»   » ಚಾಲೆಂಜಿಂಗ್ ಸ್ಟಾರ್ ದರ್ಶನ್ ಜತೆ ಹೊಸ ಸಾವಿತ್ರಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಜತೆ ಹೊಸ ಸಾವಿತ್ರಿ

Posted By:
Subscribe to Filmibeat Kannada
'ಜೀ ಕನ್ನಡ'ದ ಜನಪ್ರಿಯ ಧಾರಾವಾಹಿ ಚಿ.ಸೌ.ಸಾವಿತ್ರಿಯ ಹೊಸ ಸರಣಿಯನ್ನು ಜುಲೈ 29ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಉದ್ಘಾಟಿಸುತ್ತಿದ್ದಾರೆ. 545 ಸಂಚಿಕೆಗಳನ್ನು ಪೂರೈಸಿರುವ ಈ ಧಾರಾವಾಹಿ, ಅನೇಕ ಕಾರಣಗಳಿಂದಾಗಿ ಕರ್ನಾಟಕದ ಮನೆಮಾತು.

ನುರಿತ ಜನಪ್ರಿಯ ಕಲಾವಿದರು, ಲಲಿತ ಮಹಲ್ ನಲ್ಲಿ ನಡೆದ ಸಾವಿತ್ರಿ ಮದುವೆ, ಕನ್ನಡ ಕಿರುತೆರೆಯಲ್ಲೇ ಅತಿ ಹೆಚ್ಚು ಸಂಖ್ಯೆಯಲ್ಲಿ ಸ್ಪೆಷಲ್ ದಿನಗಳಿಗೆ ಸ್ಪೆಷಲ್ ಎಪಿಸೋಡ್ ಗಳು, ಮೈಸೂರಿನಲ್ಲಿ ನಡೆದ 'ಸಾವಿತ್ರಿ ಜತೆ ಮಾತುಕತೆ', ಬೆಂಗಳೂರಿನ ಹಲವಾರು ಅಂಗಡಿಗಳಲ್ಲಿ ಮಾರಾಟವಾಗತೊಡಗಿದ 'ಸಾವಿತ್ರಿ ಸೀರೆ', 'ಜೀ ಕುಟುಂಬ' ಪ್ರಶಸ್ತಿ ಪ್ರದಾನದಲ್ಲಿ ಅತಿ ಹೆಚ್ಚು ಪ್ರಶಸ್ತಿಗಳು....ಹೀಗೆ ಚಿ.ಸೌ.ಸಾವಿತ್ರಿ ಯಶೋಗಾಥೆ ದೊಡ್ಡದು.

ಪದ್ಮಾವಾಸಂತಿ, ಅನಂತವೇಲು, ಮೈಸೂರು ಬಾಲು, ಉಷಾ ಭಂಡಾರಿ, ನಂದಿನಿಮೂರ್ತಿ, ಸುನಿಲ್ ಸಾಗರ್ ವೊದಲಾದವರ ತಾರಾಗಣವಿದೆ. ಇಬ್ಬರು ತಂಗಿಯರೊಂದಿಗೆ, ಅಮ್ಮನ ಜತೆ ತಾತನ ಮನೆಯಲ್ಲಿರೋ ಸಾವಿತ್ರಿ, ಎಲ್ಲೋ ಇರುವ ತನಗೆ ಅನುರೂಪನಾದ ಗಂಡನನ್ನು, ಎಲ್ಲೋ ಇರುವ ಅಪ್ಪನನ್ನೂ ಹೇಗೆ ಪಡೆದುಕೊಳ್ಳುತ್ತಾಳೆ ಅನ್ನೋದೇ ಇಲ್ಲಿನ ಕತೆ.

"ಜೋಗುಳ ಧಾರಾವಾಹಿಯ ಬಳಿಕ ಜೀ ಕನ್ನಡದಲ್ಲಿ ಅತ್ಯಂತ ಜನಪ್ರಿಯವಾದ ಧಾರಾವಾಹಿ ಚಿ.ಸೌ.ಸಾವಿತ್ರಿ. ನಮ್ಮ ಚಾನೆಲ್ ನಲ್ಲಿ ಬಹು ಜನಪ್ರಿಯವಾದ ಇನ್ನೊಂದು ಸಿನಿಮಾ ದರ್ಶನ್ ಅವರ 'ಬಾಸ್'. ಇವರಿಬ್ಬರೂ ಈಗ ಜತೆಯಾಗಿರುವುದು ಪ್ರೇಕ್ಷಕರಿಗೆ ಇಷ್ಟವಾಗಲಿದೆ. ಈಗ ಹೊಸ ಕತೆ, ಹೊಸ ಕಲಾವಿದರೊಂದಿಗೆ 'ಚಿ.ಸೌ.ಸಾವಿತ್ರಿ'ಯ ಎರಡನೇ ಸರಣಿ ಆರಂಭವಾಗುತ್ತಿದೆ" ಎನ್ನುತ್ತಾರೆ ಜೀ ವಾಹಿನಿಯ ಎಕ್ಸಿಕ್ಯುಟಿವ್ ವೈಸ್ ಪ್ರೆಸಿಡೆಂಟ್ ಗೌತಮ್ ಮಾಚಯ್ಯ.

ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ, ಸಾವಿತ್ರಿ-ದೇವಿ-ರಾಜಕುಮಾರಿ ಧಾರಾವಾಹಿಗಳ ಕಲಾವಿದರ ಭರಪೂರ ಮನೋರಂಜನೆಯೊಂದಿಗೆ, ಹೊಸ ಸಾವಿತ್ರಿಯನ್ನು ಪ್ರೇಕ್ಷಕರಿಗೆ ದರ್ಶನ್ ಪರಿಚಯಿಸಿದರು.

ಆ ವಿಶೇಷ ಕಾರ್ಯಕ್ರಮ 'ಸಾವಿತ್ರಿಗೆ ದರ್ಶನ ಸೌಭಾಗ್ಯ' ಜುಲೈ 29ರಂದು ಬೆಳಗ್ಗೆ 10ಕ್ಕೆ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ. ಜುಲೈ 30 ರಿಂದ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ 'ಹೊಸ ಚಿ.ಸೌ.ಸಾವಿತ್ರಿ' ಮೂಡಿಬರಲಿದೆ. (ಒನ್ ಇಂಡಿಯಾ ಕನ್ನಡ)

English summary
Tune into Zee Kannada on 29th July 2012 at 10 am to welcome “New Chi. Sow. Savitri” into your hearts, which will inaugurated by Challenging Star Darshan. The cast of this fascinating serial includes, Jai Jagdish in the pivotal role of Narasimha Rao, B V Radha, Padmaja Rao, Mandya Ramesh, Sunder and other prominent artists of Kannada television.
Please Wait while comments are loading...