ಬಿಗ್‌ಬಾಸ್ ಕನ್ನಡ 11ಕ್ಕೆ ತುಕಾಲಿ ಪತ್ನಿ ಬರಲಿ; ಮಾನಸ ಹಾಸ್ಯಕ್ಕೆ ಕನ್ನಡಿಗರು ಫಿದಾ

By Shruthi Harish Gowda

ಬಿಗ್ ಬಾಸ್ ಸೀಸನ್ ಹತ್ತು ತುಕಾಲಿ ಸಂತೋಷ್‌ಗೆ ಸಾಕಷ್ಟು ಹೆಸರನ್ನು ತಂದುಕೊಟ್ಟಿತು. ಬಿಗ್‌ಬಾಸ್ ಮನೆಯೊಳಗೆ ತಮ್ಮ ಹಾಸ್ಯದ ಮೂಲಕವೇ ಕನ್ನಡಿಗರನ್ನು ರಂಜಿಸಿದ್ದರು. 112 ದಿನವೂ ಕೂಡ ಸಹ ಸ್ಪರ್ಧಿಗಳ ನಗುವಿಗೆ ಕಾರಣವಾಗಿದ್ದರು. ಇತ್ತ ತುಕಾಲಿ ಸಂತೋಷ್ ಪತ್ನಿ ಮಾನಸ ಕೂಡ ಈ ಸೀಸನ್‌ನಿಂದ ಬಹಳಷ್ಟು ಜನಪ್ರಿಯತೆ ಗಳಿಸಿದ್ದಾರೆ.

ತುಕಾಲಿ ಸಂತೋಷ್ ಪತ್ನಿ ಇಷ್ಟೊಂದು ಹಾಸ್ಯಾಸ್ಪದವಾಗಿ ಮಾತಾಡುತ್ತಾರೆ ಎಂಬುದು ಅಷ್ಟಾಗಿ ಕನ್ನಡಿಗರಿಗೆ ತಿಳಿದಿರಲಿಲ್ಲ. ಬಿಗ್ ಬಾಸ್ ಮನೆಗೆ ಬಂದಾಗ ತುಕಾಲಿ ಸಂತೋಷ್ ಪತ್ನಿ ಮಾನಸ ಅವರ ಕಾಮಿಡಿ ಸೆನ್ಸ್‌ಗೆ ವೀಕ್ಷಕರು ಫಿದಾ ಆಗಿದ್ದಾರೆ.

Netizens wants Tukali Santhosh wife Manasa should be in Bigg Boss Kannada 11

ಬಿಗ್ ಬಾಸ್ ಮನೆಗೆ ಎಲ್ಲಾ ಸದಸ್ಯರ ಕುಟುಂಬದವರು ಬಂದಾಗ ತುಕಾಲಿ ಸಂತೋಷ್ ಪತ್ನಿ ಮಾನಸ ಸಹ ಬಂದಿದ್ದರು. ಈ ವೇಳೆ ತಮ್ಮ ಹಾಸ್ಯ ಪ್ರಜ್ಞೆಯಿಂದ ಮನೆ ಮಂದಿಯನ್ನೆಲ್ಲಾ ನಗಿಸಿದ್ದರು. ಈ ಸಮಯದಲ್ಲೇ ತುಕಾಲಿ ಸಂತೋಷ್ "ಇವಳು ಎಮ್ಮೆಯನ್ನು ಕಾಯುತ್ತಾ ನಿಂತಿದ್ದಳು" ಎಂದು ಹಾಸ್ಯ ಚಟಾಕಿ ಹಾರಿಸಿದಾಗ, "ನೀನು ಅರಮನೆಯ ಮುಂದೆ ಅರ್ಜುನನ್ನು ಕಾಯುತ್ತಾ ಇದ್ಯಾ" ಎಂದು ಗಂಡನಿಗೆ ಕೌಂಟರ್ ಕೊಟ್ಟಿದ್ದರು.

