ ಬಾಲು ಮೆಚ್ಚಿದ ಕನ್ನಡಿಗರು; ಕಾರಣ ಏನ್ ಗೊತ್ತಾ..?

By ಎಸ್ ಸುಮಂತ್

ಈಗಂತೂ ಕನ್ನಡಿಗರೂ ಕನ್ನಡ ಮಾತನಾಡುವುದೇ ಕಷ್ಟವಾಗಿದೆ. ನವೆಂಬರ್ ಸಮಯದಲ್ಲೊ, ಕನ್ನಡ ಭಾಷೆಗೆ ತೊಂದರೆ ಎದುರಾದಾಗಲೋ ಕನ್ನಡ ಕನ್ನಡ ಅಂತ ಕೂಗುವುದು ಬಿಟ್ಟರೆ ಹೆಚ್ಚಾಗಿ ಕನ್ನಡ ಭಾಷೆಯನ್ನ ನಮ್ಮ ಕನ್ನಡದವರು ಮಾತನಾಡುವುದೇ ಕಡಿಮೆ. ಇಂಗ್ಲಿಷ್ ಭಾಷೆಯಲ್ಲಿಯೇ ಕಮ್ಯುನೇಕಷನ್ ಮಾಡುವುದು ಜಾಸ್ತಿ. ಬೇರೆ ಭಾಷೆಗಳು ಬೇಕು. ಆದರೆ ಎದುರು ಇರುವವರ ಜೊತೆಗೆ ಕನ್ನಡದಲ್ಲಿಯೇ ಮಾತಾಡಿದರೆ ಕಲಿಯುವುದಕ್ಕೂ ಅನುಕೂಲವಾಗುತ್ತದೆ ಅಲ್ವಾ.

ನವೆಂಬರ್ ತಿಂಗಳು ಮುಗಿದಿದೆ. ಕನ್ನಡಾಂಭೆಯ ಉತ್ಸವವೂ ಇಲ್ಲ. ಕನ್ನಡದ ಬಗ್ಗೆ ಯಾಕೇ ಮಾತಾಡ್ತಾ ಇರೋದು ಅಂತ ಯೋಚಿಸ್ತಾ ಇದ್ದೀರಾ. ನಮ್ಮ ಜನ ಯಾರಾದ್ರೂ ಕನ್ನಡವನ್ನು ಉಳಿಸುವ ಪ್ರಯತ್ನ, ಪ್ರಚಾರ ಮಾಡುವ ಪ್ರಯತ್ನ ಮಾಡುತ್ತಿದ್ದರೆ ಅದನ್ನ ಪ್ರೋತ್ಸಾಹಿಸುವುದನ್ನು ಮರೆಯುವುದಿಲ್ಲ. ಈಗ ಆ ಪ್ರೋತ್ಸಾಹದ ಬಗ್ಗೆ ಒಂದು ಸ್ಟೋರಿ ಇದೆ ನೋಡಿ ಹೇಳ್ತೀವಿ.

Netizens praise Ninagagi Serial actor Balu kannada love

ಬಾಲು ನಟನೆಗೂ ಮಂದಿ ಫಿದಾ

ಕಲರ್ಸ್ ಕನ್ನಡದಲ್ಲಿ 'ನಿನಗಾಗಿ' ಧಾರಾವಾಹಿ ಮೂಡಿ ಬರ್ತಾ ಇದೆ. ಸೂಪರ್ ಸ್ಟಾರ್ ರಚನಾ ಬಾಳಲ್ಲಿ ಒಂದು ಮಗು ಬಂದ ಮೇಲೆ ಬದುಕು ಹೇಗೆಲ್ಲಾ ಟರ್ನ್ ತೆಗೆದುಕೊಳ್ಳುತ್ತದೆ ಎಂಬ ಕಥೆ. ಆ ಮಗುವಿನ ಮಾವ ಬಾಲು. ಅಂದ್ರೆ ಕೃಷ್ಣಾಳ ಅಮ್ಮನ ತಮ್ಮ. ಮಾಧುರಿಯ ತಮ್ಮ ಈ ಬಾಲು. ಅಪ್ಪ ಅಮ್ಮನನ್ನು ತೊರೆದು ತನ್ನ ತಂಗಿ ಮಗು ಹಾಗೂ ಜೀವನಿಗೋಸ್ಕರ ಬಂದಿರೋದು. ಈಗ ಬಾಲು ಹಾಕುವ ಬಟ್ಟೆಯ ಮೇಲೆ ಕನ್ನಡಿಗರ ಕಣ್ಣು ಬಿದ್ದಿದೆ.

ಟೀ ಶರ್ಟ್ ಬಗ್ಗೆ ಹೊಗಳಿಕೆ

ಬಾಲು 'ನಿನಗಾಗಿ' ಧಾರಾವಾಹಿಯಲ್ಲಿ ಮೊದಲಿನಿಂದಲೂ ಟೀ ಶರ್ಟ್‌ನಲ್ಲಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ಹಾಕುವ ಟೀ ಶರ್ಟ್ ಬಿಟ್ಟು ಬೇರೆ ಹಾಕೋದೆ ಇಲ್ಲ. ಈಗ ಕನ್ನಡಿಗರ ಮನಸ್ಸು ಗೆದ್ದಿರುವುದು ಇದೇ ಟೀ ಶರ್ಟ್. ಹೌದು ಈಗಿನ ಕಾಲದಲ್ಲಿ ಇಂಗ್ಲಿಷ್ ಅಕ್ಷರಗಳೇ ಹೆಚ್ಚಾಗಿ ಪ್ರಿಂಟ್ ಆಗುವ ಟೀ ಶರ್ಟ್ ಇರುವ ಕಾಲದಲ್ಲಿ ಬಾಲು ಹಾಕುವ ಟೀ ಶರ್ಟ್ ಬೇರೆ ರೀತಿಯಾಗಿಯೇ ಇದೆ.

