For Quick Alerts
  ALLOW NOTIFICATIONS  
  For Daily Alerts

  'ಕಲರ್ಸ್' ಕಡೆಯಿಂದ ಕನ್ನಡಕ್ಕೆ ಮತ್ತೊಂದು ಕಲರ್ ಫುಲ್ ವಾಹಿನಿ.!

  By Harshitha
  |

  ಕಲರ್ಸ್ ಕನ್ನಡ ವಾಹಿನಿಯ ಯಶಸ್ಸಿನ ನಂತರ ವಯಾಕಾಮ್ 18 ಸಂಸ್ಥೆ ಮತ್ತೊಂದು ಕನ್ನಡ ಮನರಂಜನಾ ಚಾನೆಲ್ ಆರಂಭಿಸುತ್ತಿದೆ. ಕಲರ್ಸ್ ಕನ್ನಡ ಚಾನೆಲ್ ನ ಎರಡನೇ ಜಿ.ಇ.ಸಿ ವಾಹಿನಿಗೆ 'ಕಲರ್ಸ್ ಸೂಪರ್' ಅಂತ ನಾಮಕರಣ ಮಾಡಲಾಗಿದೆ.

  ಜುಲೈ 24 ರಂದು 'ಕಲರ್ಸ್ ಸೂಪರ್' ವಾಹಿನಿ ಲೋಕಾರ್ಪಣೆಗೊಳ್ಳಲಿದ್ದು, ಜುಲೈ 25 ರಿಂದ ಕಾರ್ಯಕ್ರಮಗಳು ಪ್ರಸಾರವಾಗಲಿದೆ ಅಂತ 'ಕಲರ್ಸ್ ಕನ್ನಡ' ಹಾಗೂ 'ಕಲರ್ಸ್ ಸೂಪರ್' ಬ್ಯುಸಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್ ತಿಳಿಸಿದ್ದಾರೆ.

  'ಕಲರ್ಸ್ ಕನ್ನಡ' ವಾಹಿನಿಯಂತೆ 'ಕಲರ್ಸ್ ಸೂಪರ್' ಚಾನೆಲ್ ನಲ್ಲೂ ಹೊಸ ಹೊಸ ಧಾರಾವಾಹಿ ಹಾಗೂ ವಿಭಿನ್ನ ರಿಯಾಲಿಟಿ ಶೋಗಳು ಪ್ರಸಾರವಾಗಲಿದೆ. 'ಮಿಲನ' ಪ್ರಕಾಶ್, ರಾಮ್ ಜಿ, ವಿನೋದ್ ಧೋಂಡಲೇ ಸೇರಿದಂತೆ ಪ್ರಮುಖರು 'ಕಲರ್ಸ್ ಸೂಪರ್' ವಾಹಿನಿಗೆ ಧಾರಾವಾಹಿಗಳನ್ನು ನಿರ್ದೇಶಿಸಲಿದ್ದಾರೆ.

  ಮೂಲಗಳ ಪ್ರಕಾರ, ಮುಂಬರುವ 'ಬಿಗ್ ಬಾಸ್ ಕನ್ನಡ' ಕಾರ್ಯಕ್ರಮ 'ಕಲರ್ಸ್ ಸೂಪರ್' ವಾಹಿನಿಯಲ್ಲೇ ಪ್ರಸಾರವಾಗಲಿದೆ. [ತೆರೆ ಮರೆಯಲ್ಲಿ 'ಬಿಗ್ ಬಾಸ್' ಕನ್ನಡ ಸೀಸನ್ 4 ಕೆಲಸ ಶುರು!]

  English summary
  The 2nd Kannada GEC of Colors Channel is all set to be launched on July 24th. The Channel has been named as 'Colors Super'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X