ಇನ್ನು ತುಕಾಲಿ ಸಂತೋಷ್ ಅವರೇ ಮಾನಸ ಅವರನ್ನು ಮದುವೆಯಾದ ಮೇಲೆ ಕಾಮಿಡಿಯನ್ನು ಮಾಡುವುದನ್ನು ಕಲಿಸಿದರಂತೆ. ಬಳಿಕ ಇಬ್ಬರೂ ಕೂಡ ಬೇರೆ ಬೇರೆ ವೇದಿಕೆಗಳಲ್ಲಿ ಕಾರ್ಯಕ್ರಮಗಳನ್ನು ನೀಡುತ್ತಾ ಅನ್ಯೂನ್ಯವಾಗಿ ಇದ್ದಾರೆ. ಇಬ್ಬರ ದಾಂಪತ್ಯವನ್ನು ಕಂಡ ಕನ್ನಡಿಗರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇಬ್ಬರ ಅನ್ಯೂನ್ಯತೆಯನ್ನು ಮನಗಂಡ ವೀಕ್ಷಕರು ನೀವು ಇದೇ ರೀತಿ ಜೀವನವನ್ನು ನಡೆಸಿಕೊಂಡು ಹೋಗಿ ಎಂದು ಶುಭ ಹಾರೈಸಿದ್ದಾರೆ.

ಮುಂದಿನ ಸೀಸನ್‌ಗೆ ಬರಬೇಕಂತೆ ಮಾನಸ

'ಕಾಮಿಡಿ ಕಿಲಾಡಿಗಳು' ರಿಯಾಲಿಟಿ ಶೋನಲ್ಲಿ ಮಾನಸ ಭಾಗಿಯಾದ ಮೇಲೆ ಜೋಡಿ ನಂ.1 ಕಾರ್ಯಕ್ರಮದಲ್ಲಿ ಭಾಗಿಯಾದ ಮೇಲೆ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಬಳಿಕ ಬಿಗ್ ಬಾಸ್ ಸೀಸನ್ 10ಕ್ಕೆ ಹೋಗುವ ಅವಕಾಶ ಹುಡುಕಿಕೊಂಡು ಬಂದಿತು. ಬಿಗ್ ಬಾಸ್‌ಗೆ ಬಂದಾಗ ಮಾನಸಗೂ ಕೂಡ ಒಳ್ಳೆಯ ಅವಕಾಶ ಸಿಕ್ಕಿದೆ. ಮಾತಿನ ಮೂಲಕವೇ ಎಲ್ಲರನ್ನೂ ನಗಿಸಿದ್ದಾರೆ. ಮಾನಸ ಹಾಸ್ಯ ಚಟಾಕಿಗೆ ವೀಕ್ಷಕರು ಫಿದಾ ಆಗಿದ್ದು, ಮುಂದಿನ ಬಿಗ್ ಬಾಸ್ ಸೀಸನ್ 11ಕ್ಕೆ ಮಾನಸ ಬರಲೇಬೇಕು ಎಂದು ಹೇಳಿದ್ದಾರೆ.

ಮಾನಸ ಪ್ರತಿ ಮಾತಿನಲ್ಲೂ ಕಾಮಿಡಿ

ಮಾನಸ ಮಾತಾಡುವಾಗ ಸರಳವಾಗಿಯೇ ಕಾಮಿಡಿ ಮಾಡುತ್ತಾ ನಗಿಸುತ್ತಾರೆ. ಇದು ಬಿಗ್ ಬಾಸ್ ವೇದಿಕೆಯಲ್ಲಿ ಸಾಬೀತಾಗಿದೆ. ಇನ್ನು ಕಿಚ್ಚ ಸುದೀಪ್ ಕೂಡ ತುಕಾಲಿ ಸಂತೋಷ್ ಬಗ್ಗೆ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಸರಳವಾದ ಮಾತಿನಲ್ಲಿ ಕ್ಷಣ ಕ್ಷಣಕ್ಕೂ ಕೂಡ ಮಾನಸ ಮಾತಿನಲ್ಲಿ ಹಾಸ್ಯ ಹೊಮ್ಮುತ್ತಿತ್ತು. ಯಾವುದನ್ನು ಮುಚ್ಚಿಟ್ಟುಕೊಳ್ಳದೆ ಮುಗ್ಧವಾಗಿ ನೇರ ಮಾತಿನಿಂದಲೇ ಮಾನಸ ಪ್ರತಿಯೊಬ್ಬರ ಮನಸ್ಸನ್ನು ಗೆದ್ದುಬಿಟ್ಟಿದ್ದಾರೆ. ತುಕಾಲಿಗಿಂತ ತುಕಾಲಿ ಅವರ ಪತ್ನಿಯೇ ತುಂಬಾ ಚೆನ್ನಾಗಿ ಕಾಮಿಡಿಯನ್ನು ಮಾಡುತ್ತಾರೆ ಎಂದು ಮನೆ ಮಾತಾಗಿದ್ದಾರೆ.

More from Filmibeat

English summary
Netizens wants Tukali Santhosh wife Manasa should be in Bigg Boss Kannada 11
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X