ವೀಕ್ಷಕನ ಪತ್ರ

ಬಾಲು ಬಗ್ಗೆ ಪ್ರಶಂಸೆಯನ್ನು ಇದೀಗ ಪತ್ರದ ಮೂಲಕ ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ. 'ಕನ್ನಡದ ಬಾಲು.. ಖಾಸಗಿ ವಾಹಿನಿಗಳ ಧಾರಾವಾಹಿಗಳಲ್ಲಿ ಇಂಗ್ಲಿಷ್ ಬಳಕೆಗೆ ಬರವಿಲ್ಲ. ಒಂದೊಂದು ಕನ್ನಡ ಪದವನ್ನು ಕೊಲೆ ಮಾಡಲಾಗುತ್ತಿದೆ. ಅಪರೂಪ ಎಂಬಂತೆ 'ಕಲರ್ಸ್ ಕನ್ನಡ'ದಲ್ಲಿ ಪ್ರಸಾರವಾಗುತ್ತಿರುವ 'ನಿನಗಾಗಿ' ಧಾರಾವಾಹಿಯಲ್ಲಿ ನಾಯಕ ನಟ ಜೀವ ಅವರ ಬಾವಮೈದುನ (ಮೃತ ಹೆಂಡತಿಯ ಸೋದರ) ಬಾಲು ಪಾತ್ರಧಾರಿ ಯಾವಾಗಲೂ ಟೀಶರ್ಟ್ ಧರಿಸುತ್ತಾರೆ. ಬಾಲು ತೊಡುವ ಟೀಶರ್ಟ್ ಮೇಲೆ ಯಾವುದಾದರೂ ಮುದ್ರಿತ 'ಕನ್ನಡ ಸೂಕ್ತಿ' ಇದ್ದೇ ಇರುತ್ತದೆ. ಉದಾಹರಣೆಗೆ' 'ಕಣ ಕಣದಲ್ಲೂ ಕನ್ನಡ', 'ಬದುಕು ಜಟಕಾ ಬಂಡಿ', 'ನೀ ಹೀಂಗ ನೋಡ ಬ್ಯಾಡ ನನ್ನ', 'ನೋಡಿ ಸ್ವಾಮಿ ನಾವಿರೋದೆ...' ಮುಂತಾದ ಕನ್ನಡದ ವಾಕ್ಯಗಳಿರುತ್ತವೆ.

ಈ ಮೂಲಕ ಕನ್ನಡ ಕವಿವಾಣಿಯನ್ನು ಪ್ರಚುರಪಡಿಸಿದಂತೆ ಆಗುತ್ತದೆ. ಈ ಕಾರಣಕ್ಕೆ ಬಾಲು ಪಾತ್ರದಾರಿಯನ್ನು ಮೆಚ್ಚುತ್ತೇನೆ. ಬಹುತೇಕ ಕನ್ನಡಿಗರು ಇಂಗ್ಲಿಷ್ ಪದವುಳ್ಳ ಟೀಶರ್ಟ್ ಧರಿಸುವುದೇ ಪ್ರತಿಷ್ಠೆಯನ್ನಾಗಿ ಮಾಡಿಕೊಂಡಿದ್ದರೆ, 'ನಿನಗಾಗಿ' ಧಾರಾವಾಹಿಯ ಬಾಲು ಕನ್ನಡ ನುಡಿ ಮುತ್ತಿನ ಟೀಶರ್ಟ್ ಧರಿಸುವ ಮೂಲಕ ತನ್ನ ಕನ್ನಡ ಪ್ರೇಮವನ್ನು ತನಗರಿವಿಲ್ಲದೆ ವ್ಯಕ್ತಪಡಿಸುತ್ತಿದ್ದಾರೆ. ಅವರನ್ನು 'ಕನ್ನಡದ ಬಾಲು' ಎಂದು ಕರೆಯಬಹುದು' ಎಂದು ಮಂಡ್ಯದ ಆಲಕೆರೆಯ ಸಿ. ಸಿದ್ದರಾಜು ಅವರು ಪತ್ರ ಬರೆದಿದ್ದಾರೆ.

ಬಾಲು ಬಗ್ಗೆ ಫ್ಯಾನ್ಸ್ ಏನಂದ್ರು?

ಬಾಲುಗೆ ಇರುವ ಕನ್ನಡದ ಮೇಲಿನ ಪ್ರೇಮಕ್ಕೆ ಎಲ್ಲರೂ ಮನಸೋತಿದ್ದಾರೆ. ಆ ಸಂಬಂಧ ಹಲವರು ಕಮೆಂಟ್ ಬಾಕ್ಸ್‌ನಲ್ಲಿ ಹೌದು ನಾವೂ ಅವರು ಹಾಕುವ ಟೀ ಶರ್ಟ್‌ಗಳನ್ನ ನೋಡಿದ್ದೇವೆ ಎಂದೇ ಕಮೆಂಟ್ ಹಾಕುತ್ತಿದ್ದಾರೆ. ಬಾಲು ಕನ್ನಡ ಪ್ರೇಮಕ್ಕೆ ಶಬ್ಬಾಶ್ ಗಿರಿ ತೋರಿಸಿದ್ದಾರೆ.

More from Filmibeat

English summary
Here is the details about Kannada letters on Ninagagi serial actor Balu T-shirt. viewer wrote letter praising him;
Read more about: tv kannada serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X