ಹೊಸ ಧಾರಾವಾಹಿಯಲ್ಲಿ ಶ್ರೀರಸ್ತು ಶುಭಮಸ್ತು ಧಾರಾವಾಹಿಯ ಶಾರ್ವರಿ

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದೆ. ಈ ಧಾರಾವಾಹಿಯಲ್ಲಿ ಇರುವ ಪಾತ್ರಗಳು ಕೂಡ ಅದ್ಭುತವಾಗಿವೆ.

ಸ್ವೀಟ್ ವಿಲನ್ ಆಗಿ ನಟಿಸುತ್ತಿರುವ ಶಾರ್ವರಿ ಅಲಿಯಾಸ್ ನೇತ್ರಾ ಜಾಧವ್ ಅವರ ಬಗ್ಗೆ ಹಲವರಿಗೆ ಗೊತ್ತೇ ಇದೆ. ಆಕೆಯ ನಟನೆ ಬಗ್ಗೆಯಂತೂ ಏನು ಹೇಳುವಂತೆ ಇಲ್ಲ.

Netra jadhav Re entry to Telugu TV industy with new serial

ಇನ್ಮುಂದೆ ನೇತ್ರಾ ಜಾಧವ್ ಅಲಿಯಾಸ್ ಶಾರ್ವರಿ ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತೆಲುಗಿನ ಯಾವ ಧಾರಾವಾಹಿಯಲ್ಲಿ ಎಂಬುದನ್ನು ತಿಳಿಯಲು ಮುಂದೆ ಓದಿ..

ನೇತ್ರಾ ಜಾಧವ್ ನಟಿಸಿದ ಧಾರಾವಾಹಿಗಳು

ಈಗಾಗಲೇ ಸಾಕಷ್ಟು ಧಾರಾವಾಹಿಗಳಲ್ಲಿ ನಟಿ ನೇತ್ರಾ ಜಾಧವ್ ನಟಿಸಿದ್ದಾರೆ. ಆದರೆ, ಕನ್ನಡದಲ್ಲಿ ಯಾವುದು ಒಳ್ಳೆಯ ಬ್ರೇಕ್ ನೀಡಿರಲಿಲ್ಲ. ಆಕೆ ಕ್ಯಾಮರಾ ಎದುರು ಬಂದಿರುವುದು ಇದೇ ಮೊದಲೇನಲ್ಲ. ಹತ್ತು ವರ್ಷದ ಹಿಂದೆ ಉದಯ ಟಿವಿಯಲ್ಲಿ ಮೂಡಿ ಬಂದ 'ರಥ ಸಪ್ತಮಿ' ಧಾರಾವಾಹಿಯಲ್ಲಿ ನಟಿಸಿದ್ದರು. ಈ ಧಾರಾವಾಹಿಯಲ್ಲೂ ಸುಧಾರಾಣಿ, ಜ್ಯೋತಿ ರೈ, ಜಯಶ್ರೀ ಸೇರಿದಂತೆ ಹಲವು ನಟಿಯರು ನಟಿಸಿದ್ದರು. ಇದರಲ್ಲಿ ನೇತ್ರಾ ಜಾಧವ್ ಕೂಡ ಅದ್ಭುತವಾಗಿ ನಟಿಸಿದ್ದರು. ಇದಾದ ಬಳಿಕ 'ಸುಂದರಿ', 'ಸಾಗುತ ದೂರ ದೂರ' ಧಾರಾವಾಹಿಗಳಲ್ಲೂ ಬಣ್ಣ ಹಚ್ಚಿದ್ದರು. 'ಆಕೃತಿ' ಎಂಬ ಹಾರರ್ ಧಾರಾವಾಹಿಯಲ್ಲೂ ನೇತ್ರಾ ಜಾಧವ್ ಸೌಮ್ಯ ಸ್ವಾಭಾವದ ಪಾತ್ರ ಮಾಡಿದ್ದರು.

