For Quick Alerts
  ALLOW NOTIFICATIONS  
  For Daily Alerts

  'ಬಾಹುಬಲಿ' ನಿರ್ಮಾಣ ಸಂಸ್ಥೆಯಿಂದ ಕನ್ನಡಿಗರಿಗೆ ಅದ್ಧೂರಿ ಧಾರಾವಾಹಿ

  By Suneetha
  |

  ಐತಿಹಾಸಿಕ ಕಥೆಯಾಧರಿತ 'ಬಾಹುಬಲಿ' ಭಾರತೀಯ ಚಿತ್ರರಂಗದಲ್ಲಿ ಒಂದು ಹೊಸ ಇತಿಹಾಸ ನಿರ್ಮಿಸಿ ದಾಖಲೆ ಮಾಡಿದ ಸಿನಿಮಾ. ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದ 'ಅರ್ಕ ಮೀಡಿಯಾ ವರ್ಕ್ಸ್' ಇದೀಗ ಕನ್ನಡದಲ್ಲಿ ಧಾರಾವಾಹಿ ಒಂದನ್ನು ನಿರ್ಮಾಣ ಮಾಡುತ್ತಿದೆ.

  ಜುಲೈ 24, ಭಾನುವಾರದಂದು ಆರಂಭವಾಗಲಿರುವ ಕನ್ನಡದ ಮತ್ತೊಂದು ಎಂರ್ಟಟೈನ್ಮೆಂಟ್ ಚಾನಲ್ 'ಕಲರ್ಸ್ ಸೂಪರ್' ನಲ್ಲಿ ಪ್ರಸಾರವಾಗಲಿರುವ ಅದ್ಧೂರಿ ಧಾರಾವಾಹಿ 'ಗಿರಿಜಾ ಕಲ್ಯಾಣ'ಕ್ಕೆ ಅರ್ಕ ಮೀಡಿಯಾ ವರ್ಕ್ಸ್ ಹಣ ಹೂಡುತ್ತಿದೆ.['ಕಲರ್ಸ್ ಸೂಪರ್' ವಾಹಿನಿಯ ಸೂಪರ್ ಸ್ಪೆಷಲ್ ಕಾರ್ಯಕ್ರಮಗಳೇನು.?]

  ಅಂದಹಾಗೆ ಈ ದುಬಾರಿ ವೆಚ್ಚದ ಅದ್ಧೂರಿ ಧಾರಾವಾಹಿಗೆ ಆಕ್ಷನ್-ಕಟ್ ಹೇಳುತ್ತಿರೋದು ಕನ್ನಡದ ಖ್ಯಾತ ನಟ ನವೀನ್ ಕೃಷ್ಣ. ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ನಟನೆ, ಗಾಯನ, ಸಾಹಿತ್ಯದ ಮೂಲಕ ಗುರುತಿಸಿಕೊಂಡಿರುವ ನವೀನ್ ಕೃಷ್ಣ ಅವರು ಇದೇ ಮೊದಲ ಬಾರಿಗೆ ಧಾರಾವಾಹಿಗೆ ಆಕ್ಷನ್-ಕಟ್ ಹೇಳಲು ತಯಾರಾಗಿದ್ದಾರೆ.

  ಕರ್ನಾಟಕ, ಹೈದಾರಾಬಾದ್ ಮತ್ತು ತಮಿಳುನಾಡಿನಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಈ ಧಾರಾವಾಹಿಗೆ ಅನಂತ ಶಾಂಡ್ರೇಯ ಅವರು ಚಿತ್ರಕಥೆ ಬರೆದಿದ್ದು, ಅಕ್ಷಯ ಸತ್ಯ ಅವರು ಸಂಭಾಷಣೆ ಬರೆದಿದ್ದಾರೆ. ಸತ್ಯ ಭಾರದ್ವಾಜ್ ಸಂಕಲನ ಈ ಧಾರಾವಾಹಿಗಿದೆ.

  New channel Colors Super launches new fiction show 'Girija Kalyana'

  ಈ ಧಾರಾವಾಹಿಯಲ್ಲಿ ಕನ್ನಡ ನಟ ಚೇತನ್ ಚಂದ್ರ ಅವರು ಶಿವನ ಪಾತ್ರ ವಹಿಸಿದ್ದು, ಖ್ಯಾತ ನಟಿ ರಚಿತಾ ರಾಮ್ ಅವರ ಸಹೋದರಿ ನಿತ್ಯಾ ರಾಮ್ ಅವರು ಪಾರ್ವತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  'ಆಪ್ತಮಿತ್ರ', 'ಸಂಗೊಳ್ಳಿ ರಾಯಣ್ಣ' ಚಿತ್ರಗಳಿಗೆ ಛಾಯಾಗ್ರಾಹಕರಾಗಿ ದುಡಿದಿದ್ದ ರಮೇಶ್ ಬಾಬು ಅವರ ಕ್ಯಾಮೆರಾ ಕೈ ಚಳಕ ಈ ಧಾರಾವಾಹಿಯಲ್ಲಿ ಅದ್ಭುತವಾಗಿ ಮೂಡಿಬಂದಿದೆ ಅನ್ನೋದಕ್ಕೆ ಈ ಪ್ರೋಮೋ ಸಾಕ್ಷಿ. ಸದ್ಯಕ್ಕೆ ಈ ಪ್ರೋಮೋ ನೋಡಿ ಎಂಜಾಯ್ ಮಾಡಿ...

  English summary
  New channel Colors Super announces the launch of its new fiction show 'Girija Kalyana'. Directed By Naveen Krishna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X