ತೆಲುಗಿನಲ್ಲೂ ಅಭಿಮಾನಿಗಳಿದ್ದಾರೆ

ಇನ್ನು ಕನ್ನಡ ಮಾತ್ರವಲ್ಲದೇ, ತೆಲುಗು ಧಾರಾವಾಹಿಗಳಲ್ಲೂ ನೇತ್ರಾ ನಟಿಸಿದ್ದಾರೆ. ತೆಲುಗು ಧಾರಾವಾಹಿ 'ರಾವೋಯಿ ಚಂದಮಾಮ'ದಲ್ಲಿ ಇಂದ್ರಸೇನಾ ಪಾತ್ರದಲ್ಲಿ ನೇತ್ರಾ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಒಳ್ಳೆಯವರಿಗೆ ಒಳ್ಳೆಯವಳು, ಕೆಟ್ಟವರಿಗೆ ಕೆಟ್ಟವಳು ಎಂಬಂತೆ ನಟಿಸಿದ್ದಾರೆ. ವಿಲನ್ ರೀತಿ ರೌಡಿ ಪಾತ್ರದಲ್ಲಿ ನಟಿಸಿದ್ದರು. ಶ್ರೀರಸ್ತು ಶುಭಮಸ್ತು ಧಾರಾವಾಹಿ ಮೂಲಕ ಮತ್ತೆ ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ಶಾರ್ವರಿ ಪಾತ್ರದಲ್ಲಿ ಎಲ್ಲರ ಮುಂದೆ ಒಳ್ಳೆಯವರಂತೆ ನಟಿಸುತ್ತಾ, ಒಳಗೊಳಗೆ ಪಿತೂರಿ ಮಾಡುತ್ತಿರುವ ನೇತ್ರ ಅಭಿನಯ ಎಲ್ಲರಿಗೂ ಮೆಚ್ಚುಗೆಯಾಗಿದೆ.

Netra jadhav Re entry to Telugu TV industy with new serial

ಶಾರ್ವರಿ ಪಾತ್ರ ಮೆಚ್ಚಿಕೊಂಡ ವೀಕ್ಷಕರು

ನೇತ್ರಾ ಜಾಧವ್ ಕಾಸ್ಟ್ಯೂಮ್, ಆಕ್ಟಿಂಗ್ ಎಲ್ಲವನ್ನೂ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಶಾರ್ವರಿ ಪಾತ್ರವನ್ನು ಮೆಚ್ಚಿಕೊಂಡಿರುವ ವೀಕ್ಷಕರಲ್ಲಿ ಅಭಿಮಾನಿಯೊಬ್ಬರು, ಇತ್ತೀಚೆಗೆ ತಮ್ಮ ನೆಚ್ಚಿನ ನಟಿಗೆ ಪುಟ್ಟ ಪತ್ರವನ್ನು ಬರೆದಿದ್ದಾರೆ. ಶ್ರೀರಸ್ತು ಶುಭಮಸ್ತು ಧಾರಾವಾಹಿ ಬಹಳ ಚೆನ್ನಾಗಿ ಮೂಡಿ ಬರುತ್ತಿದ್ದು, ನಿಮ್ಮ ಅಭಿಮಾನಿ ನಾನು ಎಂದು ಚೇತನಾ ರಾವ್ ಎಂಬುವರು ಪತ್ರ ಬರೆದಿದ್ದರು. ನಿಮ್ಮ ಸೌಂದರ್ಯ, ಅಭಿನಯ ಹಾಗೂ ಕಾಸ್ಟ್ಯೂಮ್ ಅಂತೂ ಅದ್ಭುತವಾಗಿದೆ. ನಿಮಗೆ ಅವಾರ್ಡ್ ಸಿಕ್ಕಿದ್ದಕ್ಕೆ ಖುಷಿ ಇದೆ. ಸಿನಿಮಾಗಳಲ್ಲೂ ನಿಮಗೆ ಒಳ್ಳೆಯ ಅವಕಾಶಗಳು ಸಗಲಿ ಎಂದು ವಿಶ್ ಮಾಡಿದ್ದರು.

'ಮಗುವಾ ಓ ಮಗುವಾ' ಎನ್ನಲಿರುವ ನೇತ್ರಾ

ಇದೀಗ ನೇತ್ರಾ ಮತ್ತೆ ತೆಲುಗು ಅಂಗಳಕ್ಕೆ ಕಾಲಿಡುತ್ತಿದ್ದಾರೆ. ತೆಲುಗಿನ ಹೊಸ ಧಾರಾವಾಹಿಯೊಂದಕ್ಕೆ ಬಣ್ಣ ಹಚ್ಚಿದ್ದಾರೆ. 'ರಾವೋಯ ಚಂದಮಾಮ' ಧಾರಾವಾಹಿಯಲ್ಲಿ ಇಂದ್ರಸೇನಾ ಪಾತ್ರ ಮುಗಿದು ವರ್ಷವಾಗಿದೆ. ಇದೀಗ 'ಮಗುವಾ ಓ ಮಗುವಾ' ಎಂಬ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಇದರಲ್ಲಿ ಅತ್ತೆಯ ಪಾತ್ರವನ್ನು ನಿರ್ವಹಿಸುತ್ತಿದ್ದು, ಪ್ರೋಮೋದಲ್ಲಿ ತಮ್ಮ ಪಾತ್ರದ ವೀಡಿಯೋವನ್ನು ನೇತ್ರಾ ಅವರು ಹಂಚಿಕೊಂಡಿದ್ದಾರೆ. ಮತ್ತೆ ತೆಲುಗು ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.

More from Filmibeat

English summary
Shrirastu Shubhamasthu Fame netra jadhav tollywood entry;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X